ತೆಲುಗು ಇಂಡಸ್ಟ್ರಿಗೆ ಹೋಗುವ ಪುಕಾರು... ನೋ ವೇ ಚಾನ್ಸೇ ಇಲ್ಲ ಎಂದ ಶೆಟ್ರು
ಟ್ವಿಟ್ಟರ್ ಪೋಸ್ಟೊಂದು ರಿಷಭ್ ಶೆಟ್ಟಿ ತೆಲುಗು ಚಿತ್ರೋದ್ಯಮಕ್ಕೆ ಹೋಗುತ್ತಾರೆ ಎಂಬ ಊಹಾಪೋಹಾಕ್ಕೆ ಕಾರಣವಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಕಾಂತಾರದ ಹೀರೋ, ನೋ ವೇ ಚಾನ್ಸೇ ಇಲ್ಲ ಎಂದು ಹಿರಿಯ ದಿವಂಗತ ನಟ ಅಂಬರೀಷ್ ಸ್ಟೈಲಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಕಾಂತಾರ ಸಿನಿಮಾವೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಬೇರೆ ಬೇರೆ ಭಾಷೆಗಳಲ್ಲಿ ಡಬ್ ಆಗುತ್ತಾ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಬೇರೆ ಬೇರ ಭಾಷೆಯ ಸಿನಿಮಾ ನಟ ನಟಿಯರು ಗಣ್ಯರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಆಂಧ್ರ ಬಾಕ್ಸ್ ಆಫೀಸ್.ಕಾಮ್ ತನ್ನ ಟ್ವಿಟ್ಟರ್‌ನಲ್ಲಿ ಪೋಸ್ಟೊಂದನ್ನು ಹಾಕಿದ್ದು, ಇದು ರಿಷಭ್ ಶೆಟ್ಟಿ ತೆಲುಗು ಚಿತ್ರೋದ್ಯಮಕ್ಕೆ ಹೋಗುತ್ತಾರೆ ಎಂಬ ಊಹಾಪೋಹಾಕ್ಕೆ ಕಾರಣವಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಕಾಂತಾರದ ಹೀರೋ, ನೋ ವೇ ಚಾನ್ಸೇ ಇಲ್ಲ ಎಂದು ಹಿರಿಯ ದಿವಂಗತ ನಟ ಅಂಬರೀಷ್ ಸ್ಟೈಲಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ ಆಂಧ್ರ ಬಾಕ್ಸ್ ಆಫೀಸ್.ಕಾಮ್ ಪೋಸ್ಟ್ ಮಾಡಿರುವ ಟ್ವಿಟ್‌ನಲ್ಲಿ ಏನಿದೆ. ಇಲ್ಲಿದೆ ಓದಿ, ಕಾಂತಾರ ಸಿನಿಮಾದ ಯಶಸ್ಸಿನ (Kantara movie success Meet) ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ತೆಲುಗು ನಟ ಅಲ್ಲು ಅರ್ಜುನ್ (Allu Arjun) ತಂದೆ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ (Allu Arvind) ಅವರು, ರಿಷಭ್ ಶೆಟ್ಟಿ ಜೊತೆ ಗೀತಾ ಆರ್ಟ್ಸ್ ಮೂಲಕ ಸಿನಿಮಾವೊಂದನ್ನು ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ ನಟ ಹಾಗೂ ನಿರ್ದೇಶಕರೂ ಆಗಿರುವ ರಿಷಭ್ ಶೆಟ್ಟಿ (Rishabh Shetty) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಯಾವುದೇ ಪ್ಲಾನ್‌ಗಳಿಲ್ಲ. ಸದ್ಯ ಸ್ವಲ್ಪ ವಿರಾಮ ತೆಗೆದುಕೊಳ್ಳುವ ಯೋಚನೆಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ ಎಂದು ಆಂಧ್ರ ಬಾಕ್ಸ್ ಆಫೀಸ್.ಕಾಮ್ ಟ್ವಿಟ್ ಮಾಡಿತ್ತು.
ಈ ಟ್ವಿಟ್‌ಗೆ ಪ್ರತಿಕ್ರಿಯಿಸಿ ಆರ್‌ಕೆ ಎಂಬುವವರು ಹಾಗಾದರೆ ರಿಷಭ್ ಶೆಟ್ಟಿ ಕೂಡ ಕನ್ನಡ ಫಿಲಂ ಇಂಡಸ್ಟ್ರಿಯನ್ನು ಬಿಟ್ಟು ಹೋಗುತ್ತಾರೆ ಎಂದು ಬರೆದಿದ್ದರು. ಈ ಟ್ವಿಟ್‌ಗೆ ಪ್ರತಿಕ್ರಿಯಿಸಿದ ನಟ ರಿಷಭ್ ಶೆಟ್ಟಿ ನೋ ವೇ ಚಾನ್ಸೇ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ರಿಷಬ್ ಶೆಟ್ಟರ 'ಕಾಂತರ' ಗೆಲುವಿನ ಹಿಂದಿದೆಯಾ ದೈವ ಶಕ್ತಿ? ಪ್ಯಾನ್ ಇಂಡಿಯಾ ಆಗಿದ್ದು ಇದೇ ಕಾರಣಕ್ಕಾ?
ಇತ್ತ ಕಾಂತಾರ ಸಿನಿಮಾ ಹಲವು ಭಾಷೆಗಳಲ್ಲಿ ಡಬ್ ಆಗಿ ದೇಶಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿದೆ. ಆದರೆ ಈ ಕಾಂತಾರ ಸಿನಿಮಾದಲ್ಲಿ ಬರುವ ದೈವರಾಧಾನೆ ವಿಚಾರವಾಗಿ ನಟ ಚೇತನ್ ಹೇಳಿಕೆ ವಿವಾದ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳು, ಟಿವಿ ಚಾನೆಲ್‌ಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕರಾವಳಿ ಪ್ರದೇಶದಲ್ಲಿ ಆಚರಣೆಯಲ್ಲಿ ಇರುವ ದೈವಾರಾಧನೆಯ ಎಳೆಯನ್ನು ಇರಿಸಿಕೊಂಡು ಬಂದಿರುವ 'ಈ ಸಿನಿಮಾದಲ್ಲಿರುವ ಆಚರಣೆ ಪದ್ಧತಿ, ನಟ ರಿಷಭ್ ಶೆಟ್ಟಿ ಹೇಳಿರುವಂತೆ ಹಿಂದೂಗಳದಲ್ಲ, ಆದಿವಾಸಿಗಳದ್ದು ಆದರೆ ಇಲ್ಲಿ ದೈವರಾಧನೆಯನ್ನು ವೈದಿಕ ಆಚರಣೆಯಂತೆ ತೋರಿಸಲಾಗಿದೆ' ಎಂಬ ವಾದ ನಟ ಚೇತನ್‌ರದ್ದು(Actor Chetan), ಆದರೆ ಆದಿವಾಸಿಗಳು ಸೇರಿದಂತೆ ಎಲ್ಲರೂ ಹಿಂದೂ ಸಮುದಾಯದ ಒಂದು ಭಾಗ ಅವರೆಲ್ಲರೂ ಜೊತೆಯಾಗಿ ಈ ಆರಾಧನೆಯನ್ನು ಮಾಡುತ್ತಾರೆ ಎಂಬ ವಾದ ಕರಾವಳಿಯ ದೈವ ಆರಾಧಕರದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿಯ ಅನೇಕ ವಿಚಾರತಜ್ಞರು ಹಾಗೂ ಸಿನಿಮಾದಲ್ಲಿ ನಟಿಸಿದ ಅನೇಕ ನಟರು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಚೇತನ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
Kantara; ರಿಷಬ್ ಪಾತ್ರ ಬೇರೆ ಯಾವ ನಟ ಮಾಡಬಹುದು? ಅಭಿಮಾನಿಗಳ ಆಯ್ಕೆ ಹೀಗಿದೆ