ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ ನಟಿ ಅಂಜಲಿ ಅರೋರಾ ಮತ್ತೊಂದು ವಿಡಿಯೋ ವೈರಲ್. ಎಮ್‌ಎಮ್‌ಎಸ್‌ ಎಂದು ಕಾಲೆಳೆ ನೆಟ್ಟಿಗರು....

ಟಿಕ್‌ ಟಾಕ್‌ ಸ್ಟಾರ್ - ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಅಂಜಲಿ ಅರೋರಾ ಬಾಲಿವುಡ್‌ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ ಮೇಲೆ ಏಕ್ತಾ ಕಪೂರ್ ಲಾಕಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡರು. ಅಲ್ಲಿಂದ ಅಂಜಲಿ ಪಾಪ್ಯೂಲಾರಿಟಿ ಹೆಚ್ಚಾಗಿ ಸಿಕ್ಕಾಪಟ್ಟೆ ಆಫರ್‌ಗಳನ್ನು ಪಡೆದುಕೊಂಡರು. ಈಗ ಅಂಜಲಿ ಮತ್ತೊಂದು ಡ್ಯಾನ್ಸ್‌ ವಿಡಿಯೋ ವೈರಲ್ ಆಗುತ್ತಿದೆ. ಅಂಜಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದ ಕಾರಣ ಎಮ್‌ಎಮ್‌ಎಸ್‌ ಲೀಕ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ರಾತ್ರೋರಾತ್ರಿ ಕಚ್ಚಾ ಬಾದಾಮ್ ಹಾಡಿಗೆ ಡ್ಯಾನ್ಸ್‌ ಮಾಡಿ ವೈರಲ್ ಆದ ಅಂಜಲಿ ಈಗ ಕ್ಯಾಮರೂನಿಯನ್-ಅಮೇರಿಕನ್ ಗಾಯಕ ಲಿಬಿಯಾಂಕಾ ಫೊಂಜಿ ಜನಪ್ರಿಯ ಹಾಡು ಪೀಪಲ್‌ಗೆ ರೀಲ್ಸ್‌ ಮಾಡಿದ್ದಾರೆ. ಪಿಂಕ್‌ ತುಂಡು ಬಟ್ಟೆ ಧರಿಸಿರುವ ಅಂಜಲಿ ಕುತ್ತಿಗೆಗೆ ಕಪ್ಪು ಶಾಲು ಧರಿಸಿದ್ದಾರೆ. ಇಂಗ್ಲಿಷ್ ಹಾಡಿಗೆ ಪಕ್ಕಾ ಇಂಡಿಯನ್‌ ಸ್ಟೈನಲ್ಲಿ ಸ್ಟೆಪ್‌ ಹಾಕಿದ್ದಾರೆ. ಆದರೆ ಇಲ್ಲಿ ಫೇಮಸ್ ಅಗುತ್ತಿರುವುದು ಅಂಜಲಿ ನೃತ್ಯವಲ್ಲ ಧರಿಸಿರುವ ಬಟ್ಟೆ. ಡ್ಯಾನ್ಸ್‌ ಮಾಡುವಾಗ ಅಂಜಲಿ ಧರಿಸಿರುವ ಇನ್ನರ್‌ವೇರ್‌ ಕಪ್ಪು ಚಡ್ಡಿ ಕಾಣಿಸುತ್ತಿದೆ. ಜನಪ್ರಿಯತೆ ಪಡೆಯಲು ಈ ರೀತಿ ಶೋಕಿ ಮಾಡಬಾರದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

ಎಂಎಂಎಸ್ ವೈರಲ್ ಆದ ಎರಡನೇ ದಿನವೇ ಶೂಟಿಂಗ್‌ಗೆ ಹಾಜರಾದ ನಟಿ

ಅಂಜಲಿ ವಿಡಿಯೋ ಅಪ್ಲೋಡ್‌ ಆಗಿ ದಿನ ಕಳೆದಿಲ್ಲ ಆಗಲೇ 1.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. 5 ಲಕ್ಷ ಕಾಮೆಂಟ್ಸ್‌ ಬಂದಿದೆ. ಎಮ್‌ಎಮ್‌ಎಸ್‌ ವಿಡಿಯೋ ಲೀಕ್ ಆಗಿರುವುದು ಮರೆತಿರಬೇಕು ನೀನು ಅದಿಕ್ಕೆ ಮತ್ತೊಮ್ಮೆ ಎಲ್ಲಾ ತೋರಿಸುತ್ತಿರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಂಜಲಿ ಎಷ್ಟೇ ಫೇಮಸ್ ಆದರೂ ಅವರ ಎಮ್‌ಎಮ್ಎಸ್‌ ಘಟನೆ ಯಾರೂ ಮರೆಯುವುದಿಲ್ಲ. 

2022ರಲ್ಲಿ ಅತಿ ಹೆಚ್ಚು ಸರ್ಚ್‌:

ಹೌದು! ಗೂಗಲ್ ಇಂಡಿಯಾ 2022 ರಲ್ಲಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು ಅದರಲ್ಲಿ ಅಂಜಲಿ ಅರೋರಾ 6ನೇ ಸ್ಥಾನದಲ್ಲಿದ್ದರು. ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಸೆಕ್ಸ್‌ ಕ್ಲಿಪ್‌ನಿಂದಾಗಿ ಅಂಜಲಿ ಬೆಳಕಿಗೆ ಬಂದರು. ಈ ವೀಡಿಯೊ ಕ್ಲಿಪ್‌ನಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣುವ ಹುಡುಗಿ ಅಂಜಲಿ ಅರೋರಾ ಎಂದು ಅಂತರ್ಜಾಲದಲ್ಲಿ ಅನೇಕ ಬಳಕೆದಾರರು ಹೇಳಿಕೊಂಡಿದ್ದಾರೆ.ಅಂಜಲಿ ಅರೋರಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟಾರ್ಗೆಟ್ ಮಾಡಲಾಗಿದೆ. ಆದರೆ, ಈ ಟ್ರೋಲಿಂಗ್ ನೋಡಿದ ಅಂಜಲಿ ಮೌನ ಮುರಿದಿದ್ದು, ಇದು ಮಾರ್ಫಡ್ ವಿಡಿಯೋವಾಗಿದ್ದು, ಯಾರೋ ತಮ್ಮ ಹೆಸರಿಗೆ ಚ್ಯುತಿ ತರಲು ಇದನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ. ಅಂಜಲಿ ಅರೋರಾ ಮೂಲತಃ ದೆಹಲಿಯವರು. 'ಕಚ್ಚಾ ಬಾದಮ್' ಹಾಡುವುದರ ಜೊತೆಗೆ, ಅವರು ಕಂಗನಾ ರೌನತ್‌ ಅವರ ರಿಯಾಲಿಟಿ ಶೋ 'ಲಾಕಪ್ ಇಂಡಿಯಾ' (Lock Up India) ಕಾರಣದಿಂದ ಕೂಡ ಹೆಸರುವಾಸಿಯಾಗಿದ್ದಾರೆ, ಅಲ್ಲಿ ಅವರು ಸ್ಪರ್ಧಿಯಾಗಿ ಕಾಣಿಸಿಕೊಂಡರು ಮತ್ತು ಮುನಾವರ್ ಫಾರೂಕಿ ಜೊತೆಯ ನಿಕಟತೆಯು ಸುದ್ದಿಯಾಗಿತ್ತು.

View post on Instagram