ಕ್ಯಾಲಿಫೋರ್ನಿಯಾದ ಜಿಮ್ ಒಂದರಲ್ಲಿ ಬಾಲಿವುಡ್ ಖ್ಯಾತ ನಟ, ಜೋಧಾ ಅಕ್ಬರ್ ಖ್ಯಾತಿಯ ಅಮನ್ ಧಲಿವಾಲ್ ಮೇಲೆ ಮಾಡಲಾಗಿದೆ. 

ಬಾಲಿವುಡ್ ಖ್ಯಾತ ನಟ, ಜೋಧಾ ಅಕ್ಬರ್ ಖ್ಯಾತಿಯ ಅಮನ್ ಧಲಿವಾಲ್ ಕ್ಯಾಲಿಫೋರ್ನಿಯಾದಲ್ಲಿ ಹಲ್ಲೆಗೆ ಒಳಗಾಗಿದ್ದಾರೆ. ಜಿಮ್ ‌ನಲ್ಲಿ ವರ್ಕೌಟ್ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಕೊಡಲಿ ಸರಿಯಾಗಿ ಥಳಿಸಿ ಹಲ್ಲೆ ನಡೆಸಿದ್ದಾರೆ. ಅಮನ್ ಧಲಿವಾಲ್‌ಗೆ ಸಿಕ್ಕಾಪಟ್ಟೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅಮನ್ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜಾಬಿ ಮೂಲದ ನಟ ಅಮನ್ ಪಂಜಾಬಿ ಸಿನಿಮಾ ಸೇರಿದಂತೆ ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ತಲೆ, ಎದೆ, ಕುತ್ತಿಗೆ ಮತ್ತು ಕೈಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಿಕ್ಕಾಪಟ್ಟೆ ಗಾವಾಗಿದ್ದರೂ ಆರೋಪಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ನಟ ಅಮನ್ ಯಶಸ್ವಿಯಾಗಿದ್ದಾರೆ. ವರದಿಗಳ ಪ್ರಕಾರ ನಟ ಅಮನ್ ಕ್ಯಾಲಿಫೋರ್ನಿಯಾದ ಗ್ರ್ಯಾಂಡ್ ಓಕ್ಸ್ ನಲ್ಲಿರುವ ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅನಾಮಧೇಯ ಕಾರಣಕ್ಕಾಗಿ ಕೊಲಿಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 

ಗೋವಾದಲ್ಲಿ ಪ್ರವಾಸಿಗರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಹೊಟೇಲ್ ಸಿಬ್ಬಂದಿ

ನಟ ಅಮನ್ ಮಾಜಿ ಶಿರೋಮಣಿ ಅಕಾಲಿ ದಳದ ಸದಸ್ಯ ಮಿಥು ಸಿಂಗ್ ಕಹ್ನೆಕೆ ಅವರ ಮಗ. ದಾಳಿಯ ಉದ್ದೇಶ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಜನಾಂಗಿಯ ದಾಳಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ದಾಳಿಕೋರನು ನೀಲಿ ಸ್ವೆಟ್‌ಶರ್ಟ್ ಧರಿಸಿದ್ದು ನಟನ ತೋಳನ್ನು ಹಿಡಿದುಕೊಂಡು ಕೊಡಲಿಯಿಂದ ಹಲ್ಲೆ ಮಾಡುವ ದೃಶ್ಯಗಳು ಕಂಡುಬರುತ್ತಿದೆ. ಬಳಿಕ ಅಮನ್ ಕೂಡ ತಿರುಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ಮಗುವಿನ ಕೈಯಿಂದ ಆಕಸ್ಮಿಕವಾಗಿ ಹಾರಿದ ಗುಂಡು: 4 ವರ್ಷದ ಅಕ್ಕ ಸಾವು

ನಟ ಅಮನ್ ಪಂಜಾಬಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಲವಾರು ಪಂಜಾಬಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋಧಾ ಅಕ್ಬರ್, ಬಿಗ್ ಬ್ರದರ್ ಮತ್ತು ಇತರ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಂಗ್ಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಸಾಂತಾ ಅನಾದ ನಿವಾಸಿ ರೊನಾಲ್ಡ್ ಚಂದ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.