Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಲು ಸಂಚು; ಏನು ಹೇಳ್ತಾರೆ ಅಮಿತಾಭ್ ಬಚ್ಚನ್ !

ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರದ್ದು ಎಂದು ಹೇಳಲಾದ (Deepfake videos) ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ಅಸಲಿಯಾ ಅಥವಾ ನಕಲಿಯಾ ಎಂದು ಪತ್ತೆ ಹಚ್ಚುವಲ್ಲಿ ಹಲವರು ನಿರತರಾಗಿದ್ದರು. ದು ಖಂಡಿತಾ ನಟಿ ರಶ್ಮಿಕಾ ಅವರದ್ದಲ್ಲ ಎಂದು ಕೆಲವರು ಹೇಳಿದ್ದರು. 

Rashmika Mandanna fake video goes viral in social media srb
Author
First Published Nov 6, 2023, 1:39 PM IST

ಕರ್ನಾಟಕ ಕ್ರಶ್ ಬಿರುದು ಪಡೆದು ಇದೀಗ ಇಂಡಿಯಾ ಕ್ರಶ್ ಆಗಿ ಮೆರೆಯುತ್ತಿರುವ ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ (Rashmika Mandanna)ಮತ್ತೆ ಸುದ್ದಿಯಾಗಿದ್ದಾರೆ. ಆದರೆ, ಈ ಬಾರಿ ಅವರು ಸದ್ದಿಯಾಗಿರುವ ಸುದ್ದಿ ಬೇಸರ ತರಿಸುವಂಥದು. ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವಿಡಿಯೋವೊಂದು (Deepfake videos) ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಎದೆ ಸೀಳು ತೋರಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಅದು ರಶ್ಮಿಕಾ ವಿಡಿಯೋ ಎಂದು ಹಂಚಿಕೊಂಡಿದ್ದರು. 

ನಟಿ ರಶ್ಮಿಕಾ ಮಂದಣ್ಣ ಯಾಕೆ ಹೀಗೆ ಮಾಡಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದರು. ಆದರೆ, ಅದು ರಶ್ಮಿಕಾ ಮಂದಣ್ಣ ಅವರ ವಿಡಿಯೋ ಅಲ್ಲವೆಂದು ಈಗ ಗೊತ್ತಾಗಿದೆ. ಅಭಿಷೇಕ್ (Abhishek) ಅನ್ನುವವರು ಇದಕ್ಕೆ ಸಂಬಂಧಿಸಿ ಮೂಲ ವಿಡಿಯೋವನ್ನು ಪತ್ತೆ ಮಾಡಿ ಎರಡೂ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಗೆ ಅದು ರಶ್ಮಿಕಾದ್ದು ಅಲ್ಲ ಎಂಬುದು ಸಾಕ್ಷಿ ಸಮೇತ ಪ್ರೂವ್ ಆದಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರದ್ದು ಎಂದು ಹೇಳಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ಅಸಲಿಯಾ ಅಥವಾ ನಕಲಿಯಾ ಎಂದು ಪತ್ತೆ ಹಚ್ಚುವಲ್ಲಿ ಹಲವರು ನಿರತರಾಗಿದ್ದರು. ಅದು ಖಂಡಿತಾ ನಟಿ ರಶ್ಮಿಕಾ ಅವರದ್ದಲ್ಲ ಎಂದು ಕೆಲವರು ಹೇಳಿದ್ದರು. ಕೊನೆಗೂ ಅಭಿಷೇಕ್ ಅಸಲಿ ಮತ್ತು ನಕಲಿ ಎರಡೂ ವಿಡಿಯೋವನ್ನು ಹಂಚಿಕೊಂಡು ಈ ಸುದ್ದಿಗೊಂದು ಇತಿಶ್ರೀ ಹಾಡಿದ್ದಾರೆ. 

ಡ್ರೋನ್ ಪ್ರತಾಪ್ ಬೇಜಾನ್ ಕೊಬ್ಬು ತೋರಿಸ್ತಾ ಇದ್ದಾನೆ ಇಷ್ಟ್ರಲ್ಲೇ ಕೊಡ್ತೀನಿ; ಹೊಡೆಯುವ ಪ್ಲ್ಯಾನ್‌ನಲ್ಲಿದ್ರಾ ರಕ್ಷಕ್?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ (Deepfake videos) ವಿಡಿಯೋ ಝರಾ ಪಟೀಲ್ (Zara Patel) ಎನ್ನುವವರದ್ದು ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಝರಾ ಪಟೇಲ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಯಾರೋ ಕಿಡಿಕೇಡಿಗಳು ಆ ವಿಡಿಯೋಗೆ ರಶ್ಮಿಕಾ ತಲೆಯನ್ನು ಮಾಸ್ಕ್ ಮಾಡಿ ಹರಿಬಿಟ್ಟಿದ್ದರು. ಈ ಕಾರಣಕ್ಕೆ ಆ ವಿಡಿಯೋ ಮತ್ತಷ್ಟು ವೈರಲ್ ಆಗಿತ್ತು.

ಅನ್ನದ ಬೆಲೆ ಏನೆಂದು ಬಿಗ್ ಬಾಸ್ ಮನೆಯಲ್ಲಿ ಅರ್ಥವಾಯ್ತು; ರಕ್ಷಕ್ ಬುಲೆಟ್

ಅಭಿಷೇಕ್ ಅವರು ಹಂಚಿಕೊಂಡ ಪೋಸ್ಟ್ ಅನ್ನು ಬಾಲಿವುಡ್ ಬಿಗ್ ಬಿ ನಟ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಶೇರ್ ಮಾಡಿದ್ದರು. 'ಇದು ಮಹಾಪರಾಧ, ತಕ್ಷಣವೇ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಯಾರಿಗೂ ಅಪಮಾನ ಮಾಡಬಾರದು' ಎಂದು ನಟ ಅಮಿತಾಭ್ ಹೇಳಿದ್ದಾರೆ.  ಒಟ್ಟಿನಲ್ಲಿ, ಯಾರದೋ ವಿಡಿಯೋವನ್ನು ಯಾರೋ ಎಡಿಟ್ ಮಾಡಿ ರಶ್ಮಿಕಾ ಮಾನ ಕಳೆಯುವ ಸಂಚು ನಡೆದಿತ್ತು. ಆದರೆ ಅದು ಈಗ ಅವರಿಗೆ ಕೈ ಕೊಟ್ಟಿದೆ. 

ರಶ್ಮಿಕಾರದ್ದು ಡೀಪ್ ಫೇಕ್ ವೀಡಿಯೋ

ಇದು ಒರಿಜಿನಲ್ ವಿಡಿಯೋ

 

 

Follow Us:
Download App:
  • android
  • ios