ನಟ ನೋಡಲು ಸುಂದರನಲ್ಲವೆಂದು ಕಿಸ್ ಮಾಡದೇ ಕಥೆ ಬದಲಿಸಲು ಪಟ್ಟು ಹಿಡಿದ ಪ್ರಿಯಾಂಕಾ ಚೋಪ್ರಾ!
ನಟ ಅನ್ನು ಕಪೂರ್ ನೋಡಲು ಸುಂದರನಲ್ಲವೆಂದು ಕಿಸ್ ಮಾಡದೇ ಕಥೆ ಬದಲಿಸಲು ಪಟ್ಟು ಹಿಡಿದ ಪ್ರಿಯಾಂಕಾ ಚೋಪ್ರಾ. ಈ ಕುರಿತು ಅನ್ನು ಕಪೂರ್ ಹೇಳಿದ್ದೇನು?
2011ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಚಿತ್ರ ಸಾಥ್ ಖೂನ್ ಮಾಫ್ ಚಿತ್ರೀಕರಣದ ಸಂದರ್ಭವನ್ನು ನಟ ಅನ್ನು ಕಪೂರ್ ಈಗ ನೆನಪಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿದ್ದರೆ, ನೀಲ್ ನಿತಿನ್ ಮುಖೇಶ್, ಇರ್ಫಾನ್ ಖಾನ್, ಅನ್ನು ಕಪೂರ್, ನಾಸರುದ್ದೀನ್ ಶಾ ಮುಂತಾದವರು ಇದ್ದಾರೆ. ಅನ್ನು ಕಪೂರ್ ಇನ್ಸ್ಪೆಕ್ಟರ್ ಪಾತ್ರ ಮಾಡಿದ್ದಾರೆ. ಅದೊಂದು ದೃಶ್ಯದಲ್ಲಿ ನಾಯಕಿಯಾಗಿರೋ ನಟಿ ಪ್ರಿಯಾಂಕಾ ಚೋಪ್ರಾ ಅನ್ನು ಕಪೂರ್ ಅವರನ್ನು ಕಿಸ್ ಮಾಡುವ ದೃಶ್ಯವಿತ್ತು. ಆದರೆ ಅನ್ನು ಕಪೂರ್ ನೋಡಲು ಸುಂದರವಾಗಿಲ್ಲ, ಅವರು ಈ ಚಿತ್ರದಲ್ಲಿ ನಾಯಕ ಅಲ್ಲ ಎಂಬೆಲ್ಲಾ ಕಾರಣ ನೀಡಿದ್ದ ಪ್ರಿಯಾಂಕಾ, ಈ ದೃಶ್ಯವನ್ನು ಕಟ್ ಮಾಡಿ ಈ ದೃಶ್ಯದ ಬದಲು ಕಥೆ ಬದಲಿಸಲು ಹೇಳಿದ್ದರಂತೆ!
ಈ ಕುರಿತು ಈಗ ಖುದ್ದು ಅನ್ನು ಕಪೂರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾನು ಸಾಂಪ್ರದಾಯಿಕ 'ಹೀರೋ' ಆಗಿದ್ದರೆ, ನೋಡಲು ಸುಂದರವಾಗಿದ್ದರೆ ಕಿಸ್ ಮಾಡುತ್ತಿದ್ದೆ ಎಂದು ಖುದ್ದು ಪ್ರಿಯಾಂಕಾ ಹೇಳಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅನ್ನು ಕಪೂರ್, ನಟಿ ಹೀಗೆ ಹೇಳಿದ ಮೇಲೆ ಈ ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ದೇಶಕ ವಿಶಾಲ್ ಅವರಿಗೆ ಹೇಳಿದೆ. ಆದರೆ ಅವರು ಅದನ್ನು ಕೇಳದೇ ನನ್ನ ಮೇಲೆಯೇ ಸಿಟ್ಟಾದರು. ಈ ಚಿತ್ರಕ್ಕೆ ಇದು ಪೂರಕವಾಗಿದೆ. ಶೂಟಿಂಗ್ ಸೆಟ್‌ನಲ್ಲಿ ಈ ರೀತಿಯ ತಮಾಷೆಗಳನ್ನು ತಾವು ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದರು ಎಂದು ಅಂದು ನಡೆದ ಘಟನೆಯನ್ನು ಅನ್ನು ಕಪೂರ್ ಎಎನ್ಐ ಪಾಡ್ಕಾಸ್ಟ್ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!
ಪ್ರಿಯಾಂಕಾ ಅವರನ್ನು 'ಆಜ್-ಕಲ್ ಕಿ ಲಡ್ಕಿ' (ಈ ಪೀಳಿಗೆಯ ನಟಿ) ಎಂದು ಬಣ್ಣಿಸುವ ಮೂಲಕ, ಇಂಟಿಮೇಟ್ ದೃಶ್ಯದ ಕುರಿತು ಮಾತನಾಡಿದರು. ಮೊದಲಿಗೆ ಪ್ರಿಯಾಂಕಾ ಕಿಸ್ ಮಾಡಲು ಒಪ್ಪಲಿಲ್ಲ. ನಂತರ ವಿಶಾಲ್ ಅವರು ಪ್ರಿಯಾಂಕಾ ಈ ದೃಶ್ಯ ಮಾಡಲು ನಾಚಿಕೆ ಪಡುತ್ತಿದ್ದಾರೆ ಎಂದು ತಿಳಿದುಕೊಂಡರು. ಆದರೆ ಕೊನೆಗೆ ಸತ್ಯ ಗೊತ್ತಾಯಿತು. ನನ್ನ ನೋಟ ಮತ್ತು ನನ್ನ ರೋಲ್ ಆಕೆಗೆ ಇಷ್ಟವಾಗಿರಲಿಲ್ಲ. ಅದಕ್ಕಾಗಿ ಚಿತ್ರದ ದೃಶ್ಯ ಬೇರೆ ಮಾಡುವಂತೆ ಪ್ರಿಯಾಂಕಾ ಹೇಳಿದರು. ಇದನ್ನೇ ನಾನು ವಿಶಾಲ್ ಅವರಿಗೂ ಹೇಳಿದೆ. ಆಗ ಅವರಿಗೆ ಸಿಕ್ಕಾಪಟ್ಟೆ ಸಿಟ್ಟುಬಂತು. 'ನಾನೇಕೆ ದೃಶ್ಯವನ್ನು ತೆಗೆದುಹಾಕಬೇಕು? ಇದು ಮುಖ್ಯ'. ನಾನು ಗಂಭೀರ ವ್ಯಕ್ತಿ, ನಾನು ಸೆಟ್‌ನಲ್ಲಿ ತಮಾಷೆ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರು ಎಂದು ನೆನಪಿಸಿಕೊಂಡಿದ್ದಾರೆ.
ಆದರೆ ಪ್ರಿಯಾಂಕಾ ಅವರು ಈ ರೀತಿ ಮಾಡಲು ಸ್ಪಷ್ಟ ಕಾರಣ ಆಗ ನೀಡಿರಲಿಲ್ಲ. ಬದಲಿಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನ್ನು ಕಪೂರ್ ಸಾಂಪ್ರದಾಯಿಕ ನಾಯಕನಂತೆ ಕಾಣುತ್ತಿದ್ದರೆ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾವುದೇ ಆಕ್ಷೇಪಣೆ ಇರಲಿಲ್ಲ. ಆದರೆ ಅವರ ನೋಟ ಸುಂದರವಾಗಿಲ್ಲ, ಅದಕ್ಕೇ ಹಾಗೆ ಮಾಡಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ನನಗೆ ತುಂಬಾ ನೋವಾಯಿತು. ಅವರ ಈ ಮಾತು ನನಗೂ ಕೋಪ ತರಿಸಿತು. ಓರ್ವ ನಟಿಯಾಗಿ ಪ್ರಿಯಾಂಕಾ ಹೀಗೆ ಹೇಳುವುದು ತಪ್ಪು. ಇದು ನಿಜ ಜೀವನ ಅಲ್ಲ. ತೆರೆಯ ಮೇಲೆ ಎಲ್ಲ ಮಾಡಲು ಒಪ್ಪಿಕೊಂಡಾಗ ನಟನ ಸೌಂದರ್ಯ ನೋಡುವುದು ಸರಿಯಲ್ಲ. ಸ್ಫುರದ್ರೂಪಿ ನಟನೇ ಬೇಕು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇರಲಿ ಅದೇನೇ ಇರಲಿ, ಪ್ರಿಯಾಂಕಾ ಓರ್ವ ಅದ್ಭುತ ನಟಿ. ದೇವರು ಆಕೆಯನ್ನು ಆಶೀರ್ವದಿಸಲಿ' ಎಂದು ಹೇಳಿದರು.
ಕನ್ನಡದಲ್ಲೇ ಹಾಡು ಹೇಳಿ ಕನ್ನಡಿಗರ ಮನಗೆದ್ದ ಮಾರ್ಟಿನ್ ಸಿನಿಮಾ ನಟಿ ವೈಭವಿ ಶಾಂಡಿಲ್