ಈಗ ಬಹುತೇಕ ಎಲ್ಲಾ ಸಿನಿಮಾದಲ್ಲಿ ಲಿಪ್ ಲಾಕ್ ಸೀನ್ ಇದ್ದೆ ಇರುತ್ತೆ. ಆದರೆ ಈ ಲಿಪ್ ಟು ಲಿಪ್ ಕಿಸ್ ಭಾರತೀಯ ಸಿನಿಮಾಗೆ ಹೊಸದೇನಲ್ಲ. ಕಾರಣ 1933ರಲ್ಲಿ ಭಾರತೀಯ ಸಿನಿಮಾದಲ್ಲಿ ಲಿಪ್ ಕಿಸ್ ದೃಶ್ಯವಿತ್ತು. ಇದೀಗ 92 ವರ್ಷ ಉರುಳಿಸಿದೆ. ವಿಶೇಷ ಅಂದರೆ ನಾಯಕ ಹಾಗೂ ನಾಯಕಿ ಬರೋಬ್ಬರಿ 4 ನಿಮಿಷ ಚುಂಬಿಸಿದ್ದರು.
ಮುಂಬೈ(ಮಾ.10) ಸಿನಿಮಾದಲ್ಲಿ ಲಿಪ್ ಕಿಸ್ ಹೊಸದೇನಲ್ಲ. ಅದರಲ್ಲೂ ರೊಮ್ಯಾಂಟಿಕ್ ಲವ್ ಸ್ಟೋರಿಗಳಲ್ಲಿ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ.ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳಲ್ಲೂ ಒಂದೆರಡು ಪ್ರಣಯ ಸೀನ್ ಇದ್ದೇ ಇರುತ್ತೆ. ಹೀಗಾಗಿ ಇಂದಿನ ಸಿನಿಮಾದಲ್ಲಿ ಕಿಸ್ ಅಚ್ಚರಿಯ ವಿಚಾರವಲ್ಲ, ಅದರಲ್ಲೂ ಲಿಪ್ ಕಿಸ್ ಕೂಡ ಸಾಮಾನ್ಯವಾಗಿದೆ. ಆದರೆ ಭಾರತೀಯ ಸಿನಿಮಾದ ಮೊದಲ ಲಿಪ್ ಕಿಸ್ ಕುರಿತು ಗೊತ್ತಿದೆಯಾ? ಭಾರತೀಯ ಸಿನಿಮಾದ ಮೊದಲ ಲಿಪ್ ಕಿಸ್‌ಗೆ ಇದೀಗ 92 ವರ್ಷ. ಇಷ್ಟೇ ಅಲ್ಲ ಈ ಚುಂಬನ ದೃಶ್ಯ ಬರೋಬ್ಬರಿ 4 ನಿಮಿಷ. ಈ ದೃಶ್ಯಕ್ಕಾಗಿ ನಾಯಕ ಹಾಗೂ ನಾಯಕಿ ನೇರಾ ನೇರಾ ಲಿಪ್ ಕಿಸ್ ಮಾಡಿದ್ದರು. ಒಂದೇ ಟೇಕ್‌ನಲ್ಲಿ ಈ ದೃಶ್ಯ ಒಕೆಯಾಗಿದೆ. ಆದರೆ ಈ ಲಿಪ್ ಕಿಸ್ ಸುದೀರ್ಘ ಸಮಯದವರೆಗೆ ಮಾಡಲಾಗಿತ್ತು ಅನ್ನೋದು ವಿಶೇಷ.
ಭಾರತೀಯ ಸಿನಿಮಾದ ಮೊದಲ ಲಿಪ್ ಕಿಸ್
ಭಾರತೀಯ ಸಿನಿಮಾ ಆಗಷ್ಟೇ ಚಿಗುರೊಡೆಯುತ್ತಿತ್ತು.ಈ ವೇಳೆ ಸಿನಿಮಾದಲ್ಲಿ ಅಭಿನಯಿಸಲು ಹೆಣ್ಣು ಮಕ್ಕಳು ಮುಂದೆ ಬರುತ್ತಿರಲಿಲ್ಲ. ಆದರೆ ಈ ಕಾಲದಲ್ಲಿ ಹತ್ತಿರ ನಿಂತು ಮಾತನಾಡುವುದೇ ದೊಡ್ಡ ವಿಚಾರವಾಗಿತ್ತು. ಇನ್ನು ಕಿಸ್,ಲಿಪ್ ಕಿಸ್ ದೂರದ ಮಾತು. ಆದರೆ ಇದೇ 1933ರ ಕಾಲಘಟ್ಟದಲ್ಲಿ ಭಾರತೀಯ ಸಿನಿಮಾದಲ್ಲಿ ಬರೋಬ್ಬರಿ 4 ನಿಮಿಷ ಲಿಪ್ ಟು ಲಿಪ್ ಕಿಸ್ ದೃಶ್ಯ ತೆಗೆಯಲಾಗಿತ್ತು.
47 ಕಿಸ್ಸಿಂಗ್ ಸೀನ್ ಚಿತ್ರಕ್ಕೆ ₹6 ಕೋಟಿ ಬಜೆಟ್, ಈ ಬ್ಲಾಕ್ ಬಸ್ಟರ್ ಚಿತ್ರಗಳಿಸಿದ್ದು ಅದೆಷ್ಟು ಕೊಟಿ ರೂ?
1933ರಲ್ಲಿ ಬಿಡುಗಡೆಯಾದ ಕರ್ಮಾ ಚಿತ್ರದಲ್ಲಿ ಈ ದೃಶ್ಯವಿದೆ. ಈ ಚಿತ್ರದಲ್ಲಿ ನಾಯಕಿ ದೇವಿಕಾ ರಾಣಿ. ನಾಯಕ ಹಿಮಾಂಶು ರೈ. ವಿಶೇಷ ಅಂದರೆ ಈ ಚಿತ್ರದ ನಿರ್ದೇಶಕ ಬ್ರಿಟಿಷ್ ಫಿಲ್ಮ್‌ಮೇಕರ್ ಫ್ರೀರ್ ಹಂಟ್. ಲಿಪ್ ಕಿಸ್ ದೃಶ್ಯಕ್ಕೆ ಯಾವುದೇ ಡೂಪ್ ಬಳಸಿಲ್ಲ. ಇನ್ನು ಮೋಶನ್ ಗ್ರಾಫಿಕ್ಸ್ ಸೇರಿದಂತೆ ತಂತ್ರಜ್ಞಾನಗಳು ಅಂದಿನ ಕಾಲದಲ್ಲಿ ಇರಲಿಲ್ಲ. ಯಾವುದೇ ಸೀನ್ ತೆಗೆಯಬೇಕಾದರು ರಿಯಲ್ ಆಗಿ ಮಾಡಬೇಕಿತ್ತು. ಹೀಗಾಗಿ ನಾಯಕ ಹಿಮಾಂಶು ರೈ ಹಾಗೂ ದೇವಿಕಾ ರಾಣಿ ಕ್ಯಾಮಾರಾ ಮುಂದೆ ತಬ್ಬಿಕೊಂಡು 4 ನಿಮಿಷಗಳ ಕಾಲ ಲಿಪ್ ಕಿಸ್ ಮಾಡಿದ್ದರು.

ಆದರೆ ಇಲ್ಲೊಂದು ವಿಶೇಷತೆ ಇದೆ. ಈ ಲಿಪ್ ಕಿಸ್ ನೀಡುವಾಗ ನಾಯಕ ಹಿಮಾಂಶು ರೈ ಹಾಗೂ ದೇವಿಕಾ ರಾಣಿ ಪತಿ ಪತ್ನಿಯರಾಗಿದ್ದರು. ಕರ್ಮಾ ಸಿನಿಮಾ ಶೂಟಿಂಗ್ ಆರಂಭಗೊಳ್ಳುವಾಗಷ್ಟೇ ಹಿಮಾಂಶು ರೈ ಹಾಗೂ ದೇವಿಕಾ ರಾಣಿ ಮದುವೆಯಾಗಿದ್ದರು. ಹೀಗಾಗಿ ಈ ದೃಶ್ಯ ಅತ್ಯಂತ ನ್ಯಾಚ್ಯುರಲ್ ಆಗಿ ಬಂದಿತ್ತು. ದೇವಿಕಾ ರಾಣಿ ಭಾರತೀಯ ಸಿನಿಮಾದ ಮೊದಲ ಸೂಪರ್ ಸ್ಟಾರ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಿರ್ಮಾಣಗೊಂಡ ಚಿತ್ರಗಳಲ್ಲಿ ಕಿಸ್ಸಿಂಗ್ ದೃಶ್ಯಗಳಿತ್ತು. ಕಾರಣ ಈ ವೇಳೆ ಚಿತ್ರಗಳನ್ನು ಬ್ರಿಟಿಷ್ ಅಧಿಕಾರಿಗಳೇ ನೋಡುತ್ತಿದ್ದರು. ಆದರೆ ಭಾರತೀಯ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳು ಹೊಸದಾಗಿತ್ತು. ಭಾರತೀಯ ಸಿನಿ ಪ್ರೇಕ್ಷರಿಗೆ ಇದು ಎಲ್ಲಾ ಮೀರಿದ ಚಿತ್ರವಾಗಿತ್ತು. 2020ರಲ್ಲಿ ಸಾಹಿತಿ ಕಿಶ್ವರ್ ದೇಸಾಯಿ ದಿ ಲಾಂಗೆಸ್ಟ್ ಕಿಸ್, ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ದೇವಿಕಾ ರಾಣಿ ಅನ್ನೋ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಕರ್ಮಾ ಚಿತ್ರದ ಈ ಕಿಸ್ಸಿಂಗ್ ಕುರಿತು ಬರೆಯಲಾಗಿದೆ.
63 ನಿಮಿಷಗಳ ಚಿತ್ರ ಇದಾಗಿದೆ. ಪ್ರಮುಖವಾಗಿ ಈ ಚಿತ್ರ ಭಾರತದ ರಾಯಲ್ ಲೈಫ್‌ಸ್ಟೈಲ್ ಕುರಿತಾಗಿತ್ತು. ರಾಜ ಮಹಾರಾಜರು, ಶ್ರೀಮಂತರು ಭಾರತದಲ್ಲಿ ತಮ್ಮ ದಿನಚರಿ, ಅಭ್ಯಾಸ, ಹವ್ಯಾಸ, ಮನೋರಂಜನೆ ಕುರಿತ ಚಿತ್ರ ಇದಾಗಿತ್ತು. ವಿನೋದಕ್ಕಾಗಿ ಬೇಟೆಯಾಡುವುದು ಸೇರಿದಂತೆ ಹಲವು ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಡಿವೋರ್ಸ್ ಸುದ್ದಿ ಬೆನ್ನಲ್ಲೇ ಗೋವಿಂದ- ಸುನಿತಾ ಲಿಪ್ಲಾಕ್ ವಿಡಿಯೋ ವೈರಲ್: ಇದರಲ್ಲೇನಿದೆ?
