Asianet Suvarna News Asianet Suvarna News

'ಪಠಾಣ್' ತಂಡಕ್ಕೆ ದೊಡ್ಡ ಶಾಕ್; ರಿಲೀಸ್‌ಗೂ ಮೊದಲೇ ಲೀಕ್ ಆಯ್ತಾ ಶಾರುಖ್ ಖಾನ್ ಸಿನಿಮಾ?

ಶಾರುಖ್ ಖಾನ್ ಸಿನಿಮಾ ರಿಲೀಸ್‌ಗೂ ಮೊದಲೇ ಆನ್ ಲೈನ್‌ನಲ್ಲಿ ಲೀಕ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. 

is Pathaan Movie Leaked Online before Hitting Theatre? sgk
Author
First Published Jan 24, 2023, 5:40 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಜನವರಿ 25ರಂದು ಪಠಾಣ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದುಅಭಿಮಾನಿಗಳು ಮುಗಿಬಿದ್ದು ಸಿನಿಮಾ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ದಾಖಲೆಯ ಬುಕ್ಕಿಂಗ್ ಆಗಿದ್ದು ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎಂದು ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಕುತೂಹಲ ಹೆಚ್ಚಾಗಿದೆ.    

ಪಠಾಣ್ ಸಿನಿಮಾ ಅನೇಕ ವಿವಾದಗಳನ್ನು ಎದುರಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಆದರೆ ಈ ನಡುವೆ ಪಠಾಣ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಸಿನಿಮಾ ರಿಲೀಸ್ ಆಗಲು ಇನ್ನೊಂದು ದಿನ ಬಾಕಿ ಇರುವಾಗಲೇ ಪಠಾಣ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಜೂಮ್ ಟಿವಿ ವರದಿ ಮಾಡಿರುವ ಪ್ರಕಾರ, ತಮಿಳು ರಾಕರ್ಸ್, ಫಿಲ್ಮಿ 4 ವಾಪ್, ಫಿಲ್ಮಿಜಿಲ್ಲಾ,  ಎಂಪಿ 4 ಮೂವೀಸ್, ಪಾಗಲ್‌ವರ್ಲ್ಡ್, ವೇಗಮೋವೀಸ್‌ನಂತಹ ವೆಬ್‌ಸೈಟ್‌ಗಳು ಶಾರುಖ್ ಖಾನ್ ಅವರ ಪಠಾಣ್ ಸಿನಿಮಾವನ್ನು ಲೀಕ್ ಮಾಡಿವೆ ಎಂದು ವರದಿ ಮಾಡಿದೆ. 

ಈ ವಿಚಾರ ಈಗ ಸಿನಿಮಾತಂಡಕ್ಕೆ ದೊಡ್ಡ ತಲೆನೋವಾಗಿದೆ. ಪಠಾಣ್ ಟ್ರೈಲರ್ ಕೂಡ ರಿಲೀಸ್‌ಗೂ ಮೊದಲೇ ಲೀಕ್ ಆಗಿತ್ತು. ಕೆಲವು ತುಣುಕುಗಳು ವೈರಲ್ ಆಗಿತ್ತು. ಇದೀಗ ಸಿನಿಮಾ ಕೂಡ ಲೀಕ್ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಪಠಾಣ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆದರೆ ಸಿನಿಮಾತಂಡದ ಮೇಲೆ ದೊಡ್ಡ ಪರಿಮಾಮ ಬೀರಲಿದೆ. ಸಿನಿಮಾ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಆಗಲಿದೆ. ಹಾಗಾಗಿ ಸಿನಿಮಾತಂಡ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಅಂದಹಾಗೆ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಲೀಕ್ ಆದ ಉದಾಹಾರಣೆಗಳು ಸಾಕಷ್ಟಿವೆ. ಅನೇಕ ಸಿನಿಮಾಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ವೈರಲ್ ಆಗಿವೆ.

Shah Rukh Khan: 5 ವರ್ಷಗಳ ನಂತರ ತೆರೆಗೆ ಹಿಂತಿರುಗುತ್ತಿರುವ ಶಾರುಖ್ ಖಾನ್‌ ನರ್ವಸ್‌?

ಸದ್ಯ ಪಠಾಣ್ ಸಿನಿಮಾದ ಮುಂಗಡ ಬುಕ್ಕಿಂಗ್ ಅಂದಾಜಿನ ಪ್ರಕಾರ ಬಾಕ್ಸ್ ಆಫೀಸ್ ನಲ್ಲಿ 45 ರಿಂದ 50 ಕೋಟಿ ರೂಪಾಯಿ ಮೊದಲ ದಿನ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾರುಖ್ ಖಾನ್ ಅನೇಕ  ವರ್ಷಗಳ ಬಳಿಕ ತೆರೆಮೇಲೆ ಬರ್ತಿದ್ದಾರೆ. 2018ರಲ್ಲಿ ಶಾರುಖ್ ಖಾನ್ ಜೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾ ಮಾಡುವುದನ್ನೇ ನಿಲ್ಲಿಸಿದ್ದರು. ಇದೀಗ ಪಠಾಣ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 

ಹಾರರ್, ರೊಮಾನ್ಸ್, ಆ್ಯಕ್ಷನ್​ , ಕಾಮಿಡಿ... ಈ ವಾರ ಪೂರ್ತಿ ಎಲ್ಲ ಭಾಷಿಕರಿಗೂ ರಸದೌತಣ!

ಪಠಾಣ್ ಸಿನಿಮಾ ಜನವರಿ 25ರಂದು ಬೆಳ್ಳಂಬೆಳಗ್ಗೆ 6 ಗಂಟೆಯಿಂದನೆ ಶೋ ಪ್ರಾರಂಭವಾಗಲಿದೆ. ದೇಶದ ಅನೇಕ ಕಡೆ ಬೆಳಗ್ಗೆಯೇ ಶೋ ಪ್ರಾರಂಭವಾಗುತ್ತಿದೆ.  ಪಠಾಣ್ ಸಿನಿಮಾ ಹಿಂದಿ ಜೊತೆಗೆ ತೆಲುಗು, ತಮಿಳಿನಲ್ಲೂ ರಿಲೀಸ್ ಆಗುತ್ತಿದೆ. ಬಾಲಿವುಡ್ ಜೊತೆಗೆ ದಕ್ಷಿಣ ಭಾರತದಲ್ಲೂ ಶಾರುಖ್ ಸಿನಿಮಾ ಮೇಲೆ ಕುತೂಹಲ ಹಚ್ಚಾಗಿದ್ದು ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ. ಈ ನಡುವೆ ಲೀಕ್ ಸುದ್ದಿ ಸಿನಿಮಾತಂಡಕ್ಕೆ ದೊಡ್ಡ ತಲೆನೋವಾಗಿದೆ. 

Follow Us:
Download App:
  • android
  • ios