RIP Lata Mangeshkar ಬೀದರ್‌ನ ಬಡ ವಿದ್ಯಾರ್ಥಿಗಳ ಕಾಲೇಜಿಗೆ ಉಚಿತ ಸಂಗೀತ ಕಾರ್ಯಕ್ರಮ ನಡೆಸಿ 12 ಲಕ್ಷ ರೂ ಸಂಗ್ರಹಿಸಿದ್ದ ಲತಾಜಿ!

  • ಸಂಗೀತ ಮೂಲಕ ಕರ್ನಾಟಕಕ್ಕೆ ಹಲವು ಕೊಡುಗೆ ನೀಡಿರುವ ಮಂಗೇಶ್ಕರ್
  • ಬಡ ವಿದ್ಯಾರ್ಥಿಗಳ ಕಾಲೇಜಿಗೆ ಉಚಿತ ಸಂಗೀತ ಕಾರ್ಯಕ್ರಮ ನಡೆಸಿದ್ದ ಲತಾ
  • 12 ಲಕ್ಷ ರೂ ಸಂಗ್ರಹಿಸಿ ಕಾಲೇಜು ಕ್ಯಾಂಪಸ್ ನಿರ್ಮಾಣಕ್ಕೆ ಲತಾ ನೆರವು
Lata Mangeshkar contribution to Karnataka free concert helped bidar college raise Rs 12 lakh ckm

ಮುಂಬೈ(ಫೆ.06):  ಗಾನ ಕೋಗಿಲೆ ಲತಾ ಮಂಗೇಶ್ಕರ್(Lata Mangeshkar) ಹಾಗೂ ಕರ್ನಾಟಕದ(Karnataka) ನಡುವೆ ಅವಿನಾಭವ ಸಂಬಂಧವಿದೆ. ತಮ್ಮ ಕರ್ನಾಟಕಕ್ಕೆ ಲತಾ ಜೀ ಕೊಡುಗೆ ಕೇವಲ ಗಾನದ ಮೂಲಕ ಮಾತ್ರವಲ್ಲ, ಆರ್ಥಿಕ ನೆರವು, ಸಾಮಾಜಿಕ ಕಳಕಳಿ ಸೇರಿದಂತೆ ಹಲವು ರೂಪದಲ್ಲಿ ನೀಡಿದ್ದಾರೆ. ಹೌದು, ಬೀದರ್‌ನ ಔರಾದ್‌ನಲ್ಲಿರುವ(Aurad in Bidar) ಬಡ ವಿದ್ಯಾರ್ಥಿಗಳ ಕಾಲೇಜಿಗಾಗಿ(College) ಲತಾ ಮಂಗೇಶ್ಕರ್ ಉಚಿತ ಸಂಗೀತ ಕಾರ್ಯಕ್ರಮ(free concert) ನಡೆಸಿಕೊಟ್ಟು 12 ಲಕ್ಷ ರೂಪಾಯಿ ಸಂಗ್ರಹಿಸಿ ಕಾಲೇಜಿಗೆ ನೀಡಿದ್ದಾರೆ.

ಔರಾದ್ ಹಳ್ಳಿಯಲ್ಲಿ ಕಾಲೇಜು ನಿರ್ಮಾಣ ಮಾಡಿ ಈ ವಿದ್ಯಾಸಂಸ್ಥೆ ಉದ್ಘಾಟನೆಗೆ ಲತಾ ಮಂಗೇಶ್ಕರ್ ಅವರನ್ನು ಅಹ್ವಾನಿಸಲಾಗಿತ್ತು. ಇದು ಬಡ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿದ ಕಾಲೇಜು. ಸಾಲ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ ಕ್ಯಾಂಪಸ್, ಕೊಠಡಿಗಳ ನಿರ್ಮಾಣ ಬಾಕಿ ಉಳಿದಿತ್ತು. ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಹಣ ಸಂಗ್ರಹಕ್ಕೆ ಕಾಲೇಜು ನಿರ್ಧರಿಸಿತ್ತು. ಇದನ್ನು ಅರಿತ ಲತಾ ಮಂಗೇಶ್ಕರ್, ತಾವು ಸಂಗೀತ ಕಾರ್ಯಕ್ರಮವನ್ನು ಉಚಿತವಾಗಿ ಮಾಡಿದ್ದರು. ಕಾಲೇಜಿನಿಂದ ಒಂದು ರೂಪಾಯಿ ಪಡೆಯದ ಸಂಗೀತ ಕಾರ್ಯಕ್ರಮ ನಡೆಸಿದರು. ಈ ಮೂಲಕ 12 ಲಕ್ಷ ರೂಪಾಯಿ ಸಂಗ್ರಹಿಸಿ ಕಾಲೇಜಿಗೆ ನೀಡಿದ್ದರು.

1000 ಪಾಕಿಸ್ತಾನ ಕೂಡ ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲ ಎಂದ ಪಾಕಿಸ್ತಾನಿ!

ಈ ಸಂಗೀತ ಕಾರ್ಯಕ್ರಮ ಹಾಗೂ ಹಣ ಸಂಗ್ರಹ ನಡೆದಿರುವುದು 1976ರಲ್ಲಿ.  ದಶಕಗಳ ಹಿಂದೆ ಸಂಗ್ರಹಿಸಿದ ಈ 12 ಲಕ್ಷ ರೂಪಾಯಿಯಲ್ಲಿ ಔರಾದ್‌ ಕಾಲೇಜಿನ ಕ್ಯಾಂಪಸ್ ನಿರ್ಮಾಣ ಮಾಡಲಾಯಿತು. 8 ಲಕ್ಷ ರೂಪಾಯಿಯಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಿ, ಉಳಿದ 4 ಲಕ್ಷ ರೂಪಾಯಿಯಲ್ಲಿ ಈ ಹಿಂದಿನ ಸಾಲವನ್ನು ತೀರಿಸಲಾಯಿತು. ಬಳಿಕ ನವೀಕರಣಗೊಂಡ ಕಾಲೇಜಿಗೆ ಲತಾ ಮಂಗೇಶ್ಕರ್ ಅವರ ತಂದೆಯ ಹೆಸರಾದ ದೀನನಾಥ್ ಮಂಗೇಶ್ಕರ್(Deenanath Mangeshkar College) ಹೆಸರು ಇಡಲಾಗಿದೆ. 

ಲತಾ ಮಂಗೇಶ್ಕರ್ ಅವರ ಕೊಡುಗೆಯನ್ನು ದೀನನಾಥ್ ಮಂಗೇಶ್ಕರ್ ಕಾಲೇಜಿನ ಅಧ್ಯಕ್ಷ ವಿಶ್ವನಾಥ್ ಸ್ಮರಿಸಿದ್ದಾರೆ. ಲತಾ ಅವರ ನೆರವು ಸಿಗದಿದ್ದರೆ ಇಂದು ಈ ಕಾಲೇಜು ಇರುತ್ತಿರಲಿಲ್ಲ. ಕಾರಣ ಅಂದಿನ ಕಾಲದಲ್ಲಿ 4 ಲಕ್ಷ ಸಾಲ, ಬಳಿಕ ತರಗತಿಗಳ ಕೊಠಡಿಗೆ ಮತ್ತಷ್ಟು ಹಣ ಹೊಂದಿಸುವುದು ಕಷ್ಟವಾಗಿತ್ತು. ಆದರೆ ಇದನ್ನು ಸಾಧ್ಯವಾಗಿಸಿದ್ದು ಲತಾ ಮಂಗೇಶ್ಕರ್. ವಿದ್ಯಾರ್ಥಿಗಳ ಓದಿಗಾಗಿ ಎಂಬುದನ್ನು ಅರಿತ ಲತಾ ಮಂಗೇಶ್ಕರ್ ಒಂದು ರೂಪಾಯಿ ಪಡೆಯದೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅದು ಲತಾ ಮಂಗೇಶ್ಕರ್‌ಗೆ ದೇಶ ವಿದೇಶಗಳಲ್ಲಿ ಅತ್ಯಂತ ಬೇಡಿಕೆ ಹಾಗೂ ಬಿಡುವಿಲ್ಲದ ಸಮಯದಲ್ಲೇ ನಮಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಎಂದು ವಿಶ್ವನಾಥ್ ಹೇಳಿದ್ದಾರೆ.

RIP Lata Mangeshkar: ಎಲ್ಲ ಬಗೆಯ ಹಾಡುಗಳನ್ನು ನೀಡಿದ್ದ ಲತಾ... ರಾಜ್ಯದಲ್ಲಿ 2 ದಿನ ಶೋಕಾಚರಣೆ

ಡಿಗ್ರಿ ಕಾಲೇಜಿನ ಉದ್ಘಾಟನೆಗೆ ಬಂದ ಲತಾ ಮಂಗೇಶ್ಕರ್,  ಶಾರಾದಾ ಪಾಲಿಟೆಕ್ನಿಕ್ ಕಾಲೇಜಿಗಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವುದಾಗಿ ಹೇಳಿದ್ದರು. ತಾವು ಕೊಟ್ಟ ಮಾತಿನಂತೆ ಫೆಬ್ರವರಿ 28, 1981ರಂದು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಎಂದು ವಿಶ್ವನಾಥ್ ಕಾಲೇಜಿಗೆ ಲತಾ ಮಂಗೇಶ್ಕರ್ ನೀಡಿದ ಕೂಡುಗೆ ಹಾಗೂ ಅವರೊಂದಿಗೆ ಒಡನಾಟವನ್ನು ವಿವರಿಸಿದ್ದಾರೆ.  ಲತಾ ಮಂಗೇಶ್ಕರ್ ನಿಧನಕ್ಕೆ(RIP Lata Mangeshkar) ದೀನನಾಥ್ ಮಂಗೇಶ್ಕರ್ ಕಾಲೇಜಿನ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ. 

ಲತಾ ಮಂಗೇಶ್ಕರ್ ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತಿದ್ದಾರೆ. ಹಲವು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಕೊರೋನಾ ಸಂಕಷ್ಟದಲ್ಲೂ ಮಹಾರಾಷ್ಟ್ರ ಸರ್ಕಾರದ ಕೋವಿಡ್ ಪರಿಹಾರ ನಿಧಿಗೆ ಹಣ ದೇಣಿಗೆಯಾಗಿ ನೀಡಿದ್ದಾರೆ. ಹಲವು ಮಕ್ಕಳ ವಿದ್ಯಾಭ್ಯಾಸಕ್ಕೆ ಲತಾ ಮಂಗೇಶ್ಕರ್ ನೆರವಾಗಿದ್ದಾರೆ.

Latest Videos
Follow Us:
Download App:
  • android
  • ios