ಅತ್ಯಾಚಾರ ಆರೋಪ; ಖ್ಯಾತ ಗಾಯಕ ರಾಹುಲ್ ಜೈನ್ ವಿರುದ್ಧ ಎಫ್ ಐ ಆರ್ ದಾಖಲು
ಅತ್ಯಾಚಾರ ಆರೋಪದಡಿ ಬಾಲಿವುಡ್‌ನ ಖ್ಯಾತ ಗಾಯಕ ಹಾಗೂ ಸಂಗೀತ ಸಂಯೋಜಕ ರಾಹುಲ್ ಜೈನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. 30 ವರ್ಷದ ಕಾಸ್ಟ್ಯೂಮ್ ಸ್ಟೈಲಿಸ್ಟ್ ಮೇಲೆ ಅತ್ಯಾಚಾರ ಮಾಡಿದ ಆರೋಪ ದಡಿ ರಾಹುಲ್ ವಿರುದ್ಧ ದೂರು ದಾಖಲಾಗಿತ್ತು.
ಅತ್ಯಾಚಾರ ಆರೋಪದಡಿ ಬಾಲಿವುಡ್‌ನ ಖ್ಯಾತ ಗಾಯಕ ಹಾಗೂ ಸಂಗೀತ ಸಂಯೋಜಕ ರಾಹುಲ್ ಜೈನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. 30 ವರ್ಷದ ಕಾಸ್ಟ್ಯೂಮ್ ಸ್ಟೈಲಿಸ್ಟ್ ಮೇಲೆ ಅತ್ಯಾಚಾರ ಮಾಡಿದ ಆರೋಪ ದಡಿ ರಾಹುಲ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಮುಂಬೈ ಪೊಲೀಸರು ರಾಹುಲ್ ವಿರುದ್ಧ ಎಫ್ ಐ ಆರ್ ಆಗಿದೆ ಎಂದು ಹೇಳಿದ್ದಾರೆ. ಆದರೆ ಗಾಯಕ ರಾಹುಲ್ ತನ್ನ ವಿರುದ್ಧ ಕೇಳಿಬಂದ ಎಲ್ಲಾ ಆರೋಪವನ್ನು ತಳ್ಳಿಹಾಕಿದ್ದಾರೆ ಹಾಗೂ ಇದು ಆಧಾರ ರಹಿತವಾದುದ್ದು ಎಂದು ಹೇಳಿದ್ದಾರೆ.
30 ವರ್ಷದ ಮಹಿಳೆ ಆಗಸ್ಟ್ 11ರಂದು ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು ತನ್ನ ಹೇಳಿಕೆಯಲ್ಲಿ, ರಾಹುಲ್ ಜೈನ್ ತನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕಿಸಿದರು ಮತ್ತು ಅವರು ತನ್ನ ಕೆಲಸವನ್ನು ಹಾಡಿಹೊಗಳಿದರು. ಬಳಿಕ ಉಪನಗರದ ಅಂಧೇರಿಯಲ್ಲಿರುವ ಅವರ ಫ್ಲಾಟ್‌ಗೆ ಭೇಟಿ ನೀಡುವಂತೆ ಕರೆದನು, ತನ್ನ ವೈಯಕ್ತಿ ಕಾಸ್ಟ್ಯೂಮ್ ಡಿಸೈನರ್ ಆಗಿರುವಂತೆ ಹೇಳಿದ ಎಂದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೂರುದಾರೆ ಆಗಸ್ಟ್ 11 ರಂದು ರಾಹುಲ್ ಜೈನ್ ಅವರ ಫ್ಲಾಟ್‌ಗೆ ಭೇಟಿ ನೀಡಿದ್ದರು. ಆತ ತನ್ನ ವಸ್ತುಗಳನ್ನು ತೋರಿಸುವ ನೆಪದಲ್ಲಿ ತನ್ನ ಮಲಗುವ ಕೋಣೆಗೆ ಬರುವಂತೆ ಹೇಳಿದ. ಅಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ತಾನು ವಿರೋಧಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ, ಅಲ್ಲದೆ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎಂದು 30 ವರ್ಷದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸ್ ಮಾಹಿತಿಯ ಪ್ರಕಾರ ದೂರುದಾರೆ ಫ್ರೀಲ್ಯಾನ್ಸ್ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸಂತ್ರಸ್ತ ಮಹಿಳೆ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಆಯ್ಕೆ ಮಾಡುತ್ತಾರೆ. ಕೆಲಸದ ನೆಪದಲ್ಲಿ ತಮ್ಮ ಅಪಾರ್ಟ್ಮೆಂಟ್ಗೆ ಕರೆಸಿಕೊಂಡ ರಾಹುಲ್ ಜೈನ್ ಅವರು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತನಿಖೆ ಆರಂಭ ಆಗಿದೆ. ಐಪಿಸಿ ಸೆಕ್ಷನ್ 376, 323 ಹಾಗೂ 506ರ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಮದುವೆ ಆಸೆ ತೋರಿಸಿ ರೇಪ್: ಕೋರ್ಟ್‌ಲ್ಲಿ ವಿಚಿತ್ರ ಕೇಸ್ ರದ್ದು
ಆರೋಪ ತಳ್ಳಿಹಾಕಿದ ರಾಹುಲ್
ರಾಹುಲ್ ಜೈನ್ ಅವರು ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಆ ಮಹಿಳೆ ಯಾರು ಎಂಬುದೇ ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. 'ಆ ಮಹಿಳೆ ಯಾರು ಎಂದು ನನಗೆ ತಿಳಿದಿಲ್ಲ. ಆಕೆ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಮತ್ತು ಆಧಾರ ರಹಿತ ಆಗಿವೆ. ಈ ಹಿಂದೆ ಕೂಡ ಒಬ್ಬರು ನನ್ನ ಮೇಲೆ ಆರೋಪ ಮಾಡಿದ್ದರು. ಆ ಪ್ರಕರಣದಲ್ಲಿ ನನಗೆ ನ್ಯಾಯ ಸಿಕ್ಕಿತ್ತು. ಅಂದು ಆರೋಪ ಮಾಡಿದ ಮಹಿಳೆಯ ಜೊತೆಗೆ ಈಕೆಗೂ ಸಂಪರ್ಕ ಇರಬಹುದು' ಎಂದು ರಾಹುಲ್ ಜೈನ್ ಹೇಳಿಕೆ ನೀಡಿದ್ದಾರೆ. ಈವರೆಗೂ ರಾಹುಲ್ ಜೈನ್ ಬಂಧನವಾಗಿಲ್ಲ.
ಅತ್ಯಾಚಾರ ಆರೋಪ: ಮಧ್ಯ ಪ್ರದೇಶದಲ್ಲಿ ಸ್ವಯಂಘೋಷಿತ ದೇವಮಾನವ ಬಂಧನ
ಈ ವೊದಲು ಸಹ ಅತ್ಯಾಚಾರ ಆರೋಪ ಕೇಳಿಬಂದಿತ್ತು
ಅಂದಹಾಗೆ, ರಾಹುಲ್ ಜೈನ್ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇದೇ ರೀತಿ ಕೇಸ್ ದಾಖಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಬಾಲಿವುಡ್ ಬರಹಗಾರ್ತಿ ಮತ್ತು ಲಿರಿಸಿಸ್ಟ್ ಒಬ್ಬರು ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಮತ್ತು ವಂಚನೆ ಆರೋಪ ಮಾಡಿದ್ದರು. ಆಗಲೂ ರಾಹುಲ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.