JAILER ಚಿತ್ರಕ್ಕೆ ರಜನಿಕಾಂತ್​ ಈ ಪರಿ ಸಂಭಾವನೆನಾ? ಶಿವರಾಜ್​ಕುಮಾರ್, ತಮನ್ನಾ​ ಪಡೆದದ್ದೆಷ್ಟು?

ಇದೇ 10ರಂದು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ ಜೈಲರ್​ನಲ್ಲಿ ದೊಡ್ಡ ದೊಡ್ಡ ಸ್ಟಾರ್​ಗಳು ಪಡೆದ ಸಂಭಾವನೆಯಷ್ಟು? ಇದರ ಬಗ್ಗೆ ವಿವರ ಲೀಕ್​ ಆಗಿದೆ. 

Jailer Cast Salary Information leaked How much Rajinikanth Shivarajkumar paid suc

'ಸೂಪರ್ ಸ್ಟಾರ್‌' ರಜನಿಕಾಂತ್  (Rajinikanth)  ಅಭಿನಯದ  'ಜೈಲರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿನಿಮಾವು ವಿಶ್ವಾದ್ಯಂತ ಆ.10ರಂದು ತೆರೆಗೆ ಬರಲಿದೆ. ಮೂರು ಭಾಷೆಗಳಲ್ಲಿ ತಯಾರಾಗಿ  ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ  ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ.  ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ. ನೆಲ್ಸನ್‌ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಚೆಗೆ ರಿಲೀಸ್ ಆಗಿರುವ ಚಿತ್ರದ ಟ್ರೇಲರ್ ಕೂಡ ಸಖತ್ ಟ್ರೆಂಡಿಂಗ್ ನಲ್ಲಿದ್ದು, ಸಿನಿಮಾವು ಎಂಟರ್‌ಟೇನಿಂಗ್ ಆಗಿರಲಿದೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿಯಾಗಿದೆ. ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 

 ಸದ್ಯ ಈ ಚಿತ್ರದ ಸಂಭಾವನೆಯ ಕುರಿತು ಸಕತ್​ ಚರ್ಚೆಯಾಗುತ್ತಿದೆ.  ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ರಜನಿಕಾಂತ್ ಜೋಡಿಯಾಗಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಇನ್ನುಳಿದಂತೆ ತಮನ್ನಾ, ಜಾಕಿಶ್ರಾಫ್, ಸುನಿಲ್, ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಇದೆ. ಮಲಯಾಳಂ ನಟ ಮೋಹನ್ ಲಾಲ್ ಕೂಡ ಸಣ್ಣ ಪಾತ್ರದಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಎಲ್ಲ ಭಾಷೆಯಿಂದಲೂ ಒಬ್ಬೊಬ್ಬ ಸ್ಟಾರ್ ನಟರನ್ನು ಆಯ್ಕೆ ಮಾಡಲಾಗಿದೆ.  ವಯಸ್ಸು 72 ಆದರೂ ವರ್ಚಿಸ್ಸಿಗೆ ಏನೂ ಕಡಿಮೆ ಇಲ್ಲದಂತೆ ನಟಿಸಿದ್ದಾರೆ ರಜನಿ, ಇಂಥದ್ದೊಂದು ಚಿತ್ರಕ್ಕೆ  ರಜನಿಕಾಂತ್ ಅವರು ದಾಖಲೆಯ ಮೊತ್ತವನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇವರು ಪಡೆದಿರುವ ಸಂಭಾವನೆ ಕೇಳಿ ಜನರು ಅಬ್ಬಬ್ಬಾ ಎನ್ನುತ್ತಿದ್ದಾರೆ. ಹೌದು! ಜೈಲರ್​ (Jailer) ಚಿತ್ರಕ್ಕಾಗಿ ರಜನೀಕಾಂತ್​ ಅವರು   100-110 ಕೋಟಿ ರೂ. ಸಂಭಾವನೆಯನ್ನು  ಪಡೆದುಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಆಗಿ ರಜನೀಕಾಂತ್​ ನಟಿಸಿದ್ದಾರೆ.  

ಶಿವರಾಜ್‌ಕುಮಾರ್ ಅಭಿನಯದ 'ಜೈಲರ್' ಸಾಂಗ್​ ರಿಲೀಸ್: ತಮನ್ನಾ ಹಾಟ್​ನೆಸ್​ಗೆ ಫ್ಯಾನ್ಸ್​ ಫಿದಾ

ಇನ್ನು ಉಳಿದವರ ಸಂಭಾವನೆಯ ಕುರಿತು ಹೇಳುವುದಕ್ಕೂ ಮುನ್ನ ಶಿವರಾಜ್​ ಕುಮಾರ್​ ಎಷ್ಟು ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಕನ್ನಡ ಚಿತ್ರಪ್ರಿಯರಿಗೆ ಕುತೂಹಲ ಸಹಜವಾಗಿಯೇ ಇರುತ್ತದೆ. ಜೈಲರ್​ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರು 10-11 ನಿಮಿಷಗಳು ಮಾತ್ರ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಇವರು ತಮಿಳು ಚಿತ್ರವೊಂದರಲ್ಲಿ ನಟಿಸಿದ್ದಾರೆ. ರಜನಿಕಾಂತ್ ಜೊತೆ ನರಸಿಂಹ ಎನ್ನುವ ಪಾತ್ರದಲ್ಲಿ ಶಿವರಾಜ್​ಕುಮಾರ್​ (Shivarajkumar) ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಮೋಹನ್‌ಲಾಲ್ ಅವರೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಸಂಭಾವನೆ ಕುರಿತು ಹೇಳುವುದಾದರೆ,  ಮೋಹನ್‌ಲಾಲ್‌ಗೆ 8 ಕೋಟಿ ರೂ. ಹಾಗೂ ಶಿವರಾಜ್‌ಕುಮಾರ್‌ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.   


 
ನಟಿ ರಮ್ಯಾಕೃಣ್ಣ ಅವರು ಬಹಳ ದಿನಗಳ ಬಳಿಕ ರಜನಿಕಾಂತ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ಅವರಿಗೆ 80 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ. ವಿಲನ್ ಆಗಿ ನಟಿಸಿರುವ ಬಾಲಿವುಡ್ ನಟ ಜಾಕೀಶ್ರಾಫ್ (Jackey Shraf) 4 ಕೋಟಿ ರೂ.ಪಡೆದಿದ್ದಾರೆ. ಕಾವಲಯ್ಯಾ ಹಾಡಿನ ಮೂಲಕ ಎಲ್ಲರನ್ನೂ ಬೆರಗುಗೊಳಿಸಿ ಸಕತ್​ ಸ್ಟೆಪ್​ ಹಾಕಿ ಸೆನ್​ಸೇಷನ್​ ಸೃಷ್ಟಿಸಿರೋ ನಟಿ  ತಮನ್ನಾ, ಈ ಸಿನಿಮಾದಲ್ಲಿ ತೆಲುಗು ಸಿನಿಮಾ ನಟಿಯಾಗಿ ಕಾಣಿಸಿಕೊಂಡಿದ್ದಾರೆ.  ಹಾಸ್ಯ ನಟನಾಗಿ ಕಾಣಿಸಿಕೊಂಡಿರೋ ಯೋಗಿ ಬಾಬು ಕೂಡ 1 ಕೋಟಿ ರೂಪಾಯಿ ಹಣ ಪಡೆದಿದ್ದಾರೆ. ವಸಂತ್ ರವಿ 30 ಲಕ್ಷ ರೂಪಾಯಿ ಪಡೆಎದಿದ್ದಾರೆ. ಚಿತ್ರವು ಇದೆ  10ರಂದು  ಸಿನಿಮಾ ಬಿಡುಗಡೆಯಾಗಲಿದೆ. 

ಶಿವಣ್ಣನಿಗೂ ಇಷ್ಟವಂತೆ ಕಾವಾಲಯ್ಯ ಹಾಡು...ಸಾಂಗ್‌ಗೆ ಹ್ಯಾಟ್ರಿಕ್‌ ಹೀರೋ ಮಸ್ತ್‌ ಡ್ಯಾನ್ಸ್‌

Latest Videos
Follow Us:
Download App:
  • android
  • ios