ಮೈ ಹೂಂ ನಾ ಚಿತ್ರದ ‘ತುಮ್ಸೆ ಮಿಲ್ಕೆ ದಿಲ್ ಕಾ ಜೋ ಹಾಲ್’ ಹಾಡಿನಲ್ಲಿ ಇಂಗ್ಲಿಷ್​ ಶಬ್ದ ಸೇರಿಸಿದಾಗ ಏನಾಯ್ತು? ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ  

ಚಿತ್ರ ಯಾವುದೇ ಇರಲಿ, ಕೆಲವೊಂದು ಚಿತ್ರಗಳ ಹಾಡುಗಳು ಸಿಕ್ಕಾಪಟ್ಟೆ ಇಷ್ಟ ಆಗಿಬಿಡುತ್ತವೆ. ಅದು ಯಾಕೆ, ಏನು ಎಂದು ತಿಳಿಯುವುದೇ ಇಲ್ಲ. ಅದೆಷ್ಟೋ ಬಾರಿ ಚಿತ್ರಗಳು ಫ್ಲಾಪ್​ ಆದರೂ ಕೆಲವು ಹಾಡುಗಳಿಂದ ಜನಮನ್ನಣೆ ಗಳಿಸುವುದು ಉಂಟು. ಕೆಲವೊಂದು ಸಿನಿಮಾ ಹಾಡುಗಳನ್ನು ರಚಿಸುವ ಸಂದರ್ಭದಲ್ಲಿ ಕುತೂಹಲ ಘಟನೆಗಳೂ ನಡೆಯುವುದು ಉಂಟು. ಇಂತಹ ಹಾಡುಗಳು ಬರೆಯುವಾಗ ಸಾಹಿತಿಗಳು ಏನೆಲ್ಲಾ ಯೋಚನೆಗಳನ್ನು ಹೊಂದಿರುತ್ತಾರೆ ಮತ್ತು ಈ ಹಾಡಿನ ಸಾಹಿತ್ಯವನ್ನು ಬರೆದ ನಂತರ ಇದಕ್ಕೆ ಸಂಗೀತವನ್ನು ಸಂಯೋಜಿಸುವಾಗ ಸಂಗೀತ ನಿರ್ದೇಶಕರು (Music Director) ಹೇಗೆ ಪ್ರತಿಕ್ರಿಯಿಸಿರುತ್ತಾರೆ ಎಂಬ ಅನೇಕ ವಿಚಾರಗಳು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಅಂಥದ್ದೇ ಒಂದು ಇಂಟರೆಸ್ಟಿಂಗ್​ ಹಾಡಿನ ಕಥೆಯನ್ನು ಹೊಂದಿದೆ 2004 ರಲ್ಲಿ ತೆರೆಕಂಡ ಶಾರುಖ್ ಖಾನ್ ಮತ್ತು ಸುಶ್ಮಿತಾ ಸೇನ್ ನಟಿಸಿದ 'ಮೈ ಹೂಂ ನಾ' ಚಿತ್ರದ ಹಾಡು.

Add Asianetnews Kannada as a Preferred SourcegooglePreferred

ಹೌದು. 'ಮೈ ಹೂಂ ನಾ' (Main Hu Na) ಚಿತ್ರದ ‘ತುಮ್ಸೆ ಮಿಲ್ಕೆ ದಿಲ್ ಕಾ ಜೋ ಹಾಲ್’ ಎಂಬ ಹಾಡು ಸಿಕ್ಕಾಪಟ್ಟೆ ಹಿಟ್​ ಆಗಿದೆ. ಫರಾಹ್ ಖಾನ್, ಗೌರಿ ಖಾನ್ ಮತ್ತು ಶಾರುಖ್ ಖಾನ್ ಇದರ ನಿರ್ಮಾಪಕರಾಗಿರುವ ಈ ಚಿತ್ರದ ಕವ್ವಾಲಿ ಮಿಕ್ಸ್​ ಹಾಡಾಗಿರುವ ‘ತುಮ್ಸೆ ಮಿಲ್ಕೆ ದಿಲ್ ಕಾ ಜೋ ಹಾಲ್’ನಲ್ಲಿನ ಶಾರುಖ್​ ಮತ್ತು ಸುಶ್ಮಿತಾ ಅವರ ಕೆಮೆಸ್ಟ್ರಿಯನ್ನು ಫ್ಯಾನ್ಸ್​ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಈ ಹಾಡು, ಬ್ಲಾಕ್​ಬಸ್ಟರ್ ಆಗಿ ಹೊರಹೊಮ್ಮಿತು. ಚಿತ್ರದಲ್ಲಿ ಅಳವಡಿಸಲಾಗಿರುವ ಕವ್ವಾಲಿಯ ಚಮತ್ಕಾರದಿಂದ ಹಾಡನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ಇದರಲ್ಲಿ ಶಾರುಖ್ ಖಾನ್, ಸುಶ್ಮಿತಾ ಸೇನ್, ಜಾಯೇದ್ ಖಾನ್ ಮತ್ತು ಅಮೃತಾ ರಾವ್ ಕಾಣಿಸಿಕೊಂಡಿದ್ದರು. ಇದನ್ನು ಸಾಂಪ್ರದಾಯಿಕ ಕವ್ವಾಲಿಯಂತೆ ಚಿತ್ರೀಕರಿಸಲಾಗಿದ್ದು, ವಿಶೇಷ ಮನ್ನಣೆ ಗಳಿಸಿದೆ. ಹೆಚ್ಚಿನ ಫಂಕ್ಷನ್​ಗಳಲ್ಲಿಯೂ ಈ ಹಾಡು ಇಂದಿಗೂ ಪ್ರಚಲಿತ. ಸ್ವಲ್ಪ ಕಾಮಿಡಿ, ಪ್ರೀತಿ, ಪ್ರಣಯ ಮತ್ತು ದೇಶಭಕ್ತಿಯ ಟಚ್ ಇರುವ ಈ ಚಿತ್ರದ ಕಥಾಹಂದರಲ್ಲಿ ಈ ಹಾಡು ಸಕತ್​ ಸ್ಯೂಟ್​ ಆಗಿದ್ದು, ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.

24 ಸೆಕೆಂಡ್​ ಚಿಕನ್​ ತಿನ್ನಲು ಜ್ಯೂ.ಎನ್​ಟಿಆರ್​ ಪಡೆದಿದ್ದು 8 ಕೋಟಿ ರೂ!

 ಆದರೆ ಒಂದು ಇಂಟರೆಸ್ಟಿಂಗ್​ ವಿಷಯ ಗೊತ್ತಾ? ಮಲಿಕ್ ಸಂಗೀತ ಸಂಯೋಜನೆಯಲ್ಲಿ ಸೋನು ನಿಗಮ್ ಹಾಡಿರುವ ಫರಾ ಖಾನ್ ನಿರ್ದೇಶನದ ತುಮ್ಸೆ ಮಿಲ್ಕೆ ದಿಲ್ ಕಾ (Tum Se milke Dil ka) ಹಾಡು ತಯಾರಾಗುವಾಗ ಜಾವೇದ್ ಅಖ್ತರ್ ಅವರು ಅನು ಮಲಿಕ್ ಸಂಯೋಜಿಸಿದ ಈ ಹಾಡನ್ನು ಕೇಳಿ ಸ್ಟುಡಿಯೋದಿಂದ ಹೊರ ಹೋಗಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ಫರ್ಹಾ ಖಾನ್​ ಅವರನ್ನು ಹಿಂತಿರುಗಲು ಮನವರಿಕೆ ಮಾಡಿಕೊಟ್ಟ ಬಳಿಕ ವಾಪಸ್​ ಆಗಿದ್ದರಂತೆ. ಇದಕ್ಕೆ ಕಾರಣ, ಜಾವೇದ್ ಅಖ್ತರ್ ಅವರು ಈ ಹಾಡನ್ನು ಬದಲಾಯಿಸುವ ಹಠಕ್ಕೆ ಬಿದ್ದಿದ್ದರಂತೆ. ಒಂದು ವೇಳೆ ಅವರು ಹೇಳಿದಂತೆ ಹಾಡನ್ನು ಬದಲಾಯಿಸಿದರೆ ಇಂದು ಈ ಹಾಡು ಇಷ್ಟೊಂದು ಜನಪ್ರಿಯತೆಯನ್ನು ಗಳಿಸುತ್ತಿರಲಿಲ್ಲ ಎಂದೂ ಹೇಳಲಾಗುತ್ತಿದೆ.

ಅಷ್ಟಕ್ಕೂ ಈ ಹಾಡನ್ನು ಬದಲಾಯಿಸಲು ಪ್ರಸಿದ್ಧ ಗೀತರಚನೆಕಾರ ಜಾವೇದ್​ (Jawed Akthar) ಅವರು ಹಠ ಮಾಡಿದ್ದರ ಹಿಂದೆಯೂ ಕುತೂಹಲವಿದೆ. ಅದೇನೆಂದರೆ, ಇದನ್ನು ಕವ್ವಾಲಿ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡಲಾಗಿತ್ತು. ಆದರೆ ಈ ಹಾಡಿಗೆ "ಚೆಕ್ ದಟ್, ಲೈಕ್ ದಟ್" ಎಂಬ ಎರಡು ಇಂಗ್ಲೀಷ್ ಪದಗಳನ್ನು ಸೇರಿಸಲಾಗಿತ್ತು. ಇದೇ ಅವರ ಅಸಮಾಧಾನಕ್ಕೆ ಕಾರಣವಾಗಿ ಈ ಹಾಡು ಬೇಡವೇ ಬೇಡ ಎಂದು ಹೊರನಡೆದಿದ್ದರು ಎನ್ನುವ ಬಗ್ಗೆ ಅನು ಮಲಿಕ್​ ಹೇಳಿದ್ದಾರೆ. 'ನೀವು ಎಂತಹ ಪದಗಳನ್ನು ಬಳಸುತ್ತೀರಿ. ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ' ಎಂದು ಜಾವೇದ್ ಸಾಬ್ ನನಗೆ ಕೇಳಿ ಅಲ್ಲಿಂದ ಹೊರ ಹೋಗಿದ್ದರು ಎಂದು ಅನು ಮಲಿಕ್​ ಹೇಳಿದ್ದಾರೆ. ನಂತರ ಈ ಚಿತ್ರದ ನಿರ್ದೇಶಕಿ ಫರ್ಹಾ ಖಾನ್ ಸಮಾಧಾನ ಪಡಿಸಿ ಅವರನ್ನು ವಾಪಸ್​ ಕರೆ ತಂದರಂತೆ.

ಈ ಬಗ್ಗೆ ಮಾತನಾಡಿದ ಸಂಗೀತ ಸಂಯೋಜಕರಾದ ಅನು ಮಲಿಕ್ ಅವರು 'ಕವ್ವಾಲಿಯು ಅದರದ್ದೇ ಆದ ಒಂದು ಮಾದರಿಯನ್ನು ಹೊಂದಿರುತ್ತದೆ ಮತ್ತು ಜಾವೇದ್ ಸಾಬ್ ಅದ್ಭುತವಾಗಿ ಬರೆದಿದ್ದಾರೆ. ಅವರು, ನಾನು, ಸೋನು ಮತ್ತು ಹಾಡಿನಲ್ಲಿ ನಟಿಸಿದ ಎಲ್ಲರೂ ಒಗ್ಗೂಡಿ ಈ ಹಾಡನ್ನು ಒಂದು ಸ್ಮರಣೀಯವಾದ ಹಾಡಾಗಿ ಮಾಡಿದೆವು' ಎಂದು ಹೇಳಿದರು. ಇದೊಂದು ಫಂಕಿ ಕವ್ವಾಲಿ ಎಂದು ಫರ್ಹಾ ಖಾನ್​ ಹೇಳಿ ಅವರನ್ನು ಸಮಾಧಾನಪಡಿಸಿದ್ದರು. ನಂತರ ಕವ್ವಾಲಿಯಲ್ಲಿ ಈ ರೀತಿಯ ಫಂಕಿ ಕವ್ವಾಲಿ ಟ್ರೆಂಡ್​ ಆಗಿ ಬೆಳೆಯಿತು ಎಂದು ಅವರು ಹೇಳಿದ್ದಾರೆ. ಕುತೂಹಲಕಾರಿಯಾಗಿ, ಮೂರು ವರ್ಷಗಳ ಮೈನ್ ಹೂ ನಾ ನಂತರ, ಜಾವೇದ್ ಅಖ್ತರ್ ದರ್ದ್-ಎ-ಡಿಸ್ಕೋದಲ್ಲಿ ಫರಾ ಮತ್ತು ಶಾರುಖ್ ಖಾನ್ ಅವರೊಂದಿಗೆ ಓಂ ಶಾಂತಿ ಓಂನಲ್ಲಿ ಉರ್ದು ಡಿಸ್ಕೋ ಹಾಡನ್ನು ಬರೆದಿದ್ದಾರೆ. 1996 ರ ಸಂಗಮ್ ಆಲ್ಬಂನಲ್ಲಿ ನುಸ್ರತ್ ಫತೇಹ್ ಅಲಿ ಖಾನ್ ಹಾಡಿದ ಕವ್ವಾಲಿ ಶೆಹರ್ ಕೆ ಡುಕಂದರ್ಸ್ ಅನ್ನು ಅಖ್ತರ್ ಅತ್ಯಂತ ಸುಂದರವಾಗಿ ಬರೆದಿದ್ದಾರೆ. 

Gehana Vasisth: ಮುಸ್ಲಿಂ ಯುವಕನ ಜೊತೆ ಪೋರ್ನ್​ ಕೇಸ್​ ನಟಿ ಮದ್ವೆ: ಇಸ್ಲಾಂಗೆ ಮತಾಂತರ?