ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರಿಂದ ಅಂತಿಮ ನಮನ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಅಂತಿಮ ವಿಧಿ ವಿಧಾನ ನೆರವೇರಿಸಿದ ಲತಾ ಕುಟುಂಬಸ್ಥರು
ಮುಂಬೈ(ಫೆ.06): ಆರೋಗ್ಯ ಸಮಸ್ಸೆಯಿಂದ ನಿಧನರಾದರ 92 ವಯಸ್ಸಿನ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ(Lata Mangeshkar cremation) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಲತಾ ಮಂಗೇಶ್ಕರ್ ಕುಟುಂಬಸ್ಥರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಲತಾ ಮಂಗೇಶ್ಕರ್ ನಿಧನಕ್ಕೆ ಭಾರತ ಮಾತ್ರವಲ್ಲ ವಿಶ್ವವೇ ಕಂಬನಿ ಮಿಡಿದಿದೆ. ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿರುವ ಪ್ರದಾನಿ ನರೇಂದ್ರ ಮೋದಿ, ಲತಾ ಮಂಗೇಶ್ಕರ್ ಅಂತಿಮ ದರ್ಶನ ಪಡೆದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಬಾಲಿವುಡ್ ಚಿತ್ರರಂಗ ಸೇರಿದಂತೆ ಹಲವು ಗಣ್ಯರು ಶಿವಾಜಿ ಪಾರ್ಕ್‌ಗೆ ಆಗಮಿಸಿ ಅಂತಿಮ ದರ್ಶನ(Lata Mangeshkar shraddhanjali) ಪಡೆದಿದ್ದಾರೆ.
ಬೀದರ್‌ನ ಬಡ ವಿದ್ಯಾರ್ಥಿಗಳ ಕಾಲೇಜಿಗೆ ಉಚಿತ ಸಂಗೀತ ಕಾರ್ಯಕ್ರಮ ನಡೆಸಿ 12 ಲಕ್ಷ ರೂ ಸಂಗ್ರಹಿಸಿದ್ದ ಲತಾಜಿ!
ರಣಬೀರ್ ಕಪೂರ್, ಶಾರುಖ್ ಖಾನ್, ಅನುಷ್ಕಾ ಶರ್ಮಾ, ಜಾವೇದ್ ಅಕ್ತರ್, ಅಮಿರ್ ಖಾನ್ ಸೇರಿದಂತೆ ಬಾಲಿವುಡ್ ನಟ ನಟಿಯರು ಗಣ್ಯರು ಅಂತ್ಯಕ್ರಿಯೆಲ್ಲಿ ಪಾಲ್ಗೊಂಡರು. ಅಪಾರ ಅಭಿಮಾನಿಗಳ ಬಳಗ ಲತಾ ಮಂಗೇಶ್ಕರ್ ಅಂತಿಮ ದರ್ಶನ ಪಡೆದಿದ್ದಾರೆ.
ಜನಸಂದಣಿ, ಗಣ್ಯರು ಆಗಮನದಿಂದ ಶಿವಾಜಿ ಪಾರ್ಕ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಲತಾ ಮಂಗೇಶ್ಕರ್ ಅಂತ್ಯಕ್ರಿಯೆಗೆ 2,700 ಪೊಲೀಸರನ್ನು ನಿಯೋಜಿಸಲಾಗಿದೆ. 20 ಡಿಸಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದೋಬಸ್ತ್ ನೀಡಿದ್ದಾರೆ. ಆಸ್ಪತ್ರೆಯಿಂದ ಶಿವಾಜಿ ಪಾರ್ಕ್‌ಗೆ ಪಾರ್ಥೀವ ಶರೀರ ಸಾಗುವ ವೇಳೆಯೂ ಗರಿಷ್ಠ ಭದ್ರತೆ ಒದಗಿಸಲಾಗಿದೆ.
ಲತಾ ಮಂಗೇಶ್ಕರ್ ಅಪ್ರತಿಮ ಐಕಾನ್, ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಸಂತಾಪ
ಲತಾ ಮಂಗೇಶ್ಕರ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕೊರೋನಾ ವೈರಸ್‌ಗೆ ತುತ್ತಾದ ಲತಾ ಮಂಗೇಶ್ಕರ್ ಜನವರಿ 8 ರಂದು ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿ ತಲುಪಿದ ಕಾರಣ ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಕಳೆದ ವಾರ ಆರೋಗ್ಯ ಚೇತರಿಸಿಕೊಂಡ ಕಾರಣ ವೆಂಟಿಲೇಟರ್ ತೆಗಯಲಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಮತ್ತೆ ಹದಗೆಟ್ಟಿತು. ಸತತ ಚಿಕಿತ್ಸೆ ಫಲಕಾರಿಯಾಗದೆ ಇಂದು(ಫೆ.06) ಕೊನೆಯುಸಿರೆಳಿದಿದ್ದಾರೆ.
2019ರ ನವೆಂಬರ್ ತಿಂಗಳಲ್ಲಿ ಲತಾ ಮಂಗೇಶ್ಕರ್ ನ್ಯೂಮೋನಿಯಾ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಸತತ 28 ದಿನಗಳ ಚಿಕಿತ್ಸೆ ಬಳಿಕ ಲತಾ ಮಂಗೇಶ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇಷ್ಟೇ ಅಲ್ಲ ಆರೋಗ್ಯ ಕೂಡ ಸುಧಾರಣೆಯಾಗಿತ್ತು. ಈ ಬಾರಿಯೂ ಸತತ ಚಿಕಿತ್ಸೆ ಬಳಿಕ ಲತಾಜಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಎಲ್ಲರೂ ಪ್ರಾರ್ಥಿಸಿದ್ದರು. ಆದರೆ ಅಭಿಮಾನಿಗಳು, ದೇಶದ ಪ್ರಾರ್ಥನೆ ಫಲಿಸಲಿಲ್ಲ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಹುಟ್ಟಿದ ಲತಾ ಮಂಗೇಶ್ಕರ್, ತಮ್ಮ 13ನೇ ವಯಸ್ಸಿಗೆ ಹಾಡುಗಾರಿಕೆ ಆರಂಭಿಸಿದ್ದಾರೆ. ಭಾರತದ ಹಲವು ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್‌ಗೆ ವಿಶ್ವದಲ್ಲೆಡೆ ಅಭಿಮಾನಿಗಳಿದ್ದಾರೆ.
ಲತಾ ಮಂಗೇಶ್ಕರ್ ಹಾಡಿದ ಬಾಲಿವುಡ್ ಕೊನೆಯ ಚಿತ್ರ ವೀರ್ ಝರಾ. ಇನ್ನು ಭಾರತೀಯ ಸೇನೆಗಾಗಿ ಸುಗಂಧ್ ಮುಜೆ ಇಸ್ ಮಿಟ್ಟಿ ಕಿ ಹಾಡು ಕೊನೆಯ ಆಲ್ಬಮ್ ಹಾಡಾಗಿದೆ. ಇದು ಮಾರ್ಚ್ 30, 2021ರಲ್ಲಿ ರಿಲೀಸ್ ಆಗಿದೆ. ಲತಾ ಮಂಗೇಶ್ಕರ್‌ಗೆ ಪದ್ಮ ಬೂಷಣ, ಪದ್ಮ ವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವು ಸಿನಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
