Asianet Suvarna News Asianet Suvarna News

ಶೂಟಿಂಗ್‌ಗೆ ಕಲ್ಪನಾ ದಿನಾಲೂ ಲೇಟ್; ಕಾರಣ- ಅರ್ಧ ಡಜನ್ ಮೊಟ್ಟೆ, ತರಕಾರಿ ಜ್ಯೂಸ್, ಹಣ್ಣುಹಂಪಲು!

ನಟಿಯರು ಎಂದರೆ  ಚೆನ್ನಾಗಿರಬೇಕೆಂಬುದು ಅಲಿಖಿತ ನಿಯಮ ಎನ್ನಬಹುದು. ಇಡೀ ಸಮಾಜ, ಹೆಣ್ಣು ಸುಂದರವಾಗಿ ಕಾಣಬೇಕು ಎಂದು ನಿರೀಕ್ಷಿಸುತ್ತದೆ. ಅದರಲ್ಲೂ ನಟಿಯರೆಂದರೆ ಮುಗಿಯಿತು, ಅವರು ಅದೆಷ್ಟೇ ಸುಂದರವಾಗಿ...

Kannada actress Minugutare Kalpana uses costly perfume and dress in her regular life srb
Author
First Published Apr 26, 2024, 4:54 PM IST | Last Updated Apr 26, 2024, 8:24 PM IST

ನಟಿ ಕಲ್ಪನಾ (Minugutare Kalpana) ಬಗ್ಗೆ ಗೊತ್ತಿಲ್ಲದವರು ಬಹಳ ಕಡಿಮೆ ಎನ್ನಬಹುದು. ಕನ್ನಡದ ಮೊಟ್ಟ ಮೊದಲ ಸ್ಟಾರ್ ನಟಿಯಾಗಿದ್ದ ಕಲ್ಪನಾ 60-70ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಮಿನುಗು ತಾರೆ ಎಂಬ ಬಿರುದು ಹೊಂದಿದ್ದ ನಟಿ ಕಲ್ಪನಾ ಬಳಸುತ್ತಿದ್ದ ಸೆಂಟ್, ವೇಷ-ಭೂಷಣ ಎಲ್ಲವೂ ತುಂಬಾ ದುಬಾರಿ ಇರುತ್ತಿದ್ದವು ಎನ್ನಲಾಗಿದೆ. ಕಲ್ಪನಾ ಹಾಕಿಕೊಳ್ಳುತ್ತಿದ್ದ ಸೆಂಟ್ ತುಂಬಾ ದೂರದಿಂದಲೇ 'ಘಮ್' ಎನ್ನುತ್ತಿದ್ದು, ಅವರು ಶೂಟಿಂಗ್‌ಗೆ ಬಂದಿದ್ದಾರೆ ಎಂಬುದನ್ನು ಆ ಸೆಂಟ್‌ ಮೂಲಕವೇ ಗುರುತಿಸಬಹುದು ಎನ್ನಲಾಗುತ್ತಿತ್ತು. 

ನಟಿ ಕಲ್ಪನಾ ಅದೆಷ್ಟು ದುಬಾರಿ ಡ್ರೆಸ್‌ಗಳನ್ನು ಹಾಕಿಕೊಳ್ಳುತ್ತಿದ್ದರಂತೆ ಎಂದರೆ, ಅದನ್ನು ನೋಡಿದರೆ ಅಚ್ಚರಿಯಾಗಿ ಮತ್ತೆ ಮತ್ತೆ ನೋಡುವಷ್ಟು ಚೆನ್ನಾಗಿ ಇರುತ್ತಿದ್ದವು ಎನ್ನಲಾಗಿದೆ. ಧರಿಸುತ್ತಿದ್ದ ವಾಚೂ ಕೂಡ ತುಂಬಾ ಕಾಸ್ಟ್ಲೀ, ಟೋಟಲ್ ಲೈಫ್ ಸ್ಟೈಲ್‌ ಕೂಡ ದುಬಾರಿ ಎನ್ನಲಾಗಿದೆ. ಒಮ್ಮೆ ಶೂಟಿಂಗ್‌ ಸ್ಪಾಟ್‌ಗೆ ಲೇಟ್‌ ಆಗಿ ಬಂದ ನಟಿ ಕಲ್ಪನಾ ಅವರನ್ನು ಹಿರಿಯರೊಬ್ಬರು ಆ ಬಗ್ಗೆ ಪ್ರಶ್ನಿಸಿದಾಗ ಕಲ್ಪನಾ ಕೊಟ್ಟ ಉತ್ತರ ನಿಜವಾಗಿಯೂ ಅಚ್ಚರಿ ಹುಟ್ಟಿಸುವಂತಿತ್ತು ಎನ್ನಬಹುದು.

ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು? 

ನಟಿ ಕಲ್ಪನಾ ಶೂಟಿಂಗ್‌ಗೆ ಲೇಟಾಗಿ ಬರುತ್ತಿದ್ದ ರಹಸ್ಯವೇನು ಗೊತ್ತೇ? ನಟಿ ಕಲ್ಪನಾ ಆ ಬಗ್ಗೆ 'ನಾನು ಬೆಳಿಗ್ಗೆ 5 ಗಂಟೆಗೇ ಎದ್ದೇಳ್ತೀನಿ.. ಅರ್ಧ ಡಜನ್ ಮೊಟ್ಟೆ ಒಡೆದು, ಅದನ್ನು ತಲೆಗೆ ಹಚ್ಚಿಕೊಂಡು, ಕೂದಲಿನ ಬುಡಕ್ಕೆಲ್ಲ ತಿಕ್ಕಿ ತಿಕ್ಕಿ ಒಂದು ಗಂಟೆ ಬಿಟ್ಟು ಬಿಸಿನೀರು ಹಾಕಿಕೊಂಡು ಸ್ನಾನ ಮಾಡ್ತೀನಿ. ಬಳಿಕ, ಕೂದಲನ್ನು ಒಣಗಿಸಿಕೊಂಡು ಬಾಚಿ ಸಿದ್ಧವಾಗ್ತೀನಿ. ಆಮೇಲೆ ಕ್ಯಾರೆಟ್, ಮೂಲಂಗಿ, ಬೀಟ್‌ರೂಟ್‌ ಹೀಗೆ ಸಾಕಷ್ಟು ತರಕಾರಿ ಜ್ಯೂಸ್ ಕುಡಿದು ಬರುವಷ್ಟರಲ್ಲಿ ಇಷ್ಟು ಹೊತ್ತು ಆಗ್ಬಿಡುತ್ತೆ' ಅಂದಿದ್ದರಂತೆ. ಕಲ್ಪನಾ ಉತ್ತರ ಕೇಳಿ ಆ ಹಿರಿಯರು ಕಕ್ಕಾಬಿಕ್ಕಿಯಾಗಿದ್ದರಂತೆ. 

ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು?

ಸಹಜವಾಗಿಯೇ, ನಟಿಯರು ಎಂದರೆ  ಚೆನ್ನಾಗಿರಬೇಕೆಂಬುದು ಅಲಿಖಿತ ನಿಯಮ ಎನ್ನಬಹುದು. ಇಡೀ ಸಮಾಜ, ಹೆಣ್ಣು ಸುಂದರವಾಗಿ ಕಾಣಬೇಕು ಎಂದು ನಿರೀಕ್ಷಿಸುತ್ತದೆ. ಅದರಲ್ಲೂ ನಟಿಯರೆಂದರೆ ಮುಗಿಯಿತು, ಅವರು ಅದೆಷ್ಟೇ ಸುಂದರವಾಗಿ ಕಾಣಿಸಿಕೊಂಡರೂ ಇನ್ನಷ್ಟು ಹೆಚ್ಚು ನಿರೀಕ್ಷೆ ಇದ್ದೇ ಇರುತ್ತದೆ. ಅದರಲ್ಲೂ ಅಂದಿನ ಕಾಲದ ಏಕೈಕ ಸ್ಟಾರ್ ನಟಿ ಎಂದರೆ ಕೇಳಬೇಕೆ? ಮೊದಲೇ ಸ್ಟೈಲಿಶ್ ನಟಿ ಎಂದು ಹೆಸರಾಗಿದ್ದ ನಟಿ ಕಲ್ಪನಾ ಬೆಳಿಗ್ಗೆ ಎದ್ದಮೇಲೆ ಅಷ್ಟನ್ನೆಲ್ಲಾ ಮಾಡಿ ಮುಗಿಸಿಕೊಂಡು ಬರುವಷ್ಟರಲ್ಲಿ 11 ಗಂಟೆ ಆಗುವುದು ಸಹಜ ಎನ್ನಬಹುದು. 

ಡಾ ರಾಜ್‌ ನನಗೆ ಜಡೆ ಹಾಕಿಕೊಟ್ಟಿದ್ದರು, ಹುಬ್ಬಿನ ಗೆರೆ ತೀಡಿದ್ದರು;ಹಿಂಗಂದ್ರು ನಟಿ ಜಯಮಾಲಾ!

Latest Videos
Follow Us:
Download App:
  • android
  • ios