MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಧರ್ಮದ ಗೋಡೆ ದಾಟಿ ಮದುವೆಯಾದ ಯ್ಯೂಟ್ಯೂಬರ್ ಜೋಡಿ; ರಾಜ್ಯವನ್ನೇ ಎದುರು ಹಾಕಿಕೊಂಡವರ ಜೀವನ ಹೇಗಿದೆ?

ಧರ್ಮದ ಗೋಡೆ ದಾಟಿ ಮದುವೆಯಾದ ಯ್ಯೂಟ್ಯೂಬರ್ ಜೋಡಿ; ರಾಜ್ಯವನ್ನೇ ಎದುರು ಹಾಕಿಕೊಂಡವರ ಜೀವನ ಹೇಗಿದೆ?

ರಾಜ್ಯದ ಪ್ರಸಿದ್ಧ ಯ್ಯೂಟ್ಯೂಬರ್ ಜೋಡಿ, ಜಾತಿ-ಧರ್ಮ ಹಾಗೂ ಕುಟುಂಬದ ವಿರೋಧವನ್ನು ಕಟ್ಟಿಕೊಂಡು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಒಂದು ವರ್ಷದ ನಂತರ ಇದೀಗ ಸುಖ ಸಂಸಾರ ಹಾದಿಗೆ ಮರಳಿದ್ದಾರೆ. ಈ ಸುಂದರ ಯುವ ಜೋಡಿಗೆ ಇದೀಗ ಒಂದು ಮಗುವಾಗಿದ್ದು, ಸುಖ ಸಂಸಾರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

2 Min read
Author : Sathish Kumar KH
Published : Aug 14 2026, 11:12 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ರಾಜ್ಯದ ಪ್ರಸಿದ್ಧ ಯ್ಯೂಟ್ಯೂಬರ್ ಜೋಡಿ, ಜಾತಿ-ಧರ್ಮ ಹಾಗೂ ಕುಟುಂಬದ ವಿರೋಧವನ್ನು ಕಟ್ಟಿಕೊಂಡು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಒಂದು ವರ್ಷದ ನಂತರ ಇದೀಗ ಸುಖ ಸಂಸಾರ ಹಾದಿಗೆ ಮರಳಿದ್ದಾರೆ. ಈ ಸುಂದರ ಯುವ ಜೋಡಿಗೆ ಇದೀಗ ಒಂದು ಮಗುವಾಗಿದ್ದು, ಸುಖ ಸಂಸಾರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಸಾಮಾನ್ಯವಾಗಿ ಎಲ್ಲರೂ ಅಪ್ಪ-ಅಮ್ಮ ಹಾಗೂ ಕುಟುಂಬವನ್ನು ಎದುರು ಹಾಕಿಕೊಂಡು ಮದುವೆ ಮಾಡಿಕೊಳ್ಳುತ್ತಾರೆ. ಜಾತಿ ಅಥವಾ ಧರ್ಮವನ್ನು ಮೀರಿ ಮದುವೆ ಮಾಡಿಕೊಂಡರೆ, ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಾರೆ. ಆದರೆ, ಈ ಯ್ಯೂಟ್ಯೂಬರ್ ಜೋಡಿ ತಮ್ಮ ಧರ್ಮ ಬೇರೆ ಬೇರೆ ಆಗಿದ್ದರೂ ಅಪ್ಪ-ಅಮ್ಮ, ಕುಟುಂಬವನ್ನು ಎದುರು ಹಾಕಿಕೊಂಡು ಮದುವೆ ಮಾಡಿಕೊಳ್ಳುತ್ತಾರೆ.

ಇವರಿಬ್ಬರ ಜೋಡಿಗೆ ಧರ್ಮ ವಿರೋಧಿ ಚಟುವಟಿಕೆ ಎಂದು ಇಡೀ ರಾಜ್ಯದ ಜನತೆ ಜನತೆ ಹಾಗೂ ಹಲವು ಸಂಘಟನೆಗಳು ಹೋರಾಟ, ಪ್ರತಿಭಟನೆ ಹಾಗೂ ಮುತ್ತಿಗೆಯನ್ನೂ ಹಾಕಿ ಧಮ್ಕಿ ಹಾಕುತ್ತಾರೆ. ಒಂದು ಹೆಜ್ಜೆ ಮುಂದೆ ಹೋದ ಸಂಘಟನೆಗಳು ಯುವತಿಯ ತಂದೆ-ತಾಯಿಯಿಂದ ಪೊಲೀಸ್ ಠಾಣೆಗೆ ದೂರು ಕೊಡಿಸುತ್ತಾರೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಹುಡುಗನನ್ನು ವಶಕ್ಕೆ ಪಡೆದರೆ ಹುಡುಗಿಯನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗುತ್ತದೆ.

Related Articles

Related image1
ಲವ್ ಜಿಹಾದ್ ಆರೋಪ ಹೊತ್ತಿದ್ದ ಯೂಟ್ಯೂಬರ್ ಮುಕಳೆಪ್ಪನಿಂದ ಹಿಂದೂ ಸಂಪ್ರದಾಯದಂತೆ ಪತ್ನಿಯ ಸೀಮಂತ ಶಾಸ್ತ್ರ!
Related image2
ಯೂಟ್ಯೂಬರ್ ಮುಕಳೆಪ್ಪ-ಗಾಯತ್ರಿ ಮದುವೆ ವಿವಾದ ಸುಖಾಂತ್ಯ; ಕಿರಿಕಿರಿ ಮಾಡದಂತೆ ಕೈ-ಮುಗಿದು ಮನವಿ!
36
Image Credit : Asianet News

ಮದುವೆಗೆ ಎದುರಾಯಿತು ಕಂಟಕ, 'ಲವ್ ಜಿಹಾದ್' ಆರೋಪ!

ಇಷ್ಟಲ್ಲಾ ನಡೆದ ಮೇಲೂ ಯ್ಯೂಟ್ಯೂಬರ್ ಜೋಡಿ ಮಾತ್ರ ಬೇರೆಯಾಗಲಿಲ್ಲ. ಆರಂಭದಲ್ಲಿ ಯ್ಯೂಟ್ಯೂಬ್‌ಗೆ ವಿಡಿಯೋ ಮಾಡುವ ನೆಪದಲ್ಲಿ ಒಂದಾದ ಜೋಡಿ ಇದೀಗ ದಾಂಪತ್ಯ ಜೀವನದಲ್ಲೂ ಒಂದಾಗಿದ್ದಾರೆ. ಮದುವೆಯಾಗಿ ವರ್ಷ ತುಂಬುವುದರೊಳಗೆ ಸುಖ ಸಂಸಾರವನ್ನೂ ಮಾಡಿಕೊಂಡು ಇಬ್ಬರೂ ತಮ್ಮನ್ನಾಡಿಕೊಂಡವರಿಗೆ ಒಳ್ಳೆಯ ಜೀವನದ ಪಾಠವನ್ನೇ ಕಲಿಸಿದ್ದಾರೆ. ಅನ್ಯ ಧರ್ಮೀಯರಾದರೂ ಯಾರದ್ದೇ ಆಚರಣೆಗೂ ಇಲ್ಲ ನಿರ್ಬಂಧವಿಲ್ಲ ಎಂದು ಇಬ್ಬರ ಧರ್ಮಗಳನ್ನು ಆಚರಣೆ ಮಾಡಿಕೊಂಡು ಸಂಸಾರ ಬಂಡಿ ಸಾಗಿಸುತ್ತಿದ್ದಾರೆ.

46
Image Credit : Asianet News

ಎಲ್ಲವನ್ನೂ ಮೀರಿ ಆರಂಭವಾಯ್ತು ಸುಖ ಸಂಸಾರ

ಅಷ್ಟಕ್ಕೂ ಈವರೆಗೆ ಹೇಳಿದ ಕಥೆ ಯಾರದ್ದೆಂದು ಬಹುತೇಕರಿಗೆ ಅರ್ಥವಾಗಿರಬೇಕು. ಅದೇ ಉತ್ತರ ಕರ್ನಾಟಕದ ಯ್ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ಹಾಗೂ ಗಾಯತ್ರಿ ಅವರು ಜಾತಿ, ಧರ್ಮ ಹಾಗೂ ಕುಟುಂಬವನ್ನು ವಿರೋಧಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಕ್ವಾಜಾ ಅವರು ಮುಸ್ಲಿಂ ಧರ್ಮೀಯರಾಗಿದ್ದರೆ, ಗಾಯತ್ರಿ ಅವರು ಹಿಂದೂ ಸಮುದಾಯದವರಾಗಿದ್ದರು.

56
Image Credit : Instagram

ಇಬ್ಬರೂ ಯ್ಯೂಟ್ಯೂಬರ್‌ಗಳಾಗಿದ್ದು, ವಿಡಿಯೋ ಮಾಡುತ್ತಲೇ ಪ್ರೀತಿ ಅಂಕುರಿಸಿ ಮದುವೆ ಮಾಡಿಕೊಂಡಿದ್ದರು. ಇವರ ಮದುವೆಯನ್ನು ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಲವ್ ಜಿ*ಹಾದ್ ಎಂದು ಆರೋಪ ಮಾಡಿ, ಪ್ರತಿಭಟನೆಗಳನ್ನು ನಡೆಸಿದ್ದರು. ಜೊತೆಗೆ, ಅವರ ಮದುವೆಯ ಡಿಜಿಸ್ಟರ್ ರದ್ದತಿ ಮಾಡುವಂತೆಯೂ ಆಗ್ರಹ ಮಾಡಲಾಗಿತ್ತು. ಕೊನೆಗೆ ಇಬ್ಬರೂ ಮೇಜರ್ ಆಗಿದ್ದರಿಂದ ಯಾರೂ ಕೂಡ ಅವರನ್ನು ಏನೂ ಮಾಡಲಾಗಲಿಲ್ಲ.

66
Image Credit : Asianet News

ಸೀಮಂತ ಶಾಸ್ತ್ರದ ಮೂಲಕ ಲಭಿಸಿತು ಕುಟುಂಬದ ಸಮ್ಮತಿ!

ಕ್ವಾಜಾ ಅವರ ಮನೆಗೆ ಗಾಯತ್ರಿ ಅವರನ್ನು ಮನೆಗೆ ತುಂಬಿಸಿಕೊಂಡು ತಮ್ಮ ಸಂಸಾರ ಜೀವನ ಆರಂಭಿಸಿದರು. ಈ ವೇಳೆ ನಮ್ಮಿಬ್ಬರನ್ನು ಜೀವನ ಮಾಡಲು ನಮ್ಮ ಪಾಡಿಗೆ ಬಿಡಿ ಎಂದು ದಂಪತಿ ಮನವಿ ಮಾಡಿಕೊಂಡಿದ್ದರು. ಇದಾದ ನಂತರ ತಕ್ಕಮಟ್ಟಿಗೆ ಅವರ ವಿರುದ್ಧ ಯಾವುದೇ ಚಟುವಟಿಕೆಗಳು ನಡೆಯಲಿಲ್ಲ. ದಿನ ಕಳೆದಂತೆ ಯುವತಿ ಗಾಯತ್ರಿ ಅವರ ಮನೆಯಲ್ಲೂ ಇವರಿಬ್ಬರ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಗರ್ಭಿಣಿ ಆಗಿದ್ದಕ್ಕೆ ಹಿಂದೂ ಸಂಪ್ರದಾಯದಂತೆ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನೂ ಮಾಡಲಾಗಿತ್ತು. ಈ ವೇಳೆ ಕ್ವಾಜಾ ಅವರಿಗೆ ಹಣೆಗೆ ಕುಂಕುಮ ಇಟ್ಟು ಅಳಿಯನಿಗೆ ಸಲ್ಲಬೇಕಾದ ಗೌರವನ್ನೂ ನೀಡಲಾಗಿತ್ತು.

ಕಳೆದೊಂದು ವಾರದ ಹಿಂದೆ ಕ್ವಾಜಾ ಹಾಗೂ ಗಾಯತ್ರಿ ದಂಪತಿಗೆ ಮಗು ಜನಿಸಿದೆ. ಈ ಬಗ್ಗೆ ಅಧಿಕೃತವಾಗಿ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಯೂಟ್ಯೂಬರ್
ಸಾಮಾಜಿಕ ಜಾಲತಾಣ ಪ್ರಭಾವಿ
ಪ್ರೇಮ ವಿವಾಹ
ಪ್ರೀತಿ
Latest Videos
Recommended Stories
Recommended image1
ಕಂಬಿ ಹಿಂದೆ ದಾಸ ವಾಸವಾಗಿ ಒಂದು ವರ್ಷ; 'ಗಾಯ ಮಾಸಿಲ್ಲ, ನೋವು ತಡೆಯಲಾಗ್ತಿಲ್ಲ' ಎಂದು ವಿಜಯಲಕ್ಷ್ಮಿ ಭಾವುಕ ಪೋಸ್ಟ್!
Recommended image2
ಹೊಸ ಮಲ್ಲಿಯ ಮುಗಿಸಲು ಸಂಚು; ಹಳೆ ಮಲ್ಲಿ ಜತೆ ರೊಮಾನ್ಸ್​: Amruthadaare 'ಜೈ' ಜೋಡಿ ಕ್ಯೂಟ್​ ಫೋಟೋಸ್​
Recommended image3
ಸಿನಿಮಾಗೆ 50 ಕೋಟಿ ಬೇಕು ಅಂತಾ ಕೇಳಿದ್ರಂತೆ. 'ಇಲ್ಲ ಸರ್‌ ಅದಕ್ಕಿಂತ ಹೆಚ್ಚು' ಯಶ್‌ ಖಡಕ್‌ ಉತ್ತರ ಕೇಳಿ ಬಾಲಿವುಡ್‌ ಶಾಕ್‌!
Related Stories
Recommended image1
ಲವ್ ಜಿಹಾದ್ ಆರೋಪ ಹೊತ್ತಿದ್ದ ಯೂಟ್ಯೂಬರ್ ಮುಕಳೆಪ್ಪನಿಂದ ಹಿಂದೂ ಸಂಪ್ರದಾಯದಂತೆ ಪತ್ನಿಯ ಸೀಮಂತ ಶಾಸ್ತ್ರ!
Recommended image2
ಯೂಟ್ಯೂಬರ್ ಮುಕಳೆಪ್ಪ-ಗಾಯತ್ರಿ ಮದುವೆ ವಿವಾದ ಸುಖಾಂತ್ಯ; ಕಿರಿಕಿರಿ ಮಾಡದಂತೆ ಕೈ-ಮುಗಿದು ಮನವಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved