RIP Lata Mangeshkar ಬೀದರ್‌ನ ಮಾಣಿಕಪ್ರಭು ಸಂಸ್ಥಾನ ಜತೆ ಲತಾ ಮಂಗೇಶ್ಕರ್ ನಂಟು!

  • ಹುಮನಾಬಾದ್‌ನ ಮಾಣಿಕನಗರಕ್ಕೆ ಬಂದು ಸಂಗೀತ ಸುಧೆ ಹರಿಸಿದ್ದ ಲತಾ
  • ಮಾಣಿಕಪ್ರಭು ಆಧ್ಯಾತ್ಮ ಗುರು ಹೀಗಾಗಿ, ಮನೆಗೆ ಪ್ರಭುಕುಂಜ್‌ ಹೆಸರು
  • ನೂತನ ಗೃಹಪ್ರವೇಶ ಸಂದರ್ಭದಲ್ಲಿ ಸಿದ್ದರಾಜ ಪ್ರಭುಗಳ ಪಾದಪೂಜೆ
Lata Mangeshkar unforgettable connection with bidar Karnataka Shri Manik Prabhu Devasthanam ckm

ಬೀದರ್‌(ಫೆ.07): ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್‌(Lata Mangeshkar) ಅವರಿಗೂ ಬೀದರ್‌(Bidar) ಜಿಲ್ಲೆಯ ಹುಮನಾಬಾದ ತಾಲೂಕಿನ ಮಾಣಿಕನಗರ ಗ್ರಾಮದ ಮಾಣಿಕಪ್ರಭು ಸಂಸ್ಥಾನಕ್ಕೂ(Manik Prabhu Devasthanam) 7 ದಶಕದ ನಂಟಿದೆ ಎಂಬುವುದು ವಿಶೇಷ.

ಸಂಸ್ಥಾನದ 5ನೇ ಪೀಠಾಧಿಪತಿಗಳಾದ ಸಿದ್ದರಾಜ ಪ್ರಭುಗಳು(Sri Siddaraja Manicka Prabhu) ಲತಾ ಮಂಗೇಶ್ಕರ್‌ ತಂದೆ ದೀನಾನಾಥ(deenanath mangeshkar) ಅವರ ಅಧ್ಯಾತ್ಮ ಗುರುಗಳಾಗಿದ್ದವರೂ ಹೌದು. ಹೀಗಾಗಿ 1961ರಲ್ಲಿ ಲತಾರ ಮುಂಬೈನ ನಿವಾಸದ ಹೆಸರು ಮಾಣಿಕಪ್ರಭುಗಳ ಹೆಸರಿನಿಂದ ಪ್ರಭುಕುಂಜ ಎಂದು ಬರೆಸಲಾಗಿತ್ತು ಎಂದು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ್‌ ಮಹಾರಾಜ್‌ ಸ್ಮರಿಸುತ್ತಾರೆ. ಅಷ್ಟೇ ಅಲ್ಲ 5ನೇ ಪೀಠಾಧಿಪತಿಗಳಾದ ಸಿದ್ದರಾಜ ಪ್ರಭುಗಳ ಪಾದಪೂಜೆ ಕಾರ್ಯಕ್ರಮವು ನೂತನ ಮನೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತ್ತು. ಆ ಸಂದರ್ಭದಲ್ಲಿ ಲತಾ ಮಂಗೇಶ್ಕರ್‌, ಆಶಾ ಮಂಗೇಶ್ಕರ್‌, ಉಷಾ ಮಂಗೇಶ್ಕರ್‌ 3 ಜನ ಸೇರಿಕೊಂಡು ಘನಶಾಮ ಸುಂದರ ಶ್ರೀಧರ, ಅರುಣೋದಯ ಝಾಲಾ ಎನ್ನುವ ಹಾಡುಗಳನ್ನು ಹಾಡಿದ್ದರು ಎಂದು ಆನಂದರಾಜ ಪ್ರಭುಗಳು ನೆನಪಿಸಿಕೊಂಡಿದ್ದಾರೆ.

RIP Lata Mangeshkar ಪಂಚಭೂತಗಳಲ್ಲಿ ಲತಾ ಮಂಗೇಶ್ಕರ್ ಲೀನ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

1981ರಲ್ಲಿ ಮಹಾರಾಷ್ಟ್ರದ(Maharastra) ಶಹಾಜಾನಿ ಔರಾದ್‌ನಲ್ಲಿ ಲತಾ ಮಂಗೇಶ್ಕರ್‌ರ ತಂದೆಯಾದ ದೀನಾನಾಥ ಮಂಗೇಶ್ಕರ್‌ ಅವರ ಹೆಸರಿನಲ್ಲಿ ಕಾಲೇಜು ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಹೈದ್ರಾಬಾದ್‌ನಿಂದ ಮಾರ್ಗಮಧ್ಯ ಬರುವ ಮಾಣಿಕನಗರಕ್ಕೆ ಲತಾ ಮಂಗೇಶ್ಕರ್‌ ಅವರ ಸಹೋದರಿಯರಾದ ಉಷಾ ಮಂಗೇಶ್ಕರ್‌, ಆಶಾ ಭೋಸ್ಲೆ ಹಾಗೂ ಸಹೋದರ ಹೃದಯನಾಥ ಅವರೊಟ್ಟಿಗೆ ಆಗಮಿಸಿ ಸಿದ್ಧರಾಜ ಮಾಣಿಕಪ್ರಭುಗಳ ದರ್ಶನ ಪಡೆದಿದ್ದಲ್ಲದೆ ಪ್ರಭುಗಳ ಎದುರು ನಾಟ್ಯ ಸಂಗೀತವಾದ ಜಯಶಂಕರ ಗಂಗಾಧರ ಹಾಗೂ ಭಕ್ತಿ ಗೀತೆ ಘನಶ್ಯಾಮ ಸುಂದರ ಶ್ರೀಧರ ಎಂಬ ಹಾಡುಗಳನ್ನು ಹಾಡಿದ್ದರು. ಆಗ ನಾನು 10 ವರ್ಷದವನಿದ್ದೆ ಎಂದು ಇದೇ ಸಂದರ್ಭದಲ್ಲಿ ಆನಂದರಾಜ್‌ ಮಹಾರಾಜ್‌ ಕನ್ನಡಪ್ರಭದದೊಂದಿಗೆ ಮಾತನಾಡಿ ನೆನಪಿಸಿಕೊಂಡರು.

RIP Lata Mangeshkar ಬೀದರ್‌ನ ಬಡ ವಿದ್ಯಾರ್ಥಿಗಳ ಕಾಲೇಜಿಗೆ ಉಚಿತ ಸಂಗೀತ ಕಾರ್ಯಕ್ರಮ ನಡೆಸಿ 12 ಲಕ್ಷ ರೂ ಸಂಗ್ರಹಿಸಿದ್ದ ಲತಾಜಿ!

ಲತಾ ಮಂಗೇಶ್ಕರ್‌ ಅವರ ನಿಧನದಿಂದ ಭಾರತದ ಸಾರಸ್ವತ ಲೋಕದ ಮಹತ್ವದ ಯುಗದ ಅಂತ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭು ಕಂಬನಿ ಮಿಡಿದಿದ್ದಾರೆ.

ಯಡಿಯೂರಪ್ಪ, ತಾರಾ ಸಂತಾಪ
ದೇಶ ಕಂಡ ಅಪ್ರತಿಮ ಗಾಯಕಿ ಲತಾ ಮಂಗೇಶ್ಕರ್‌ ಅವರು ದೈವಾಧೀನರಾಗಿರುವುದು ಇಡೀ ದೇಶದ ಜನರಿಗೆ ನೋವು ತರುವ ಸಂಗತಿ. ಕೋಟ್ಯಂತರ ಜನ ಲತಾ ಮಂಗೇಶ್ಕರ್‌ ಅವರ ಸಂಗೀತವನ್ನು ಕೇಳಿ ಆನಂದಪಡುತ್ತಿದ್ದರು. ಅವರಿಗೆಲ್ಲ ನೋವಾಗಿದೆ ಎಂದು  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Lata Mangeshkar Death : 1000 ಪಾಕಿಸ್ತಾನ ಕೂಡ ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲ ಎಂದ ಪಾಕಿಸ್ತಾನಿ

ಭಾರತದ ಗಾನ ಕೋಗಿಲೆಯಂತಿದ್ದ ಲತಾ ಮಂಗೇಶ್ಕರ್‌ ಅವರನ್ನು ನಾವು ಕಳೆದುಕೊಂಡಿರುವುದು ಭಾರೀ ದುಃಖದ ಸಂಗತಿ. ಚಿತ್ರರಂಗಕ್ಕಷ್ಟೇ ಅಲ್ಲದೇ, ತಮ್ಮ ಭಜನೆ, ಗೀತೆಗಳಿಂದ ಸೈನಿಕರನ್ನೂ ಹುರಿದುಂಬಿಸುತ್ತಿದ್ದ ತಾಯಿ ಲತಾ ಮಂಗೇಶ್ಕರ್‌ ಅವರ ನಿಧನದಿಂದ ಗಾಯನ ಲೋಕಕ್ಕೆ ಬಹುದೊಡ್ಡ ನಷ್ಟಉಂಟಾಗಿದೆ ಎಂದು ನಟಿ ತಾರಾ ಅನೂರಾಧಾ ಹೇಳಿದ್ದಾರೆ.

ಅಗಲಿದ ಚೇತನಗಳಿಗೆ ನುಡಿ ನಮನ
ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪದ್ಮಶ್ರೀ ಪುರಸ್ಕೃತ ಶ್ರೇಷ್ಠ ಪ್ರವಚನಕಾರ ಇಬ್ರಾಹಿಂ ಸುತಾರ ಹಾಗೂ ಭಾರತರತ್ನ ಲತಾ ಮಂಗೇಶ್ಕರ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಕಸಾಪ ಜಿಲ್ಲಾ ಪದಾಧಿಕಾರಿ ಅಭಿಷೇಕ ಚಕ್ರವರ್ತಿ ಮಾತನಾಡಿ, ಪ್ರವಚನಕಾರರಾದ ಇಬ್ರಾಹಿಂ ಸುತಾರ ಅವರು ಶರಣ ಸಂಸ್ಕೃತಿಯ ಮೇಲೆ ಪಾಂಡಿತ್ಯವನ್ನು ಪಡೆದು ರಾಜ್ಯಾದ್ಯಂತ ಪ್ರವಚನ, ಕೀರ್ತನೆಗಳಿಂದ ಮನೆ ಮಾತಾಗಿದ್ದರೆ. ಕನ್ನಡದ ಕಬೀರರೆಂದು ನಾಮಾಂಕಿತರಾಗಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಸಾರಸ್ವತಲೋಕ ಬಡವಾಗಿದೆ ಎಂದರು.

ಜಿಲ್ಲಾ ಕಸಾಪ ದತ್ತಿ ಸಂಚಾಲಕ ಮಹಮ್ಮದಗೌಸ ಹವಾಲ್ದಾರ್‌Ü ಮಾತನಾಡಿ, ಭಾರತರತ್ನ ಲತಾ ಮಂಗೇಶ್ಕರ 36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಇತಿಹಾಸ ನಿರ್ಮಿಸಿದ್ದಾರೆ. ಲತಾ ಮಂಗೇಶ್ಕರ ದೇಶದ ಕೀರ್ತಿ ತಂದವರಲ್ಲಿ ಪ್ರಮುಖರು. ಅವರ ಗಾಯನದ ಇಂಪು ಅಬಾಲವೃದ್ದರಾದಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿವೆ. ಅವರನ್ನು ಕಳೆದುಕೊಂಡ ದೇಶ ಮತ್ತು ಚಲನಚಿತ್ರರಂಗ ಅನಾಥವಾಗಿದೆ ಎಂದರು.
 

Latest Videos
Follow Us:
Download App:
  • android
  • ios