Asianet Suvarna News Asianet Suvarna News

ನಿರ್ಮಾಪಕರೊಬ್ಬರ ಹಾಟ್ ವಿಚಾರವೊಂದನ್ನು ಬಹಿರಂಗಪಡಿಸಿದ ಮಲ್ಲಿಕಾ ಶೆರಾವತ್‌

  •  ಹೊಟ್ಟೆ ಮೇಲೆ ಚಪಾತಿ ಬಿಸಿ ಮಾಡುವ ದೃಶ್ಯ ತಿರಸ್ಕರಿಸಿದ್ದೆ: ಶೆರಾವತ್‌
  • ‘ದ ಲವ್‌ ಲಾಫ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 
Mallika Sherawat Says Producer Wanted To Make Chapati On  On Her Waist snr
Author
bengaluru, First Published Nov 12, 2021, 7:55 AM IST
  • Facebook
  • Twitter
  • Whatsapp

ಮುಂಬೈ (ನ.12): ‘ಹಾಟ್‌ ಸಾಂಗ್‌’ (hot song) ಒಂದನ್ನು ಚಿತ್ರೀಕರಿಸಲು ಹೊಟ್ಟೆಯ ಮೇಲೆ ಚಪಾತಿ ಬಿಸಿ ಮಾಡುವ ದೃಶ್ಯ ಚಿತ್ರೀಕರಿಸುವುದಾಗಿ ನಿರ್ಮಾಪಕರೊಬ್ಬರು (Producer) ಕೇಳಿದ್ದರು.

 ನಾನು ಈ ದೃಶ್ಯವನ್ನು ತಿರಸ್ಕರಿಸಿದ್ದೆ ಎಂದು ಮಲ್ಲಿಕಾ ಶೆರಾವತ್‌ (Mallika sherawath) ಹೇಳಿದ್ದಾರೆ. ‘ದ ಲವ್‌ ಲಾಫ್‌’ (the Love of laugh) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 

‘ ನೀವು ಎಷ್ಟು ಹಾಟ್‌ (Hot) ಎಂಬುದು ಜನರಿಗೆ ಗೊತ್ತಾಗಬೇಕು ಹಾಗಾಗಿ ನಿಮ್ಮ ಹೊಟ್ಟೆಯ ಮೇಲೆ ಚಪಾತಿ ಬಿಸಿ ಮಾಡುವ ದೃಶ್ಯವನ್ನು ಚಿತ್ರೀಕರಿಸಬೇಕು (shooting) ಎಂದು ನಿರ್ಮಾಪಕರೊಬ್ಬರು ಕೇಳಿದ್ದರು. 

ಈ ವಿಚಿತ್ರವಾದ ದೃಶ್ಯವನ್ನು ನಾನು ತಿರಸ್ಕರಿಸಿದೆ. ಹಾಟ್‌ ಎನ್ನುವುದನ್ನು ಹೇಗೆಲ್ಲಾ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ಇತ್ತೀಚಿಗೆ ಸ್ವಲ್ಪ ಸುಧಾರಿಸಿದೆ ನಾನು ಚಿತ್ರರಂಗ ಪ್ರವೇಶಿಸಿದಾಗ ಪರಿಸ್ಥಿತಿ ಇನ್ನೂ ವಿಚಿತ್ರವಾಗಿತ್ತು ಎಂದು ಹೇಳಿದ್ದಾರೆ.

ತಂದೆ ತಿರಸ್ಕರಿಸಿದ್ದಕ್ಕೆ ತಾಯಿ ಹೆಸರ ಸೇರಿಸಿಕೊಂಡ ಮಲ್ಲಿಕಾ ಶೆರಾವತ್ :   ಬೋಲ್ಡ್‌ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಹಾಟ್ ನಟಿ ಎಂದು ಲೇಬಲ್ ಪಡೆದಿರುವ ಮಲ್ಲಿಕಾ ಶೆರಾವತ್ ಹುಟ್ಟಿದ್ದು ಹರಿಯಾಣದ ಸಣ್ಣ ಊರಿನಲ್ಲಿ. ಪುರುಷ ಪ್ರಧಾನ ಕುಟುಂಬದಲ್ಲಿ ಬೆಳೆದ ಕಾರಣ ತಮ್ಮ ಕನಸುಗಳನ್ನು ಹೇಳಿ ಕೊಂಡಾಗ  ಕುಟುಂಬದಲ್ಲಿ ಭಾರೀ ವಿರೋಧ ವ್ಯಕ್ತ ಪಡಿಸಿದ್ದರು.

ಅಬ್ಬಬ್ಬಾ! ನಟಿ ಮಲ್ಲಿಕಾ ಶೆರಾವತ್‌ಗೆ ವಿದೇಶದಲ್ಲಿರುವ ಐಷಾರಾಮಿ ಬಂಗಲೆ ಹೇಗಿದೆ ನೋಡಿ..

ಇರುವುದು ಒಂದೇ ಜೀವನ. ಏನಾದರೂ ಸಾಧನೆ ಮಾಡಬೇಕು ಎಂದು ಮಲ್ಲಿಕಾ ರಾತ್ರೋ ರಾತ್ರಿ ಮನೆ ಬಿಟ್ಟು ಮುಂಬೈಗೆ ಹಾರಿ ಹೋಗಿದ್ದಾರೆ. ಮಲ್ಲಿಕಾ ನಿರ್ಧಾರದ ಬಗ್ಗೆ ತಂದೆ ಬೇಸರ ವ್ಯಕ್ತ ಪಡಿಸಿದ್ದರು. ಮನೆ ಬಿಟ್ಟು ಹೋಗಿದ್ದಕ್ಕೆ ಆಕೆಯನ್ನು ತಿರಸ್ಕರಿಸಿದ್ದಾರೆ. ಈ ಕಾರಣಕ್ಕೆ ತಾಯಿ ಮನೆತನದ ಹೆಸರು ತೆಗೆದುಕೊಂಡು, ರೀನಾ ಲಾಂಬಾ ಎಂಬ ಮೂಲ ಹೆಸರು ಬಿಟ್ಟು, ಮಲ್ಲಿಕಾ ಶರಾವತ್ ಆಗಿ ಬದಲಾಯಿಸಿಕೊಂಡರು. 

'ನೀನು ಫಿಲಂಗೆ ಹೋಗಿ ನಮ್ಮ ಪರಿವಾರದ ಹೆಸರು ಹಾಳು ಮಾಡುತ್ತೀಯಾ. ಹೀಗಾಗಿ ನಾನು ನಿನ್ನನ್ನು disown ಮಾಡುತ್ತೀನಿ ಎಂದರು. ಅದಿಕ್ಕೆ ನಾನು ನಿಮ್ಮ ಹೆಸರನ್ನು disown ಮಾಡುತ್ತೇನೆ. ನೀವು ಏನು ನನ್ನ ತಿರಸ್ಕರಿಸುವುದು. ಹೌದು ನೀವು ನನ್ನ ತಂದೆ ನಾನು ಗೌರವಿಸುತ್ತೇನೆ. ಐ ಲವ್ ಯೂ. ಆದರೆ ನಾನು ನನ್ನ ತಾಯಿ ಹೆಸರು ಬಳಸಿ ಕೊಳ್ಳುತ್ತೇನೆ,' ಎಂದು ಮಲ್ಲಿಕಾ ಘಟನೆ ಬಗ್ಗೆ ಮಾತನಾಡಿದ್ದಾರೆ.  ಇದಾದ ನಂತರ ಮಲ್ಲಿಕಾ ಎಲ್ಲೇ ಹೋದರೂ ಕುಟುಂಬ ನಿಮ್ಮನ್ನು ಸ್ವೀಕರಿಸಿದೆಯೇ, ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಖಾಸಗಿ ಸಂದರ್ಶನವೊಂದರಲ್ಲಿ 'ಕುಟುಂಬದವರು ನನ್ನನ್ನು ತಕ್ಷಣ ಒಪ್ಪಿಕೊಳ್ಳಲಿಲ್ಲ. ಈಗಲೂ ಅಸಮಾಧಾನವಿದೆ. ಹಾಗಂತ ವಯಸ್ಸಾದಂತೆ ಎಲ್ಲರೂ ಮೃದುವಾಗುತ್ತಾರಲ್ಲ. ಹಾಗೆಯೇ ನಮ್ಮ ಕುಟುಂಬದಲ್ಲೂ ಆಗಿದೆ,' ಎಂದು ಹೇಳಿದ್ದಾರೆ.

 ಮಲ್ಲಿಕಾ ಮನೆ :  ನಟಿ ಮಲ್ಲಿಕಾ ಶೆರಾವತ್ ಸೋಷಿಯಲ್ ಮೀಡಿಯಾದಲ್ಲಿ ಚಂದದ್ದೊಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಲಾಸ್ ಏಂಜಲೀಸ್‌ನಲ್ಲಿರುವ ತನ್ನ ಚಂದದ ವಿಲ್ಲಾದ ಕಿರುನೋಟವನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ. ಸಣ್ಣ ವೀಡಿಯೊದಲ್ಲಿ ನಟಿ ನಾಯಿಯೊಂದಿಗೆ ಆಟವಾಡುವುದನ್ನು ಮತ್ತು ಪೂಲ್ ಪಕ್ಕ ಚಿಕ್ ಮಾಡುವುದನ್ನು ಕಾಣಬಹುದು.

ದೊಡ್ಡ ನೀಲಿ ಫ್ರೆಂಚ್ ಬಾಗಿಲುಗಳು ಮತ್ತು ಮನೆ ಮುಂದೆ ಆಡುವ ಬಿಳಿ ನಾಯಿಯ ವೀಡಿಯೊದೊಂದಿಗೆ ವೀಡಿಯೊ ಆರಂಭವಾಗುತ್ತದೆ. ಮಲ್ಲಿಕಾ ಬಾಗಿಲಿನ ಹಿಂದಿನಿಂದ ಸಡಿಲವಾದ, ಬಹು ಬಣ್ಣದ ಉಡುಪಿನಲ್ಲಿ ಹೊರ ಬರುತ್ತಾರೆ. ನಾಯಿಯೊಂದಿಗೆ ಮಾತನಾಡುತ್ತಾರೆ. ಸ್ವಲ್ಪ ಮುಂದೆ ಬಂದು ಉದ್ಯಾನದ ಮೂಲಕ ತನ್ನ ಈಜುಕೊಳದತ್ತ ನಡೆಯುತ್ತಾರೆ. ಪಾದಗಳನ್ನು ಕೊಳದಲ್ಲಿ ಮುಳುಗಿಸಿ ಸುತ್ತಲೂ ನೀರನ್ನು ಚೆಲ್ಲುತ್ತಾರೆ.

ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಮಲ್ಲಿಕಾ: ನೈತಿಕವಾಗಿ ಕೊಂದೇ ಬಿಟ್ಟಿದ್ದರು ಎಂದ ನಟಿ...

ವೀಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ವಾವ್ ಬ್ಯೂಟಿಫುಲ್ ಹೌಸ್ ಎಂದು ಬರೆದಿದ್ದಾರೆ. ಇನ್ನೊಬ್ಬರು, ನಿಮ್ಮ ಮನೆ ಸುಂದರವಾಗಿದೆ ಮಲ್ಲಿಕಾ ಎಂದು ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್‌ನ ಈ ಹಾಟ್ ಚೆಲುವೆಗೆ ಪ್ರತಿ ಬಾರಿಯೂ ಆಡಿಷನ್..!

ಮಲ್ಲಿಕಾ ಕಳೆದ ಎರಡೂವರೆ ತಿಂಗಳಿನಿಂದ ಲಾಸ್ ಏಂಜಲೀಸ್‌ನ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಆಗಾಗ ಮನೆ ಮತ್ತು ಹೊರಾಂಗಣ ಪ್ರದೇಶದಿಂದ ಫೋಟೋ ಹಂಚಿಕೊಳ್ಳುತ್ತಾರೆ.

 

Follow Us:
Download App:
  • android
  • ios