ಓಂ ಸಿನಿಮಾದ ಬೆಳ್ಳಿ ಹಬ್ಬದ ಪ್ರಯುಕ್ತ ಫೇಸ್‌ಬುಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಲೈವ್ ಬಂದಿದ್ದಾರೆ. ಓಂ ಸಿನಿಮಾದ ಬೆಳ್ಳಿ ಹಬ್ಬದ ಖುಷಿ ಹಂಚಿಕೊಂಡ ಅವರು ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರ ತಿಳಿಸಿದ್ದಾರೆ.

ದರ್ಶನ್, ಪುನೀತ್ ಜೊತೆ ಸಿನಿಮಾ ಮಾಡ್ತೀನಿ ಎಂದು ಶಿವರಾಜ್‌ ಕುಮಾರ್ ತಿಳಿಸಿದ್ದಾರೆ. ಓಂ ಸಿನಿಮಾದ ಬೆಳ್ಳಿ ಹಬ್ಬದ ಪ್ರಯುಕ್ತ ಫೇಸ್ ಬುಕ್ ಲೈವ್‌ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

ಕವನ ರಚಿಸಿದ್ರು ಬಿಗ್‌ಬಾಸ್: ಮಗಳ ಬರ್ತ್‌ಡೇಗೆ ಕಿಚ್ಚ ಸ್ಪೆಷಲ್ ಗಿಫ್ಟ್

ಓಂ ಶಿವಣ್ಣನ ಫಿಲ್ಮೋಗ್ರಫಿಯಲ್ಲಿ ಮೈಲುಗಲ್ಲಿನ‌ ಸಿನಿಮಾಗಳಲ್ಲಿ ಒಂದು. ಈ ಸಂಭ್ರಮದ ಅಂಗವಾಗಿ ಫೇಸ್‌ಬುಕ್‌ನಲ್ಲಿ ಅಭಿಮಾನಿಗಳೊಟ್ಟಿಗೆ ಶಿವಣ್ಣ ಮಾತನಾಡಿದ್ದಾರೆ. ಈ ಸಂದರ್ಭ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ಸಂದರ್ಭ ಓಂ ಸಿನಿಮಾದ ಶೂಟಿಂಗ್ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿಗಳ ದರ್ಶನ್ ಮತ್ತು ಪುನೀತ್ ಜೊತೆ ನಟಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ಶಿವಣ್ಣ ಖಂಡಿತ ದರ್ಶನ್ ಜೊತೆ ಸಿನಿಮಾ ಮಾಡ್ತೀನಿ. ಒಂದೊಳ್ಳೆ ಕಥೆ ಬಂದಲ್ಲಿ ಪಕ್ಕಾ ನಟಿಸ್ತೀನಿ ಅಂತಾ ತಿಳಿಸಿದ್ದಾರೆ.

KGF 2 ಸಂಜಯ್ ದತ್ ಅಧೀರ ಲುಕ್ ರಿವೀಲ್..!

ಪುನೀತ್ ಜೊತೆಗೂ ನಟಿಸೋ ಆಸೆಯಿದೆ. ಒಳ್ಳೆಯ ಕಥೆ ಸಿಕ್ಕರೇ ಇಬ್ಬರು ನಟಿಸ್ತೀವಿ. ಅದು ನಮ್ಮ ಬ್ಯಾನರ್‌ನಲ್ಲಿಯೇ ಸಿನಿಮಾ ನಿರ್ಮಿಸ್ತೀವಿ ಅಂತಾ ತಿಳಿಸಿದ್ದಾರೆ. ಜೊತೆಗೆ ಸುದೀಪ್‌ ಜೊತೆಗೂ ಮತ್ತೊಮ್ಮೆ ನಟಿಸೋಕೆ ನಾನು ರೆಡಿ ಅಂತಾ ಹೇಳಿದ್ದಾರೆ.