Kantara; ರಿಷಬ್ ಪಾತ್ರ ಬೇರೆ ಯಾವ ನಟ ಮಾಡಬಹುದು? ಅಭಿಮಾನಿಗಳ ಆಯ್ಕೆ ಹೀಗಿದೆ

ಕಾಂತಾರ ಸಿನಿಮಾದ ಪಾತ್ರವನ್ನು ರಿಷಬ್ ಬಿಟ್ಟರೆ ಬೇರೆ ಯಾವುದೇ ನಟ ಮಾಡಲು ಸಾಧ್ಯವಿಲ್ಲ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ. 

Fans comment on who can make Kantara movie instead of Rishabh Shetty sgk

ಸ್ಯಾಂಡಲ್‌ವುಡ್‌ನಲ್ಲಿ ಕಾಂತಾರ ಸಿನಿಮಾದೇ ಹವಾ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಕಾಂತಾರ ಸಿನಿಮಾ ಸದ್ದು ಮಾಡುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ಕಾಂತಾರಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಬಂದ ಸಿನಿಮಾ ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ರಿಷಬ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿಗೆ ಮೆಚ್ಚುಗೆಯ ಮಹಾಪೂರ ಬರುತ್ತಿದೆ. 

ಅಂದಹಾಗೆ ಕನ್ನಡದ ಕಾಂತಾರ ಸಿನಿಮಾದ ಬಗ್ಗೆ ತೆಲುಗು ಸ್ಟಾರ್ ಪ್ರಭಾಸ್, ನಾನಿ, ಮಲಯಾಳಂ ನಟ ಪೃಥ್ವಿರಾಜ್, ಧನುಷ್ ಸೇರಿದಂತೆ ಅನೇಕ ಸ್ಟಾರ್ಸ್ ಹಾಡಿಹೊಗಳಿದ್ದಾರೆ.  ರಿಷಬ್ ಶೆಟ್ಟಿ ಅಭಿನಯನಕ್ಕೆ ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಶಿವ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಸುವರ್ಣ ನ್ಯೂಸ್ ಡಿಜಿಟಲ್ ರಿಷಬ್ ಶೆಟ್ಟಿ ಪಾತ್ರವನ್ನು ಬೇರೆ ಯಾವ ನಟ ಮಾಡಬಹುದು ಎನ್ನುವ ಪೋಲ್ ನೀಡಿತ್ತು. ಇದಕ್ಕೆ ಅಭಿಮಾನಿಗಳು ಅನೇಕ ಸ್ಟಾರ್ಸ್ ಹೆಸರನ್ನು ಸೂಚಿಸಿದ್ದಾರೆ. ಇನ್ನು ಕೆಲವರು ರಿಷಬ್ ಬಿಟ್ಟರೆ ಬೇರೆ ಯಾವುದೇ ನಟ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. 

ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, 'ರಿಷಬ್ ಬಿಟ್ಟರೆ ಬೇರೆ ಯಾರಿಗೂ ಒಪ್ಪುವುದಿಲ್ಲ' ಎಂದು ಹೇಳಿದ್ದಾರೆ.  ಇನ್ನೊಬ್ಬ ಅಭಿಮಾನಿ 'ಕಾಂತಾರ ಅಂದ್ರೆ ರಿಷಬ್ ಶೆಟ್ಟಿ, ರಿಷಬ್ ಶಟ್ರಿ ಅಂದ್ರೆ ಕಾಂತಾರ, ಬೇರೆ ಯಾರನ್ನೂ ಆ ಜಾಗದಲ್ಲಿ ನೋಡಲು ಸಾದ್ಯವಿಲ್ಲ' ಎಂದಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಯಾರಿಗೂ ಸಾಧ್ಯವಿಲ್ಲಾ , ಮತ್ತೆ ರಿಷಬ್ ಅವರೇ ಮಾಡಿದರೂ ಆ ಪಾತ್ರ ಮೂಡಿಬರದು' ಎಂದು ಹೇಳಿದ್ದಾರೆ. 

ಇನ್ನು ಕೆಲವರು ಬೇರೆ ಬೇರೆ ಕಲಾವಿದರ ಹೆಸರುಗಳನ್ನು ಹೇಳುತ್ತಿದ್ದಾರೆ. ತಮಿಳು ಸ್ಟಾರ್ ಚಿಯಾನ್ ವಿಕ್ರಮ್, ರಕ್ಷಿತ್ ಶೆಟ್ಟಿ, ಜೂ ಎನ್ ಟಿ ಆರ್, ಧನುಷ್ ಹೀಗೆ ಅನೇಕರ ಹೆಸರನ್ನು ಅಭಿಮಾನಿಗಳು ಸೂಚಿಸಿದ್ದಾರೆ. ಆದರೆ ಬಹುತೇಕರು ಈ ಪಾತ್ರ ರಿಷಬ್ ಅವರಿಗೆ ಸರಿ ಎನ್ನುತ್ತಿದ್ದಾರೆ.

ರಿಷಬ್ ನೀವು ತುಂಬಾ ಹೆಮ್ಮೆ ಪಡಬೇಕು; 'ಕಾಂತಾರ' ನೋಡಿ ಹೊಗಳಿದ ನಟ ಧನುಷ್

ಕಾಂತಾರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಆದರೆ ಉದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಬೇರೆ ಭಾಷೆಯಲ್ಲೂ ರಿಲೀಸ್ ಮಾಡುವಂತೆ ಬೇಡಿಕೆ ಹೆಚ್ಚಾಯಿತು. ಬೇಡಿಕೆಯ ಮೇರಿಗೆ ಕಾಂತಾರ ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಆಗಿದೆ. ತಮಿಳು, ತೆಲುಗು, ಮಲಾಯಳಂ, ಹಿಂದಿ ಮತ್ತು ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ನಟನೆ ಎಷ್ಟರ ಮಟ್ಟಿಗೆ ಇಷ್ಟವಾಗಿದೆ ಎಂದರೆ ಕಾಂತಾರ ಸಿನಿಮಾ ನೋಡಿ ಯೂಟ್ಯೂಬರ್ ಒಬ್ಬರು ಸಂದರ್ಶನ ವೇಳೆ ರಿಷಬ್ ಕಾಲಿಗೆ ಬಿದ್ದಿದ್ದಾರೆ. 

Kantara; ರಿಷಬ್ ಶೆಟ್ಟಿ ಸಿನಿಮಾಗೆ ಪ್ರಭಾಸ್ ಫಿದಾ, ಕ್ಲೈಮ್ಯಾಕ್ಸ್ ಬಗ್ಗೆ ಹೇಳಿದ್ದೇನು?

ಕಾಂತಾರ ನೋಡಿ ಧನುಷ್ ಹೇಳಿದ್ದೇನು?

'ಕಾಂತಾರ ಮೈಂಡ್ ಬ್ಲೋಯಿಂಗ್. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆ ಫಿಲ್ಮ್‌ಗೆ ಅಭಿನಂದನೆಗಳು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ದೊಡ್ಡ ಹಗ್. ದೇವರು ಒಳ್ಳೆದು ಮಾಡಲಿ' ಎಂದು ಟ್ವೀಟ್ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios