Asianet Suvarna News Asianet Suvarna News

ಬಾತ್ ರೂಮಿನಲ್ಲಿ ಫೇಮಸ್ ವ್ಯಕ್ತಿ ಜತೆ ಟವೆಲ್ ಫೈಟ್ ಮಾಡಿದ್ರು ಕತ್ರಿನಾ ಕೈಫ್; ಭಾರೀ ವೈರಲ್ ಆಯ್ತು ವಿಡಿಯೋ!

ಹಮಾಮ್ ಎಂಬ ಟರ್ಕಿಶ್ ಸ್ಟೀಮ್ ಬಾತ್ ದೃಶ್ಯವೊಂದರಲ್ಲಿ ನಟಿ ಕತ್ರಿನಾ ಕೈಫ್ ಟವಲ್ ಫೈಟ್ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ಸೀನ್ ಶೂಟಿಂಗ್‌ನಲ್ಲಿ ಹಾಲಿವುಡ್ ಫೈಟ್ ವುಮೆನ್ (Actress Michelle Lee) ನಟಿ ಮಿಕೆಲ್ ಲೀ ಅವರು ಕತ್ರಿನಾ ಕೈಫ್ ಜತೆ ಫೈಟ್ ಮಾಡಿದ್ದಾರೆ. ಈ ಫೈಟ್ ಸೀನ್ ಟರ್ಕಿಯ ಹಮಾಮ್‌ನಲ್ಲಿ ಆಗಿದ್ದು, ಇದರಲ್ಲಿ ನಡೆದ ನಟಿಯರಿಬ್ಬರ ಶೂಟಿಂಗ್ ವಿಡಿಯೋ ಈಗ ಭಾರೀ ವೈರಲ್ ಆಗಿದೆ.

 

 

Katrina Kaif Comments about Tiger 3 movie viral towel fight scene srb
Author
First Published Nov 6, 2023, 3:41 PM IST | Last Updated Nov 6, 2023, 3:43 PM IST

ನವೆಂಬರ್ 12ರಂದು (12 ನವೆಂಬರ್ 2023) ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿ ನಟನೆಯ 'ಟೈಗರ್ 3' ಚಿತ್ರವು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಈಗಾಗಲೇ ಭಾರೀ ಹೈಪ್ ಸಿಕ್ಕಿದ್ದು, ಬಹಳ ಕಾಲದ ಬಳಿಕ ಸಲ್ಮಾನ್ ಖಾನ್ ಚಿತ್ರವು ತೆರೆಗೆ ಬರುತ್ತಿದ್ದು, ಸಲ್ಲೂ ಅಭಿಮಾನಿಗಳು ತಮ್ಮ ಮೆಚ್ಚಿನ ಹೀರೋನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಟೈಗರ್ 3 ಚಿತ್ರದ ಒಂದು ಸೀನ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. 'ಈ ಹಮಾಮ್ ಟವೆಲ್ ಫೈಟ್ ಸೀನ್ ಸಖತ್ ವೈರಲ್ ಆಗುವುದೆಂದು ತಮಗೆ ಮೊದಲೇ ಗೊತ್ತಿತ್ತು' ಎಂದಿದ್ದಾರೆ ನಟಿ ಕತ್ರಿನಾ ಕೈಫ್

ಹಮಾಮ್ ಎಂಬ ಟರ್ಕಿಶ್ ಸ್ಟೀಮ್ ಬಾತ್ ದೃಶ್ಯವೊಂದರಲ್ಲಿ ನಟಿ ಕತ್ರಿನಾ ಕೈಫ್ ಟವಲ್ ಫೈಟ್ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ಸೀನ್ ಶೂಟಿಂಗ್‌ನಲ್ಲಿ ಹಾಲಿವುಡ್ ಫೈಟ್ ವುಮೆನ್ (Actress Michelle Lee) ನಟಿ ಮಿಕೆಲ್ ಲೀ ಅವರು ಕತ್ರಿನಾ ಕೈಫ್ ಜತೆ ಫೈಟ್ ಮಾಡಿದ್ದಾರೆ. ಈ ಫೈಟ್ ಸೀನ್ ಟರ್ಕಿಯ ಹಮಾಮ್‌ನಲ್ಲಿ ಆಗಿದ್ದು, ಇದರಲ್ಲಿ ನಡೆದ ನಟಿಯರಿಬ್ಬರ ಶೂಟಿಂಗ್ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಟೈಗರ್ 3 ನಟಿ ಕತ್ರಿನಾ ಕೈಫ್ 'ನನಗೆ ಈ ಹಮಟಾಮ್ ಟವೆಲ್ ಫೈಟ್ ಸೀನ್ ಭಾರೀ ವೈರಲ್ ಆಗುವುದೆಂದು ಮೊದಲೇ ಗೊತ್ತಿತ್ತು' ಎಂದಿದ್ದಾರೆ. 

ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಲು ಸಂಚು; ಏನು ಹೇಳ್ತಾರೆ ಅಮಿತಾಭ್ ಬಚ್ಚನ್ !

ಇದೀಗ ಭಾರೀ ವೈರಲ್ ಆಗಿರುವ ನಟಿ ಕತ್ರಿನಾ ಟೈಗರ್ 3 ಸೀನ್, ಈ ಚಿತ್ರಕ್ಕೆ ಇನ್ನಷ್ಟು ಹೈಪ್ ನೀಡಿದೆ ಎನ್ನಬಹುದು. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯ ಈ ಮೊದಲು ತೆರೆಗೆ ಬಂದಿದ್ದ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಎರಡೂ ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ದಾಖಲಿಸಿದ್ದವು. ಇದೀಗ ಮುಂದಿನ ವಾರ ಬಿಡುಗಡೆ ಆಗಲಿರುವ 'ಟೈಗರ್ 3' ಚಿತ್ರ ಕೂಡ ಭಾರೀ ಎನ್ನವುಷ್ಟು ಹೈಪ್ ಪಡೆದಿದೆ. ನವೆಂಬರ್ 12ಕ್ಕೆ ಬಿಡುಗಡೆ ಆಗಲಿರುವ ಈ ಟೈಗರ್ 3 ಚಿತ್ರಕ್ಕೆ ಜಗತ್ತಿನಾದ್ಯಂತ ಕಾಯಲಾಗುತ್ತಿದೆ. ಭಾರತದಲ್ಲಂತೂ ದೀಪಾವಳಿ ಹಬ್ಬವಿದೆ. ರಜೆ ಇರುವುದರಿಂದ ಚಿತ್ರಕ್ಕೆ ಇನ್ನಷ್ಟು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು. ಒಟ್ಟಿನಲ್ಲಿ, ಸಲ್ಮಾನ್ ಖಾನ್-ಕತ್ರಿನಾ ಕೈಫ್ ಜೋಡಿಯ 'ಟೈಗರ್3' ಚಿತ್ರವು ಹಲವು ದಾಖಲೆಗಳನ್ನು ಸೃಷ್ಟಿಸಲು ಸಜ್ಜಾಗಿದೆ ಎನ್ನಬಹುದು.

ಅನ್ನದ ಬೆಲೆ ಏನೆಂದು ಬಿಗ್ ಬಾಸ್ ಮನೆಯಲ್ಲಿ ಅರ್ಥವಾಯ್ತು; ರಕ್ಷಕ್ ಬುಲೆಟ್

 

Latest Videos
Follow Us:
Download App:
  • android
  • ios