ಇನ್ ಸ್ಟಾದಲ್ಲಿ ಸ್ಕ್ರೋಲ್ ಮಾಡುವಾಗ ಸಡನ್ನಾಗಿ ಎದುರಾಗುತ್ತೆ ಬೆಂಕಿಯ ಚೆಂಡು ಕಂಗನಾ ರನೌತ್ ಫೋಟೋ. ಅರೆಕ್ಷಣ, ಎಲ್ಲೋ ಪ್ಲೇಬಾಯ್ ಫೋಟೋ ಮಿಸ್ ಆಗಿ ಬಂದುಬಿಡ್ತಾ ಅಂದುಕೊಳ್ಳಬೇಕು, ಆ ಪಾಟಿ ಹಾಟ್, ಸೆಕ್ಸಿ ಲುಕ್.

ಈ ಕಂಗನಾ ರಾನೌತ್ ಏನು ಅಂತ ಬಾಲಿವುಡ್ ಮಂದಿಗೆ ಇನ್ನೂ ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯವಾಗಿಲ್ಲ. ಸಿನಿಮಾ ಜಗತ್ತಿಗೆ ಬಂದ ಶುರುವಿನಲ್ಲಿ ಇಂಗ್ಲೀಷ್ ಬರಲ್ಲ, ಹಳ್ಳಿ ಹುಡುಗಿ ಎಂಬ ಕಾರಣ ಸಿಕ್ಕ ಸಿಕ್ಕವರೆಲ್ಲ ಅಪಹಾಸ್ಯ ಮಾಡಿದ ನೋವು ಈಕೆಯನ್ನು ಇನ್ನೂ ಕಾಡುತ್ತಿರಬೇಕು, ಅದಕ್ಕೇ ಈಕೆ ಆಗಾಗ ಬೆಂಕಿಯಂತೆ ಮಾತಾಡುತ್ತಾಳೆ ಅಂತ ಬಾಲಿವುಡ್ ನ ಸಂವೇದನಾಶೀಲರು ಅರ್ಥೈಸಿಕೊಳ್ಳುತ್ತಾರೆ. ಅಥವಾ ಈ 'ಕ್ವೀನ್' ಗೆ ಬಾಲಿವುಡ್ ನ ಪಾಲಿಷ್ ಡ್ ಸ್ವಭಾವ, ಕೃತಕತೆ ಇಷ್ಟವಾಗದೇ ಆಗ ತಾನಿರುವ ಹಾಗೇ ಯಾವ ಕೃತಕತೆ ಸೋಂಕಿಲ್ಲದೇ ಇದ್ದು ಬಿಡುತ್ತಾಳೋ ಏನೋ.

ದಪ್ಪಗಾಗಿ ಕರೀನಾ ರೀತಿ ಎಂದ ಕಂಗನಾ

ಕಂಗನಾ ಮಚ್ಚೆಯ ವಿಷಯಕ್ಕೆ ಬರೋ ಮುಂಚೆ ಇನ್ನೊಂದು ವಿಷಯ ಹೇಳ್ಬೇಕು. ಕಂಗನಾಗೊಬ್ಬ ಸಹೋದರಿ ಇದ್ದಾಳೆ, ರಂಗೋಲಿ ಅಂತ ಆಕೆಯ ಹೆಸರು ಅನ್ನೋದು ಹೆಚ್ಚಿನವರಿಗೆ ಗೊತ್ತು. ಆಕೆ ಇನ್ ಸ್ಟಾದಲ್ಲಿ ನಿನ್ನೆ ತಾನೇ ಒಂದು ಇಂಟೆರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾಳೆ. ಅದರ ಜೊತೆಗೆ ಸೀರೆಯುಟ್ಟ ಆಭರಣ ತೊಟ್ಟು ಮದುವೆ ಹೆಣ್ಣಿನಂತೆ ರೆಡಿಯಾದ ರಂಗೋಲಿ ಹಾಗೂ ಕಂಗನಾ ಫೋಟೋ ಸಹ ಇದೆ. ರಂಗೋಲಿ ಹೇಳಿದ ಕತೆ ಇದು.. 'ಹೊಸತಾಗಿ ಮನೆ ಕಟ್ಟಿದ್ದೇವೆ, ಲಾಕ್ ಡೌನ್ ಕಾರಣಕ್ಕೆ ಅದರ ಗ್ರಹಪ್ರವೇಶ ಮುಂದಕ್ಕೆ ಹೋಗುತ್ತಲೇ ಇದೆ. ಸಿಂಪಲ್ಲಾಗಿ ಪೂಜೆ ಮಾಡಿ ಗೃಹ ಪ್ರವೇಶ ಮಾಡೋದು, ಲಾಕ್ ಡೌನ್ ಮುಗಿದ ಮೇಲೆ ಗ್ರ್ಯಾಂಡ್ ಪಾರ್ಟಿ ಕೊಡೋದು ಅಂತ ಪ್ಲಾನ್ ಮಾಡಿಕೊಂಡೆವು. ಅವತ್ತು ಬೆಳಗ್ಗೆ ನನ್ನ ನೋಡಿ ಕಂಗನಾ ಕಿರುಚಿಕೊಂಡಳು. 'ಏನಿದು ಹೀಗಿದ್ಯಾ, ಇವತ್ತು ಗೃಹ ಪ್ರವೇಶ ಅಲ್ವಾ, ಇನ್ನೂ ರೆಡಿಯಾಗಿಲ್ವಾ?' ಅಂದಳು. ನಾನು ಟ್ರ್ಯಾಕ್ ಸೂಟ್ ನಲ್ಲಿದ್ದೆ. 'ಹೌದು, ಆದ್ರೆ ಯಾರೂ ಬರಲ್ಲ ಅಲ್ವಾ, ನಾವೇ ತಾನೇ..' ಅಂದೆ. ಆದರೆ ಅವಳು ಬಿಡಲಿಲ್ಲ. 'ನೋಡು, ಇವತ್ತು ನಿನ್ನ ಮನೆಯ ಗೃಹ ಪ್ರವೇಶ. ಬದುಕಿಡೀ ನೆನಪಿಟ್ಟುಕೊಳ್ಳಬೇಕಾದ ದಿನ. ಉಳಿದವರು ಬರಲಿ, ಬಿಡಲಿ, ನಿನ್ನ ಖುಷಿ ನಿನ್ನದು. ಇಂಥಾ ಟೈಮ್ ನಲ್ಲಿ ಗ್ರ್ಯಾಂಡ್ ಆಗಿ ರೆಡಿ ಆಗ್ಬೇಕು' ಅಂತ ನನಗೆ ಪೈಥಾನಿ ಸೀರೆ ಉಡಿಸಿದಳು. ವೆಡ್ಡಿಂಗ್ ಜ್ಯುವೆಲ್ಲರಿ ತೊಡಿಸಿದಳು. ಗಾರ್ಡನ್ ನಿಂದ ಹೂವು ಕಿತ್ತು ತಂದು ನನಗೆ ಮುಡಿಸಿದಳು. ಅವಳು ನನ್ನ ಹಳೆಯ ಕರ್ವಾ ಚೌತ್ ಸೀರೆ ಉಟ್ಟು, ಜ್ಯುವೆಲ್ಲರಿ ತೊಟ್ಟಳು. ಹೊಸ ಮನೆಯ ಪೂಜೆ ಬದುಕಿಡೀ ನೆನಪಿಡುವಂತೆ ನಡೆಯಿತು. ಇದಕ್ಕೆಲ್ಲ ಕಾರಣ ಕಂಗನಾ.

ತಾಯಿ ಗೌರಿ ಹಳೆ ಡ್ರೆಸ್‌ ಧರಿಸಿದ ಸುಹಾನಾ ಖಾನ್‌ಳ ಫೋಟೋ ವೈರಲ್‌

ಇಲ್ಲಿ ಕಂಗನಾ ವಾತ್ಸಲ್ಯಮಯಿಯಾಗಿ ಕಾಣುತ್ತಾಳೆ. ಇನ್ನೊಂದು ಘಟನೆಯಲ್ಲಿ ಕೆರಳಿದ ನಾಗಿನಿಯಂತಾಗಿದ್ದಳು.

ಇದೀಗ ಬಟ್ಟೆ ಮೇಲೆತ್ತಿ ಎದೆಯ ಮಿದುವಿನ ಕೆಳಗಿನ ಚೆಂದದ ಮಚ್ಚೆಯ ದರ್ಶನವನ್ನು ಅಭಿಮಾನಿಗಳಿಗೆ ಮಾಡಿಸಿದ್ದಾಳೆ. ಇನ್ ಸ್ಟಾದಲ್ಲಿರುವ ಈ ಫೋಟೋ ನೋಡಿ ದಂಗಾಗುವ ಸರದಿ ಅಭಿಮಾನಿಗಳದ್ದು. ಎಂಥಾ ಬೋಲ್ಡ್ ಫೋಟೋ ಅಂತ ಬಾಲಿವುಡ್ ಮಂದಿಯೆಲ್ಲ ಉದ್ಗರಿಸುತ್ತಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ಫೋಟೋ ಸಖತ್ ಶಾರ್ಪ್ ಆಗಿ ಕಂಗನಾಳನ್ನು ಸೆರೆ ಹಿಡಿದಿದೆ. ಗಾಢ ಬಣ್ಣದ ಟಾಪ್ ನ ಅಂಚು ಪಾರದರ್ಶಕ. ಆ ಭಾಗವನ್ನೇ ಮೇಲೆತ್ತಲಾಗಿದೆ. ಪಾರದರ್ಶಕವಾಗಿ ಟಾಪ್ ನಟಿಯ ಸೌಂದರ್ಯವನ್ನು ಕಲಾತ್ಮಕವಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಸಖತ್ ಬೋಲ್ಡ್ ಆಗಿರೋ ಈ ಫೋಟೋ ನಟಿಯ ಅದ್ಭುತ ಮೈಮಾಟಕ್ಕೆ ಕನ್ನಡಿ ಹಿಡಿಯುತ್ತೆ.

ದರ್ಶನ್, ಪುನೀತ್ ಜೊತೆ ಸಿನಿಮಾ ಮಾಡ್ತೀನಿ ಎಂದ ಶಿವಣ್ಣ..! 

ಜೊತೆಗೆ ಕಂಗನಾ ರನೌತ್ ಎಂಬ ಬೆಡಗಿಯ ಮಾದಕ ಮುಖವನ್ನೂ ಪರಿಚಯಿಸುತ್ತೆ. ಇತ್ತೀಚೆಗೆ ಹೆಚ್ಚಾಗಿ ಖಾದಿ, ಕಾಟನ್ ಸೀರೆಗಳಲ್ಲಿ, ಮೈಯೆಲ್ಲ ಮುಚ್ಚಿರುತ್ತಿದ್ದ ಹತ್ತಿ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈಕೆ ಅಪರೂಪಕ್ಕೆ ಹೀಗೆ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿರೋದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ರಾಕಿಂಗ್‌ ಸ್ಟಾರ್‌ನೇ ಮೀರಿಸುತ್ತಿದೆ ಮಕ್ಕಳ ಹವಾ; ಐರಾ- ಜೂನಿಯರ್‌ Y!