ಅಯ್ಯೋ! ಬೆಂಗಳೂರಿನಲ್ಲಿ ಜೈಲರ್ ಸಿನಿಮಾಗೆ 2200 ರೂ.; ಕನ್ನಡ ಚಿತ್ರಕ್ಕೆ ಬೆಲೆ ಇಲ್ಲ, ಕನ್ನಡಿಗರು ಗರಂ
ಗಗನ ಮುಟ್ಟಿತ್ತು ಜೈಲರ್ ಸಿನಿಮಾ ಟಿಕೆಟ್. ಶಿವಣ್ಣ ನಟಿಸಿರುವುದಕ್ಕೆ ಬಿಡಂಗಿಲ್ಲ ಸುಮ್ಮನೆ ಇರಂಗಿಲ್ಲ....ತಲೆ ಕೆಟ್ಟಿದೆ ಎಂದ ನೆಟ್ಟಿಗರು...

ತಲೈವ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತಮನ್ನಾ ಅಭಿನಯಿಸಿರುವ ಜೈಲರ್ ಸಿನಿಮಾ ದೇಶಾದ್ಯಂತ ಆಗಸ್ಟ್ 10ರಂದು ಬಿಡುಗಡೆಯಾಗಿ ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಒಂದೆರಡು ದಿನ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು ಭರ್ಜನಿ ಓಪನಿಂಗ್ ಪಡೆದುಕೊಂಡಿದೆ. ರಜನಿಕಾಂತ್ ಸಿನಿಮಾ ಅಂದ್ರೆ ಯಾರು ನೋಡಲ್ಲ ಹೇಳಿ? ಅಷ್ಟೇ ಅಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಟ ನಟಿಸಿರುವುದಕ್ಕೆ ಮಿಸ್ ಮಾಡಲು ಸಾಧ್ಯವೇ? ಆದರೆ ಬೆಂಗಳೂರಿನಲ್ಲಿರುವ ಸಿನಿ ರಸಿಕರಿಗೆ ನಿಜಕ್ಕೂ ಬೇಸರವಾಗಿದೆ.
ಹೌದು! ನಗರಕ್ಕೆ ತಕ್ಕಂತೆ ಟಿಕೆಟ್ ಬೆಲೆ ಇರುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ರಿಲೀಸ್‌ಗೂ ಮುನ್ನವೇ ಕೆಜಿಎಫ್ ಟಿಕೆಟ್ ದಾಖಲೆ ಮುರಿಯುತ್ತಿರುವುದು ಅಚ್ಚರಿಯ ವಿಚಾರ. ಏಕೆಂದರೆ ಅಡ್ವಾನ್ಸ್ ಬುಕ್ಕಿಂಗ್ ಸಮಯದಲ್ಲೇ ಜೈಲರ್ ಸಿನಿಮಾದ ಟಿಕೆಟ್ 2200 ರೂಪಾಯಿ ತೋರಿಸುತ್ತಿತ್ತು. ಇನ್ನು ಈಗಷ್ಟೇ ಓಪನ್ ಆಗಿರುವ ಮಲ್ಟಿಪ್ಲೆಕ್ಸ್‌ಗಳಲ್ಲಿ 750 ರೂ. ಯಿಂದ 1500 ರೂ. ಬೆಲೆ ತೋರಿಸುತ್ತಿದೆ. ಬೆಳ್ಳಂ ಬೆಳಗ್ಗೆ 6 ಗಂಟೆಯಿಂದಲೇ ಜೈಲರ್ ಸಿನಿಮಾ ಫಸ್ಟ್ ಶೋ ಆರಂಭವಾಗಲಿದೆ. ಬಹುತೇಕ ಥಿಯೇಟರ್‌ಗಳಲ್ಲಿ ಮಾರ್ನಿಂಗ್ ಶೋ ಹೌಸ್‌ಫುಲ್ ಆಗಿದೆ.
30-72 ವಯಸ್ಸಾದರೇನು?; ಜೈಲರ್‌ನಲ್ಲಿ ರಜನಿಕಾಂತ್ ಜೊತೆ ವಯಸ್ಸಿನ ಟೀಕೆಗಳು: ಖಡಕ್ ಉತ್ತರ ಕೊಟ್ಟ ತಮನ್ನಾ!
ಪಿವಿಆರ್, ಐನಾಕ್ಸ್‌ಗಳಲ್ಲಿ ಟಿಕೆಟ್‌ನ ದರ 1500 ರೂ. ಮೀರಿದೆ. ಬ್ರಿಗೇಡ್ ರಸ್ತೆಯಲ್ಲಿರು ರೆಕ್ಸ್ ವಾಲ್ಕ್ ಮಾಲ್‌ನಲ್ಲಿ ಜೈಲರ್ ಸಿನಿಮಾ ಟಿಕೆಟ್ 2000 ರೂ. ಮೀರಿದೆ ಟ್ಯಾಕ್ಸ್ ಅದು ಇದು ಅಂತ ಲೆಕ್ಕ ಮಾಡಿದರೆ 2200 ರೂ. ಆಗುತ್ತದೆ. ದೇಶದ ಅತಿ ಸಿರಿವಂತ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ರೆಕ್ಸ್ ಕೂಡ ಒಂದಾಗಿದ್ದು ಡೈರೆಕ್ಟರ್ಸ್ ಕಟ್ ಹಾಲ್‌ನಲ್ಲಿ ಐಷಾರಾಮಿಯಾಗಿ ಕುಳಿತುಕೊಂಡು ವೀಕ್ಷಕರು ಸಿನಿಮಾ ನೋಡಬಹುದು. ಯಾಕೆ ಇಷ್ಟೊಂದು ಬೆಲೆಯಾಗಿದೆ ಎಂದು ಪ್ರಶ್ನೆ ಮಾಡಿದರೆ ಇದಕ್ಕೆ ರಜನಿಕಾಂತ್ ಮತ್ತು ಶಿವಣ್ಣ ಇರುವ ಸಿನಿಮಾ ಎನ್ನುತ್ತಾರೆ.
ಇಷ್ಟೇ ಅಲ್ಲ ಫ್ಲಾಟಿನಂ ಸುಪ್ರೀಮಿಯರ್‌ನಲ್ಲಿ ಒಂದು ಟಿಕೆಟ್‌ನ ಬೇಲೆ 2200ರೂ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡರೆ ಒಟ್ಟು 2271 ರೂ. ತೋರಿಸುತ್ತದೆ. ತಲೈವಾ ಕ್ರೇಜ್‌ಗೆ ಹಣ ಲೆಕ್ಕ ಮಾಡದೆ ಬುಕ್ಕಿಂಗ್ ಮುಗ್ಗಿಬಿದ್ದಿದ್ದಾರೆ.
ಹಿಮಾಲಯಕ್ಕೆ ತೆರಳಿದ ರಜನಿಕಾಂತ್:
ಜೈಲರ್ ಸಿನಿಮಾ ಸಂಭ್ರಮ ಆರಂಭಗೊಳ್ಳುತ್ತಿದ್ದಂತೆ ಇತ್ತ ರಜನಿಕಾಂತ್ ಸದ್ದಿಲ್ಲದೆ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದ ಮೂಲಕ ರಜನಿಕಾಂತ್ ಹಿಮಾಲಯಕ್ಕೆ ತೆರಳಿದ್ದಾರೆ.ಚೆನ್ನೈ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್, ಹೌದು ಹಿಮಾಲಯ ಪ್ರವಾಸ ಮಾಡುತ್ತಿದ್ದೇನೆ. ಕೋವಿಡ್ ಕಾರಣಗಳಿಂದ ಕಳೆದ ನಾಲ್ಕು ವರ್ಷ ಹಿಮಾಲಯ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇದೀಗ ಮಾಡುತ್ತಿದ್ದೇನೆ ಎಂದರು. ಇನ್ನು ಜೈಲರ್ ಸಿನಿಮಾ ಹೇಗಿದೆ ಅನ್ನೋ ಪ್ರಶ್ನೆಗೆ, ಅದನ್ನು ನೀವು ವೀಕ್ಷಿಸಿ ಹೇಳಬೇಕು ಎಂದು ರಜನಿಕಾಂತ್ ಹೇಳಿದ್ದಾರೆ.
'ಸೂಪರ್ ಸ್ಟಾರ್' ಹೆಸರು ತೆಗೆದು ಹಾಕಲು ಹೇಳಿದೆ: 'ಜೈಲರ್' ಈವೆಂಟ್‌ನಲ್ಲಿ ರಜನಿಕಾಂತ್ ಮಾತು
ತಲೈವಾ ಸಂಭಾವನೆ:
ಚಿತ್ರದ ಸಂಭಾವನೆಯ ಕುರಿತು ಸಕತ್ ಚರ್ಚೆಯಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ರಜನಿಕಾಂತ್ ಜೋಡಿಯಾಗಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಇನ್ನುಳಿದಂತೆ ತಮನ್ನಾ, ಜಾಕಿಶ್ರಾಫ್, ಸುನಿಲ್, ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಇದೆ. ಮಲಯಾಳಂ ನಟ ಮೋಹನ್ ಲಾಲ್ ಕೂಡ ಸಣ್ಣ ಪಾತ್ರದಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಎಲ್ಲ ಭಾಷೆಯಿಂದಲೂ ಒಬ್ಬೊಬ್ಬ ಸ್ಟಾರ್ ನಟರನ್ನು ಆಯ್ಕೆ ಮಾಡಲಾಗಿದೆ. ವಯಸ್ಸು 72 ಆದರೂ ವರ್ಚಿಸ್ಸಿಗೆ ಏನೂ ಕಡಿಮೆ ಇಲ್ಲದಂತೆ ನಟಿಸಿದ್ದಾರೆ ರಜನಿ, ಇಂಥದ್ದೊಂದು ಚಿತ್ರಕ್ಕೆ ರಜನಿಕಾಂತ್ ಅವರು ದಾಖಲೆಯ ಮೊತ್ತವನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇವರು ಪಡೆದಿರುವ ಸಂಭಾವನೆ ಕೇಳಿ ಜನರು ಅಬ್ಬಬ್ಬಾ ಎನ್ನುತ್ತಿದ್ದಾರೆ. ಹೌದು! ಜೈಲರ್ (Jailer) ಚಿತ್ರಕ್ಕಾಗಿ ರಜನೀಕಾಂತ್ ಅವರು 100-110 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.