Asianet Suvarna News Asianet Suvarna News

ಹಾರರ್, ರೊಮಾನ್ಸ್, ಆ್ಯಕ್ಷನ್​ , ಕಾಮಿಡಿ... ಈ ವಾರ ಪೂರ್ತಿ ಎಲ್ಲ ಭಾಷಿಕರಿಗೂ ರಸದೌತಣ!

ಜನವರಿ ಅಂತ್ಯದಲ್ಲಿ ಹಲವು ಭಾಷೆಗಳ ಹಲವು ಚಿತ್ರಗಳು ಏಕಕಾಲದಲ್ಲಿ ಬಿಡುಗಡೆಯಾಗಲಿವೆ. ಅವುಗಳು ಯಾವುವು? ಇಲ್ಲಿದೆ ವಿವರ...

Movie release last week of January in many languages what are those
Author
First Published Jan 23, 2023, 7:05 PM IST

ಜನವರಿಯ ಹೊಸ ವರ್ಷ ಆರಂಭವಾಗಿ ಮೂರು ವಾರಗಳು ಕಳೆದಿವೆ. ಇದಾಗಲೇ ಹಲವಾರು ಚಿತ್ರಗಳು ಚಿತ್ರರಸಿಕರ ಹೃದಯ ಗೆದ್ದಿದೆ. ಈ ತಿಂಗಳು ಮುಗಿಯಲು  ಉಳಿರುವುದು  ಇನ್ನೊಂದೇ ವಾರ. ಈ ವಾರ  ಸಿನಿರಸಿಕರಿಗೆ ಭೂರಿಭೋಜನ. ಏಕೆಂದರೆ ಹಲವಾರು ಭಾಷೆಗಳಲ್ಲಿ ಹಲವಾರು ಚಿತ್ರಗಳು ಈ ವಾರ ನಿಮಗಾಗಿ ಕಾದಿದೆ.  ಹಾರರ್, ರೊಮ್ಯಾನ್ಸ್, ಆಕ್ಷನ್, ಕಾಮಿಡಿ... ನಿಮಗೆ ಯಾವುದು ಇಷ್ಟವೋ ಅದನ್ನು ಆಯ್ಕೆ ಮಾಡಿಕೊಂಡು ಚಿತ್ರವನ್ನು ಸವಿಯುವ ಅವಕಾಶ ನಿಮ್ಮ ಪಾಲಿಗಿದೆ. ಏಕೆಂದರೆ ಇಂದಿನಿಂದ (ಜ.23)  ಹಲವಾರು ಚಿತ್ರಗಳು ಈ ತಿಂಗಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿವೆ. ಸೋಮವಾರದಿಂದ ಈ ಇಡೀ ವಾರದಲ್ಲಿ 3  ಹಿಂದಿ ಚಿತ್ರಗಳು ಬಿಡುಗಡೆಯಾಗಲಿವೆ. ಹಿಂದಿಯ ಹೊರತಾಗಿ, ತಮಿಳು, ಕನ್ನಡ, ಮಲಯಾಳಂ ಮತ್ತು ಇತರ ಭಾಷೆಗಳ ಅನೇಕ ಅತ್ಯುತ್ತಮ ಚಿತ್ರಗಳು ಸಹ ಥಿಯೇಟರ್‌ಗಳಿಗೆ ಬರುತ್ತವೆ. ಹಾಗಾದರೆ ಈ ವಾರ ಜನವರಿ 23 ರಿಂದ ಜನವರಿ 29 ರವರೆಗೆ ಬಿಡುಗಡೆಯಾಗುವ ಚಿತ್ರಗಳ ಸಂಪೂರ್ಣ ಪಟ್ಟಿಯನ್ನು ತಡಮಾಡದೆ ನೋಡೋಣ.

ಈ ವಾರ ಬಾಲಿವುಡ್‌ನಲ್ಲಿ ಮೂರು ಬೃಹತ್​ ಬಜೆಟ್​  ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ (Box office) ಬಿಡುಗಡೆಯಾಗಲಿವೆ. ಇದರಲ್ಲಿ ಮೂರೂ ಚಿತ್ರಗಳು ಒಂದಕ್ಕೊಂದು ತೀವ್ರ ಪೈಪೋಟಿ ನೀಡಲಿವೆ. ಯಾಕೆಂದರೆ ಈ  ಚಿತ್ರಗಳಲ್ಲಿ ಬಾಲಿವುಡ್​ನ ದೊಡ್ಡದೊಡ್ಡ ತಾರೆಯರು ಇದ್ದಾರೆ. ಯಶ್ ರಾಜ್ ಫಿಲ್ಮ್ಸ್​ (YashRaj films) ನಿರ್ದೇಶನದ 'ಪಠಾಣ್' (Pathaan) ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ (Deepika Padukone) ಹೊರತುಪಡಿಸಿ, ಅಶುತೋಷ್ ರಾಣಾ, ಡಿಂಪಲ್ ಕಪಾಡಿಯಾ ತೆರೆಯ ಮೇಲೆ ಒಟ್ಟಿಗೆ ನಟಿಸುತ್ತಿದ್ದಾರೆ. ಅದೇ ಪಠಾಣ್ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೊಂದೆಡೆ ನಿರ್ದೇಶಕ ರಾಜಕುಮಾರ್ ಸಂತೋಷಿ ನಿರ್ದೇಶನದ 'ಗಾಂಧಿ ಗೋಡ್ಸೆ ಏಕ್ ಯುದ್ಧ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಮೂಲಕ ಸಂತೋಷಿ ಸುಮಾರು 9 ವರ್ಷಗಳ ನಂತರ ನಿರ್ದೇಶಕರಾಗಿ ಮರಳಿದ್ದಾರೆ.  ಹಾಗಾಗಿ ಅಲ್ಲಿ ನಿರ್ದೇಶಕ ಶಿರೀಶ್ ಖೇಮರಿಯಾ ನಿರ್ದೇಶನದ ಹೂ ಆಮ್ ಐ (Who Am I) ಚಿತ್ರ ಬಿಡುಗಡೆಯಾಗಲಿದೆ. ಚೇತನ್ ಶರ್ಮಾ, ರಿಷಿಕಾ ಚಾಂದಿನಿ ಮತ್ತು ಸುರೇಂದ್ರ ರಾಜನ್ ಮುಂತಾದ ನಟರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಚಿತ್ರಗಳು ಈ ವಾರ ಜನವರಿ 23 ರಿಂದ ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿವೆ.

NiKhil Kumarswamy: ಬರ್ತ್​ಡೇ ದಿನವೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ನಿಖಿಲ್​ ಕುಮಾರಸ್ವಾಮಿ ​

ಉಳಿದ ಭಾಷೆಗಳ ಚಿತ್ರಗಳು: ಜನವರಿ 23 ರಂದು ನಾಲ್ಕು ತೆಲುಗು ಭಾಷೆಯ ಚಿತ್ರಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ‘ಬೇಟೆ’, ‘ಬುಟ್ಟ ಬೊಮ್ಮ’, ‘ಧೀರ’ ಮತ್ತು ‘ಸಿಂಧೂರಂ’ ನಂತಹ ತೆಲುಗು ಚಿತ್ರಗಳು ಈ ವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ಮಲಯಾಳಂ ಮತ್ತು ಗುಜರಾತಿ  ನಡುವೆ ಹೋರಾಟ ನಡೆಯಲಿದೆ. ಕನ್ನಡ ಭಾಷೆಯ ಬಗ್ಗೆ ಹೇಳುವುದಾದರೆ,  'ಕ್ರಾಂತಿ' (Kranthi) ಮತ್ತು 'ಆರ್‌ಸಿ ಬ್ರದರ್ಸ್' (RC Brothers) ಎರಡು ಚಿತ್ರಗಳು ಬಿಡುಗಡೆಯಾಗಲಿವೆ. ಮಲಯಾಳಂನಲ್ಲಿ ‘ತಂಕಂ’ ಮತ್ತು ‘ಅಲೋನ್’ ಚಿತ್ರಗಳು ಬಿಡುಗಡೆಯಾಗುತ್ತಿವೆ.  ಇನ್ನೊಂದೆಡೆ ಗುಜರಾತಿ ಭಾಷೆಯಲ್ಲಿ ‘ಕರ್ಮ’ ಚಿತ್ರವೊಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.

ಈ ವಾರ ಮರಾಠಿ ಬಾಕ್ಸ್ ಆಫೀಸ್ (Box Office) ಚಿತ್ರಗಳ ನಡುವೆ ಸ್ಪರ್ಧೆಯನ್ನು ನೋಡುತ್ತದೆ. 'ಬಾಂಬು', 'ಪಿಕೊಲೊ' ಮತ್ತು 'ತುಚ್ ಮಜಾ ಕಲಿಜ್' ಚಿತ್ರಗಳು ಬಿಡುಗಡೆಯಾಗಲಿವೆ. ಅದೇ ಇನ್ನೊಂದೆಡೆ, ಈ ವಾರ ತಮಿಳು ಚಿತ್ರರಂಗದಲ್ಲಿ ಎರಡು ಚಿತ್ರಗಳು ಒಟ್ಟಿಗೆ ರಾಕ್ ಮಾಡಲು ಸಿದ್ಧವಾಗಿವೆ. 'ಫರ್ಹಾನಾ', 'ಮಿಪ್ಪದ ಸಾಯಿ' ಇದೇ ಜನವರಿ 26 ರಂದು ಬಿಡುಗಡೆಯಾಗುತ್ತಿವೆ.

ಜಾಕ್ವೆಲಿನ್​, ನೋರಾ ಫತೇಹಿ, ಸುಕೇಶ್​ ತ್ರಿಕೋನ ಲವ್​ ಸ್ಟೋರಿಗೆ ಬಿಗ್‌ ಟ್ವಿಸ್ಟ್​!

Follow Us:
Download App:
  • android
  • ios