Kangana Ranaut: ಕರಣ್ ಜೋಹರ್ಗೆ ಮುಂದೆ ಮುಂದೆ ಏನಾಗ್ತದೋ ನೋಡ್ತಿರಿ ಎಂದ ನಟಿ...
ಇದಾಗಲೇ ಹಲವಾರು ಬಾರಿ ಕರಣ್ ಜೋಹರ್ ವಿರುದ್ಧ ಕಿಡಿ ಕಾರಿರುವ ನಟಿ ಕಂಗನಾ ರಣಾವತ್, ಇದೀಗ ಪುನಃ ಅವರ ವಿರುದ್ಧ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar) ಈಗ ಬಹಳ ವಿವಾದಗಳಿಂದಲೇ ಸುತ್ತುವರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ನ ಕೆಲವೊಂದು ಹುಳುಕುಗಳ ಬಗ್ಗೆ ಮಾತನಾಡಿ ಹಾಲಿವುಡ್ಗೆ ತಾವು ಹೋಗುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ಕಾರಣ, ಕರಣ್ ಜೋಹರ್ ಎನ್ನುವುದು ಸ್ಪಷ್ಟವಾಗಿತ್ತು. ಇಷ್ಟೇ ಅಲ್ಲದೇ ಕರಣ್ ಜೋಹರ್ ಅವರು ಈಗಾಗಲೇ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ. ನೆಪೋಟಿಸಂ ವಿಷ್ಯ ಸೇರಿದಂತೆ ಹಲವು ವಿಚಾರಗಳಿಗೆ ಕರಣ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 2008ರಲ್ಲಿ ಯಶ್ ಚೋಪ್ರಾ ನಿರ್ಮಾಣ ಮಾಡಿದ್ದ ‘ರಬ್ ನೇ ಬನಾದಿ ಜೋಡಿ’ (Rab Ne Bana Di Jodi) ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಅನುಷ್ಕಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ನಿರ್ದೇಶಕ ಆದಿತ್ಯ ಚೋಪ್ರಾ ಸಿನಿಮಾ ಶುರುವಾಗುವುದಕ್ಕೂ ಮುನ್ನ ಅನುಷ್ಕಾ ಅವರ ಫೋಟೋಗಳನ್ನು ಕರಣ್‌ಗೆ ತೋರಿಸಿದ್ದರಂತೆ, ಆದರೆ ಕರಣ್ ಅವರಿಗೆ ಅನುಷ್ಕಾ ಇಷ್ಟವಾಗಿರಲಿಲ್ಲ. ಈ ಮಾತನ್ನು ಖುದ್ದು ಕರಣ್ ಜೋಹರ್ ಹೇಳಿದ್ದಾರೆ. ಅದೂ ಅವರು ಹೇಳಿದ್ದು ಈಗಲ್ಲ, ಬದಲಿಗೆ 2016ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ. ಕರಣ್ ಮತ್ತು ಅನುಷ್ಕಾ ಒಂದೇ ವೇದಿಕೆಯಲ್ಲಿದ್ದು, ಆ ಸಮಯದಲ್ಲಿ ಆದಿತ್ಯ ಚೋಪ್ರಾ ಅವರು ಮೊದಲ ಬಾರಿಗೆ ಫೋಟೋ ತೋರಿಸಿದಾಗ ನಾನು ಅನುಷ್ಕಾ ಅವರ ಸಿನಿ ಕೆರಿಯರ್ ನಾಶಮಾಡಬೇಕು ಎಂದುಕೊಂಡಿದ್ದೆ .ನನ್ನ ತಲೆಯಲ್ಲಿ ಬೇರೆ ಹೀರೋಯಿನ್ ಹೆಸರು ಇತ್ತು ಎಂದು ಕರಣ್ ಜೋಹರ್ ಹೇಳಿದ್ದರು.
ನಂತರ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದ ನಟಿ ಕಂಗನಾ ರಣಾವತ್ ಈಗ ಕರಣ್ ಜೋಹರ್ ಬಗ್ಗೆ ಭಯಾನಕ ಕಮೆಂಟ್ ಮಾಡಿದ್ದರು. ನಟಿ ಅನುಷ್ಕಾ ಕುರಿತಂತೆ ಅವರು ಹೇಳಿರುವ ವಿಡಿಯೋ ಶೇರ್ ಮಾಡಿದ್ದ ಕಂಗನಾ, ನಾನು ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡ್ಬೇಕು ಎಂದು ಕೊಂಡಿದ್ದೆ ಎಂದು ಖುದ್ದು ಕರಣ್ ಹೇಳಿದ್ದಾರೆ.ಈ ಚಾಚಾ ಚೌಧರಿಗೆ ಇದೊಂದೇ ಕೆಲಸ ಎಂದಿದ್ದರು. ಎಲ್ಲರನ್ನೂ ಹಾಳು ಮಾಡಿ ತಾವು ಮಜ ನೋಡುವುದು ಇವರ ಕೆಲಸ ಎಂದು ಕಿಡಿ ಕಾರಿದ್ದರು.
ಅನುಷ್ಕಾ ಕರಿಯರ್ ಹಾಳು ಮಾಡಲು ಹೊರಟಿದ್ದ ಕರಣ್ ಜೋಹರ್! ಶಾಕಿಂಗ್ ವಿಡಿಯೋ ವೈರಲ್
ಇದೀಗ ಮತ್ತೊಮ್ಮೆ ಕಂಗನಾ ಕರಣ್ ಜೋಹರ್ ವಿರುದ್ಧ ಕಿಡಿ ಕಾರಿದ್ದಾರೆ. ಕಂಗನಾ ತಮ್ಮ ಇನ್ಸ್ಟಾಗ್ರಾಮ್ (Instagram)ಸ್ಟೋರಿಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಕರಣ್ ಜೋಹರ್ ಅವರನ್ನು ಗುರಿಯಾಗಿಸಿದ್ದಾರೆ. ಈ ಹಿಂದೆ ಕರಣ್ ರಾಷ್ಟ್ರೀಯ ಟಿವಿಯಲ್ಲಿ ನನ್ನನ್ನು ಅನುಮಾನಿಸಿದ್ದರು. ಬೆದರಿಕೆ ಹಾಕುತ್ತಿದ್ದರು ಎಂದಿದ್ದಾರೆ. ಕರಣ್ ಜೋಹರ್ ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಕಂಗನಾ, "ಒಂದು ಕಾಲದಲ್ಲಿ ಚಾಚಾ ಚೌಧರಿ ಗಣ್ಯ ನೆಪೋ ಮಾಫಿಯಾ (Nepho Mafia) ಜೊತೆಗೆ ರಾಷ್ಟ್ರೀಯ ದೂರದರ್ಶನದಲ್ಲಿ ನನ್ನನ್ನು ಅವಮಾನಿಸಿ ಬೆದರಿಸಿದ್ದಾರೆ. ಇಂದು ನಾನು ಅವರ ಹಿಂದಿಯನ್ನು ನೋಡಬೇಕೆಂದು ಯೋಚಿಸಿದ್ದೇನೆ. ಈಗ ನಿಮ್ಮ ಹಿಂದಿ ಮಾತ್ರ ಸುಧಾರಿಸಿದೆ, ಮುಂದೆ ಏನಾಗುತ್ತದೆಯೋ ಎಂಬುದನ್ನು ನೋಡಿ ಎಂದು ಕಂಗನಾ ಬರೆದಿದ್ದಾರೆ.
ಇದೇ ವೇಳೆ ಪ್ರಿಯಾಂಕಾ ದೇಶ ತೊರೆಯಲು ಕಾರಣವನ್ನು ಕಂಗನಾ ಕರಣ್‌ಗೆ ತಿಳಿಸಿದ್ದಾರೆ. ಸ್ವಜನಪಕ್ಷಪಾತವನ್ನು ಹೆಚ್ಚಿಸಿದ್ದಕ್ಕಾಗಿ ಕಂಗನಾ ಹಲವು ಬಾರಿ ಕರಣ್ ಜೋಹರ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಇತ್ತೀಚೆಗೆ, ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ (Bollywood) ಮೂಲೆಗುಂಪಾಗಿದ್ದಾರೆ ಎಂದು ಬಹಿರಂಗಪಡಿಸಿದ ನಂತರವೂ ಕಂಗನಾ ಕರಣ್ ಜೋಹರ್ ವಿರುದ್ಧ ಆರೋಪ ಮಾಡಿದ್ದರು. ಪ್ರಿಯಾಂಕಾ ದೇಶ ತೊರೆಯಲು ಕರಣ್ ಕಾರಣ ಎಂದು ಕಂಗನಾ ಹೇಳಿಕೊಂಡಿದ್ದರು.
ಕಂಗನಾ, ಹೃತಿಕ್ ರೋಷನ್ ಲವ್ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್ ಮಸ್ಕ್ ಟ್ವೀಟ್!