ನಾನು ರಿಜೆಕ್ಟ್ ಆದಾಗ ನನಗೆ ಅತೀವ ಸಂಕಟವಾಗುತ್ತಿತ್ತು. ಹೊಟ್ಟೆಯಲ್ಲಿ ಸುಟ್ಟಹಾಗಾಗುತ್ತಿತ್ತು. ನನ್ನನ್ನು ರಿಜೆಕ್ಟ್ ಮಾಡಿದವರ ಮೇಲೆ ನನಗೆ ಕೋಪ ಇರಲಿಲ್ಲ, ದ್ವೇಷ ಇರಲಿಲ್ಲ, ಆದರೆ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು..

ಸದ್ಯ ನ್ಯಾಷನಲ್ ಕ್ರಶ್ ಖ್ಯಾತಿಯಲ್ಲಿ ಮೆರೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna),ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನದ ಸೀಕ್ರೆಟ್‌ ಒಂದನ್ನು ಹಂಚಿಕೊಂಡಿದ್ದಾರೆ. ತೆರೆಗೆ ಬಂದ ತಮ್ಮ ಮೊದಲ ಕನ್ನಡ ಸಿನಿಮಾ 'ಕಿರಿಕ್ ಪಾರ್ಟಿ' ಬಗ್ಗೆ ರಶ್ಮಿಕಾ ಹೇಳಿಕೊಂಡಿರಬಹುದು ಎಂದು ನೀವು ಊಹಿಸಿದ್ದರೆ ಅದು ತಪ್ಪು. ರಶ್ಮಿಕಾ ಮಂದಣ್ಣ ಹೇಳಿಕೊಂಡಿರುವುದು ಅದಕ್ಕಿಂತ ಮೊದಲು ತಾವು ರಿಜೆಕ್ಟ್ ಆಗಿದ್ದರ ಬಗ್ಗೆ.

ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ಮಾತಿನಿಂದ ಸ್ವತಃ ಸಂದರ್ಶಕರು ಶಾಕ್ ಆಗಿದ್ದಾರೆ. ಕಾರಣ, ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿರುವ ರಶ್ಮಿಕಾ ಅಂದು ಸಾಕಷ್ಟು ಬಾರಿ ರಿಜೆಕ್ಟ್‌ ಆಗಿದ್ದರು ಎಂದರೆ ಯಾರಿಗಾದರೂ ನಂಬಲು ಕಷ್ಟವೇ! ಹೌದು, ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ. 'ನಾನು ನನ್ನ ಮೊದಲ ಸಿನಿಮಾದಲ್ಲಿ ಸಕ್ಸಸ್ ಪಡೆಯುವ ಮೊದಲು ಕನಿಷ್ಠ 25 ಬಾರಿ ರಿಜೆಕ್ಟ್ ಆಗಿದ್ದೇನೆ. ಒಂದು ಸಿನಿಮಾಗೆ ನಾನು ಸೆಲೆಕ್ಟ್ ಆಗಿ ಎರಡು ತಿಂಗಳು ಟ್ರೇನಿಂಗ್ ಪಡೆದಿದ್ದೆ.

ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದು 'ಅಂಕಲ್‌.. ಅಂಕಲ್‌..' ಕೂಗಿದ್ದ ನಟಿ ಮಂಜುಳಾ; ಡಾ ರಾಜ್‌ಕುಮಾರ್ ಮಾಡಿದ್ದೇನು?

ಆ ಸಿನಿಮಾಕ್ಕೆ ಇಟ್ಟಿದ್ದ ಹೆಸರು 'ಗೆಳಯರೇ ಗೇಳತಿಯರೇ'. ಆದರೆ ಆ ಚಿತ್ರವು ಟೇಕ್‌ಅಪ್‌ ಆಗಲೇ ಇಲ್ಲ. ಅದಾದ ಬಳಿಕ ಕೂಡ ಹಲವು ಕಡೆ ರಿಜೆಕ್ಟ್ ಎಂದು ಬಾಯಿ ಬಿಟ್ಟು ಹೇಳದಿದ್ದರೂ ನಾನು ಸೆಲೆಕ್ಟ್ ಎಂದು ಹೇಳಲಿಲ್ಲ. ಹಲವರು ನನ್ನ ಫೇಸ್‌ ಆಕ್ಟಿಂಗ್‌ಗೆ ಸೂಟ್ ಆಗಲ್ಲ ಅಂದ್ರು. ಇನ್ನೂ ಕೆಲವರು ನನಗೆ ಆಕ್ಟಿಂಗ್ ಬರುವುದಿಲ್ಲ ಅಂದ್ರು. ಮತ್ತೂ ಹಲವರು ನಾನು ನಟಿಯಾಗಲು ಸೂಕ್ತವಾಗಿಲ್ಲ ಅಂದ್ರು. 

ಶೂಟಂಗ್‌ಗೆ ಕಲ್ಪನಾ ದಿನಾಲೂ ಲೇಟ್; ಕಾರಣ- ಅರ್ಧ ಡಜನ್ ಮೊಟ್ಟೆ, ತರಕಾರಿ ಜ್ಯೂಸ್, ಹಣ್ಣುಹಂಪಲು!

ಎಲ್ಲವೂ ಓಕೆ. ಆದರೆ ನಾನು ರಿಜೆಕ್ಟ್ ಆದಾಗ ನನಗೆ ಅತೀವ ಸಂಕಟವಾಗುತ್ತಿತ್ತು. ಹೊಟ್ಟೆಯಲ್ಲಿ ಸುಟ್ಟಹಾಗಾಗುತ್ತಿತ್ತು. ನನ್ನನ್ನು ರಿಜೆಕ್ಟ್ ಮಾಡಿದವರ ಮೇಲೆ ನನಗೆ ಕೋಪ ಇರಲಿಲ್ಲ, ದ್ವೇಷ ಇರಲಿಲ್ಲ, ಆದರೆ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಇಷ್ಟೆಲ್ಲಾ ಆದ ಬಳಿಕವೇ ಅವರಿಗೆ ಕನ್ನಡದ 'ಕಿರಿಕ್ ಪಾರ್ಟಿ' ಸಿಕ್ಕಿದ್ದು, ಆ ಮೂಲಕ ಅವರು ಯಶಸಸ್ಸಿನ ಮೆಟ್ಟಿಲೇರಿದ್ದು.

ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು?

ಹೀಗಾಗಿ ರಶ್ಮಿಕಾ ಸಕ್ಸಸ್ ಹಿಂದೆ ಅಪಾರವಾದ ನೋವಿದೆ, ಶ್ರಮವಿದೆ. ಅದನ್ನು ಅವರು ಹೆಚ್ಚಾಗಿ ಎಲ್ಲೂ ಹೇಳಿಕೊಂಡಿಲ್ಲ. ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ 'ಪುಷ್ಪಾ 2' (Pushpa 2) ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಅಲ್ಲು ಅರ್ಜುನ್ ನಟನೆಯ ಈ ಚಿತ್ರವು ಸದ್ಯ ಶೂಟಿಂಗ್ ಹಂತದಲ್ಲಿದ್ದು ಭಾರೀ ನಿರೀಕ್ಷೆ ಮೂಡಿಸಿದೆ.

ಡಾ ರಾಜ್‌ ನನಗೆ ಜಡೆ ಹಾಕಿಕೊಟ್ಟಿದ್ದರು, ಹುಬ್ಬಿನ ಗೆರೆ ತೀಡಿದ್ದರು;ಹಿಂಗಂದ್ರು ನಟಿ ಜಯಮಾಲಾ!

ಕಾರಣ, ಈ ಮೊದಲು ಬಂದಿದ್ದ ಅದೇ ರಶ್ಮಿಕಾ-ಅಲ್ಲು ಅರ್ಜುನ್ ಜೋಡಿಯ 'ಪುಷ್ಪಾ' ಸಿನಿಮಾ ಭಾರೀ ಜನಮೆಚ್ಚುಗೆ ಗಳಿಸಿತ್ತು. ಈ ಮೊದಲು ತೆರೆಗೆ ಬಂದಿದ್ದ ಬಾಲಿವುಡ್‌ನ ರಶ್ಮಿಕಾ ಹಾಗೂ ರಣಬೀರ್ ಕಪೂರ್ ನಟನೆಯ 'ಆನಿಮಲ್' ಚಿತ್ರವು ಸೂಪರ್ ಹಿಟ್ ದಾಖಲಿಸಿ ಒಳ್ಳೆಯ ಗಳಿಕೆ ಮಾಡಿತ್ತು. ಸದ್ಯ, ನಟಿ ರಶ್ಮಿಕಾ ಮಂದಣ್ಣ ಅವರು ಸೌತ್-ನಾರ್ತ್ ಎಲ್ಲಾ ಕಡೆ ಭಾರೀ ಬೇಡಿಕೆ ಗಳಿಸಿಕೊಂಡಿದ್ದಾರೆ.