ಓಟಿಟಿ ವೇದಿಕೆಯಲ್ಲಿ ಎಗ್ಗಿಲ್ಲದ ಸೆಕ್ಸ್, ಬೋಲ್ಡ್​​ ದೃಶ್ಯಗಳು ಬರುತ್ತಿದ್ದು, ಜನರು ಕೂಡ ರಿಪೋರ್ಟ್​ ಮಾಡುತ್ತಿಲ್ಲ ಎಂದು  ನಟಿ ಸುಹಾಸಿನಿ ವಿಷಾದ ವ್ಯಕ್ತಪಡಿಸಿದ್ದಾರೆ.  

 ಒಟಿ​ಟಿ ವೇದಿ​ಕೆ​ಯಲ್ಲಿ ಅಶ್ಲೀಲ ಅಂಶ​ಗ​ಳನ್ನು ಒಳ​ಗೊಂಡಿ​ರುವ ವಿಡಿ​ಯೋ​ ಷೋಗಳು ಪ್ರಸಾ​ರ​ವಾ​ಗು​ತ್ತಿದ್ದು, ಇಂಥ ಕಾರ್ಯ​ಕ್ರ​ಮ​ಗಳ ನಿಯಂತ್ರ​ಣಕ್ಕೆ ಕ್ರಮ​ಗಳ ಅಗ​ತ್ಯ​ವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿ ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಎಗ್ಗಿಲ್ಲದೇ ಈ ದೃಶ್ಯಗಳು ಪ್ರಸಾರವಾಗುತ್ತಲೇ ಇವೆ. ಸೆನ್ಸಾರ್​ ಬೋರ್ಡ್​ಗೂ ಇದು ಒಳಪಡದ ಹಿನ್ನೆಲೆಯಲ್ಲಿ ಒಟಿಟಿ ಎನ್ನುವುದು ಅಶ್ಲೀಲತೆಯ ತಾಣವಾಗಿದೆ. ನಟ- ನಟಿಯರ ಸೆಕ್ಸ್​, ಬೋಲ್ಡ್​ ದೃಶ್ಯಗಳಿಗಂತೂ ಕಡಿವಾಣವೇ ಇಲ್ಲದಂತಾಗಿದೆ ಎಂದು ಇದಾಗಲೇ ಹಲವಾರು ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇದೆ. ಈಗ ಇದರ ಬಗ್ಗೆ ನಟಿ ಸುಹಾಸಿನಿ (Suhasini) ಮಾತನಾಡಿದ್ದಾರೆ. ಈ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹುಭಾಷಾ ನಟಿಯಾಗಿರುವ ಸುಹಾಸಿನಿ ಇದಾಗಲೇ ಕನ್ನಡ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಹಲವು ಬ್ಲಾಕ್​ಬಸ್ಟರ್​ ಚಿತ್ರ ನೀಡಿದವರು. ಇವರ ಅಮೃತವರ್ಷಿಣಿ ಚಿತ್ರವಂತೂ ಯಾರೂ ಮರೆಯಲು ಸಾಧ್ಯವಿಲ್ಲ. ಅದ್ಭುತ ನಟನೆ, ಮುಗ್ಧತೆಗೆ ಹೆಸರುವಾಸಿಯಾಗಿರುವ ಸುಹಾಸಿನಿ ಅವರು ತಮ್ಮ ಯಾವುದೇ ಚಿತ್ರಗಳಲ್ಲಿ ಅಶ್ಲೀಲತೆಯನ್ನು ತಂದುಕೊಟ್ಟಿಲ್ಲ. ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸುವ ಇವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಇದೀಗ ಓಟಿಟಿ ವೇದಿಕೆಯಲ್ಲಿ ಮಿತಿಮೀರುತ್ತಿರುವ ಅಶ್ಲೀಲತೆ ಕುರಿತು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ನಾನು ಮಾಡಿದ್ದು ಸೆಕ್ಸ್​ ಸೀನೆಂದು ಪ್ಲೀಸ್​ ನೋಯಿಸಬೇಡಿ, ಅದು ರೇಪ್​ ಸೀನ್ ಅಷ್ಟೇ​: ನಟಿ ಮೆಹ್ರೀನ್​

'ಎಬಿಪಿ ಲೈವ್' ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸುಹಾಸಿನಿ ಅವರು, ತಮ್ಮ ಮತ್ತು ಇನ್ನೋರ್ವ ಬಾಲಿವುಡ್​ ಹಿರಿಯ ನಟಿ ಪೂನಂ ದಿಲ್ಲೋನ್​ ಜೊತೆ ಮಾತನಾಡಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಬಾಲಿವುಡ್​ನಲ್ಲಿ ಬೋಲ್ಡ್ ಕಂಟೆಂಟ್​ಗಳು ಹೆಚ್ಚಿದೆ. ಈ ಬಗ್ಗೆ ನಾನು ಮಾತನಾಡಲು ಬಯಸಿದ್ದೆ ಎಂದಿರುವ ಸುಹಾಸಿನಿ, ಈ ವಿಚಾರವಾಗಿ ಗೆಳತಿ ಪೂನಂ ದಿಲೋನ್ ಬಳಿ ಅವರು ಹೇಳಿಕೊಂಡಿದ್ದರಂತೆ. ‘ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಸಾರ ಆಗುತ್ತಿರುವ ಹಲವು ಕಂಟೆಂಟ್​ಗಳು ಸಮಾಜ ಒಪ್ಪದ ರೀತಿಯಲ್ಲಿ ಇರುತ್ತವೆ. ಇದನ್ನು ಟಾಪ್​ ಕಲಾವಿದರೇ ಮಾಡುತ್ತಿದ್ದಾರೆ. ನಾನು ಪೂನಂ ಅವರನ್ನು ಕರೆದು ಈ ಬಗ್ಗೆ ಮಾತನಾಡಿದ್ದೆ’ ಎಂದಿದ್ದಾರೆ ಸುಹಾಸಿನಿ. ‘ನಾನು ಮುಂಬೈಗೆ ಬಂದು ಎಲ್ಲಾ ಪ್ರಮುಖ ಹೀರೋ ಹಾಗೂ ಹೀರೋಯಿನ್​ಗಳ ಬಳಿ ಬಂದು ಮಾತನಾಡಲೇ? ನೀವು ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಬೇರೆಯದ್ದನೇ ಬೆಂಬಲಿಸಿದಂತೆ ಆಗುತ್ತದೆ ಎಂಬುದನ್ನು ನಾನು ಹೇಳಲೇ ಎಂದು ಪೂನಂ ಬಳಿ ಕೇಳಿದ್ದೆ. ಆದರೆ ಆಕೆ, ಸುಮ್ಮನೆ ಮದ್ರಾಸ್​ನಲ್ಲೇ ಇರಿ, ಮುಂಬೈಗೆ ಬರಬೇಡಿ ಎಂದು ಅವರು ಹೇಳಿದ್ದರು’ ಎಂಬುದಾಗಿ ಸುಹಾಸಿನಿ ನೆನಪಿಸಿಕೊಂಡಿದ್ದಾರೆ.

ಯಾರು ಏನೂ ಹೇಳಿದರೂ ಇದರಿಂದ ಪ್ರಯೋಜನ ಆಗುವುದಿಲ್ಲ ಎಂದು ಬಹುಶಃ ಆಕೆಗೂ ತಿಳಿದಿತ್ತು. ಜನರು ಕೂಡ ಇದನ್ನು ರಿಪೋರ್ಟ್​ ಮಾಡುವುದೇ ಇಲ್ಲ. ಎಂಜಾಯ್ ಮಾಡುತ್ತಿರುವಂತೆ ಕಾಣುತ್ತಿದೆ. ಆದರೆ ಇದು ಜನರ ಹಾದಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ನಟಿ ಸುಹಾಸಿನಿ ಹೇಳಿದ್ದಾರೆ. ಸೆನ್ಸಾರ್ ಮಂಡಳಿಯಾಗಲೀ ಅಥವಾ ಯಾವುದೇ ಕಾನೂನು ಈ ವಿಷಯವನ್ನು ಏಕೆ ನೋಡುತ್ತಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಇದು ತಪ್ಪು ಎಂದು ಹೇಳುವ ಧೈರ್ಯ ಯಾವುದೇ ಜನರೂ ಮಾಡುತ್ತಿಲ್ಲ. ಈ ರೀತಿ ಅಶ್ಲೀಲತೆಯಿಂದ ಜನರು ಹಾದಿ ತಪ್ಪುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ ನಟಿ.

ನಸಿರುದ್ದೀನ್​ಗೆ ಮೊದ್ಲೇ ಮದ್ವೆಯಾಗಿತ್ತು, ಹಲವು ಸಂಬಂಧ ಇದ್ವು, ಹನಿಮೂನ್​ ಹೋದಾಗಂತೂ.. ನಟಿ ರತ್ನಾ ಹೇಳಿದ್ದೇನು?