ಕಳೆದ ಕೆಲವು ದಿನಗಳಿಂದ ನಟ ಗೋವಿಂದ ಮತ್ತು ಸುನಿತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆರು ತಿಂಗಳ ಹಿಂದೆ ಸುನಿತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಈಗ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದಾರೆ. ಇತ್ತೀಚೆಗೆ ವಿವಾಹ ವಾರ್ಷಿಕೋತ್ಸವದ ವಿಡಿಯೋ ವೈರಲ್ ಆಗಿದೆ. ಸುನಿತಾ ಅವರು ಗೋವಿಂದ್ ಪ್ರೇಯಸಿಯ ಜೊತೆಗಿದ್ದಾರೆ ಎಂದು ತಮಾಷೆಯಾಗಿ ಹೇಳಿಕೆ ನೀಡಿದ್ದರು. ವಕೀಲರು ಈ ವಿಚ್ಛೇದನದ ಸುದ್ದಿಯನ್ನು ನಿರಾಕರಿಸಿದ್ದಾರೆ.

ಬಾಲಿವುಡ್ ನಟ ಗೋವಿಂದ ಮತ್ತು ಸುನಿತಾ ಅಹುಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಭಾರಿ ಹಲ್​ಚಲ್​ ಸೃಷ್ಟಿಸುತ್ತಿದೆ. 37 ವರ್ಷಗಳ ತಮ್ಮ ದಾಂಪತ್ಯದ ನಂತರ ಈ ಜೋಡಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಬರಸಿಡಿಲಿನಂತೆ ಎರಗಿದೆ. ಗೋವಿಂದ ಮತ್ತು ಸುನಿತಾ ಎಂದಿಗೂ ಬೇರೆಯಾಗಲು ಸಾಧ್ಯವಿಲ್ಲ ಎಂದು ಕುಟುಂಬ ಸದಸ್ಯರು ಹೇಳುತ್ತಲೇ ಇದ್ದಾರೆ. ಆದರೆ, ಈ ಸುದ್ದಿ ಮಾತ್ರ ನಿಜ ಎನ್ನುವಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಾಗಲೇ, ಅವರ ಪರ ವಕೀಲರು ಸಮಜಾಯಿಷಿಯನ್ನೂ ಕೊಟ್ಟಾಗಿದೆ. ಸುನಿತಾ ಅವರು ಕೆಲವು ತಪ್ಪುಗ್ರಹಿಕೆಯಿಂದಾಗಿ ಆರು ​​ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ದಂಪತಿ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಸಂತೋಷವಾಗಿದ್ದಾರೆ. ಹೊಸ ವರ್ಷದಲ್ಲಿ ದಂಪತಿ ನೇಪಾಳಕ್ಕೂ ಭೇಟಿ ಕೊಟ್ಟಿದ್ದಾರೆ. ಆದರೆ ಈಗ ಡಿವೋರ್ಸ್​ ಸುದ್ದಿ ಹೊರಬಂದಿದೆಯಷ್ಟೇ, ಮತ್ತೇನೂ ಇಲ್ಲ. ಎಲ್ಲಾ ದಂಪತಿ ನಡುವೆ ಇಂತಹ ವಿಷಯಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯ ಬಂದಿತ್ತಷ್ಟೇ ಎಂದಿದ್ದಾರೆ. ಹಾಗೆಯೇ, ಗೋವಿಂದ ಮತ್ತು ಸುನಿತಾ ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಲಲಿತ್ ಬಿಂದಾಲ್ ನಿರಾಕರಿಸಿದ್ದಾರೆ. 

ನಟ ಗೋವಿಂದ ಡಿವೋರ್ಸ್​ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್​ ಬಾತ್​?

ಇದರ ಬೆನ್ನಲ್ಲೇ ಈ ಜೋಡಿಯ 37ನೇ ವರ್ಷದ ವಿವಾಹ ವಾರ್ಷಿಕೋತ್ಸವದ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಕೇಕ್​ ಕಟ್​ ಮಾಡಿದ ದಂಪತಿ ಲಿಪ್​ಲಾಕ್​ ಮಾಡಿದ್ದಾರೆ. ಪಕ್ಕದಲ್ಲಿಯೇ ಇವರ ಮಕ್ಕಳು ಕೂಡ ಇದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಲಿಪ್​ಲಾಕ್​ ಮಾಡಿದ್ದು ನೋಡಿ ಮಕ್ಕಳು ಮುಜುಗರ ಪಟ್ಟುಕೊಂಡಿರುವುದಾಗಿ ಶೀರ್ಷಿಕೆ ನೀಡಲಾಗಿದೆ. ಆದರೆ ಅಂಥದ್ದೇನೂ ಈ ವಿಡಿಯೋದಲ್ಲಿ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಈ ವಿಡಿಯೋ ನೋಡಿದರೆ ಜೋಡಿ ಚೆನ್ನಾಗಿಯೇ ಇದೆ ಎನ್ನುವುದನ್ನು ತಿಳಿಯಬಹುದಾಗಿದೆ. 

ಇದೇ ಪ್ರೇಮಿಗಳ ದಿನದಂದು, ಸುನಿತಾ ಅವರು ಪಾಪರಾಜಿಗಳಿಗೆ ತಮಾಷೆಯ ಉತ್ತರ ಕೊಟ್ಟಿದ್ದು ವೈರಲ್​ ಆಗಿತ್ತು. ಇದರಲ್ಲಿ ಹ್ಯಾಪ್ಪಿ ವೆಲಂಟೈನ್ಸ್​ ಡೇ ಎಂದಿರುವ ಪಾಪರಾಜಿಗಳು, ಗೋವಿಂದ ಎಲ್ಲಿ ಎಂದು ಪ್ರಶ್ನಿಸಿದ್ದರು. ಗೋವಿಂದ ಅವರು ಪ್ರೇಯಸಿಯ ಜೊತೆಗೆ ಇದ್ದಾರೆ ಎಂದಿದ್ದರು. ಇದಿಷ್ಟೇ ವಿಡಿಯೋ ಎಡಿಟ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈ ಮೂಲಕ ಗೋವಿಂದ ಅವರಿಗೆ ಅಕ್ರಮ ಸಂಬಂಧ ಇರುವುದರಿಂದ ವಿಚ್ಛೇದನ ನೀಡಲಾಗುತ್ತಿದೆ ಎಂದೇ ಕಮೆಂಟ್​ ತುಂಬ ಬರೆಯಲಾಗಿದ್ದು, ಇಷ್ಟೇ ವಿಡಿಯೋ ಎಲ್ಲೆಡೆ ಶೇರ್​ ಆಗುತ್ತಿದೆ. ಆದರೆ ಅಸಲಿಗೆ ಸುನಿತಾ ಅವರು ಅಷ್ಟಕ್ಕೇ ಮಾತು ಮುಗಿಸದೇ ಮುಂದೆ ಮಾತನಾಡಿರುವುದು ಈ ವಿಡಿಯೋದಲ್ಲಿ ನೋಡಬಹುದು. 


ಇದರಲ್ಲಿ ಸುನಿತಾ ಅವರು, ಗೋವಿಂದ ಪ್ರೇಯಸಿಯ ಜೊತೆಗೆ ಇದ್ದಾರೆ. ಹಾಗೆಂದು ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ. ಅವರಿಗೆ ಕೆಲಸನೇ ಪ್ರೇಯಸಿಯ ಹಾಗೆ. ಅವರು ಕೆಲಸವನ್ನು ತುಂಬಾ ಪ್ರೀತಿಸುತ್ತಾರೆ. ಈಗಲೂ ಕೆಲಸದಲ್ಲಿಯೇ ಇದ್ದಾರೆ ಎಂದಿರುವುದನ್ನು ಕೇಳಬಹುದಾಗಿದೆ. ಆದರೆ ಆ ವಿಡಿಯೋ ಮಾತ್ರ ಕಟ್​ ಮಾಡಲಾಗಿದೆ. ಇದರ ಮಧ್ಯೆಯೇ, ಗೋವಿಂದ ಅವರ ವಕೀಲ ಮತ್ತು ಕುಟುಂಬ ಸ್ನೇಹಿತ ಲಲಿತ್ ಬಿಂದಾಲ್ ಅವರ ಹೇಳಿಕೆಯೊಂದು ಹೊರಬಂದಿದ್ದು, ಇದರಲ್ಲಿ ಡಿವೋರ್ಸ್​ ಸುದ್ದಿ ಹರಡಿದ್ದು ಹೇಗೆ ಎಂಬ ಬಗ್ಗೆ ತಿಳಿಯಬಹುದಾಗಿದೆ.

ನಟ ಗೋವಿಂದನ ಪ್ರೇಯಸಿ ಕುರಿತು ಪತ್ನಿ ರಿವೀಲ್​: 6 ತಿಂಗಳ ಹಿಂದೆ ಸಲ್ಲಿಸಿದ್ದ ಡಿವೋರ್ಸ್​ ಅರ್ಜಿ ವಾಪಸ್​!

View post on Instagram