Asianet Suvarna News Asianet Suvarna News

ಎಲ್ಲಾ ಮಹಿಳೆಯರ ಬಳಿ ನನ್ನ ಜೊತೆ ಮಲಗ್ತೀರಾ ಅಂತ ಕೇಳ್ತೀನಿ, ತಪ್ಪೇನು ಎಂದ 'ಜೈಲರ್' ನಟ

ಸೂಪರ್‌ ಸ್ಟಾರ್‌ ರಜನೀಕಾಂತ್ ಅಭಿನಯದ ಜೈಲರ್ ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ತಲೈವಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ ಅಷ್ಟೇ ಅಲ್ಲ ಚಿತ್ರದ ವಿಲನ್ ಪಾತ್ರ ಮಾಡಿರೋ ನಟನ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಇದೇ ನಟ ವರ್ಷದ ಹಿಂದೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿ ಕಾಂಟ್ರವರ್ಸಿ ಮಾಡಿಕೊಂಡಿದ್ದರು.

Jailer villian Actor Vinayakan Once booked for abusing female Vin
Author
First Published Aug 15, 2023, 3:50 PM IST

ಸೂಪರ್​ಸ್ಟಾರ್​ ರಜನಿಕಾಂತ್ ಅಭಿನಯದ ಜೈಲರ್​ ಸಿನಿಮಾ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಥೆ, ಸಿನಿಮಾಟೋಗ್ರಫಿ, ಆಕ್ಷನ್‌, ಡ್ಯಾನ್ಸ್‌ಗೆ ಪ್ರೇಕ್ಷಕರು ತಲೆಬಾಗಿದ್ದಾರೆ. ಅದರಲ್ಲೂ ಕಾಮಿಯೋ ಪಾತ್ರ ಮಾಡಿರುವ ಮೋಹನ್‌ಲಾಲ್‌, ಶಿವಣ್ಣನ ಎಂಟ್ರಿ ಮತ್ತು ಕ್ಲೈಮ್ಯಾಕ್ಸ್‌ ಸೀನ್‌ಗೆ ಥಿಯೇಟರ್‌ ತುಂಬಾ ವಿಸಿಲ್‌ಗಳೇ ಬಂದಿದೆ. ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಅದರಲ್ಲೂ ಖಳನಾಯಕ ವಿನಾಯಕನ್​ ವಿಭಿನ್ನ ಮ್ಯಾನರಿಸಂ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಜೈಲರ್ ಚಿತ್ರದ (Movie) ಮೂಲಕ ಫೇಮಸ್ ಆಗಿದ್ದಾರಷ್ಟೇ, ಆದರೆ ವಿನಾಯಕನ್‌ಗೆ ಸಿನಿಮಾ ಹೊಸತಲ್ಲ. ವಿನಾಯಕನ್ ಕಳೆದ 25 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ವಿನಾಯಕ್ 1995ರಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ ಮಲಯಾಳಂ ಚಿತ್ರ  'ಮಾಂತ್ರಿಕಂ' ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆ ನಂತರ ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ಪಾದಾರ್ಪಣೆ ಮಾಡಿದ ವಿನಾಯಕ್, ಮಲಯಾಳಂ ಅಲ್ಲದೆ ತಮಿಳಿನಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ವಿಶಾಲ್ ಅಭಿನಯದ ತಿಮಿರು ಚಿತ್ರದ ಮೂಲಕ ತಮಿಳಿನಲ್ಲಿ ಖಳನಾಯಕನಾಗಿ (Villian) ಅಭಿನಯ ಆರಂಭಿಸಿದರು. ಈ ಚಿತ್ರದಲ್ಲಿ ಶ್ರೇಯಾ ರೆಡ್ಡಿಯ ಸೇವಕನಾಗಿ ನಟಿಸಿದ್ದರೆ. ಆ ಚಿತ್ರದ ನಂತರ, ವಿನಾಯಕ್ ಧನುಷ್ ಅವರ ಮರಿಯಾನ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿದರು.

JAILER ಚಿತ್ರಕ್ಕೆ ರಜನಿಕಾಂತ್​ ಈ ಪರಿ ಸಂಭಾವನೆನಾ? ಶಿವರಾಜ್​ಕುಮಾರ್, ತಮನ್ನಾ​ ಪಡೆದದ್ದೆಷ್ಟು?

11 ವರ್ಷಗಳ ನಂತರ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳದ ಅವರು ಇದೀಗ ಜೈಲರ್ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ರಜನಿಕಾಂತ್ ಅಭಿನಯದ ಚಿತ್ರವನ್ನು ನೆಲ್ಸನ್ ನಿರ್ದೇಶಿಸುತ್ತಿದ್ದು, ಇದರಲ್ಲಿ ಕೋಲ್ಡ್ ಬ್ಲಡೆಡ್‌ ವಿಲನ್‌ನಂತೆ ಖಡಕ್ ಆಗಿ ಮಿಂಚಿದ್ದಾರೆ. ವಿನಾಯಕನ್ ಚಿತ್ರರಂಗಕ್ಕೆ ಹೊಸರಬಲ್ಲ.​ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್​ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದರು. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. 

10ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸೆಕ್ಸ್ ಮಾಡಿದ್ದೇನೆ ಎಂದಿದ್ದ ನಟ
ಹಲವರು ಈ ನಟನನ್ನು ಜೈಲರ್ ಚಿತ್ರದಲ್ಲೇ ಮೊದಲ ಬಾರಿಗೆ ನೋಡಿದ್ದರೂ, ಅವರು ಈ ಹಿಂದೆಯೂ ಹಲವು ಬಾರಿ ಸುದ್ಧಿಯಲ್ಲಿದ್ದರು. ಸಂದರ್ಶನವೊಂದರಲ್ಲಿ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ವರ್ಷ ನಟ ವಿನಾಯಕ್ ವಿರುದ್ಧ ರೂಪದರ್ಶಿಯೊಬ್ಬರು ದೂರು (Complaint) ದಾಖಲಿಸಿದ್ದರು. ಆಗ ಈ ವಿಚಾರವಾಗಿ ಪ್ರತಿಕ್ರಿಯಿಸಿದ ವಿನಾಯಕನ್, ಇದುವರೆಗೆ 10 ಮಹಿಳೆಯರೊಂದಿಗೆ ಸಂಭೋಗ ನಡೆಸಿದ್ದು, ಆ ಮಹಿಳೆಯರ ಒಪ್ಪಿಗೆ ಮೇರೆಗೆ ಸೆಕ್ಸ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದರು.  ಜೈಲರ್‌ನಲ್ಲಿ ವಿನಾಯಕನ್ ಅಭಿನಯ ಪ್ರಶಂಸೆಗೆ ಪಾತ್ರವಾಗುತ್ತಿರುವ ಬೆನ್ನಲ್ಲೇ ಹಳೇ ಸಂದರ್ಶನದ ಕ್ಲಿಪ್ ಮತ್ತೆ ವೈರಲ್ ಆಗ್ತಿದೆ.

ಅಯ್ಯೋ! ಬೆಂಗಳೂರಿನಲ್ಲಿ ಜೈಲರ್ ಸಿನಿಮಾಗೆ 2200 ರೂ.; ಕನ್ನಡ ಚಿತ್ರಕ್ಕೆ ಬೆಲೆ ಇಲ್ಲ, ಕನ್ನಡಿಗರು ಗರಂ

2022ರಲ್ಲಿ ನಟಿ ನವ್ಯಾ ನಾಯರ್​ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್​ ಮಾಡಿದ ವಿ.ಕೆ. ಪ್ರಕಾಶ್​ ನಿರ್ದೇಶನದ 'ಒರುಥಿ' ಚಿತ್ರದ ಪ್ರಚಾರದ ವೇಳೆ ವಿನಾಯಕನ್​ ವಿವಾದವನ್ನು ಸೃಷ್ಟಿ ಮಾಡಿಕೊಂಡಿದ್ದರು. ನಾನು 10 ಮಹಿಳೆಯರ (Woman) ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ (Force) ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ (Sex) ಬಗ್ಗೆ ಕೇಳುವುದು 'ಮೀ ಟೂ' ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. 

ಪತ್ನಿಗೆ ವಿಚ್ಛೇದನ ನೀಡಿದ ನಟ
ವಿನಾಯಕನ್​ ಹೇಳಿದ ಮಾತು ಮಲಯಾಳಂ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳ ಕೋಪಕ್ಕೆ ಕಾರಣವಾಗಿತ್ತು. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕ್ಷಮೆಯಾಚಿಸಿದ ವಿನಾಯಕನ್, ತಾನು ಯಾವುದೇ ಮಹಿಳೆಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸಿಲ್ಲ ಎಂದು ಹೇಳಿ ಮಾತು ಬದಲಾಯಿಸಿದ್ದರು. ಆ ನಂತರದ ದಿನಗಳಲ್ಲಿ ನಟ ವಿನಾಯಕ್ ಪತ್ನಿಗೆ ವಿಚ್ಛೇದನ ನೀಡಿರುವುದಾಗಿ ಘೋಷಿಸಿದ್ದರು. ತನ್ನ ಹಾಗೂ ಪತ್ನಿಯ ನಡುವೆ ಜಗಳ ನಡೆಯುತ್ತಿದ್ದರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಈ ವೇಳೆ ವಿನಾಯಕನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ತಮ್ಮ ಪತ್ನಿ ಬಬಿತಾಗೆ ವಿಚ್ಛೇದನ ನೀಡಿರುವುದಾಗಿ ಪ್ರಕಟಿಸಿದ್ದರು.

Follow Us:
Download App:
  • android
  • ios