ಅನುಷ್ಕಾ ಕರಿಯರ್ ಹಾಳು ಮಾಡಲು ಹೊರಟಿದ್ದ ಕರಣ್ ಜೋಹರ್! ಶಾಕಿಂಗ್ ವಿಡಿಯೋ ವೈರಲ್
ನಟಿ ಅನುಷ್ಕಾ ಶರ್ಮಾ ಅವರ ಕರೀಯರ್ ಹಾಳು ಮಾಡಲು ಹೋಗಿರುವುದಾಗಿ ನಿರ್ಮಾಪಕ ಕರಣ್ ಜೋಹರ್ ಹೇಳಿಕೊಂಡಿದ್ದು, ಕಂಗನಾ ಈಗ ವಾಗ್ದಾಳಿ ನಡೆಸಿದ್ದಾರೆ.
ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar) ಈಗ ಬಹಳ ವಿವಾದಗಳಿಂದಲೇ ಸುತ್ತುವರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ನ ಕೆಲವೊಂದು ಹುಳುಕುಗಳ ಬಗ್ಗೆ ಮಾತನಾಡಿ ಹಾಲಿವುಡ್ಗೆ ತಾವು ಹೋಗುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ಕಾರಣ, ಕರಣ್ ಜೋಹರ್ ಎನ್ನುವುದು ಸ್ಪಷ್ಟವಾಗಿತ್ತು. ಇಷ್ಟೇ ಅಲ್ಲದೇ ಕರಣ್ ಜೋಹರ್ ಅವರು ಈಗಾಗಲೇ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ. ನೆಪೋಟಿಸಂ ವಿಷ್ಯ ಸೇರಿದಂತೆ ಹಲವು ವಿಚಾರಗಳಿಗೆ ಕರಣ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಇನ್ನೋರ್ವ ನಟಿಯ ಸಿನಿ ಪಯಣವನ್ನು ಹಾಳು ಮಾಡಲು ಕರಣ್ ಜೋಹರ್ ಹೊರಟಿದ್ದರು ಎನ್ನುವ ಶಾಕಿಂಗ್ ಸಮಾಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ ರಣಾವತ್ ಈಗ ಕರಣ್ ಜೋಹರ್ ಬಗ್ಗೆ ಭಯಾನಕ ಕಮೆಂಟ್ ಮಾಡಿದ್ದಾರೆ. ನಟಿ ಅನುಷ್ಕಾ ಕುರಿತಂತೆ ಅವರು ಹೇಳಿರುವ ವಿಡಿಯೋ ಶೇರ್ ಮಾಡಿಕೊಂಡಿರುವ ಕಂಗನಾ, ನಾನು ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡ್ಬೇಕು ಎಂದು ಕೊಂಡಿದ್ದೆ ಎಂದು ಖುದ್ದು ಕರಣ್ ಹೇಳಿದ್ದಾರೆ.ಈ ಚಾಚಾ ಚೌಧರಿಗೆ ಇದೊಂದೇ ಕೆಲಸ ಎಂದಿದ್ದಾರೆ. ಎಲ್ಲರನ್ನು ಹಾಳು ಮಾಡಿ ತಾವು ಮಜ ನೋಡುವುದು ಇವರ ಕೆಲಸ ಎಂದು ಕಿಡಿ ಕಾರಿದ್ದಾರೆ.
2008ರಲ್ಲಿ ಯಶ್ ಚೋಪ್ರಾ ನಿರ್ಮಾಣ ಮಾಡಿದ್ದ ‘ರಬ್ ನೇ ಬನಾದಿ ಜೋಡಿ’ (Rab Ne Bana Di Jodi) ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಅನುಷ್ಕಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ನಿರ್ದೇಶಕ ಆದಿತ್ಯ ಚೋಪ್ರಾ ಸಿನಿಮಾ ಶುರುವಾಗುವುದಕ್ಕೂ ಮುನ್ನ ಅನುಷ್ಕಾ ಅವರ ಫೋಟೋಗಳನ್ನು ಕರಣ್ಗೆ ತೋರಿಸಿದ್ದರಂತೆ, ಆದರೆ ಕರಣ್ ಅವರಿಗೆ ಅನುಷ್ಕಾ ಇಷ್ಟವಾಗಿರಲಿಲ್ಲ. ಈ ಮಾತನ್ನು ಖುದ್ದು ಕರಣ್ ಜೋಹರ್ ಹೇಳಿದ್ದಾರೆ. ಅದೂ ಅವರು ಹೇಳಿದ್ದು ಈಗಲ್ಲ, ಬದಲಿಗೆ 2016ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ. ಕರಣ್ ಮತ್ತು ಅನುಷ್ಕಾ ಒಂದೇ ವೇದಿಕೆಯಲ್ಲಿದ್ದು, ಆ ಸಮಯದಲ್ಲಿ ಆದಿತ್ಯ ಚೋಪ್ರಾ ಅವರು ಮೊದಲ ಬಾರಿಗೆ ಫೋಟೋ ತೋರಿಸಿದಾಗ ನಾನು ಅನುಷ್ಕಾ ಅವರ ಸಿನಿ ಕೆರಿಯರ್ ನಾಶಮಾಡಬೇಕು ಎಂದುಕೊಂಡಿದ್ದೆ .ನನ್ನ ತಲೆಯಲ್ಲಿ ಬೇರೆ ಹೀರೋಯಿನ್ ಹೆಸರು ಇತ್ತು ಎಂದು ಕರಣ್ ಜೋಹರ್ ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ಅವಕಾಶ ವಂಚಿತಳಾದ ಪ್ರಿಯಾಂಕಾ, ಅವರಮ್ಮ ಹೇಳುವುದೇನು?
ಬೇಡ ಬೇಡ.. ಅನುಷ್ಕಾರನ್ನ (Anushka Sharma) ಸಿನಿಮಾಗೆ ಹಾಕಿಕೊಳ್ಳೋಕೆ ಹುಚ್ಚು ಹಿಡಿದಿದೆಯಾ? ಈ ಸಿನಿಮಾಗಾಗಿ ಅನುಷ್ಕಾ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ ಈ ಬಗ್ಗೆ ಕರಣ್ ಜೋಹರ್ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಈ ಮೂಲಕ ಅನುಷ್ಕಾ ಶರ್ಮಾ ಸಿನಿಮಾ ಬದುಕು ನಾಶವಾಗುತ್ತಿತ್ತು ಎಂದು ಮಾತನಾಡಿದ್ದರು. ರಿಲೀಸ್ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಸಿನಿಮಾ ನೋಡಿದ್ದೆ, ಆ ಚಿತ್ರದ ಯಶಸ್ಸನ್ನ ತಡೆಯಲಾಗಲಿಲ್ಲ. ಈ ವಿಚಾರವಾಗಿ ಅನುಷ್ಕಾ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಕರಣ್ ಜೋಹರ್ ಹೇಳಿದ್ದರು. ಅದನ್ನು ಅನುಷ್ಕಾ ಕೂಡ ತಮಾಷೆಯಾಗಿಯೇ ಸ್ವೀಕರಿಸಿದ್ದರು.
ಆದರೆ ಇದೀಗ ಪ್ರಿಯಾಂಕಾ ಚೋಪ್ರಾ ವಿಷಯದಲ್ಲಿ ಕರಣ್ ಜೋಹರ್ ವಿರುದ್ಧ ಗಂಭೀರ ಆರೋಪ ಬಂದಿರುವ ಹಿನ್ನೆಲೆಯಲ್ಲಿ 2016ರ ಈ ವಿಡಿಯೋವನ್ನು ಕಂಗನಾ ಶೇರ್ ಮಾಡಿಕೊಂಡಿದ್ದಾರೆ. ಈ ಚಾಚಾ ಚೌಧರಿಗೆ ಇದೊಂದೇ ಕೆಲಸ ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಕಂಗನಾ ಕಿಡಿ ಕಾರಿದ್ದಾರೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾಳನ್ನು ಬಾಲಿವುಡ್ನಿಂದ ಹೊರಗಿಡಲು ಕರಣ್ ಜೋಹರ್ ಬಹಳ ಪ್ರಯತ್ನ ಪಟ್ಟಿದ್ದರು, ಈಗ ಇನ್ನೊಬ್ಬರ ಸರದಿ ಎಂದು ಕಂಗನಾ ಟೀಕಿಸಿದ್ದಾರೆ. ಹೀಗೆ ಕರಣ್ ಜೋಹರ್ (Karan Johar) ಬಗ್ಗೆ ಯಾರು ಬೇಕಾದರೂ ನೆಗೆಟಿವ್ ಆಗಿ ಮಾತನಾಡಲಿ, ಅದಕ್ಕೆ ದನಿಗೂಡಿಸುವುದನ್ನು ರೂಢಿ ಮಾಡಿಕೊಂಡಿರುವ ಕಂಗನಾ ಈಗ ಮತ್ತೊಮ್ಮೆ ಕರಣ್ ವಿರುದ್ಧ ಕೆಂಡಾಮಂಡಲವಾಗಿದೆ.
Bhavana Ramanna: ದನಿ, ನಗು ಕೇಳಿ, ರೂಪ ನೋಡಿ ಛೇ ಎಲ್ಲಿಂದ ಕರ್ಕೊಂಡು ಬಂದ್ರಿ ಇವ್ಳನ್ನ ಅಂದಿದ್ರು...