Lata Mangeshkar Death : 1000 ಪಾಕಿಸ್ತಾನ ಕೂಡ ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲ ಎಂದ ಪಾಕಿಸ್ತಾನಿ!

ಲತಾ ಮಂಗೇಶ್ಕರ್ ಸಾವಿಗೆ ಪಾಕಿಸ್ತಾನದಿಂದಲೂ ಸಂತಾಪ
1000 ಪಾಕಿಸ್ತಾನ ಕೂಡ ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲ ಎಂದ ಪಾಕ್ ಅಭಿಮಾನಿ
ಪಾಕ್ ಸಚಿವ ಫವಾದ್ ಚೌಧರಿ, ನಟ ಇಮ್ರಾನ್ ಅಬ್ಬಾಸ್ ಸಂತಾಪ
 

even 1000 Pakistan cannot compensate this los says Pakistanis on Lata Mangeshkar Death san

ನವದೆಹಲಿ (ಫೆ.6): ಸಂಗೀತಕ್ಕೆ ಯಾವುದೇ ಭೇದವಿಲ್ಲ, ಗಡಿಯಿಲ್ಲ. ದೇಶ, ಭಾಷೆಗಳಾಚೆ ಬೆಳೆದ ಅನಪಮ ಶಕ್ತಿ ಸಂಗೀತ. ಈ ಸಂಗೀತ ಲೋಕದ ತಾರೆಯಂತಿದ್ದ ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ (Nightingale Of India Lata Mangeshkar) ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ವಿಶ್ವದೆಲ್ಲೆಡೆಯಿಂದ ಸಂತಾಪ ವ್ಯಕ್ತವಾಗುತ್ತಿದೆ. ಅತ್ತ ಪಾಕಿಸ್ತಾನ (Pakistan) ಕೂಡ ಲತಾ ಮಂಗೇಶ್ಕರ್ ಸಾವಿಗೆ ಮರುಕಪಟ್ಟಿದೆ. "ಬಹುಶಃ 1000 ಪಾಕಿಸ್ತಾನ ಕೂಡ ಇಂಥ ದೊಡ್ಡ ನಷ್ಟವನ್ನು ಭರಿಸಲು ಸಾಧ್ಯವಿಲ್ಲ' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಲತಾ ಮಂಗೇಶ್ಕರ್ ಸಾವಿಗೀಡಾದ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆಯೇ ಪಾಕಿಸ್ತಾನದಲ್ಲಿಯೂ ಟ್ವಿಟರ್ ನಲ್ಲಿ ಇದು ಟಾಪ್ ಟ್ರೆಂಡಿಂಗ್ ವಿಚಾರವಾಗಿತ್ತು. ಇದು ಗಡಿಯ ಎರಡೂ ಬದಿಗಳಲ್ಲಿ ಲತಾ ಮಂಗೇಶ್ಕರ್ ಹೊಂದಿದ್ದ ಅಭಿಮಾನಿ ಬಳಗವನ್ನು ಸೂಚಿಸಿದೆ. ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆಯ ಫೆಡರಲ್ ಸಚಿವ ಫವಾದ್ ಚೌಧರಿ (Pakistan’s Federal Minister for Information and Broadcasting Fawad Chaudhry) ಅವರು ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಲತಾ ಅವರ ನಿಧನವನ್ನು "ಯುಗದ ಅಂತ್ಯ" ಎಂದು ಉಲ್ಲೇಖಿಸಿರುವ ಫವಾದ್, "ದಶಕಗಳ ಕಾಲ ಸಂಗೀತ ಪ್ರಪಂಚವನ್ನು ಆಳಿದ ಮಧುರರಾಗದ ರಾಣಿ" ಎಂದು ವರ್ಣನೆ ಮಾಡಿದ್ದಾರೆ.

ಜನರಲ್ ಕಮರ್ ಬಜ್ವಾ ಅವರ ವೈಯಕ್ತಿಕ ಸಲಹೆಗಾರ ಎಂದು ತನ್ನ ಬಯೋದಲ್ಲಿ ಬರೆದುಕೊಂಡಿರುವ "ಜೈದು" ಎನ್ನುವ ಪರೋಡಿ ಅಕೌಂಟ್ ನಿಂದಲೂ ಲತಾ ಮಂಗೇಶ್ಕರ್ ಕುರಿತಾಗಿ ಸಂತಾಪದ ಟ್ವೀಟ್ ಬಂದಿದ್ದು, "ಓಹ್ ಭಾರತವೇ, ನೀವು ಇಂದು ಏನನ್ನು ಕಳೆದುಕೊಂಡಿದ್ದೀರಿ ಎನ್ನುವುದು ನಿಮ್ಮ ಅರಿವಿಗೆ ಬಾರದೇ ಇರಬಹುದು. 1000 ಪಾಕಿಸ್ತಾನ ಕೂಡ ಈ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಓಂ ಶಾಂತಿ ಲತಾ ಮಂಗೇಶ್ಕರ್' ಎಂದ ಹೇಳಿದ್ದಾರೆ.
 


ಇನ್ನು ಪಂಬಾಬಿ ಬಿಬಿಸಿ ನ್ಯೂಸ್ (BBC News Punjabi) ಕೂಡ ಇಸ್ಲಾಮಾಬಾದ್ ನ ಜನರು ಈ ಸುದ್ದಿಗೆ ನೀಡಿದ ಪ್ರತಿಕ್ರಿಯೆಗಳನ್ನೂ ವರದಿ ಮಾಡಿದೆ. ಆಕೆಯದ್ದು ಮಾಂತ್ರಿಕ ಧ್ವನಿ, ಈ ಸುದ್ದಿಯಿಂದ ಕಣ್ಣೀರು ಬಂದಿತು ಎಂದೆಲ್ಲಾ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ಖ್ಯಾತ ಗಾಯಕಿ ನೂರ್ ಜಹಾನ್ ಅವರೊಂದಿಗೆ ಕೂಡ ಲತಾ ಅವರನ್ನು ಹೋಲಿಕೆ ಮಾಡಿದ್ದಾರೆ.

ಬರಹಗಾರ್ತಿ ಮತ್ತು ಅಂಕಣಗಾರ್ತಿ ದುರ್ದಾನ ನಜಮ್ ಪ್ರಕಾರ, "ಸಂಗೀತದ ನೈಟಿಂಗೇಲ್" ಮಂಗೇಶ್ಕರ್ " ಅವರು ಭಾರತದಲ್ಲಿ ಎಷ್ಟು ಪ್ರಸಿದ್ಧರಾಗಿದ್ದಾರೂ, ಅಷ್ಟೇ ಪ್ರಸಿದ್ಧಿಯನ್ನು ಪಾಕಿಸ್ತಾನ ಹಾಗೂ ವಿಶ್ವದೆಲ್ಲೆಡೆಯಿಂದ ಪಡೆದಿದ್ದರು.  ರಾಜಕೀಯ ವಿಶ್ಲೇಷಕ ಡಾ ಶಾಹಿದ್ ಮಸೂದ್, ಲತಾ ಮಂಗೇಶ್ಕರ್ ಅವರ ನಿಧನದೊಂದಿಗೆ ಯುಗವೊಂದರ ಅಂತ್ಯವಾಗಿದೆ ಎಂದು ಗೌರವ ಸಲ್ಲಿಸಿದ್ದು ಮಾತ್ರವಲ್ಲದೆ, ನಮ್ಮ ಪ್ರೀತಿಯ ಸಹೋದರಿ ಎಂದೂ ಉಲ್ಲೇಖ ಮಾಡಿದ್ದಾರೆ. ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಮತ್ತು ಗಾಯಕಿ ಹುಮೈರಾ ಅರ್ಷದ್ ಕೂಡ ಲತಾ ಮಂಗೇಶ್ಕರ್ ಸಾವಿನ ಕುರಿತು ಪಾಕಿಸ್ತಾನಿ ಸುದ್ದಿ ವಾಹಿನಿ ಹಮ್ ನ್ಯೂಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
 

RIP Lata Mangeshkar: ಎಲ್ಲ ಬಗೆಯ ಹಾಡುಗಳನ್ನು ನೀಡಿದ್ದ ಲತಾ... ರಾಜ್ಯದಲ್ಲಿ 2 ದಿನ ಶೋಕಾಚರಣೆ
ಭಾರತ ತಂಡ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಜೆ, "ಲತಾಜೀ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಪಾಕಿಸ್ತಾನದಿಂದ ನಿಮಗೆ ಪ್ರೀತಿಯ ನಮನ. ಸಂಗೀತಕ್ಕೆ ಯಾವುದೇ ಗಡಿಯಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದರೆ, "ಇಡೀ ಪಾಕಿಸ್ತಾನ ನಿಮ್ಮ ದನಿಯನ್ನು ಪ್ರೀತಿಯಿಂದ ನೋಡಿತ್ತು. ಕ್ಲಾಸಿಕಲ್ ಸಂಗೀತದ ಒಂದು ಯುಗ ಇಂದು ಅಂತ್ಯವಾಗಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Lata Mangeshkar passes away: ಆಸ್ಪತ್ರೆಯಲ್ಲೇ ಲತಾ ದೀದಿ ಅಂತಿಮ ದರ್ಶನ ಪಡೆದ ಸಚಿನ್..!
"ಬಹುಶಃ ಭಾರತ ಹಾಗೂ ಪಾಕಿಸ್ತಾನದಲ್ಲಿ ಲತಾ ಮಂಗೇಶ್ಕರ್ ಅವರ ಗಾಯನವನ್ನು ಕೇಳದ ಮನೆಗಳಿಲ್ಲ. ನಮ್ಮ ಜೀವನ ಕೇವಲ ಒಂದು ಅವಧಿ ಮಾತ್ರ, ಕ್ರೂರ ಸಾವು ಯಾವಾಗಲೂ ನಮ್ಮ ಹತ್ತಿರದಲ್ಲೇ ಇರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಪಾಕಿಸ್ತಾನದ ವಾಹಿನಿಗಳಲ್ಲಿ ಲತಾ ಮಂಗೇಶ್ಕರ್ ಕುರಿತಾಗಿ ಬರುತ್ತಿರುವ ಕಾರ್ಯಕ್ರಮಗಳ ಬಗ್ಗೆ ಟ್ವೀಟ್ ಮಾಡಿದ್ದು, ಕಲಾವಿದರು ಯುನಿವರ್ಸಲ್ ಎಂದು ಶೀರ್ಷಿಕೆ ನೀಡಿದ್ದಾರೆ. ಪಾಕಿಸ್ತಾನಿ ಪತ್ರಕರ್ತ ಮತ್ತು ಬಿಒಎಲ್ ನೆಟ್‌ವರ್ಕ್‌ನ ಮುಖ್ಯ ಸಂಪಾದಕ ನಜೀರ್ ಲೆಘರಿ ಅವರು ತಮ್ಮ ಸುದ್ದಿ ವಾಹಿನಿಯಲ್ಲಿ ಗಾಯಕಿಯ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios