ಮೂರು ವರ್ಷದ ಹೆಣ್ಣು ಮಗುವಿನ ಕೈಯಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಪರಿಣಾಮ ಮಗುವಿನ ಸಹೋದರಿ ಈ ಗುಂಡಿಗೆ ಬಲಿಯಾಗಿದ್ದು, ಪ್ರಾಣ ಕಳೆದುಕೊಂಡಿದ್ದಾಳೆ.
ನ್ಯೂಯಾರ್ಕ್: ಮೂರು ವರ್ಷದ ಹೆಣ್ಣು ಮಗುವಿನ ಕೈಯಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಪರಿಣಾಮ ಮಗುವಿನ ಸಹೋದರಿ ಈ ಗುಂಡಿಗೆ ಬಲಿಯಾಗಿದ್ದು, ಪ್ರಾಣ ಕಳೆದುಕೊಂಡಿದ್ದಾಳೆ. ಭಾನುವಾರ ರಾತ್ರಿ ಅಮೆರಿಕಾದ ಟೆಕ್ಸಾಸ್‌ನ ಹ್ಯಾರೀಸ್ ಕೌಂಟಿ ಬಳಿ ಈ ಅವಘಡ ಸಂಭವಿಸಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಶೆರಿಫ್ ಇಡಿ ಗೊಂಜಲ್ಸ್ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದಾರೆ.
ಟಾಮ್‌ಬಾಲ್ ಪಾರ್ಕ್‌ವೇ (Tomball Parkway) ಸಮೀಪದ ಬಮ್ಮೆಲ್ ನಾರ್ತ್ ಹಸ್ಟನ್ ರಸ್ತೆಯ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆಯುವ ವೇಳೆ ಐವರು ದೊಡ್ಡವರು ಕೂಡ ಇದ್ದರು ಎಂದು ತಿಳಿದು ಬಂದಿದೆ. ಅವರೆಲ್ಲರೂ ಕುಟುಂಬ ಸ್ನೇಹಿತರಾಗಿದ್ದರು ಆಕಸ್ಮಿಕ ಗುಂಡಿನ ದಾಳಿಯಿಂದ ಪ್ರಾಣ ಕಳೆದುಕೊಂಡ ಹುಡುಗಿ ಈ ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ ವಾಸವಿದ್ದರು ಎಂದು ಶೆರಿಫ್ ಟ್ವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಬ್ಬರು ಮಕ್ಕಳು ಜೊತೆಯಾಗಿ ಆಟವಾಡುತ್ತಿದ್ದು, ಈ ವೇಳೆ ಮೂರು ವರ್ಷದ ಮಗುವಿನ ಕೈಗೆ ಗನ್ ಸಿಕ್ಕಿದೆ. ಅದು ಆಟವಾಡುತ್ತಾ 4 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿದ್ದು, 4 ವರ್ಷದ ಮಗು ಸಾವನ್ನಪ್ಪಿದೆ.
ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಅಸ್ಟ್ರೇಲಿಯಾ ಪೊಲೀಸರು..!
ಈ ಮಕ್ಕಳ ಪೋಷಕರು ಮಕ್ಕಳಿಬ್ಬರನೇ ಕೋಣೆಯಲ್ಲಿ ಬಿಟ್ಟು ಬೇರೆ ಕೆಲಸದಲ್ಲಿ ತೊಡಗಿದ್ದಾಗ ಈ ಅವಾಂತರ ನಡೆದಿದೆ. ಮೂರು ವರ್ಷದ ಮಗುವಿನ ಕೈಗೆ ಲೋಡೆಡ್ ಗನ್ ಸಿಕ್ಕಿದೆ. ಈ ವೇಳೆ ಮಗು ಗುಂಡು ಹಾರಿಸಿದ್ದು, ಆಕೆಗಿಂತ ಒಂದು ವರ್ಷ ದೊಡ್ಡವಳಾದ ಸಹೋದರಿ ಪ್ರಾಣ ಕಳೆದುಕೊಂಡಿದ್ದಾಳೆ. ಗುಂಡಿನ ಸದ್ದು ಕೇಳಿ ಕೋಣೆಗೆ ಓಡಿ ಬಂದ ಪೋಷಕರು ಆಘಾತಗೊಂಡಿದ್ದು, ನಂತರ ತುರ್ತು ಸಹಾಯವಾಣಿಗೆ (emergency number) ಕರೆ ಮಾಡಿದ್ದಾರೆ. ಇದೊಂದು ಉದ್ದೇಶವಿಲ್ಲದ ಆಕಸ್ಮಿಕ ಘಟನೆಯಾಗಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಪುಲ್ವಾಮಾದಲ್ಲಿ ಗುಂಡಿನ ದಾಳಿ: ಉಗ್ರರ ಗುಂಡಿಗೆ ಮತ್ತೊಬ್ಬರು ಕಾಶ್ಮೀರಿ ಪಂಡಿತರ ಬಲಿ
