ಗೋವಾದಲ್ಲಿ ಹೊಟೇಲ್ ಸಿಬ್ಬಂದಿ ದೆಹಲಿಯಿಂದ ಪ್ರವಾಸ ಬಂದಿದ್ದ ಕುಟುಂಬವೊಂದರ ಮೇಲೆ ಚಾಕು ಹಾಗೂ ಕತ್ತಿಗಳಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ (Pramod Sawant) ಸೂಚಿಸಿದ್ದಾರೆ.
ಪಣಜಿ: ಗೋವಾದಲ್ಲಿ ಹೊಟೇಲ್ ಸಿಬ್ಬಂದಿ ದೆಹಲಿಯಿಂದ ಪ್ರವಾಸ ಬಂದಿದ್ದ ಕುಟುಂಬವೊಂದರ ಮೇಲೆ ಚಾಕು ಹಾಗೂ ಕತ್ತಿಗಳಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ (Pramod Sawant) ಸೂಚಿಸಿದ್ದಾರೆ. ಹಲ್ಲೆಗೊಳಗಾದ ಕುಟುಂಬದ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಗೋವಾದ ಅಂಜುನಾ ಪ್ರದೇಶದಲ್ಲಿ (Anjuna area) ಈ ಘಟನೆ ನಡೆದಿದ್ದು, ಜತಿನ್ ಶರ್ಮಾ (Jatin Sharma) ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ( Instagram) ಈ ವಿಚಾರ ತಿಳಿಸಿದ್ದಾರೆ.
ಇದಾದ ಬಳಿಕ ಹೊಟೇಲ್ ಸಿಬ್ಬಂದಿಯ ಬಗ್ಗೆ ಜತಿನ್ ಅವರು ಹೊಟೇಲ್ ವ್ಯವಸ್ಥಾಪಕರಿಗೆ ದೂರು ನೀಡಿದ್ದು, ಹಲ್ಲೆ ಮಾಡಿದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜತಿನ್ ಅವರ ಕುಟುಂಬದ ಮೇಲೆ ಹೊಟೇಲ್‌ನ ನಾಲ್ವರು ಸಿಬ್ಬಂದಿ ಹಲ್ಲೆ ಮಾಡಿದ್ದರು. ಅಂಜುನಾ ಪ್ರದೇಶದ ಪೊಲೀಸರು ಆರಂಭದಲ್ಲಿ ಸೆಕ್ಷನ್ 324 ರ ಅಡಿಯಲ್ಲಿ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ನಂತರ ಸೆಕ್ಷನ್ 307ರನ್ನು ಸೇರಿಸಿ ಎಫ್ಐಆರ್ (FIR) ದಾಖಲಿಸಿದ್ದರು. ಈ ಹಲ್ಲೆ ವಿಚಾರ ಉನ್ನತಾಧಿಕಾರಿಗಳ ಗಮನ ಸೆಳೆದ ನಂತರ ಕಟ್ಟುನಿಟ್ಟಿನ ಕ್ರಮಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಆದೇಶಿಸಿದ್ದರು. ಇದಾದ ಬಳಿಕ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಕಿರು ಮೃಗಾಲಯಕ್ಕೆ ಬೆಂಗಾಲ್ ಟೈಗರ್ಸ್ ಎಂಟ್ರಿ, ಪುಳಕಿತರಾದ ಪ್ರವಾಸಿಗರು
ಘಟನೆಗೆ ಸಂಬಂಧಿಸಿದಂತೆ ಗೋವಾ ಸಿಎಂ ಟ್ವಿಟ್ ಮಾಡಿದ್ದು, 'ಅಂಜುನಾದಲ್ಲಿ ನಡೆದ ಹಿಂಸಾತ್ಮಕ ಘಟನೆ ಆಘಾತಕಾರಿ ಮತ್ತು ಅಸಹನೀಯವಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇಂತಹ ಸಮಾಜ ವಿರೋಧಿ ಶಕ್ತಿಗಳು ರಾಜ್ಯದ ಜನರ ಶಾಂತಿ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತಿದೆ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ.
ಅಬ್ಬಿಫಾಲ್ಸ್ ಪ್ರವಾಸಿಗರ ಟಿಕೆಟ್ ಕೌಂಟರಿಗೆ ಬೀಗ ಹಾಕಿದ ತೋಟದ ಮಾಲೀಕರ ವಿರುದ್ಧ ದೂರು ದಾಖಲು