ಜೂ. ಎನ್​ಟಿಆರ್​ ಅವರು 24 ಸೆಕೆಂಡ್​ನ ಚಿಕನ್​ ಜಾಹೀರಾತಿಗೆ 6-8 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಏನಿದು ಜಾಹೀರಾತು? 

ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್​​ಟಿಆರ್ (Jr. NTR) ದಕ್ಷಿಣ ಚಿತ್ರರಂಗದ ಶ್ರೀಮಂತ ಹೆಸರು. 20 ವರ್ಷಗಳ ವೃತ್ತಿ ಜೀವನದಲ್ಲಿ, ಜೂನಿಯರ್ ಎನ್​ಟಿಆರ್ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. RRR ಪ್ರಪಂಚದಾದ್ಯಂತ ಅವರಿಗೆ ಅಪಾರ ಅಭಿಮಾನಿಗಳನ್ನು ಕೊಟ್ಟಿದೆ. ಜೂನಿಯರ್ ಎನ್​ಟಿಆರ್ ತಮ್ಮ ನಟನೆಯ ಜೊತೆಗೆ ತಮ್ಮ ವಿನಮ್ರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಪ್ರಣತಿ ಅವರೊಂದಿಗೆ 5 ಮೇ 2011 ರಂದು ಮದುವೆ ಮಾಡಿಕೊಂಡಾಗಲೇ ಸುದ್ದಿಯಾಗಿದ್ದರು. ಇದಕ್ಕೆ ಕಾರಣ, ಅವರ ಅದ್ಧೂರಿ ವಿವಾಹದ ಒಟ್ಟು ಬಜೆಟ್ 100 ಕೋಟಿ ರೂಪಾಯಿ ಆಗಿತ್ತು! ಇಂತಿಪ್ಪ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಜನಪ್ರಿಯತೆ ಎಷ್ಟಿದೆಯೆಂದರೆ, ಅವರು ಹೊಸ ಚಿತ್ರಗಳಿಗೆ ಮಾತ್ರವಲ್ಲದೆ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಗೂ ಆಫರ್‌ಗಳನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ 'RRR' ಸ್ಟಾರ್ ಅನ್ನು ಮೆಕ್‌ಡೊನಾಲ್ಡ್ಸ್ ಮೆಕ್‌ಸ್ಪೈಸಿ ಚಿಕನ್ (Chicken) ಶೇರ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ವರದಿಗಳನ್ನು ನಂಬುವುದಾದರೆ, ಈ ಬ್ರಾಂಡ್‌ನ ಅನುಮೋದನೆಗಾಗಿ ಅವರು ಪಡೆದಿರುವ ಶುಲ್ಕದ ಮೊತ್ತವನ್ನು ದಕ್ಷಿಣ ಭಾರತದ ಬಹುತೇಕ ನಟಿಯರು ಇಡೀ ಚಿತ್ರಕ್ಕೂ ಸ್ವೀಕರಿಸಲು ಸಾಧ್ಯವಿಲ್ಲ. ಈ ಬ್ರ್ಯಾಂಡ್‌ನ ರಾಯಭಾರಿಯಾಗಿರುವ ರಶ್ಮಿಕಾ ಮಂದಣ್ಣ ನಂತರ ಜೂನಿಯರ್ ಎನ್‌ಟಿಆರ್ ದಕ್ಷಿಣ ಭಾರತದ ಎರಡನೇ ನಟರಾಗಿದ್ದಾರೆ.

ಇಂಗ್ಲಿಷ್ ವೆಬ್‌ಸೈಟ್ (Website) ಸುದ್ದಿಯ ಪ್ರಕಾರ, 40 ವರ್ಷದ ಜೂನಿಯರ್ ಎನ್‌ಟಿಆರ್ ಮೆಕ್‌ಡೊನಾಲ್ಡ್ಸ್ ಮೆಕ್‌ಸ್ಪೈಸಿ ಚಿಕನ್ ಶೇರ್‌ಗಳ ಬ್ರಾಂಡ್‌ನ 24 ಸೆಕೆಂಡುಗಳ ಜಾಹೀರಾತಿಗಾಗಿ 6-8 ಕೋಟಿ ವಿಧಿಸಿದ್ದಾರೆ. ಪ್ರತಿ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗೆ ಅವರು ಒಂದೇ ಮೊತ್ತವನ್ನು ವಿಧಿಸುತ್ತಾರೆಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ಬಗ್ಗೆ ಎಲ್ಲಿಯೂ ಅಧಿಕೃತ ದೃಢೀಕರಣವಿಲ್ಲ. ಆದರೆ ಈ ಶುಲ್ಕದ ಮಾಹಿತಿ ಸರಿಯಾಗಿದ್ದರೆ, ದಕ್ಷಿಣ ಭಾರತದ ಬಹುತೇಕ ನಟಿಯರು ಚಿತ್ರಕ್ಕೆ ಪಡೆಯುವ ಶುಲ್ಕಕ್ಕಿಂತ ಇದು ಹೆಚ್ಚು ಎನ್ನಲಾಗಿದೆ. ನಟಿ ನಯನತಾರಾ ಬಿಟ್ಟರೆ ದಕ್ಷಿಣ ಭಾರತದ ಯಾವ ನಾಯಕಿಯೂ ಆರು ಕೋಟಿಗಿಂತ ಹೆಚ್ಚು ಸಂಭಾವನೆ ಇದುವರೆಗೆ ಪಡೆದದ್ದಿಲ್ಲ. ಇನ್ನು ನಯನತಾರಾ ವಿಷಯ ಹೇಳುವುದಾದರೆ ಇವರು ಪ್ರತಿ ಚಿತ್ರಕ್ಕೆ 8-10 ಕೋಟಿ ಚಾರ್ಜ್ ಮಾಡುತ್ತಾರೆ.

ಹೀರೋ ಆದ್ರಾ ರಾಜಮೌಳಿ? ಸ್ಟೈಲಿಶ್ ಆಗಿ ಮಿಂಚಿದ RRR ನಿರ್ದೇಶಕನ ಹೊಸ ವಿಡಿಯೋ ವೈರಲ್

ಬ್ರಾಂಡ್ ಅಂಬಾಸಿಡರ್ ಆದ ನಂತರ ಜೂನಿಯರ್ NTR ಹೇಳಿದ್ದೇನು?
ಮೆಕ್‌ಡೊನಾಲ್ಡ್ಸ್‌ನ ಬ್ರಾಂಡ್ ಅಂಬಾಸಿಡರ್ (Brand Ambassador) ಆದ ನಂತರ, ಜೂನಿಯರ್ ಎನ್‌ಟಿಆರ್ ತಮ್ಮ ಹೇಳಿಕೆಯೊಂದರಲ್ಲಿ, 'ಮೆಕ್‌ಡೊನಾಲ್ಡ್ಸ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ಮೆಕ್‌ಸ್ಪೈಸಿ ಚಿಕನ್ ಶೇರ್‌ಗಳಿಗೆ ಸೇರಲು ನಾನು ಸಂತೋಷಪಡುತ್ತೇನೆ. ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರೀತಿಸುವ ಐಕಾನಿಕ್ ಬ್ರ್ಯಾಂಡ್ ಆಗಿದೆ. ಈ ಪ್ರಯಾಣದ ಭಾಗವಾಗಿರುವುದು ನಿಜಕ್ಕೂ ಅದ್ಭುತವಾಗಿದೆ. ನಾನು ಯಾವಾಗಲೂ ಸಹಯೋಗ ಮತ್ತು ಹಂಚಿಕೆಯಲ್ಲಿ ನಂಬಿಕೆ ಇಟ್ಟಿದ್ದೇನೆ' ಎಂದಿದ್ದಾರೆ.

ಇನ್ನು ಜೂನಿಯರ್ ಎನ್ಟಿಆರ್ ಚಿತ್ರದ ಕುರಿತು ಹೇಳುವುದಾದರೆ, ಇವು ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ದೇವ್ರಾ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಅವರು ಜಾಹ್ನವಿ ಕಪೂರ್ (Jahnvi Kapoor) ಜೊತೆ ನಟಿಸಲಿದ್ದಾರೆ. ಹೃತಿಕ್ ರೋಷನ್ ಅಭಿನಯದ 'ವಾರ್ 2' ಚಿತ್ರದ ಮೂಲಕ ಜೂನಿಯರ್ ಎನ್‌ಟಿಆರ್ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ.

The Kerala Story: ಈಕೆ ಅದಾ ಶರ್ಮಾ ಅಲ್ಲ... ಚಾಮುಂಡೇಶ್ವರಿ ಅಯ್ಯರ್​! ಅಸಲಿ ವಿಷ್ಯ ಬಯಲು

View post on Instagram