ಸುದೀಪ್ ನಟನೆಯ ವಿಕ್ರಾಂತ್ ರೋಣ ಕಡೆಯಿಂದ ಬಂದ ಮತ್ತೊಂದು ಅಪ್ ಡೇಟ್ ಎಂದರೆ ಮೊದಲ ಹಾಡಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಹೈವೋಲ್ಟೇಜ್ ಹಾಡಾಗಿರುವ ಗಡಗ್ ರಕ್ಕಮ್ಮ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದ್ದು ದಿನಾಂಕ ಕೂಡ ಬಹಿರಂಗ ಪಡಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಸದ್ಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಿಡುಗಡೆ ತಯಾರಿಯಲ್ಲಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ವಿಕ್ರಾಂತ್ ರೋಣ ಸಿನಿಮಾದಿಂದ ಮತ್ತೊಂದು ಬಿಗ್ ಅಪ್ ಡೇಟ್ ಹೊರಬಿದ್ದಿದೆ. ಇತ್ತೀಚಿಗಷ್ಟೆ ಮೇ 16ರಂದು ಸಿನಿಮಾದಿಂದ ಭರ್ಜರಿ ಸುದ್ದಿ ಹೊರಹಾಕಿದ್ದರು. ಇದೀಗ ಮತ್ತೊಂದು ಅಪ್ ಡೇಟ್ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅಂದಹಾಗೆ ವಿಕ್ರಾಂತ್ ರೋಣ ಕಡೆಯಿಂದ ಬಂದ ಮತ್ತೊಂದು ಅಪ್ ಡೇಟ್ ಎಂದರೆ ಮೊದಲ ಹಾಡಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಹೈವೋಲ್ಟೇಜ್ ಹಾಡಾಗಿರುವ ಗಡಗ್ ರಕ್ಕಮ್ಮ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದ್ದು ದಿನಾಂಕ ಕೂಡ ಬಹಿರಂಗ ಪಡಿಸಿದ್ದಾರೆ. ಹೌದು, ಬಹುನಿರೀಕ್ಷೆಯ ಹಾಡು ಮೇ 23ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ವಿಕ್ರಾಂತ್ ರೋಣ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ.
ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿ, ಗಡಗ್ ರಕ್ಕಮ್ಮಗೆ ಸ್ವಾಗತ.. ಒಳ್ಳೆಯ ಸಮಯಕ್ಕೆ ಕ್ವೀನ್ ರಾರಾ..ರಕ್ಕಮ್ಮ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ ಎಂದು ಸುದೀಪ್ ಹೇಳಿದ್ದಾರೆ. ಇನ್ನು ವಿಶೇಷ ಗಡಗ್ ರಕ್ಕಮ್ಮ ಹಾಡು ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಆದರೆ ಎಲ್ಲಾ ಭಾಷೆಯಲ್ಲೂ ಒಂದೇ ದಿನ ತೆರೆಗೆ ಬರುತ್ತಿಲ್ಲ. ಮೇ 23ಕ್ಕೆ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ, ಮಧ್ಯಾಹ್ನ 3-05 ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಮೇ 24, 1;05 PM, ತೆಲುಗು 25, 1:05 PM, ತಮಿಳಿನಲ್ಲಿ 26 ಮೇ, 1;05 PM, ಮಲಯಾಳಂನಲ್ಲಿ ಮೇ 27, 1;05 PMಕ್ಕೆ ಬಿಡುಗಡೆಯಾಗುತ್ತಿದೆ. ಒಂದೊಂದು ದಿನ ಒಂದೊಂದು ಹಾಡು ಬಿಡುಗಡೆಯಾಗುತ್ತಿದೆ.
Vikrant Rona ಸಿನಿಮಾದಿಂದ ಹೊರಬಿತ್ತು ಬಿಗ್ ಅಪ್‌ಡೇಟ್; ಕಿಚ್ಚನ ಸಿನಿಮಾಗೆ ಸಲ್ಮಾನ್ ಸಾಥ್
ಈ ಹಾಡಿನಲ್ಲಿ ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಐಟಂ ಹಾಡಿಗೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಲುಕ್ ಈಗಾಗಲೇ ವೈರಲ್ ಆಗಿದೆ. ಕಿಚ್ಚ ಮತ್ತು ಜಾಕ್ವೆಲಿನ್ ಕಾಂಬಿನೇಷನ್ ಹಾಡು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹಿಂದಿ ವರ್ಷನ್‌ಗೆ ಸಲ್ಮಾನ್ ಖಾನ್ ಸಾಥ್
ವಿಕ್ರಾಂತ್ ರೋಣ ಸಿನಿಮಾಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ. ವಿಕ್ರಾಂತ್ ರೋಣ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿತ್ತು. ಸಲ್ಮಾನ್ ಖಾನ್ ಕೂಡ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು. 'ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ 3ಡಿ ಅನುಭವವನ್ನು ಹಿಂದಿಯಲ್ಲಿ ಪ್ರೆಸೆಂಟ್ ಮಾಡುತ್ತಿರುವುದು ಸಂತೋಷವಾಗುತ್ತಿದೆ' ಎಂದು ಹೇಳಿದ್ದಾರೆ. ಈ ಮೊದಲು ಅಂದರೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಅನ್ನು ಸಲ್ಮಾನ್ ಖಾನ್ ರಿಲೀಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
KGF 2 ಆಯ್ತು ಈಗ ವಿಕ್ರಾಂತ್ ರೋಣ; ಬಾಕ್ಸ್ ಆಫೀಸ್ ಆಳೋಕೆ ಸಜ್ಜಾದ ಸುದೀಪ್
ಭರ್ಜರಿ ಬ್ಯುಸಿನಸ್
ಹೌದು, ಸಿನಿಮಾ ಬಿಡುಗಡೆಗೂ ಮೊದಲೇ ವಿಕ್ರಾಂತ್ ರೋಣ ಭರ್ಜರಿ ಕಮಾಯಿ ಮಾಡಲು ಶುರು ಮಾಡಿದೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾದ ಓವರ್‌ಸೀಸ್ ರೈಟ್ಸ್(Overseas Rights Sold) ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಒನ್ ಟ್ವೆಂಟಿ ಏಟ್ ಮಧ್ಯಮವು ಸಾಗರೋತ್ತರ ಮಾರುಕಟ್ಟೆಯ ರೈಟ್ಸ್ ಖರೀದಿ ಮಾಡಿದೆ. ಭಾರಿ ಮೊತ್ತಕ್ಕೆ ಸಿನಿಮಾದ ರೈಟ್ಸ್ ಸೇಲ್ ಆಗಿದ್ದು ಸಿನಿಮಾತಂಡ ಫುಲ್ ಖುಷ್ ಆಗಿದೆ. ಮೂಲಗಳ ಪ್ರಕಾರ ವಿಕ್ರಾಂತ್ ರೋಣ ಬರೋಬ್ಬರಿ 10 ಕೋಟಿ ಮೊತ್ತಕ್ಕೆ ಸಾರಗೋತ್ತರ ರೈಟ್ಸ್ ಸೇಲ್ ಆಗಿದೆ ಎನ್ನಲಾಗಿದೆ.
ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ 3ಡಿಯಲ್ಲಿ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಕಿಚ್ಚ ಸುದೀಪ್ ನಾಯಕನಾಗಿ ಮಿಂಚಿದ್ರೆ, ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈಗಾಗಲೇ ಸಿನಿಮಾತಂಡ ಪ್ರಚಾರಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ದೇಶದಾದ್ಯಂತ ಪ್ರಚಾರ ಕಾರ್ಯ ನಡೆಸಲು ಭರ್ಜರಿ ಪ್ಲಾನ್ ಮಾಡಿದೆ.
