ಗೆಲುವು ನನ್ನದೇ, 2ನೇ ಸ್ಥಾನಕ್ಕೆ ಬಿಜೆಪಿ-ಕಾಂಗ್ರೆಸ್ ಪೈಪೋಟಿ: ಕೆ.ಎಸ್.ಈಶ್ವರಪ್ಪ
ನನ್ನ ಪರವಾಗಿ ಹೋದ ಕಡೆಯಲ್ಲಿಲ್ಲ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು, ಲಕ್ಷ ಮತಗಳ ಅಂತರದಲ್ಲಿ ಗೆಲುವುದು ಖಚಿತವಾಗಿದೆ. 2ನೇ ಸ್ಥಾನಕ್ಕಾಗಿ ಬಿಜೆಪಿ-ಕಾಂಗ್ರೆಸ್ ಪೈಪೂಟಿ ನಡೆಸುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ರಿಪ್ಪನ್‍ಪೇಟೆ (ಏ.27): ನನ್ನ ಪರವಾಗಿ ಹೋದ ಕಡೆಯಲ್ಲಿಲ್ಲ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು, ಲಕ್ಷ ಮತಗಳ ಅಂತರದಲ್ಲಿ ಗೆಲುವುದು ಖಚಿತವಾಗಿದೆ. 2ನೇ ಸ್ಥಾನಕ್ಕಾಗಿ ಬಿಜೆಪಿ-ಕಾಂಗ್ರೆಸ್ ಪೈಪೂಟಿ ನಡೆಸುತ್ತಿದ್ದಾರೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ರಿಪ್ಪನ್‍ಪೇಟೆ ರಾಯಲ್ ಕರ್ಫಂಟ್‍ನ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿಕಾರಿಪುರ ಹಿತ್ತಲ- ಕಲ್ಮನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮತದಾರರು ಸಭೆಯಲ್ಲಿ ಭಾಗವಹಿಸಿರುವುದನ್ನು ನೋಡಿದರೆ ನನ್ನ 35 ವರ್ಷದ ರಾಜಕೀಯ ಜೀವನದಲ್ಲಿಯೂ ಇಷ್ಟು ಬೆಂಬಲ ಸಿಕ್ಕಿರುವುದನ್ನು ಕಂಡಿಲ್ಲ. ಇದನ್ನು ನೋಡಿ ಅಪ್ಪ-ಮಕ್ಕಳು ತೀವ್ರ ಆಸಮದಾನ ಹೊಂದಿದ್ದಾರೆ. ನಮ್ಮ ಮನೆಗೆ ಬಂದರೆ ನಾಳೆ ನಿಮ್ಮ ವಿರುದ್ಧ ಏನಾದರೂ ಅಪ್ಪ ಮಕ್ಕಳು ಮಾಡುತ್ತಾರೆಂದು ಭಯ ಪಡುತ್ತಿದ್ದಾರೆ. ಏನೇ ಆಗಲಿ ನಿಮ್ಮಂತಹ ನೇರ ದಿಟ್ಟ ಹೋರಾಟಗಾರ ನಾಯಕರ ಅಗತ್ಯವಿದೆ ಎಂದು ಹೇಳಿ ನಮ್ಮ ಬೆಂಬಲ ನಿಮಗೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ನಾನು ಪಕ್ಷೇತರನಾಗಿ ಗೆದ್ದರೂ ಕೂಡಾ ಮೋದಿಜಿಯನ್ನೇ ಬೆಂಬಲಿಸುತ್ತೇನೆ. ಯಾವುದೇ ಕಾರಣಕ್ಕೂ ಹಿಂದೂ ವಿರೋಧಿ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಒಂದೊಂದು ತರಹದ ಗೊಂದಲದ ಹೇಳಿಕೆ ನೀಡಿದರು. ಇನ್ನೂ ಹೀಗೆ ಮುಂದುವರಿದರೆ ಕರ್ನಾಟಕ ರಾಜ್ಯ ಮುಸ್ಲಿಂ ರಾಜ್ಯವಾಗುವುದಲ್ಲಿ ಯಾವುದೇ ಸಂದೇಹವಿಲ್ಲ. ನನ್ನ ಉಸಿರಿರುವವರೆಗೂ ನಾನು ಹಿಂದು ಪರವಾಗಿಯೇ ಹೋರಾಟ ಮಾಡುವುದರೊಂದಿಗೆ ಹಿಂದು ರಕ್ಷಣೆಯಲ್ಲಿ ತೊಡಗಿಕೊಂಡಿರುತ್ತೇನೆ ಎಂದರು.
ಬಳ್ಳಾರಿಯನ್ನು ಜೀನ್ಸ್ ರಾಜಧಾನಿ ಮಾಡುವ ಮಾತಿಗೆ ಬದ್ಧ: ರಾಹುಲ್ ಗಾಂಧಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ರಾಜ್ಯದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಆಡಳಿತ ವ್ಯವಸ್ಥೆಯಲ್ಲಿ ಹಿಡಿತವಿಲ್ಲದೆ ನಿತ್ಯ ಒಂದಲ್ಲ ಒಂದು ಗೊಂದಲದ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.. ಈ ಸಭೆಯಲ್ಲಿ ವಾಟ್‍ಗೋಡು ಸುರೇಶ್, ಮ.ನರಸಿಂಹ, ವಿಶಾಲ, ಜಯಸುಬ್ಬರಾವ್, ಲೀಲಾವತಿ, ನಿರೂಫ್ ಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.