ಕಂಗನಾ, ಹೃತಿಕ್​ ರೋಷನ್​ ಲವ್​ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್​ ಮಸ್ಕ್​ ಟ್ವೀಟ್​!

ಹಿಂದೊಮ್ಮೆ ಪ್ರೇಮಪಾಶದಲ್ಲಿ ಸಿಲುಕಿದ್ದ ಕಂಗನಾ ರಣಾವತ್​ ಹಾಗೂ ಹೃತಿಕ್​ ರೋಷನ್​ ಅವರ ಲವ್​ ಸ್ಟೋರಿ ಉದ್ಯಮಿ ಎಲಾನ್​ ಮಸ್ಕ್​ ಅವರಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಏನಿದು ಸ್ಟೋರಿ? 
 

Kangana Ranaut  recall her love affair with Hrithik Roshan and how film mafia was all ready to put her in jail

ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ಕಂಗನಾ ರಣಾವತ್​ (Kangana Ranaut) ಮತ್ತು ನಟ ಹೃತಿಕ್​ ರೋಷನ್​ ಅವರ ನಡುವಿನ ಲವ್​ ಸ್ಟೋರಿ ಚಿತ್ರಪ್ರಿಯರಿಗೆ ಹೊಸತೇನಲ್ಲ. ಮದುವೆಯಾದ ಮೇಲೂ ಹೃತಿಕ್​ ರೋಷನ್​ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್​ ರೋಷನ್​ (Hruthik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್​ ರೋಷನ್​ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್​ (Kangana Ranaut) ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ  ಡೇಟಿಂಗ್​ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.  

ಬಳಿಕ ಪ್ರೀತಿ ಪ್ರೇಮದ ಹೆಸರಿನಲ್ಲಿ ಹೃತಿಕ್‌ ತಮಗೆ ಮೋಸ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಕಂಗನಾ ಅವರೇ ತಮ್ಮನ್ನು ಪ್ರೀತಿಸುತ್ತಿದ್ದರು, ಆಕೆ ವಿಚ್ಛೇದನ ಕೊಡಿಸಲೂ ರೆಡಿಯಾಗಿದ್ದರು ಎಂದು ನಂತರ ಹೃತಿಕ್​ ರೋಷನ್​ ಆರೋಪಿಸಿದ್ದರು. ಈ ಬಾಲಿವುಡ್‌ ಸ್ಟಾರ್‌ಗಳ ಜಗಳ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.  ಇದು ಸುಮಾರು 2015-16ರ ನಡುವೆ ನಡೆದಿರುವ ಘಟನೆ. ಇದಾದ ಬಳಿಕವೂ ಇಬ್ಬರ ನಡುವಿನ ಮುಸುಕಿನ ಗುದ್ದಾಟವು ಮುಂದುವರೆದೇ ಇತ್ತು. ಕಂಗನಾ ಅವರಿಂದ ತಮಗೆ ನೂರಾರು ಈ-ಮೇಲ್‌ಗಳು ಬಂದಿವೆ ಎಂದು ಹೃತಿಕ್‌ 2016ರಲ್ಲಿ ಆರೋಪಿಸಿ  ಸೈಬರ್‌ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ನಂತರ ಪ್ರಕರಣವನ್ನು  ಮುಂಬೈ ಸೈಬರ್‌ ಕ್ರೈಂ ವಿಭಾಗದಿಂದ ಕ್ರೈಂ ಇಂಟೆಲಿಜನ್ಸ್‌ ಯುನಿಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಇದರ ನಡುವೆಯೇ ಇವರಿಬ್ಬರ ನಡುವೆ ಬ್ರೇಕ್​ ಅಪ್​ ಆಗಿದ್ದರೂ, ಹೃತಿಕ್​ ಅವರು ಪತ್ನಿ  ಸುಸೇನ್ ಖಾನ್ (Susen Khan) ಅವರಿಗೆ ವಿಚ್ಛೇದನ ನೀಡಿದರು.  ಮದುವೆಯಾಗಿ ಸುಮಾರು 14 ವರ್ಷಗಳ ಬಳಿಕ 2014 ರಲ್ಲಿ ಬಾಲಿವುಡ್​ನ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದ ಈ ಜೋಡಿ ದೂರವಾಗುವುದಾಗಿ ಘೋಷಿಸಿದರು. ಈ ಜೋಡಿಯ ವಿಚ್ಛೇದನಕ್ಕೆ 4 ವರ್ಷಗಳು ಬೇಕಾಯಿತು.  ಹೃತಿಕ್ ರೋಷನ್ ಬಳಿ ಸುಸೇನ್ 400 ಕೋಟಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರು. 

ಇಷ್ಟಾದರೂ ಸುಮ್ಮನಾಗದ ಹೃತಿಕ್​ ಕಂಗನಾ ಅವರ ವಿರುದ್ಧ ದೂರು ದಾಖಲಿಸಿ ಕೆಣಕಿದ್ದು, ನಟಿಯನ್ನು ಗರಂ ಮಾಡಿತ್ತು.  ಕಂಗನಾ ಟ್ವೀಟ್‌ ವಾರ್​ ಶುರು ಮಾಡಿದ್ದರು. 'ಇವನ ಕಣ್ಣೀರಿನ ಕಥೆ ಮತ್ತೆ ಶುರು ಆಯ್ತು. ನಮ್ಮ ಬ್ರೇಕಪ್‌ ಮತ್ತು ಆತನ ಡಿವೋರ್ಸ್‌ ಆಗಿ ಎಷ್ಟೋ ವರ್ಷಗಳು ಕಳೆದಿವೆ. ಆದರೆ ಅದನ್ನೆಲ್ಲ ಮರೆತು ಮುಂದುವರಿಯಲು ಆತ ತಯಾರಿಲ್ಲ. ಬೇರೆ ಮಹಿಳೆ ಜೊತೆ ಡೇಟಿಂಗ್‌ ಮಾಡಲೂ ಆತ ಸಿದ್ಧನಿಲ್ಲ. ನಾನು ನನ್ನ ವೈಯಕ್ತಿಕ ಬದುಕಿನಲ್ಲಿ ಭರವಸೆ ಕಂಡುಕೊಳ್ಳುತ್ತಿರುವಾಗಲೇ ಇವನು ಅದೇ ಹಳೇ ಡ್ರಾಮಾ (Drama) ಶುರುಮಾಡಿದ್ದಾನೆ. ಒಂದು ಸಣ್ಣ ಅಫೇರ್‌ಗಾಗಿ ಇನ್ನೂ ಎಲ್ಲಿಯವರೆಗೆ ಅಳುತ್ತೀಯಾ ಹೃತಿಕ್‌?' ಎಂದು ಕಂಗನಾ ಪ್ರಶ್ನಿಸಿದ್ದರು.  ತಮ್ಮ ಜೊತೆ ಹೃತಿಕ್‌ ತುಂಬ ಆಪ್ತವಾಗಿದ್ದರು ಎಂಬುದಕ್ಕೆ ಸಾಕ್ಷಿ ನೀಡುವಂತಹ ಕೆಲವು ಫೋಟೋಗಳನ್ನೂ ಕಂಗನಾ ಶೇರ್‌ ಮಾಡಿಕೊಂಡಿದ್ದರು. 

Kangana Ranaut: ಕಂಗನಾಗೆ ಉತ್ತಮ ಭವಿಷ್ಯವಿದೆ... ಆದರೆ ಖ್ಯಾತ ಜ್ಯೋತಿಷಿ ಹೇಳಿದ್ದೇನು?

ಇವೆಲ್ಲಾ ಆಗಿ ಹಲವು ವರ್ಷಗಳೇ ಆದರೂ ಒಬ್ಬರಿಗೊಬ್ಬರು ಹಾವು ಮುಂಗುಸಿಯಂತೆ ಈಗಲೂ ಇದ್ದಾರೆ.  'ಕ್ರಿಷ್‌ 3' ಮತ್ತು 'ಕೈಟ್ಸ್‌' ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿ ಫ್ಯಾನ್ಸ್​ ಅಚ್ಚುಮೆಚ್ಚಿನ ಜೋಡಿಯಾಗಿದ್ದ ಕಂಗನಾ-ಹೃತಿಕ್​ ಜೋಡಿಯ ವಾರ್​ ಇನ್ನೂ ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ತಿಂಗಳಷ್ಟೇ ನಟಿ, ಹೃತಿಕ್​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಟ್ವಿಟರ್​ನಲ್ಲಿ ಅಭಿಮಾನಿಗಳ ಜೊತೆ ಕಂಗನಾ ರಣಾವತ್​ ಅವರು ಪ್ರಶ್ನೋತ್ತರ ನಡೆಸಿದ್ದ  ವೇಳೆ ವ್ಯಕ್ತಿಯೊಬ್ಬರು ಹೃತಿಕ್​ ರೋಷನ್​ ಬಗ್ಗೆ ಪ್ರಶ್ನೆ ಕೇಳಿದ್ದರು.   ‘ಹೃತಿಕ್​ ರೋಷನ್​ ಮತ್ತು ದಿಲ್ಜಿತ್​ ದೋಸಾಂಜ್​ ಇವರಿಬ್ಬರಲ್ಲಿ ನಿಮ್ಮ ನೆಚ್ಚಿನ ನಟ ಯಾರು’ ಎಂದು ಕೇಳಿದ ಪ್ರಶ್ನೆಗೆ ಕಂಗನಾ ಅವರು ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ‘ಇವರಲ್ಲಿ ಒಬ್ಬರು ಆ್ಯಕ್ಷನ್​ ಮಾಡುತ್ತಾರೆ. ಮತ್ತೊಬ್ಬರು ವಿಡಿಯೋ ಸಾಂಗ್​ ಮಾಡುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರು ನಟಿಸುವುದನ್ನು ನಾನೆಂದೂ ನೋಡಿಲ್ಲ. ನೋಡಿದಾಗ ಹೇಳುತ್ತೇನೆ. ಅಂಥದ್ದೇನಾದರೂ ಆದರೆ ನನ್ನ ಗಮನಕ್ಕೆ ತನ್ನಿ’ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ. ಯಾರ ಹೆಸರನ್ನೂ ತೆಗೆದುಕೊಳ್ಳದೇ ಇದ್ದರೂ ಅವರು  ಹೃತಿಕ್​ ರೋಷನ್​ ಅವರನ್ನು ಗುರಿಯಾಗಿಟ್ಟುಕೊಂಡು ವ್ಯಂಗ್ಯ ಮಾಡಿದ್ದು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ.

ಈಗ ಈ ಹಳೆಯ ವಿಷಯವೆಲ್ಲಾ ಪ್ರಸ್ತಾಪವಾಗಲು ಕಾರಣ, ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾಗಿರುವ, ಉದ್ಯಮಿ ಎಲಾನ್​ ಮಸ್ಕ್​ ಅವರ ಟ್ವೀಟ್​ನಿಂದಾಗಿ. ಎಲಾನ್​ ಮಸ್ಕ್ (Elon musk)​ ಅವರ ಟ್ವೀಟ್​ಗೂ ಈ ಜೋಡಿಯ ಲವ್​ ಸ್ಟೋರಿಗೂ ಏನಪ್ಪಾ ಸಂಬಂಧ ಎಂದರೆ, ಎಲಾನ್​ ಮಸ್ಕ್​ ಅವರು ತಮ್ಮ ಟ್ವೀಟ್​ನಲ್ಲಿ, ಯಾವುದೋ ವ್ಯಕ್ತಿಯನ್ನು ನೀವು ತುಂಬಾ ಪ್ರೀತಿಸುತ್ತೀರಿ ಎಂದುಕೊಳ್ಳಿ. ಆದರೆ ಆ ವ್ಯಕ್ತಿಯು ನಿಮ್ಮನ್ನು ಪ್ರೀತಿಯ ಬಲೆಗೆ ಸಿಲುಕಿಸಿ, ನಿಮ್ಮ ಗಮನವನ್ನು ಬೇರೆಡೆ ಸೆಳೆದು ಜೀವನವನ್ನೇ ಹಾಳು ಮಾಡುವುದಕ್ಕಾಗಿಯೇ ಕೇಂದ್ರ ಗುಪ್ತಚರ ವಿಭಾಗದಿಂದ ಕಳುಹಿಸಲ್ಪಟ್ಟ ವ್ಯಕ್ತಿ ಎಂದಾಗ ಇದಕ್ಕಿಂತ ನಿಮ್ಮ ಜೀವನದಲ್ಲಿ ನೋವು ಇನ್ನಾವುದು ಬೇಕು? ಇಡೀ ಬದುಕೇ ನಶ್ವರ ಎನಿಸುತ್ತದೆ ಎಂಬ ಅರ್ಥದಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಕಂಗನಾ ರಣಾವತ್​, ಬಹುಶಃ ಇವರು ನನ್ನ ಜೀವನದ ಕುರಿತಾಗಿಯೇ ಬರೆದಿದ್ದಾರೆ ಎನ್ನಿಸುತ್ತದೆ ಎಂದಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸಲು ಹೇಗೆ ಸಿದ್ಧತೆ ಮಾಡಿಕೊಂಡಿದ್ದರು ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ. 

Bollywood Queen ಕಂಗನಾರ ಫ್ಲಾಪ್​ ಚಿತ್ರಗಳ ಲಿಸ್ಟ್​ ಬಿಡುಗಡೆ ಫ್ಯಾನ್ಸ್​ ಶಾಕ್​!
 

Latest Videos
Follow Us:
Download App:
  • android
  • ios