Asianet Suvarna News Asianet Suvarna News

ಅನ್ನದ ಬೆಲೆ ಏನೆಂದು ಬಿಗ್ ಬಾಸ್ ಮನೆಯಲ್ಲಿ ಅರ್ಥವಾಯ್ತು; ರಕ್ಷಕ್ ಬುಲೆಟ್

ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವ್ದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ಇರುವಷ್ಟು ದಿನ ಚೆನ್ನಾಗಿದ್ದೇನೆ. ಈ ವರ್ಷದ ಬಿಗ್‌ಬಾಸ್ ತುಂಬ ಕನ್‌ಫ್ಯೂಷನ್ನು, ತುಂಬ ಡಿಫರೆಂಟು ಆಗಿತ್ತು. 

Bigg Boss Kannada contestant Rakshak Bullet talks about Food importance srb
Author
First Published Nov 6, 2023, 12:39 PM IST

ಬುಲೆಟ್‌ನಂಥ ಡೈಲಾಗ್‌ಗಳಿಂದಲೇ ಗಮನಸೆಳೆದಿದ್ದ ಬುಲೆಟ್‌ ರಕ್ಷಕ್‌ ಬಿಗ್‌ಬಾಸ್‌ ಮನೆಯಿಂದ ಈ ವಾರ ಹೊರಬಿದ್ದಿದ್ದಾರೆ. ಮನೆಯಿಂದ ಹೊರಗೆ ಹೋಗುತ್ತಿರುವುದಕ್ಕೆ ಅವರಲ್ಲಿ ಯಾವ ಬೇಸರವೂ ಇಲ್ಲವಂತೆ. ಹಾಗೆ ನೋಡಿದರೆ, ಪರಿಸ್ಥಿತಿ ಇನ್ನಷ್ಟು ಕೆಡುವ ಮೊದಲೇ ಹೊರಬಂದಿದ್ದಕ್ಕೆ ಖುಷಿಯೇ ಇದೆಯಂತೆ! 

ಮನೆಯಿಂದ ಹೊರಬಿದ್ದಿದ್ದೇ JioCinemaಕ್ಕೆ ಎಕ್ಸ್‌ಕ್ಲೂಸೀವ್ ಸಂದರ್ಶನ ನೀಡಿರುವ ರಕ್ಷಕ್‌, ಬಿಗ್‌ಬಾಸ್ ಮನೆಯೊಳಗಿನ ಅನುಭವ, ಸ್ಪರ್ಧಿಗಳ ಕುರಿತಾದ ಒಪಿನಿಯನ್‌ಗಳನ್ನು ಹಂಚಿಕೊಂಡಿದ್ದಾರೆ. ಅವರ ಅನುಭವಕಥನವನ್ನು ಅವರ ಮಾತುಗಳಲ್ಲೇ ಕೇಳಿ:
‘ಎಲ್ಲರಿಗೂ ನಮಸ್ಕಾರ. ನಾನು ರಕ್ಷಕ್‌. ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. 

ಒಂದು ತಿಂಗಳ ಇರಬೇಕು ಎಂಬ ಆಸೆ ಇತ್ತು. ಆ ದೇವ್ರು ಮುಂಚೆನೇ ಬರ್ದಿದ್ದ ಅನ್ಸತ್ತ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ. ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಆದೆ. ‘ಉತ್ತಮ’ ತಗೊಂಡೆ. ಎಲ್ಲರ ಜೊತೆ ತುಂಬ ಒಳ್ಳೆಯ ಬಾಂಡಿಂಗ್ ಇಟ್ಕೊಂಡಿದ್ದೆ. ಈ ಎಲ್ಲವೂ ಇನ್ನೂ ಸ್ಟ್ರಾಂಗ್ ಆಗುವ ಮೊದಲೇ ಆಚೆಬಂದೆ ಅಂತ ಖುಷಿ ಇದೆ.

ಹೋಗ್ತಾ ಹೋಗ್ತಾ ಇವೆಲ್ಲವೂ ಇನ್ನೂ ವರ್ಸ್ಟೇ ಆಗಿರೋದು. ನಾನು ಹಬ್ಬದ ಟೈಮಲ್ಲಿ ಕುಟುಂಬದವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದೆ. ನಮ್ಮಮ್ಮ, ‘ನೀನಿಲ್ಲಾ ಅಂದ್ರೆ ಮನೇಲಿ ಕಳೆ ಇರಲ್ವೋ’ ಅಂತಿದ್ರು. ಯಾಕಂದ್ರೆ ನಮ್ಮನೇಲಿ ನಾನೊಬ್ನೇ ಸೌಂಡು ಮಾಡೋನು. ಅದು ಸಡನ್ನಾಗಿ ನೆನಪಾಗೋಯ್ತು. ‘ಓ ಈವತ್ತು ಹಬ್ಬ. ಮನೇಲಿ ಚಿತ್ರನ್ನ, ವಡೆ, ಪಲ್ಯ ಎಲ್ಲ ಮಾಡಿರ್ತಾರೆ. ಇದ್ದಾಗ ನಾವೆಷ್ಟು ದುರಹಂಕಾರದಿಂದ ಇದ್ವಿ. ಈವತ್ತು ಇಲ್ಲಿ ಏನೂ ಇಲ್ದೆ, ಏನಾದ್ರೂ ಕೊಡ್ರಪ್ಪಾ ಅಂತ ಅಲಿತಿದೀವಿ. 

ಬೀನ್ಸ್ ಕೊಡ್ರಪ್ಪಾ, ಬೀನ್ಸ್ ಪಲ್ಯ ಮಾಡೋಣ. ಅನ್ನ ಕೊಡ್ರಪ್ಪಾ, ಫಲಾವ್ ಮಾಡೋಣ ಅಂತ ಅನಿಸ್ತಿತ್ತು. ಅಷ್ಟ್ ಬೇಜಾರಾಗಿಬಿಟ್ಟಿತ್ತು. ಅನ್ನದ ಬೆಲೆ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡೆ. ಈ ಜರ್ನಿಯನ್ನು ಇನ್ನೂ ಕಂಟಿನ್ಯೂ ಮಾಡಬೇಕಿತ್ತು ನಾನು. ನನಗೆ ನಾನು ಯಾವತ್ತೂ ಮೋಸ ಮಾಡಿಕೊಂಡಿಲ್ಲ. ನಾಮಿನೇಷನ್‌ ಆಗಿರೋರ ಪಟ್ಟಿಯಲ್ಲಿ ನಾನು ಇರ್ತೀನಿ ಅಂತ್ಲೇ ಅಂದುಕೊಂಡಿರಲಿಲ್ಲ. ಸೆಕೆಂಡೋ ಥರ್ಡೋ ಸೇಫ್ ಆಗಿಬಿಡ್ತೀನಿ ಅಂದ್ಕೊಂಡಿದ್ದೆ. 

ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವ್ದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ಇರುವಷ್ಟು ದಿನ ಚೆನ್ನಾಗಿದ್ದೇನೆ. ಈ ವರ್ಷದ ಬಿಗ್‌ಬಾಸ್ ತುಂಬ ಕನ್‌ಫ್ಯೂಷನ್ನು, ತುಂಬ ಡಿಫರೆಂಟು ಆಗಿತ್ತು. ತುಂಬ ಯೂನಿಕ್ ಆಗಿದೆ. ಯಾರಿಗೂ ಊಹೆ ಮಾಡಕ್ಕಾಗಲ್ಲ. 

ಸ್ಟೇಜ್‌ ಹತ್ತಾವಾಗಲೇ ಒಂದು ಖುಷಿ ಇತ್ತು. ಸ್ಟೇಜ್ ಹತ್ತಾದ್ಮೇಲೆ ಒಂದು ಟಾಸ್ಕ್ ಕೊಟ್ರು. ಪೊಲಿಂಗ್ ಇತ್ತು. ನಾವು ಅಸಮರ್ಥರಾಗಿ ಒಳಗಡೆ ಹೋದ್ವಿ. ಎಲ್ಲರೂ ಕಷ್ಟಪಟ್ಟು, ಗುರ್ತಿಸಿಕೊಂಡು ಅಸಮರ್ಥರಿಂದ ಸಮರ್ಥನಾದೆ. ಕ್ಯಾಪ್ಟನ್ ಆದೆ. ಉತ್ತಮ ತಗೊಂಡೆ. ಹಗ್ಗ ಎಳೆದು ಹಿಡಿದುಕೊಳ್ಳುವ ಟಾಸ್ಕ್‌ ನನಗೆ ನೆನಪಿರುವಂಥದ್ದು. ನನ್ನ ತುಂಬ ಟ್ರಿಗರ್ ಮಾಡಿದ್ರು. ತುಕಾಲಿ ಸಂತೋಷ್ ಸೇವ್ ಮಾಡಬೇಕಿತ್ತು. ಆಗಲ್ವೇನೋ ಅನಿಸಿತ್ತು. ಆದ್ರೆ ಪೋಲ್ ಹಿಡ್ದೆ. ನೀರು ಹಾಕಿದ್ರು. ಆಗ ಇನ್ನೂ ಕಂಫರ್ಟಬಲ್ ಆಗಿತ್ತು. 

ನಾನೊಬ್ಬ ಕಾಂಪಿಟೇಟರ್ ಅಂತ ತೋರಿಸ್ಬೇಕು ಅನಿಸಿತ್ತು. ಆಡಿದೆ. ನನ್ನ ಕ್ಯಾಪ್ಟನ್‌ಷಿಪ್‌ನಲ್ಲಿ ಅನ್ನಕ್ಕೆ ಕೊರತೆ ಇರಲಿಲ್ಲ. ಅದೇ ವಾರದಲ್ಲಿ ತಾರಮ್ಮ ಬಂದಿದ್ದು. ಅದೇ ವಾರದಲ್ಲಿ ಬೃಂದಾವನ ಟೀಮ್ ಬಂದಿದ್ದು. ಅದೇ ವಾರದಲ್ಲಿ ನಮಗೆ ಏನೇನು ಬೇಕೋ ಎಲ್ಲ ಆಹಾರವನ್ನೂ ಕೊಟ್ಟಿದ್ರು. ಎಲ್ಲ ಸೌಕರ್ಯ ನನ್ನ ಕ್ಯಾಪ್ಟನ್‌ಷಿಪ್‌ನಲ್ಲಿ ಬಂತು. ಜಿಯೋ ಸಿನಿಮಾದ ಫನ್‌ ಫ್ರೈಡೆಯಲ್ಲಿನ ಮ್ಯೂಸಿಕಲ್ ಪಾಟ್‌ ಟಾಸ್ಕ್‌ ಸಖತ್ ಮಜಾ ಕೊಟ್ಟಿತ್ತು. ಫನ್‌ ಫ್ರೈಡೆ ಅಂದ್ರೇ ಮಜವಾಗಿರೋ ಟಾಸ್ಕ್‌. ಅದನ್ನೂ ಕೆಲವರು ಸಿಕ್ಕಾಪಟ್ಟೆ ಗಂಭೀರವಾಗೇ ಆಡ್ತಾರೆ. ಫನ್ ಅನ್ನೋ ಶಬ್ದಕ್ಕೆ ಹಾಳುಮಾಡಬಾರದು. ಬೇರೆ ಟ್ರಿಗರ್ ಆಗುವ ಟಾಸ್ಕ್ ಇರುತ್ತದೆ. ಅದಕ್ಕೆ ಟ್ರಿಗರ್ ಆಗಲಿ. ಆದ್ರೆ ಮಜವಾಗಿ ಆಡುವ ಆಟವನ್ನು ಮಜವಾಗಿಯೇ ಆಡಿ. ಎಂಜಾಯ್ ಮಾಡಿಕೊಂಡು ಆಡಬೇಕು.

ಮನೆಯೊಳಗಿನ ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ. ಸ್ಟ್ರಾಟಜಿ ಅಂತ ಬಂದ್ರೆ ವಿನಯ್. ಫೇಕ್‌  ಅಂತ ಹೇಳಕ್ಕಾಗಲ್ಲ. ಆದರೆ ಬೇಡದಿರೋ ವಿಷಯಕ್ಕೆ ನಾಟಕ ಮಾಡಿದಾರೆ ಭಾಗ್ಯಶ್ರೀ. ಅಳೋದು ಒಂದೇ ಅಲ್ಲ ಲೈಫ್‌ನಲ್ಲಿ. ಅದನ್ನು ಸ್ಟ್ರಾಂಗಾಗಿ ಫೇಸ್ ಮಾಡಬೇಕು. ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳೋರು ವಿನಯ್. ಮತ್ತೆ ಫೈನಲ್‌ನಲ್ಲಿ ನಮ್ರತಾ ಇರಲೇಬೇಕು. ಕಾರ್ತಿಕ್ ಬರಬಹುದೇನೋ. ನಮ್ರತಾ ವಿನ್ನರ್ ಆಗಬೇಕು.
ಈ ವಾರ ಕಡಿಮೆ ಪರ್ಫಾರ್ಮೆನ್ಸ್ ಕೊಟ್ಟಿದ್ದು ಪ್ರತಾಪ್‌. ಮೋಸ್ಟ್ಲಿ ಮುಂದಿನ ವಾರ ನನ್ನ ಜಾಗದಲ್ಲಿ ಅವನು ಇರ್ತಾನೆ ಅಂದ್ಕೊಂಡಿದೀನಿ. 

ನಾನು, ತುಕಾಲಿ ಮತ್ತು ವರ್ತೂರ್ ಸಂತೋಷ್‌ ತ್ರಿಮೂರ್ತಿ ಸಂಘ ಯಾವಾಗ ಹುಟ್ಕೊಂತೋ, ಅದು ಶನಿವಾರ ಹುಟ್ಕೊಂಡ್ತು. ಸೋಮವಾರ ಮಧ್ಯಾಹ್ನವೇ ವರ್ತೂರ ಸಂತೋಷ್ ಕಾಣೆಯಾಗಿಬಿಟ್ರು. ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಮೂರು ಜನ ಇದ್ದೋರು ಇಬ್ಬರಾಗಿಬಿಟ್ವಿ. ನಾನು ಒಬ್ರು ಜೊತೆ ಬಾಂಡಿಂಗ್ ಶುರುಮಾಡಿದ್ರೆ ಅದನ್ನು ಬ್ರೇಕ್ ಮಾಡಲ್ಲ. ನನ್ನ ತಪ್ಪಾಗಿದ್ರೆ ಸಾರಿ ಕೇಳ್ತೀನಿ. ತಪ್ಪಾಗಿಲ್ಲದಿದ್ರೆ ತಲೆಕೆಡಿಸಿಕೊಳ್ಳಲ್ಲ.
 
ಇಲ್ಲಿ ನನಗೆ ತುಕಾಲಿ ಸಂತೋಷ್ ಬೇಗ ಕ್ಲೋಸ್ ಆದ್ರು. ನಮ್ಮು ಕೂಡ ಕ್ಲೋಸ್ ಆದ್ರು. ಆ ಫ್ರೆಂಡ್‌ಷಿಪ್‌ ನೆನಪಿಸಿಕೊಂಡ್ರೆ ಈ ಜರ್ನಿ ಇಲ್ಲೇ ಸ್ಟಾಪ್ ಆಗಿದ್ದರ ಬಗ್ಗೆ ಬೇಜಾರಾಗುತ್ತದೆ ಅಷ್ಟೆ. https://www.jiocinema.com/videos/rakshak-recollects-his-experience/3847561, ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. 
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

Follow Us:
Download App:
  • android
  • ios