ಟಾಕ್ಸಿಕ್‌ ಸಿನಿಮಾ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ. ಕಿಯಾರಾ ಅಡ್ವಾನಿ ಗರ್ಭಿಣಿಯಾಗಿದ್ದಾಗ ರಿಸ್ಕ್‌ ತೆಗೆದುಕೊಂಡು ಈ ಸಿನಿಮಾ ಮಾಡಿದ್ದಾರೆ. ಅದ್ರ ಬಗ್ಗೆ ನಟ ಯಶ್‌ ಹೇಳಿದ್ದೇನು ಗೊತ್ತಾ?

ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಆಗಸ್ಟ್ 26ರಂದು ಸಿನಿಮಾ ತೆರೆಗೆ ಬರಲಿದೆ. ಇದರ ನಡುವೆ ಚಿತ್ರದ ಆಲ್ಬಂ ಲಾಂಚ್ ಕಾರ್ಯಕ್ರಮದಲ್ಲಿ ಯಶ್ ತಮ್ಮ ಸಹನಟಿಯರ ಬಗ್ಗೆ ಮಾತನಾಡಿದ್ದು, ಕಿಯಾರಾ ಅಡ್ವಾಣಿ ಕುರಿತು ಹೇಳಿದ ಮಾತುಗಳು ಈಗ ಗಮನ ಸೆಳೆಯುತ್ತಿವೆ.

ಕಿಯಾರಾ ಅಡ್ವಾನಿಗೆ ಯಶ್‌ ಬಾಡಿಗಾರ್ಡ್

ಕಿಯಾರಾ ಬಗ್ಗೆ ಮಾತನಾಡಿದ ಯಶ್, ಕಿಯಾರಾಗೆ ಕೆಲಸದ ಮೇಲಿರುವ ಶ್ರದ್ಧೆಯನ್ನು ಮನಸಾರೆ ಹೊಗಳಿದ್ದಾರೆ. ಅದರಲ್ಲೂ ಕಿಯಾರಾ ಗರ್ಭಿಣಿಯಾಗಿದ್ದರೂ ಸಿನಿಮಾದ ಚಿತ್ರೀಕರಣಕ್ಕೆ ನೀಡಿದ ಬದ್ಧತೆಯನ್ನು ಯಶ್ ವಿಶೇಷವಾಗಿ ಪ್ರಶಂಸಿಸಿದ್ದಾರೆ. ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸುಲಭವಾಗಿರಲಿಲ್ಲ. ಕಿಯಾರಾ ಅವರ ಪಾತ್ರ ಸವಾಲಿನಿಂದ ಕೂಡಿತ್ತು. ಅದರ ಜೊತೆಗೆ ಕೆಲವು ಕಠಿಣ ದೃಶ್ಯಗಳನ್ನೂ ಅವರು ಶೂಟ್‌ ಮಾಡ್ಬೇಕಾಗಿತ್ತು. ಹೀಗಾಗಿ ಕಿಯಾರಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್, ಕಿಯಾರಾ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರಂತೆ.

ಇದಕ್ಕಿಂತ ವಿಶೇಷವಾಗಿ, ಯಶ್ ಹೇಳಿದ ಒಂದು ಮಾತು ಎಲ್ಲರ ಗಮನ ಸೆಳೆದಿದೆ. ನಾನು ಮತ್ತು ಗೀತು ಸೆಟ್ನಲ್ಲಿ ಕಿಯಾರಾಳನ್ನು ಬೌನ್ಸರ್ಗಳು ಮತ್ತು ಬಾಡಿಗಾರ್ಡ್ಗಳಂತೆ ನೋಡಿಕೊಂಡಿದ್ದೇವೆ ಎಂದು ಯಶ್ ಹೇಳಿದ್ದಾರೆ.

ಕಿಯಾರಾ ಗರ್ಭಿಣಿಯಾಗಿದ್ದರೂ ಸಿನಿಮಾಗಾಗಿ ಸಂಪೂರ್ಣ ಶ್ರಮ ಹಾಕಿದ್ದು ಯಶ್ ಅಚ್ಚರಿಗೆಗೆ ಕಾರಣವಾಗಿದೆ. ಕಿಯಾರಾ ರೇನ್ ಸೀಕ್ವೆನ್ಸ್ ಮಾಡಿದ್ದಾರೆಯೇ ಅಂತ ಅಚ್ಚರಿಯಿಂದ ಯಶ್ ಕೇಳಿದ್ದರಂತೆ. ಅದಕ್ಕೆ ಕಿಯಾರಾ, ಈ ಹಿಂದೆ ಅಂತಹ ದೃಶ್ಯ ಮಾಡಿಲ್ಲ ಎಂದಿದ್ದರಂತೆ. ಆದರೂ ಚಿತ್ರೀಕರಣದ ವೇಳೆ ಅವರು ತೋರಿದ ಆತ್ಮವಿಶ್ವಾಸ ಮತ್ತು ಡೆಡಿಕೇಶನ್ ಯಶ್ಗೆ ಮೆಚ್ಚುಗೆ ತಂದಿದೆ.

ಕಿಯಾರಾ ಕೂಡ ಪ್ರೆಗ್ನೆನ್ಸಿಯ ಸಂದರ್ಭದಲ್ಲಿ ಸುಮಾರು ಏಳು ತಿಂಗಳವರೆಗೆ ಕೆಲಸ ಮಾಡಿದ್ದಾಗಿ ಈ ಹಿಂದೆ ಹೇಳಿದ್ದರು. ತಮ್ಮ ಕಷ್ಟದ ನಡುವೆಯೂ ಸಿನಿಮಾಗೆ ಶೇಕಡಾ ನೂರು ಬದ್ಧತೆ ನೀಡಿದ ಕಿಯಾರಾಗೆ ಯಶ್ ಧನ್ಯವಾದ ತಿಳಿಸಿದ್ದಾರೆ. ಕಿಯಾರಾ, ಥ್ಯಾಂಕ್ ಯೂ. ನಿಮ್ಮ ಪರಿಶ್ರಮದಿಂದ ಈ ಸಿನಿಮಾ ಇನ್ನಷ್ಟು ವಿಶೇಷವಾಗಿದೆ ಎಂಬ ಯಶ್ ಹೇಳಿದ್ದಾರೆ.

ಟಾಕ್ಸಿಕ್ ನಲ್ಲಿ ಯಶ್ ಮತ್ತು ಕಿಯಾರಾ ಜೋಡಿಯ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಸಿನಿಮಾ ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಯಶ್ ಹುಮಾ ಖುರೇಷಿಯನ್ನು ಚಾಲೆಂಜಿಂಗ್, ರುಕ್ಮಿಣಿ ವಸಂತ್ ಅವರನ್ನು ಲಾಂಗ್ ರೇಸ್ನ ಕುದುರೆ, ತಾರಾ ಸುತಾರಿಯಾರನ್ನು ಸ್ಟನ್ನಿಂಗ್ ಎಂದು ಯಶ್ ಬಣ್ಣಿಸಿದ್ದಾರೆ.