Asianet Suvarna News Asianet Suvarna News

ಮದ್ವೆ ಬೇಡ, ಇವ್ನ ಜೊತೆ ಎಂಜಾಯ್​ ಮಾಡ್ತಿದ್ದೇನೆಂದ ಶ್ರುತಿ ಹಾಸನ್ 2ನೇ ಬಾಯ್​ಫ್ರೆಂಡ್​ಗೂ ಗುಡ್​ಬೈ ಹೇಳಿದ್ರಾ?

ಶಂತನು ಹಜಾರಿಕಾ ಜೊತೆ ಲಿವ್​ ಇನ್​ನಲ್ಲಿ ಇದ್ದ ನಟಿ ಶ್ರುತಿ ಹಾಸನ್​ ಇವ್ರ ಜೊತೆನೂ ಬ್ರೇಕಪ್​ ಮಾಡಿಕೊಂಡ್ರಾ? ಏನಿದು ವಿಷಯ? 
 

Shruti Haasan Santanu Hazarika Break Up Living Separately After Unfollowing Each Other suc
Author
First Published Apr 26, 2024, 6:06 PM IST

 ಖ್ಯಾತ ನಟ ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ಸದ್ಯ ಬಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ.   'ವಾಲ್ಟೇರ್ ವೆರಯ್ಯ' ಚಿತ್ರದಲ್ಲಿ ಕಾಣಿಸಿಕೊಂಡಿರೋ ನಟಿ ಇದೀಗ 'ಸಲಾರ್'ನ ಭರ್ಜರಿ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಇವರ ಕೈಯಲ್ಲಿ  ಇನ್ನೂ ಅನೇಕ ಯೋಜನೆಗಳು ಇವೆ.  ಇದಲ್ಲದೆ, ಶ್ರುತಿ (Shruti Haasan) ತಮ್ಮ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ.  ನಟಿ ತಮ್ಮ ಗೆಳೆಯ ಶಂತನು ಬಗ್ಗೆಯೂ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಇತ್ತೀಚಿಗೆ ಶಂತನು ಜೊತೆ ಶ್ರುತಿ ಅವರ ಮದುವೆ ಗುಟ್ಟಾಗಿ ನಡೆದೇ ಹೋಯ್ತು ಎನ್ನುವ ಸುದ್ದಿ ಸದ್ದು ಮಾಡಿತ್ತು. ಅಷ್ಟಕ್ಕೂ ಈ ಸುದ್ದಿ ಹರಡಲು ಕಾರಣ ಬಾಲಿವುಡ್​ ಸೆಲೆಬ್ರಿಟಿಗಳ ಸ್ನೇಹಿತ ಓರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ. ಇವರು  ಸೋಷಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದ್ದ ವೇಳೆ  ‘ಶ್ರುತಿ ಹಾಸನ್​ ಗಂಡನ ಜೊತೆ ನನಗೆ ಸ್ನೇಹ ಇದೆ’ ಎಂದುಬಿಟ್ಟಿದ್ದರು. ಇದರಿಂದಾಗಿ ಶ್ರುತಿ ಹಾಸನ್‌ ಗುಟ್ಟಾಗಿ ಮದುವೆಯಾಗಿದ್ದಿರಬಹುದು ಎಂದು ಬಿ-ಟೌನ್‌ನಲ್ಲಿ ಸಕತ್‌ ಸದ್ದು ಮಾಡಿತು. ಈಕೆ  ಶಂತನು ಹಜಾರಿಕಾ ಜೊತೆ ಸಂಬಂಧದಲ್ಲಿ ಇರುವ ಕಾರಣ, ಅವರ ಜೊತೆಯೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಬಲವಾಗಿತ್ತು.  

ಬಳಿಕ ನಟಿ ಮದುವೆಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ನನಗೆ ಮದುವೆಯಾಗಿಲ್ಲ. ಪ್ರತಿಯೊಂದು ವಿಚಾರವನ್ನು ಮುಕ್ತವಾಗಿ ಹೇಳುವಂತಹ ವ್ಯಕ್ತಿಯು ಇಂತಹ ವಿಚಾರವನ್ನು ಮುಚ್ಚಿಡುತ್ತಾರೆಯೇ? ನಾನು ಮದುವೆಯ ವಿಚಾರವನ್ನು ಏಕೆ ಅಡಗಿಸಿಡಲಿ? ನನ್ನ ಕುರಿತು ತಿಳಿಯದೆ ಇರುವವರು ಸುಮ್ಮನಿರಿ ಎಂದು ಹೇಳಿದ್ದರು. ಈ ಹಿಂದೆ ಮದುವೆಯ ಕುರಿತು ಮೀಡಿಯಾಗಳ ಜೊತೆ ಮಾತನಾಡಿದ್ದ ನಟಿ,  ಮದುವೆ ಎಂಬ ಪದ ನನಗೆ ತುಂಬಾ ಭಯ ಹುಟ್ಟಿಸುತ್ತದೆ. ನಾನು ನಿಜಕ್ಕೂ ಅದರ ಕುರಿತು ಯೋಚಿಸಲು ಹೋಗುವುದಿಲ್ಲ. ನಾನು ಆತನೊಂದಿಗೆ ಖುಷಿಯಾಗಿದ್ದೇನೆ. ಆತನ ಜತೆ ಕೆಲಸ ಮಾಡುವುದು, ಆತನ ಜತೆ ಸಮಯ ಕಳೆಯುವುದು ನನಗೆ ಖುಷಿ ನೀಡುತ್ತದೆ. ಇತರೆ ಬಹುತೇಕ ಮದುವೆಗಿಂತ ಇದು ಉತ್ತಮವಲ್ಲವೇ ಎಂದಿದ್ದರು. ಮದುವೆಯಾಗುವುದಕ್ಕಿಂತ ಬಾಯ್‌ಫ್ರೆಂಡ್‌ ಜೊತೆ ಸಂಬಂಧದಲ್ಲಿರುವುದೇ ಬೆಸ್ಟ್‌ ಎಂಬ ಅರ್ಥದಲ್ಲಿ ನಟಿ ಹೇಳಿದ್ದರು.  

ಹಾಕಿದ್ದೇ ಚೋಟುದ್ದ ಡ್ರೆಸ್​, ಗಾಳಿಗೆ ಹಾರೋದಾ? ಬಾಯ್​ಫ್ರೆಂಡ್​ ಜತೆಗಿರುವಾಗ ಹೃತಿಕ್​ ಮಾಜಿ ಪತ್ನಿಗೆ ಹೀಗಾಗೋದಾ?


ಅಂದಹಾಗೆ ಶಂತನು ಅವರು ಶ್ರುತಿ ಹಾಸನ್​ ಅವರ ಎರಡನೆಯ ಬಾಯ್​ಫ್ರೆಂಡ್​. ಇದೀಗ ಇವರ ಜೊತೆಯೂ ಬ್ರೇಕಪ್​ ಆಗಿದೆ ಎನ್ನಲಾಗಿದೆ. ಏಕೆಂದರೆ,  ಶ್ರುತಿ  ಅವರು​ ಶಂತನು ಹಜಾರಿಕಾ ಅವರನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ್ದಾರೆ. ಶಂತನು ಕೂಡ ಶ್ರುತಿ ಅವರನ್ನು ಕೈಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಶ್ರುತಿ ಶಂತನು ಜೊತೆಗಿನ ಫೋಟೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದ ನೆಟ್ಟಿಗರು ಇಬ್ಬರ ನಡುವೆ ಬ್ರೇಕಪ್ ಆಗಿರೋದು ಪಕ್ಕಾ ಎನ್ನುತ್ತಿದ್ದಾರೆ.  ಇದೀಗ ಬ್ರೇಕಪ್​ಗೆ ಕಾರಣ ಏನು? ನಿಜಕ್ಕೂ ಇಬ್ಬರು ದೂರವಾಗಿದ್ದಾರೆ ಎಂಬುದಕ್ಕೆ ನಟಿ ಶ್ರುತಿ ಹಾಸನ್ ಸ್ಪಷ್ಟನೆ ನೀಡಬೇಕಿದೆ.

ಅಷ್ಟಕ್ಕೂ ಮೀ ಟೂ ಅಭಿಯಾನ ಹುಟ್ಟುಹಾಕಿರುವ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​, ಕೆಲ ದಿನಗಳ ಹಿಂದೆ ತಮ್ಮ ಕರಾಳ ಜೀವನದ ಕುರಿತು ಹೇಳಿಕೊಂಡಿದ್ದಾರೆ.  ಅಪ್ಪ ಕಮಲ ಹಾಸನ್​ ಮತ್ತು ಅಮ್ಮ ನಟಿ ಸಾರಿಕಾ ಇವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್​ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ  ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ  ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.

ಐಶ್ವರ್ಯ, ಅಮಿತಾಭ್​ ನಡುವೆ ಕೊಹ್ಲಿಯನ್ನೂ ಎಳೆತಂದ ರಾಹುಲ್​ ಗಾಂಧಿ: ಅಭಿಮಾನಿಗಳಿಂದ ಭಾರಿ ಆಕ್ರೋಶ
 

Latest Videos
Follow Us:
Download App:
  • android
  • ios