ಮಾದಕ ನಟಿ ಮಲ್ಲಿಕಾ ಶೆರಾವತ್​ಗೇ ಕಿಸ್​ ಕೊಡಲು ಬರಲ್ಲ ಎನ್ನೋದಾ ಇಮ್ರಾನ್​? ನಟಿ ಕೊಟ್ಟ ತಿರುಗೇಟು ನೋಡಿ...

ಸೆಕ್ಸ್ ಬಾಂಬ್​ ಎಂದೇ ಫೇಮಸ್​ ಆಗಿರೋ ನಟಿ ಮಲ್ಲಿಕಾ ಶೆರಾವತ್​ಗೆ ಕಿಸ್​ ಮಾಡಲು ಬರಲ್ಲ ಎಂದಿದ್ದ ಇಮ್ರಾನ್​ ಹಶ್ಮಿ! ಹುಟ್ಟುಹಬ್ಬದ ನಿಮಿತ್ತ ಮತ್ತೆ ವೈರಲ್​ ಆಗ್ತಿರೋ ಸುದ್ದಿ
 

Emraan Hashmi called hot beauty Mallika Sherawat as a bad kisser gone viral during birthday suc

2004ರಲ್ಲಿ ಮರ್ಡರ್‌ ಚಿತ್ರದಲ್ಲಿ ಸೆಕ್ಸ್​ ಬಾಂಬ್​ ಎಂದೇ ಫೇಮಸ್​ ಆಗಿರೋ ಮಾದಕ ನಟಿ ಮಲ್ಲಿಕಾ ಶೆರಾವತ್​ ಮತ್ತು ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​  ಆಗಿರೋ ನಟ ಇಮ್ರಾನ್​ ಹಶ್ಮಿ ನಡುವಿನ ಇಂಟಿಮೇಟ್​ ದೃಶ್ಯಗಳು ಎಲ್ಲರ ಹುಬ್ಬೇರಿಸಿದ್ದವು. ಈ ಚಿತ್ರದಲ್ಲಿ ಕಿಸ್ಸಿಂಗ್​ಗೆ ಅಂತೂ ಬರವೇ ಇರಲಿಲ್ಲ. ಆ ಪರಿಯಲ್ಲಿ ಇಂಟಿಮೇಟ್​ ದೃಶ್ಯಗಳು ಇದ್ದವು. 20 ವರ್ಷಗಳ ಹಿಂದೆ ಇಂಥ ದೃಶ್ಯಗಳು ಬಿಸಿಬಿಸಿ ಚರ್ಚೆಗೂ ಗ್ರಾಸವಾಗಿತ್ತು.  ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎನ್ನುವ ಖ್ಯಾತಿ ಕೊಟ್ಟಿದ್ದು ಇದೇ ಚಿತ್ರ. ಏಕೆಂದರೆ ಇಬ್ಬರೂ ಈ  ಸಿನಿಮಾದಲ್ಲಿ ಅಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡರು. ಇವರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.  ಟಾಪ್ ರೇಟೆಡ್ ಜೋಡಿ ಎಂಬ ಬಿರುದೂ ಅವರಿಗೆ ಬಂತು.  ಆದರೆ ಇಷ್ಟೆಲ್ಲಾ ಆದ ಬಳಿಕ ಇಮ್ರಾನ್​ ಹಶ್ಮಿ, ಮಲ್ಲಿಕಾ ಶೆರಾವತ್​ಗೆ ಸರಿಯಾಗಿ ಕಿಸ್​ ಮಾಡಲು ಬರಲ್ಲ, ಆಕೆ ಬ್ಯಾಡ್​ ಕಿಸ್ಸರ್​ ಎನ್ನೋದಾ? ಇವರ ನಡುವೆ ಜಗಳವಾಗಿ, ಕಿತ್ತಾಡಿಕೊಂಡಿದ್ದು ಈಗ ಹಳೆಯ ಸುದ್ದಿ.

 ಕಳೆದ ತಿಂಗಳು, ಈ ಇಬ್ಬರೂ  ಕಾರ್ಯಕ್ರಮವೊಂದರಲ್ಲಿ ಮುಖಾಮುಖಿ ಪರಸ್ಪರ ಆಲಿಂಗನ ಮಾಡಿಕೊಂಡು ಪೋಸ್​ ಕೊಟ್ಟು 20 ವರ್ಷಗಳ ವೈಮನಸ್ಸನ್ನು ಮರೆತಿರುವುದಾಗಿ ಸುದ್ದಿಯಾಗಿದ್ದರು. ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಇಡೀ ಹಿಂದಿ ಸೆಲೆಬ್ರೆಟಿಗಳ ದಂಡೇ ಹಾಜರಿ ಹಾಕಿತ್ತು. ಈ ವೇಳೆ, ಅನಿರೀಕ್ಷಿತವಾಗಿ ಈ ಕಾರ್ಯಕ್ರಮಲ್ಲಿ ಇಮ್ರಾನ್ ಮತ್ತು ಮಲ್ಲಿಕಾ ಭೇಟಿಯಾಗಿದ್ದರು. ಮುನಿಸೆಲ್ಲಾ ಮರೆತು ಇಬ್ಬರೂ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಬಳಿಕ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಸಂಭ್ರಮಿಸಿದ್ದರು. ಆದರೆ ಇದೀಗ ಇಮ್ರಾನ್​ ಹಶ್ಮಿ ಮತ್ತು ಮಲ್ಲಿಕಾ ನಡುವೆ  ನಡೆದ ಜಟಾಪಟಿಯ ಬಗೆಗಿನ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಇದು ವಿವಾದಿತ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಮಲ್ಲಿಕಾ ಬಗ್ಗೆ ಇಮ್ರಾನ್‌ ಹಶ್ಮಿ ಮಾತನಾಡಿದ್ದರಿಂದ. 

ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!

ಹೌದು. ‘ತೆರೆ ಮೇಲೆ ಮಾಡಿದ ಅತ್ಯುತ್ತಮ ಹಾಗೂ ಅತೀ ಕೆಟ್ಟ ಕಿಸ್ ಬಗ್ಗೆ ಹೇಳಿ’ ಎಂದು ಇಮ್ರಾನ್ ಹಶ್ಮಿಗೆ ಕರಣ್​ ಕೇಳಿದ್ದಾಗ ಮಲ್ಲಿಕಾ ಶೆರಾವತ್​ ಹೆಸರು ಹೇಳಿದ್ದರು. ಈಕೆ ಅತ್ಯಂತ ಕೆಟ್ಟ ಕಿಸ್ಸರ್​,  ಜಾಕ್ವೆಲಿನ್ ಫರ್ನಾಂಡೀಸ್​ ಉತ್ತಮ ಕಿಸ್ಸರ್ ಎಂದಿದ್ದರು. ಇದು ಮಲ್ಲಿಕಾ ಅವರನ್ನು ಕೆರಳಿಸಿತ್ತು. ಅದಕ್ಕೆ ತಿರುಗೇಟು ನೀಡಿದ್ದ ಅವರು,  ‘ನಾನು ಹಿಸ್ ಚಿತ್ರದಲ್ಲಿ ಹಾವಿಗೆ ಕಿಸ್ ಮಾಡಿದ್ದೆ. ಅದು ಇಮ್ರಾನ್ ಹಶ್ಮಿ ಜೊತೆ ಮಾಡಿದ ಕಿಸ್​ಗಿಂತ ಉತ್ತಮವಾಗಿತ್ತು’ ಎಂದು ಕೊಂಕು ನುಡಿದು ತಿರುಗೇಟು ನೀಡಿದ್ದರು. ಇದಾದ ಬಳಿಕ, ‘ಅವಾರಾಪನ್’ ಸಿನಿಮಾ ಪ್ರಮೋಷನ್​ ವೇಳೆ  ಮಲ್ಲಿಕಾ ಕುರಿತು  ಇಮ್ರಾನ್ ಹಶ್ಮಿ ಮತ್ತೆ ಕಿಡಿ ಕಾರಿದ್ದರು. ನಾನು  ಮಲ್ಲಿಕಾಳನ್ನು ದ್ವೇಷಿಸುವುದಾಗಿ ಹೇಳಿದ್ದರು.  

ಅಷ್ಟಕ್ಕೂ ಈ ವಿಷಯ ಮತ್ತೆ ಮುನ್ನೆಲೆಗೆ ಬರಲು ಕಾರಣ, ಇವತ್ತು ಅಂದ್ರೆ ಅಕ್ಟೋಬರ್​ 24, ಮಲ್ಲಿಕಾ ಶೆರಾವತ್ ಅವರ ಹುಟ್ಟುಹಬ್ಬ.  1976ರಲ್ಲಿ ಹುಟ್ಟಿರೋ ನಟಿಗೆ ಈಗ 48 ವರ್ಷ ವಯಸ್ಸು. ಬಾಲಿವುಡ್​ನಲ್ಲಿ ಆಗಿರುವ ಕೆಲವೊಂದು ಕಹಿ ಘಟನೆಗಳಿಂದ ಚಿತ್ರರಂಗ ತೊರೆಯುವುದಾಗಿ ಹೇಳಿದ ನಟ, ಸದ್ಯ ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ.
 ನಟ ನೋಡಲು ಸುಂದರನಲ್ಲವೆಂದು ಕಿಸ್​ ಮಾಡದೇ ಕಥೆ ಬದಲಿಸಲು ಪಟ್ಟು ಹಿಡಿದ ಪ್ರಿಯಾಂಕಾ ಚೋಪ್ರಾ!
 

Latest Videos
Follow Us:
Download App:
  • android
  • ios