ಮೃಣಾಲ್ ಠಾಕೂರ್, ಹಿಂದಿ ಕಿರುತೆರೆಯಿಂದ ಖ್ಯಾತಿ ಪಡೆದು, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 'ಸೀತಾ ರಾಮಂ' ಚಿತ್ರದ ಯಶಸ್ಸಿನ ನಂತರ, ಅಂಡಾಣು ಫ್ರೀಜ್ ಬಗ್ಗೆ ಚರ್ಚಿಸಿದರು. ಕಿಸ್ ದೃಶ್ಯಗಳಿಂದ ದೂರವಿರುವ ಕಾರಣ ಕೆಲವು ಚಿತ್ರಗಳನ್ನು ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 'ಲವ್ ಸೋನಿಯಾ' ಚಿತ್ರಕ್ಕಾಗಿ ವೇಶ್ಯಾಗೃಹದಲ್ಲಿ ಕಳೆದ ಸಮಯ ಖಿನ್ನತೆಗೆ ದೂಡಿತು.
ಹಿಂದಿ, ತೆಲುಗು ಮತ್ತು ಮರಾಠಿ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಸಾಕಷ್ಟು ಹೆಸರು ಮಾಡಿದವರು ನಟಿ ಮೃಣಾಲ್ ಠಾಕೂರ್. ಹಿಂದಿಯ ಕುಂಕುಮ ಭಾಗ್ಯ ಸೀರಿಯಲ್ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಮೃಣಾಲ್ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಅವರು ಮಾಡಿರುವುದಲ್ಲಿ ಹೆಚ್ಚಿನವು ಯಾವುವೂ ಅಷ್ಟು ಹಿಟ್ ಆಗಲಿಲ್ಲ. ಮೃಣಾಲ್ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕೆಲ ತಿಂಗಳ ಹಿಂದೆ ಅವರ ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂಥ ಗೆಲುವು ಕಾಣಲಿಲ್ಲ. ಆದರೆ ಅವರ ‘ಸೀತಾ ರಾಮಂ’ ಸಿನಿಮಾ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಇವೆಲ್ಲವುಗಳ ನಡುವೆಯೇ ನಟಿ ಅಂಡಾಣು ಫ್ರೀಜ್ ಕುರಿತು ಮಾತನಾಡಿ ಸಾಕಷ್ಟು ಹಲ್ಚಲ್ ಸೃಷ್ಟಿಸಿದ್ದರು. ಮದುವೆಯಾಗದ ನಟಿ ಮೃಣಾಲ್, ಮಗು ಮಾಡಿಕೊಳ್ಳುವ ಬಗ್ಗೆ ಮಾತನಾಡಿ ಸಾಕಷ್ಟು ಸದ್ದು ಮಾಡಿದ್ದರು. ಇದಾಗಲೇ ಪ್ರಿಯಾಂಕಾ ಚೋಪ್ರಾ, ರಾಖಿ ಸಾವಂತ್, ಏಕ್ತಾ ಕಪೂರ್, ಉಪಾಸನಾ ಕಾಮನೇನಿ, ಸಾನಿಯಾ ಮಿರ್ಜಾ ಸೇರಿದಂತೆ ಹಲವರು ಈ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇದೀಗ ಅವರ ಸಾಲಿಗೆ ಇನ್ನೋರ್ವ ನಟಿ ಮೃಣಾಲ್ ಠಾಕೂರ್ ಸೇರಿದ್ದಾರೆ.
ಇದರ ನಡುವೆಯೇ, ಇದೀಗ ನಟಿ ತಾವು ಕಿಸ್ ದೃಶ್ಯಕ್ಕೆ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ, ಹಲವಾರು ಸಿನಿಮಾಗಳಿಂದ ವಂಚಿತಳಾಗಿ ಕಷ್ಟಪಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಐದಿವಾ ಜೊತೆಗಿನ ಸಂದರ್ಶನದಲ್ಲಿ, ನಟಿ ಮೃಣಾಲ್, ನನ್ನ ತಂದೆಗೆ ನಾನು ಸಿನಿಮಾಕ್ಕೆ ಸೇರುವುದು ಇಷ್ಟವಿರಲಿಲ್ಲ. ಆದರೆ ನನಗೆ ಸಿನಿಮಾ ಅಂದರೆ ಪಂಚಪ್ರಾಣವಾಗಿತ್ತು. ಕಾಲೇಜು ಕಲಿಯುವಾಗಲೇ ಅವಕಾಶ ಸಿಕ್ಕಿತು. ಕಾಲೇಜು ಬಿಡುವುದು ಹೆತ್ತವರಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಎರಡನ್ನೂ ಸಮದೂಗಿಸಿಕೊಂಡು ಹೋದೆ ಎಂದಿದ್ದಾರೆ. ಇದೇ ವೇಳೆ, ನನ್ನ ಹೆತ್ತವರು ನನಗೆ ಕಂಡೀಷನ್ ಹಾಕಿದ್ರು. ಯಾವುದೇ ಸಿನಿಮಾ ಮಾಡುವುದಿದ್ದರೂ, ಎಲ್ಲರೂ ಜೊತೆಯಲ್ಲಿ ಕುಳಿತು ನೋಡುವಂತೆ ಇರಬೇಕು, ಮುಜುಗರ ತರುವ ರೀತಿಯಲ್ಲಿ ಇರಬಾರದು ಎಂದಿದ್ದರು. ಇದೇ ಕಾರಣಕ್ಕೆ ನಾನು ನೋ ಕಿಸ್ಸಿಂಗ್ ಪಾಲಿಸಿ ಅನುಸರಿಸಿದ್ದೇನೆ. ಕಿಸ್ ಮಾಡದ ಕಾರಣ, ಹಲವಾರು ಸಿನಿಮಾಗಳಿಂದ ವಂಚಿತಳಾದೆ ಎಂದಿದ್ದಾರೆ.
ಮಾದಕ ನಟಿ ಮಲ್ಲಿಕಾ ಶೆರಾವತ್ಗೇ ಕಿಸ್ ಕೊಡಲು ಬರಲ್ಲ ಎನ್ನೋದಾ ಇಮ್ರಾನ್? ನಟಿ ಕೊಟ್ಟ ತಿರುಗೇಟು ನೋಡಿ...
ಇನ್ನು ಮೃಣಾಲ್ ಕುರಿತು ಹೇಳುವುದಾದರೆ, ಇವರು ನಟನೆ ಮಾತ್ರವಲ್ಲದೆ ಫ್ಯಾಷನ್ ವಿಚಾರದಲ್ಲೂ ಮುಂದು. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಹಲವಾರು ರೀತಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಬಾಲಿವುಡ್‌ನ ಪ್ರಬುದ್ಧ ನಟಿಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಈಕೆ ಸದ್ಯಕ್ಕೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ನಟಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ತೆಲುಗಿಗೆ ಎಂಟ್ರಿ ಕೊಡುವುದಕ್ಕಿಂತ ಮೊದಲು ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇವರಿಗೆ ಅದ್ಭುತ ಎನ್ನುವಂತಹ ಯಶಸ್ಸು ಸಿಕ್ಕಿರಲಿಲ್ಲ. ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಸಕ್ಸಸ್ ಕೂಡ ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಸದ್ಯ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಮೃಣಾಲ್ ಠಾಕೂರ್ ಕೂಡ ಒಬ್ಬರಾಗಿದ್ದಾರೆ.
ತಮ್ಮ ಖಿನ್ನತೆಯ ಕುರಿತು ಮಾತನಾಡಿದ್ದ ನಟಿ, ಸಿನಿಮಾವೊಂದರ ಪಾತ್ರಕ್ಕಾಗಿ ವೇಶ್ಯಾಗೃಹಕ್ಕೆ ಎರಡು ತಿಂಗಳು ವಾಸ್ತವ್ಯ ಹೂಡಿದ್ದರು. ಅಲ್ಲಾದ ಅನುಭವ ಈಕೆಯನ್ನು ಖಿನ್ನತೆಗೆ (Depression) ದೂಡಿತ್ತಂತೆ. 2018ರಲ್ಲಿ ಮೃಣಾಲ್ ಠಾಕೂರ್ 'ಲವ್ ಸೋನಿಯಾ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಯ ಪಾತ್ರ ತನ್ನ ತಂಗಿಯನ್ನು ಮಹಿಳಾ ಕಳ್ಳಸಾಗಣೆಯಿಂದ ರಕ್ಷಿಸುವುದಾಗಿತ್ತು. ಈ ಸಿನಿಮಾ ಶೂಟಿಂಗ್ ವೇಳೆ ತಮ್ಮ ಪಾತ್ರದಲ್ಲಿ ನೈಜತೆ ಇರಬೇಕೆಂಬ ಉದ್ದೇಶದಿಂದ ಎರಡು ತಿಂಗಳು ವೇಶ್ಯಾಗೃಹದಲ್ಲಿ (Brothel) ಇದ್ದಿದ್ದಾಗಿ ಹೇಳಿಕೊಂಡಿದ್ದರು.
ನಟ ನೋಡಲು ಸುಂದರನಲ್ಲವೆಂದು ಕಿಸ್ ಮಾಡದೇ ಕಥೆ ಬದಲಿಸಲು ಪಟ್ಟು ಹಿಡಿದ ಪ್ರಿಯಾಂಕಾ ಚೋಪ್ರಾ!
