Asianet Suvarna News Asianet Suvarna News

ನಸಿರುದ್ದೀನ್​ಗೆ ಮೊದ್ಲೇ ಮದ್ವೆಯಾಗಿತ್ತು, ಹಲವು ಸಂಬಂಧ ಇದ್ವು, ಹನಿಮೂನ್​ ಹೋದಾಗಂತೂ.. ನಟಿ ರತ್ನಾ ಹೇಳಿದ್ದೇನು?

ಮೊದ್ಲೇ ಮದ್ವೆಯಾಗಿದ್ದ ನಸಿರುದ್ದೀನ್​ಗೆ ಹಲವು ಸಂಬಂಧ ಇದ್ದುದಾಗಿ ಪತ್ನಿ, ನಟಿ ರತ್ನಾ ಪಾಠಕ್​ ಹೇಳಿದ್ದಾರೆ. ಹನಿಮೂನ್​ ಸೇರಿದಂತೆ ಹಲವು ವಿಷಯ ಬಿಚ್ಚಿಟ್ಟಿದ್ದಾರೆ.
 

Ratna Pathak Shah comments on husband Naseeruddin Shahs first marriage suc
Author
First Published Oct 17, 2023, 1:04 PM IST

ಬಾಲಿವುಡ್​ ಸ್ಟಾರ್​ ದಂಪತಿಯಾದ ನಸಿರುದ್ದೀನ್​ ಷಾ ಮತ್ತು ರತ್ನಾ ಪಾಠಕ್​ ಬಾಲಿವುಡ್​ನ  ಪವರ್ ಕಪಲ್‌ ಎನಿಸಿದ್ದಾರೆ. 1982ರಲ್ಲಿ ಮದ್ವೆಯಾಗಿರೋ ಇವರು ಸುಖ ಸಂಸಾರ ನಡೆಸುತ್ತಿದ್ದಾರೆ. ಅಂತರ್ಧರ್ಮೀಯ ವಿವಾಹ ಎನ್ನುವ ಕಾರಣಕ್ಕೆ ಆ ಸಮಯದಲ್ಲಿಯೇ ಬಹಳ ವಿವಾದವೂ ಸೃಷ್ಟಿಯಾಗಿತ್ತು. ಪ್ರೀತಿಯ ಮುಂದೆ ಜಾತಿ-ಧರ್ಮಕ್ಕೆ ಬೆಲೆ ಇಲ್ಲ ಎಂದುಕೊಂಡಿದ್ದ ಜೋಡಿ ಎಲ್ಲರನ್ನೂ ಎದುರು ಹಾಕಿಕೊಂಡೇ ಮದುವೆಯಾಗಿತ್ತು. ನಟಿ ರತ್ನಾ ಅವರು, ಸದ್ಯ 'ಧಕ್ ಧಕ್' ಸಿನಿಮಾದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಸಮಯದಲ್ಲಿ ಅವರು ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ತಮ್ಮ ವೈಯಕ್ತಿಕ ಬದುಕಿನ ಕುರಿತೂ ಒಂದಿಷ್ಟು ಮಾಹಿತಿ ತೆರೆದಿಟ್ಟಿದ್ದಾರೆ. ಯಾವುದೇ ಅಳುಕು ಇಲ್ಲದೆಯೇ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಟಿ ರತ್ನಾ ಯಾವುದೇ ವಿಷಯದ ಬಗ್ಗೆ ತಮ್ಮ ಬಹಿರಂಗ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಅದು ವೈಯಕ್ತಿಕ ಜೀವನ, ವೃತ್ತಿಪರ ಅಥವಾ ಯಾವುದೇ ಸಮಸ್ಯೆಯಾಗಿರಲಿ. 

ಈಗ ಖುದ್ದು ಪತಿ  ನಸಿರುದ್ದೀನ್ ಶಾ ಅವರ ಕುರಿತು ಹೇಳಿದ್ದಾರೆ. ನಸಿರುದ್ದೀನ್​ ಅವರ ಹಳೆಯ ಸಂಬಂಧ ಮತ್ತು ಅವರ ಮೊದಲ ಹೆಂಡತಿಯಿಂದ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಅವರು ತಮ್ಮ ಮತ್ತು ನಾಸಿರುದ್ದೀನ್ ಅವರ ಸಂತೋಷದ ದಾಂಪತ್ಯ ಮತ್ತು ಸಂಬಂಧದ ರಹಸ್ಯವನ್ನು ಸಹ ಹೇಳಿದ್ದಾರೆ. 'ಹ್ಯೂಮನ್ಸ್ ಆಫ್ ಬಾಂಬೆ'ಗೆ ನೀಡಿದ ಸಂದರ್ಶನದಲ್ಲಿ, ರತ್ನಾ ಪಾಠಕ್ ಷಾ ಅವರು ನಾಸಿರುದ್ದೀನ್ ಷಾ ಅವರೊಂದಿಗಿನ ಮೊದಲ ಭೇಟಿಯ ಕುರಿತು ಮಾತನಾಡಿದ್ದದಾರೆ.  ರಂಗಭೂಮಿಯ ದಿನಗಳಿಂದ ತಮ್ಮಿಬ್ಬರ ನಡುವೆ ಒಡನಾಟ ಶುರುವಾಗಿತ್ತು ಎಂದಿದ್ದಾರೆ.  ನಾಸಿರುದ್ದೀನ್ ಮತ್ತು ನಾನು  ಒಟ್ಟಿಗೇ ನಾಟಕ ಮಾಡುತ್ತಿದ್ದೆವು. ಅದರ ಹೆಸರು  'ಸಂಭೋಗದಿಂದ ಸನ್ಯಾಸದವರೆಗೆ' ಎಂದು. ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಪ್ರೀತಿ ಚಿಗುರಿತು ಎಂದಿದ್ದಾರೆ ರತ್ನಾ.

ಹೇಮಾಮಾಲಿನಿ @75: ಶಾರುಖ್​ ಖಾನ್​ರನ್ನು ರಿಜೆಕ್ಟ್​ ಮಾಡಿದ್ದ ಕನಸಿನ ಕನ್ಯೆಯ ಇಂಟರೆಸ್ಟಿಂಗ್​ ವಿಷ್ಯ ರಿವೀಲ್​!
 
ಆ ಸಮಯದಲ್ಲಿ ನಾವಿಬ್ಬರೂ ಮೂರ್ಖರಾಗಿದ್ದೆವು. ಈಗಿನವರು ಪ್ರೀತಿ ಮಾಡಿದರೆ ಪರಸ್ಪರ ಸಾವಿರಾರು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಆ ಸಮಯದಲ್ಲಿ ನಮಗೆ ಪ್ರೀತಿ ಆಗಿದೆ ಎಂದಷ್ಟೇ ಗೊತ್ತಿತ್ತು.  ನಾವು ಹೆಚ್ಚು ಪ್ರಶ್ನೆಗಳನ್ನು ಕೇಳಲೇ ಇಲ್ಲ.  ಈ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ತೀರ್ಮಾನ ಮಾಡಿದೆವು ಎಂದಿದ್ದಾರೆ. ಇವರ ಸಂಬಂಧ ಒಂದು ಹೆಜ್ಜೆ ಮುಂದೆ ಹೋದಾಗ ರತ್ನಾ ಅವರಿಗೆ  ನಾಸಿರುದ್ದೀನ್ ಷಾ ಅವರಿಗೆ ಮೊದಲೇ ಮದುವೆಯಾದ ವಿಷಯ ತಿಳಿಯಿತಂತೆ. ಅವರು ಪರ್ವೀನ್ ಮುರಾದ್ ಅಲಿಯಾಸ್ ಮನ್ನಾರ ಸಿಕ್ರಿ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ನನಗೆ ಈ ವಿಷಯ ತಿಳಿಯಿತು. ಅಷ್ಟರಲ್ಲಿಯೇ ನಾವಿಬ್ಬರೂ ಪ್ರೀತಿಗೆ ಬಿದ್ದಿದ್ದೆವು.  ನಾಸಿರುದ್ದೀನ್ ತನ್ನ ಮೊದಲ ಪತ್ನಿಯಿಂದ ಬಹಳ ದಿನಗಳಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಆಗ ನಾವಿಬ್ಬರೂ ಮದುವೆಯಾದೆವು ಎಂದು ನಟಿ ಹೇಳಿದ್ದಾರೆ. ಅಂತರ್ಧರ್ಮೀಯ ಮದುವೆಯಾದ್ದರಿಂದ ಮತ್ತು ಅವರಿಗೆ ಮೊದಲೇ ಮದುವೆಯಾಗಿದ್ದರಿಂದ ತೀವ್ರ ಪ್ರತಿರೋಧ ಬಂದರು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.

 ನಾಸಿರುದ್ದೀನ್‌ನ ಹಿಂದಿನ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ರತ್ನಾ ಹೇಳಿದ್ದಾರೆ.  ನಾನು ಪ್ರೀತಿಯಲ್ಲಿದ್ದೆ. ಅವರು ದೀರ್ಘಕಾಲದವರೆಗೆ ತಮ್ಮ ಮಾಜಿ ಪತ್ನಿಯಿಂದ ಬೇರ್ಪಟ್ಟರು. ಅಷ್ಟೇ ಅಲ್ಲದೇ ಅದೇ ಸಮಯದಲ್ಲಿ ನಸಿರುದ್ದೀನ್​ ಅವರು ಅನೇಕ ಮಂದಿಯ ಜೊತೆ ಸಂಬಂಧ ಹೊಂದಿದ್ದೂ ತಿಳಿಯಿತು. ಆದರೆ ಅದ್ಯಾವುದೂ ನನಗೆ ಬೇಕಿರಲಿಲ್ಲ. ನಾನು ಕೊನೆಯವಳಾಗಿದ್ದರೆ ಸಾಕು ಎನ್ನಿಸಿತು. ಇದೇ ಕಾರಣಕ್ಕೆ ನಾನು ಕೊನೆಯ ಸಂಬಂಧವಾಗಿದ್ದು,   ಚೆನ್ನಾಗಿಯೇ ಇದ್ದೇನೆ. ಯಾವುದಕ್ಕೂ ತಲೆ  ಕೆಡಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.  

ಮಗಳ ವಯಸ್ಸಿನವಳ ಜೊತೆ ಲಿಪ್​ಲಾಕ್​, ರೊಮ್ಯಾನ್ಸ್​ ಮಾಡಲು ನಾಚಿಕೆ ಆಗಲ್ವಾ? ನಟಿ ರತ್ನಾ ಕ್ಲಾಸ್​ 

ಹನಿಮೂನ್​ಗೆ ಹೋದಾಗಲೂ ಅವರು ಮಧ್ಯೆಯೇ ಬಂದಿದ್ದರು. ಶೂಟಿಂಗ್​ ಅಂತ ನಡುನಡುವೆ ನಾಪತ್ತೆಯಾಗುತ್ತಿದ್ದರು. ಎಲ್ಲಿಗೆ ಹೋಗುತ್ತಿದ್ದರು, ಯಾರ ಜೊತೆ ಹೋಗುತ್ತಿದ್ದರು ಎಂದು ಆತಂಕ ಪಡುತ್ತಿದ್ದೆ. ಹನಿಮೂನ್​ಗೆ ಅವರು ಮಧ್ಯೆಯೇ ಬಂದದ್ದು ಯಾಕೆ ಅಂತನೂ ಗೊತ್ತಾಗಲಿಲ್ಲ.  ಶೂಟಿಂಗ್​ಗೆ ಹೋದರೋ, ಯಾರ ಜೊತೆ ಓಡಿ ಹೋದರೋ ಎಂಬ ಭಯವೂ ಕಾಡುತ್ತಿತ್ತು. ಆ ಸಮಯದಲ್ಲಿ ಅದು ನಿಜವಾಗಿಯೂ ಹುಚ್ಚುತನವಾಗಿತ್ತು ಎಂದಿದ್ದಾರೆ. 
 

Follow Us:
Download App:
  • android
  • ios