Asianet Suvarna News Asianet Suvarna News

20ಕೆಜಿ ತೂಕ ಹೆಚ್ಚಿಸ್ಕೊಂಡು ಕರೀನಾ ಕಪೂರ್‌ ರೀತಿ ಕಾಣಿಸುತ್ತಿರುವೆ ಎಂದ 'ತಲೈವಿ'!

'ತಲೈವಿ' ಪಾತ್ರಕ್ಕೆ 20 ಕೆಜಿ ತೂಕ ಗಳಿಸಿದ ಬಾಲಿವುಡ್‌ ಕಾಂಟ್ರೋವರ್ಸಿ ಕ್ವೀನ್ ಕಂಗನಾ ರಣಾವತ್‌. ಪಾತ್ರದ ಬಗ್ಗೆ ಹೇಳಿ ಎಂದರೆ ಕರೀನಾ ತೂಕ ಹೇಳೋದಾ? ಏನಂತೆ ಮತ್ತೆ ಈ ನಟಿಯದ್ದು?

Bollywood kangana ranaut compares her thalaivi body weight to kareena kapoor pregnancy
Author
Bangalore, First Published May 4, 2020, 2:23 PM IST
  • Facebook
  • Twitter
  • Whatsapp

ಬಾಲಿವುಡ್‌ ಚಿತ್ರರಂಗದ ಬೋಲ್ಡ್‌ ನಟಿ ಕಂಗನಾ ರಣಾವತ್‌ ಜಯಲಲಿತಾ ಬಯೋಪಿಕ್‌ನಲ್ಲಿ ಮಿಂಚಲು ವಿಭಿನ್ನವಾಗಿ ತಯಾರಿ ಮಾಡಿಕೊಂಡಿದ್ದರು. ಪಾತ್ರ ಬೇಡುವಂತೆ ತೂಕ ಹೆಚ್ಚಿಸಿಕೊಳ್ಳಲು, ನಿರ್ಮಾಪಕರು ಹಾಗೂ ನಿರ್ದೇಶಕರು ಡಿಮ್ಯಾಂಡ್‌ ಮಾಡಿದ್ದರು. ಚಿತ್ರದ ಫಸ್ಟ್ ಪೋಸ್ಟರ್‌ಗೆ ಅಭಿಮಾನಿಗಳಿಂದ ಬಂದ ನೆಗಟಿವ್ ಕಾಮೆಂಟ್‌ ಕಂಗನಾಳನ್ನು ಕುಗ್ಗಿಸಿತು.

ಹೌದು! ಸೇಮ್‌ ಜಯಲಲಿತಾ ರೀತಿಯಲ್ಲಿ ವಸ್ತ್ರ ಧರಿಸಿ ಪೋಸ್‌ ನೀಡಿದ ಕಂಗನಾ ನೋಡಲು ಆಲೂ ಬನ್‌ ತರ ಕಾಣಿಸುತ್ತಾರೆ, ಅಮ್ಮ ಹೀಗಿರಲಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದರು. ಪಾತ್ರಕ್ಕಾ ಇಷ್ಟೆಲ್ಲಾ ತಯಾರಿ ಮಾಡಿಕೊಂಡರೂ ಜನರು ಒಪ್ಪಿಕೊಳ್ಳುವುದಿಲ್ಲ ಎಂದರೆ ಏನು ಮಾಡುವುದು ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಆ ನಂತರ ಕೊಂಚ ಡಿಫರೆಂಟ್‌ ಮೇಕಪ್‌ ಮಾಡಿ ಚಿತ್ರದ ಟೀಸರ್‌ ಮೂಲಕ ಅಭಿಮಾನಿಗಳಿಗೆ ಚಿತ್ರದ ಸಣ್ಣ ಝಲಕ್‌ ನೀಡಿದ್ದರು.  ನಟಿ ಹಾಗೂ ರಾಜಕಾರಣಿ ಜಯಲಲಿತಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ಅಭಿಮಾನಿಗಳ ಪ್ರಶಂಸೆಯನ್ನು ಕಂಗನಾ ಪಡೆದುಕೊಂಡರು. ಆದರೆ ಹೆಚ್ಚಿಸಿಕೊಂಡ ದೇಹದ ತೂಕ?

'ತಲೈವಿ'ಗಾಗಿ 10 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ ರಾಣಾವತ್!

20 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ:

ಜಯಲಲಿತಾ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿರುವ ಕಂಗನಾ ಈ ಹಿಂದೆ 8-10 ಕೆಜಿ ಹೆಚ್ಚಿಸಿಕೊಂಡಿರುವುದಾಗಿ ಹೇಳಿದ್ದರು. ಆದರೆ ಪಾತ್ರ ಇನ್ನೂ ಡಿಮ್ಯಾಂಡ್ ಮಾಡುತ್ತಿರುವ ಕಾರಣ ಯಾವ ಡಯಟ್‌ ಫಾಲೋ ಮಾಡದೇ 20 ಕೆಜಿ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಕಂಗನಾ ಸಹೋದರಿ ರಂಗೋಲಿ ಟ್ಟೀಟ್‌ ಮಾಡಿದ್ದರು. 'ಕಡಿಮೆ ಅವಧಿಯಲ್ಲಿ ತೂಕ ಹೆಚ್ಚಿಸಿಕೊಂಡಿರುವ ಕಾರಣ ಕೊಲೆಸ್ಟ್ರಾಲ್‌ ಹೆಚ್ಚಾಗಿದೆ. ವೈದ್ಯರ ಸಹಾಯದಿಂದ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಲಾಗುತ್ತಿದೆ' ಎಂದಿದ್ದರು. 

ಖಾಸಗಿ ಸಂದರ್ಶನವೊಂದರಲ್ಲಿ ಪಾಲ್ಗೊಂಡ ಕಂಗನಾಳನ್ನು ತೂಕದ ಬಗ್ಗೆ ಪ್ರಶ್ನಿಸಿದಾಗ 'ಯಾವ ಡಯಟ್‌ ಪಾಲಿಸಿಲ್ಲ. ಅಷ್ಟೇ ಅಲ್ಲದೇ ವೈದ್ಯರು ನೀಡಿದ ಹಾರ್ಮೋನಲ್‌ ಮಾತ್ರೆಗಳನ್ನು ಸೇವಿಸಿ ನಾನು 20 ಕೆಜಿ ಹೆಚ್ಚಾಗಿರುವುದು. ತೂಕ ಮೆಂಟೈನ್ ಮಾಡಲು ಕಷ್ಟವಾಗುತ್ತಿದೆ. ಹೀಲ್‌ ಸ್ಲಿಪರ್‌ ಧರಿಸಿದರೆ ಬಾಡಿ ಬ್ಯಾಲೆನ್ಸ್ ಮಾಡಲು ಕಷ್ಟ.  ಕರೀನಾ ಕಪೂರ್ ಪ್ರೆಗ್ನೆನ್ಸಿಯಲ್ಲಿ 16 ಕೆಜಿ ಹೆಚ್ಚಾಗಿದ್ದರು. ಹಾಗೇ ಈಗ ನಾನು ಆಗುತ್ತಿರುವೆ. ನೋಡಿದರೆ ನಾನು ಪ್ರೆಗ್ನೆಂಟ್ ರೀತಿ ಕಾಣಿಸುವೆ' ಎಂದು ಹೇಳಿಕೊಂಡಿದ್ದಾರೆ.

'ತಲೈವಿ' ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಕಂಗಣಾ ಸಿನಿಮಾ ಪ್ರಚಾರ ಶುರುವಾಗುವ ಮುನ್ನ ತೂಕ ಇಳಿಸಿಕೊಳ್ಳಬೇಕೆಂದು ವರ್ಕೌಟ್‌ ಮಾಡುವ ವಿಡಿಯೋಗಳನ್ನು  ಡಿಜಿಟಲ್‌ ಟೀಂ ಪೇಜ್‌ನಲ್ಲಿ ಶೇರ್ ಮಾಡುತ್ತಿರುತ್ತಾರೆ. 'ತಲೈವಿ' ಜೂನ್‌ 26ರಂದು ರಿಲೀಸ್ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ.

ದಶಕದ ಕನಸು ನನಸು ಮಾಡಿಕೊಂಡ ಕಂಗನಾ!

ಇನ್ನು ಕಂಗನಾ ಬಾಡಿ ವೇಟ್‌ ವಿಚಾರದಲ್ಲಿ ಕರೀನಾ ಕಪೂರ್‌ ಅವರನ್ನು ಹೋಲಿಸಿರುವ ಕಾರಣ ತೈಮೂರ್‌ ಫ್ಯಾನ್ಸ್‌ ಗರಂ ಆಗಿದ್ದಾರೆ.  ಮಾತ್ರೆ ತಿಂದು ದಪ್ಪ ಆಗುವುದಕ್ಕೂ ಮಕ್ಕಳು ಹೋರುವ ಹೊಟ್ಟೆಗೂ ವ್ಯತ್ಯಾಸವಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸುಮ್ಮನೆ ತಾವು ಒಂದು ಪಾತ್ರಕ್ಕೆ ಮಡಿರುವ ಶ್ರಮದ ಬಗ್ಗೆ ಹೇಳಿ ಕೊಳ್ಳುವ ಬದಲು, ಕರೀನಾ ಕಪೂರ್‌ ಅವರಿಗೆ ಹೋಲಿಸಿಕೊಳ್ಳುವ ಅಗತ್ಯವೇನಿತ್ತು? ಅದಕ್ಕೆ ಹೇಳುವುದು ಈ ಬಾಲಿವುಡ್ 'ಕ್ವೀನ್' ಸುಖಾಸುಮ್ಮನೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ ಎನ್ನುವುದು. ಈ ಹಿಂದೆ ಹೃತಿಕ್ ರೋಷನ್ ಅವರೊಂದಿಗೂ ಸಿಕ್ಕಾಪಟ್ಟೆ ಗಲಾಟೆ ಮಾಡಿಕೊಂಡಿದ್ದರು ಈ ಬಾಲಿವುಡ್ ಬೆಡಗಿ. 

ದೇಶ ಪ್ರೇಮ ಹೆಚ್ಚಿಸುವ ಚಿತ್ರ ಮಣಿಕರ್ಣಿಕಾದಲ್ಲಿ ನಟಿಸಿದ ಕಂಗನಾ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದರು. ಪಾಂಗಾ, ಕ್ರಿಶ್3, ತನು ವೆಡ್ಸ್ ಮನು, ಜಡ್ಜಮೆಂಟಲ್ ಹೈ ಕ್ಯಾ, ರಂಗೂನ್ ಮುಂತಾದ ಚಿತ್ರಗಳಲ್ಲಿ ಈ ನಟಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. 

Follow Us:
Download App:
  • android
  • ios