Asianet Suvarna News Asianet Suvarna News

ಪ್ರಭಾಸ್​ ಮದ್ವೆ ಡೇಟ್​ ಕೊನೆಗೂ ಅನೌನ್ಸ್ ಮಾಡಿದ ಚಿಕ್ಕಮ್ಮ: ಹುಡುಗಿ ಬಗ್ಗೆ ಶ್ಯಾಮಲಾದೇವಿ ಹೇಳಿದ್ದೇನು?

ನಟ ಪ್ರಭಾಸ್​ ಅವರ ಮದ್ವೆಯಾವಾಗ ಎಂದು ತಲೆ ಕೆಡಿಸಿಕೊಂಡಿರೊ ಫ್ಯಾನ್ಸ್​ಗೆ ಕೊನೆಗೂ ಉತ್ತರ ಸಿಕ್ಕಿದೆ. ನಟನ ಚಿಕ್ಕಮ್ಮ ಶ್ಯಾಮಲಾದೇವಿ ಹೇಳಿದ್ದೇನು? 
 

Krishnam Raju Wife Shyamaladevi About Prabhas Marriage as next Dasara suc
Author
First Published Oct 18, 2023, 6:13 PM IST

ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಅವರು ಮಾಧ್ಯಮಗಳಿಗೆ ಎದುರಾದಾಗೊಮ್ಮೆ ಮದುವೆ  ವಿಚಾರ ಪ್ರಸ್ತಾಪವಾಗುತ್ತದೆ. ಹಿಂದೊಮ್ಮೆ  ತಿರುಪತಿಯಲ್ಲಿ  ನಡೆದ ಆದಿ ಪುರುಷ ಸಿನಿಮಾದ ಪ್ರಿ ರಿಲೀಸ್ ಇವೆಂಟ್​ನಲ್ಲಿಯೂ  ಇದೇ  ಪ್ರಶ್ನೆ ಎದುರಾಗಿದ್ದಾಗ ಅವರು, ಮದುವೆಯ ಬಗ್ಗೆ ಮೌನ ಮುರಿದಿದ್ದರು.  ಮದುವೆ ಪ್ರಶ್ನೆ ಕೇಳಿದಾಗೆಲ್ಲ ಏನಾದರೂ ಒಂದು ಸಬೂಬು ನೀಡಿ ಜಾರಿಕೊಳ್ಳುತ್ತಿದ್ದ ನಟ, ಮದುವೆಯ ಪ್ರಶ್ನೆ ಕೇಳುತ್ತಿದ್ದಂತೆಯೇ, ಮದುವೆಗೆ ಕಾಲ ಕೂಡಿ ಬರಲಿ. ಇದೇ ತಿರುಪತಿಯಲ್ಲೇ ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಆದರೆ  ಮದುವೆ ಯಾವಾಗ ಎನ್ನುವುದನ್ನು ಮಾತ್ರ ಅವರು ಹೇಳಿಕೊಂಡಿಲ್ಲ. ಅವರ ಹೆಸರು ಮಾತ್ರ ನಟಿ ಅನುಷ್ಕಾ ಜೊತೆ  ಥಳಕು ಹಾಕಿಕೊಳ್ಳುತ್ತಲೇ ಇದೆ.  ಅನುಷ್ಕಾ ಮತ್ತು ಪ್ರಭಾಸ್ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲು ಬಿಲ್ಲಾ ಜೊತೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

ಕೆಲ ದಿನಗಳ ಹಿಂದಷ್ಟೇ  ಅನುಷ್ಕಾ ಮತ್ತು ಪ್ರಭಾಸ್​ ಅವರ ಮದುವೆಯ ಹಾಗೂ ಜೊತೆಯಲ್ಲಿ ಮಗುವಿದ್ದ ಫೋಟೋ ವೈರಲ್​ ಆಗಿತ್ತು.   ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯ ನಡುವೆಯೇ ಈ ಫೋಟೋಗಳು ವೈರಲ್​ ಆಗುತ್ತಿವೆ.  ಸಾಲದು ಎನ್ನುವುದಕ್ಕೆ ಪ್ರಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ ಸಲಾರ್​, ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅದನ್ನು ಮುಂದೂಡಲಾಗಿದ್ದು, ಡಿಸೆಂಬರ್​ 22ರ ಡೇಟ್​ ನಿಗದಿ ಮಾಡಲಾಗಿದೆ. ಇವೆಲ್ಲದಕ್ಕೂ ಒಂದಕ್ಕೊಂದು ತಾಳೆ ಹಾಕಿ ಫೋಟೋಗಳಿಗೆ ವಿಭಿನ್ನ ರೀತಿಯ ಕಮೆಂಟ್​ ಮಾಡುತ್ತಿದ್ದರು. ನಂತರ ಅದು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ನಿಂದ ತಯಾರಿಸುವ ಫೋಟೋಗಳು ಎಂದು ತಿಳಿದುಬಂದವು.

ಓಟಿಟಿಯಲ್ಲಿ ಎಗ್ಗಿಲ್ಲದ ಸೆಕ್ಸ್, ಬೋಲ್ಡ್​​ ದೃಶ್ಯಗಳು- ಜನರೂ ರಿಪೋರ್ಟ್​ ಮಾಡಲ್ಲ: ನಟಿ ಸುಹಾಸಿನಿ ಹೇಳಿದ್ದೇನು?

ಈ ಹಾಟ್​ ವಿಷಯದ ನಡುವೆಯೇ, ಮತ್ತೊಮ್ಮೆ ಪ್ರಭಾಸ್​ ಮದುವೆ ಸುದ್ದಿ ಜೋರಾಗಿದೆ. ಇದಕ್ಕೆ ಕಾರಣ,  ಪ್ರಭಾಸ್ ಅಜ್ಜಿ ಹಾಗೂ ಕೃಷ್ಣಂರಾಜು ಪತ್ನಿ ಶ್ಯಾಮಲಾದೇವಿ ಮದುವೆಯ ಬಗ್ಗೆ ಮಾತನಾಡಿದ್ದಾರೆ.  ವಿಜಯವಾಡದಲ್ಲಿ ದುರ್ಗಾ ಮಾತೆಯ ದರ್ಶನಕ್ಕೆಂದು ಬಂದಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಪ್ರಭಾಸ್ ಮದುವೆಯ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ!  ಪ್ರಭಾಸ್ ಮದುವೆಯಾಗುವುದು ನಿಶ್ಚಿತ ಮತ್ತು ಆ ದಿನ ಶೀಘ್ರದಲ್ಲೇ ಬರಲಿದೆ ಎಂದು ಅವರು ಹೇಳುತ್ತಾರೆ. ಮುಂದಿನ ದಸರಾ ವೇಳೆಗೆ ಪ್ರಭಾಸ್ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ. ಆದರೆ ಹುಡುಗಿ ಯಾರು ಎಂಬ ಬಗ್ಗೆ ಮಾತ್ರ ಅವರು ಏನೂ ತಿಳಿಸಲಿಲ್ಲ.

ಈ ಹಿಂದೆ ಅಂದರೆ 2019ರಲ್ಲಿ ಕೂಡ ಪ್ರಭಾಸ್ ಮದುವೆ ಬಗ್ಗೆ ಶ್ಯಾಮಾ ದೇವಿ ಪ್ರತಿಕ್ರಿಯಿಸಿದ್ದರು.  ರಾಧೇಶ್ಯಾಮ್ ಚಿತ್ರದ ಶೂಟಿಂಗ್ ಮುಗಿದ ನಂತರ ಪ್ರಭಾಸ್ ಮದುವೆಯಾಗುತ್ತಾರೆ ಎಂದು ಹೇಳಿದರು, ಆದರೆ ಅದು ಆಗಲಿಲ್ಲ.   ಇದರೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ರೆಬೆಲ್ ಸ್ಟಾರ್ ಫ್ಯಾಮಿಲಿಯಿಂದ ಶುಭ ಸುದ್ದಿ ಕೇಳಿ ಬರಲಿದೆಯಂತೆ.ಸದ್ಯ ಪ್ರಭಾಸ್ ಸಾಲಾರ್ ಸಿನಿಮಾ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಅದ್ಧೂರಿ ಸಿನಿಮಾದ ಮೇಲೆ ಪ್ರಭಾಸ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಸಿರುದ್ದೀನ್​ಗೆ ಮೊದ್ಲೇ ಮದ್ವೆಯಾಗಿತ್ತು, ಹಲವು ಸಂಬಂಧ ಇದ್ವು, ಹನಿಮೂನ್​ ಹೋದಾಗಂತೂ.. ನಟಿ ರತ್ನಾ ಹೇಳಿದ್ದೇನು?

Follow Us:
Download App:
  • android
  • ios