ಬಾಲಿವುಡ್‌ನ ಈ ಸಿನಿಮಾ ಕೇವಲ 6 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಚಿತ್ರದಲ್ಲಿ ಬರೋಬ್ಬರಿ 47 ಕಿಸ್ಸಿಂಗ್ ಸೀನ್‌ಗಳಿವೆ. ಈ ಸೂಪರ್ ಡೂಪರ್ ಚಿತ್ರ ಗಳಿಸಿದ್ದು ಅದೆಷ್ಟು ಕೋಟಿ ರೂಪಾಯಿ ಗೊತ್ತಾ?

ಮುಂಬೈ(ಮಾ.7) ರೊಮ್ಯಾಂಟಿಕ್ ಸಿನಿಮಾಗಳಿಂದ ಬಾಲಿವುಡ್ ಇದೀಗ ಮಾಸ್, ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳತ್ತ ಹೆಚ್ಚು ಆಕರ್ಷಿತಗೊಂಡಿದೆ. ಆದರೆ 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಸಿನಿಮಾ ಎಂದರೆ ಸರಿಸಾಟಿ ಇರಲಿಲ್ಲ. ಅಷ್ಟರ ಮಟ್ಟಿಗೆ ಜನರನ್ನು ಹಿಡಿದಿಟ್ಟುಕೊಳ್ಳುತ್ತಿತ್ತು. ವಿಶೇಷ ಅಂದರೆ ಹೀಗೆ 29 ವರ್ಷಗಳ ಹಿಂದೆ ಬಿಡುಗಡೆಯಾದ ಈ ಬಾಲಿವುಡ್ ಚಿತ್ರವನ್ನು ಕೇವಲ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ರೊಮ್ಯಾಂಟಿಕ್ ಚಿತ್ರ, ಹೀಗಾಗಿ ಈ ಚಿತ್ರದಲ್ಲಿ ಹೀರೋ ಹೀರೋಯಿನ್ ಬರೋಬ್ಬರಿ 47 ಬಾರಿ ತುಟಿಗೆ ಮುತ್ತಿಕ್ಕಿದ್ದಾರೆ. ಈ ರೋಮ್ಯಾಂಟಿಕ್ ಚಿತ್ರ ಬಾಕ್ಸ್‌ಫೀಸ್‌ನಲ್ಲಿ ಗಳಿಸಿದ್ದು ಬರೋಬ್ಬರಿ 78 ಕೋಟಿ ರೂಪಾಯಿ.

ಇದು 1996ರಲ್ಲಿ ಬಡುಗಡೆಯಾದ ರಾಜಾ ಹಿಂದುಸ್ಥಾನಿ ಚಿತ್ರ. ಅಮಿರ್ ಖಾನ್ ಹಾಗೂ ಕರೀಷ್ಣ ಕಪೂರ್ ಅಭಿನಯದ ಈ ಚಿತ್ರ ಬಾಲಿವುಡ್‌ನ ಮೋಸ್ಟ್ ರೊಮ್ಯಾಂಟಿಕ್ ಚಿತ್ರ ರಾಜಾ ಹಿಂದುಸ್ಥಾನಿ. ಈ ಚಿತ್ರದ 8 ಹಾಡುಗಳು ಸೂಪರ್ ಹಿಟ್ ಆಗಿವೆ. ಚಿತ್ರ ಬ್ಲಾಕ್‍‌ಬಸ್ಟರ್ ಹಿಟ್. ಇದೀಗ ಈ ಚಿತ್ರಕ್ಕೆ ಬರೋಬ್ಬರಿ 29 ವರ್ಷಗಳ ಸಂದಿದೆ.

'ಆಯೇ ಹೋ ಮೇರಿ ಜಿಂದಗಿ ಮೇ’ ಎಂದು ನಲಿದ ಹಿರಿಯ ದಂಪತಿಗೆ ಬಹುಪರಾಕ್

ಧರ್ಮೇಶ್ ದರ್ಶನ್ ನಿರ್ದೇಶನದ ಈ ಚಿತ್ರ ಸಮುಧರ ಪ್ರೀತಿಯನ್ನು ತೆರೆದಿಡುತ್ತದೆ. ಸಣ್ಣ ಹಳ್ಳಿಯ ಕ್ಯಾಬ್ ಡ್ರೈವರ್, ಶ್ರೀಮಂತ ಯುವತಿಯ ಪ್ರೀತಿಯಲ್ಲಿ ಬೀಳುವುದೇ ಈ ಚಿತ್ರದ ಕಥಾ ಹಂದರ. ಈ ಚಿತ್ರದಲ್ಲಿ ಅಮೀರ್ ಖಾನ್ ಹಾಗೂ ಕರಿಷ್ಮಾ ಕಪೂರ್ 47 ಕಿಸ್ಸಿಂಗ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ 90ರ ದಶಕದಲ್ಲಿ ಅತೀ ಹೆಚ್ಚು ಕಿಸ್ ಸೀನ್ ಹೆಗ್ಗಳಿಗೆ ಪಾತ್ರವಾದ ಚಿತ್ರ. ಹಾಗಂತ ಈ ಚಿತ್ರದಲ್ಲಿ ಬೇಕಂತ ಯಾವುದೇ ಸೀನ್ ಸೇರಿಸಿಲ್ಲ. ಚಿತ್ರದ ಕತೆ, ಹಾಗೂ ಸೀನ್‌ಗೆ ಅನುಗುಣವಾಗಿ ಕಿಸ್ಸಿಂಗ್ ಸೀನ್ ಇದೆ. ಹೀಗಾಗಿ ಈ ಚಿತ್ರ ಎಲ್ಲರಿಗೂ ಆಪ್ತವಾಗಿತ್ತು.

ರಾಜಾ ಹಿಂದುಸ್ಥಾನಿ ಚಿತ್ರ ಬರೋಬ್ಬರಿ 5 ಫೀಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡಿದೆ. ಜೊತೆಗೆ 7 ಸ್ಕ್ರೀನ್ ಅವಾರ್ಟ್ ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಮ್ಯೂಸಿಕ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿದೆ. ಗಳಿಕೆಯಲ್ಲಿ ಈ ಚಿತ್ರ 1990ರಲ್ಲಿ ಹಲವು ದಾಖಲೆ ಬರೆದಿತ್ತು. ಹಮ್ ಆಪ್‌ಕೆ ಹೇ ಕೌನ್, ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ ಹಾಗೂ ಕುಚ್ ಕುಚ್ ಹೋತಾ ಹೇ ಚಿತ್ರದ ಗಳಿಕೆ ದಾಖಲೆಯನ್ನು ರಾಜಾ ಹಿಂದುಸ್ಥಾನಿ ಮುರಿದಿತ್ತು. 

ಇತ್ತೀಚಿನ ಕೆಲ ವರ್ಷಗಳಲ್ಲಿ ಸೊರಗಿದ್ದ ಬಾಲಿವುಡ್ ಸಿನಿಮಾ ಮತ್ತೆ ಮೈಕೊಡವಿ ನಿಂತುಕೊಂಡಿದೆ. ರಣಬೀರ್ ಕಪೂರ್ ರಶ್ಮಿಕಾ ಮಂದಣ್ಣ ಅಭಿನಯದ ಆ್ಯನಿಮಲ್, ಶಾರುಖ್ ಖಾನ್ ಅಭಿನಯದ ಜವಾನ್, ಪಠಾಣ್ ಸಿನಿಮಾ, ವಿಕ್ಕಿ ಕೌಶಾಲ್-ರಶ್ಮೀಕಾ ಮಂದಣ್ಣ ಅಭಿನಯದ ಛಾವಾ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ನೀಡಿದೆ. ಇದಕ್ಕೂ ಮೊದಲು ಬಾಲಿವುಡ್ ಸಿನಿಮಾ ಸತತ ಸೋಲುಗಳಿಂದ ಕಂಗೆಟ್ಟಿತ್ತು. ದಕ್ಷಿಣ ಭಾರತದ ಸಿನಿಮಾಗಳ ನಡುವೆ ಬಾಲಿವುಡ್ ಸಿನಿಮಾ ಮಂಕಾಗಿತ್ತು. ಗಳಿಕೆಯಲ್ಲೂ ಹಿನ್ನಡೆ ಅನುಭವಿಸಿತ್ತು.

ಒಂದು ಕಿಸ್ಸಿಂಗ್ ಸೀನ್‌ಗೆ 47 ಟೇಕ್‌, ಹಿರೋಯಿನ್ ತಾಯಿ ಮುಂದೆ 3 ದಿನ ಶೂಟಿಂಗ್