ಅತ್ಯಾಚಾರ ಆರೋಪ: ಮಧ್ಯ ಪ್ರದೇಶದಲ್ಲಿ ಸ್ವಯಂಘೋಷಿತ ದೇವಮಾನವ ಬಂಧನ
ಮಧ್ಯ ಪ್ರದೇಶದಲ್ಲಿ ಸ್ವಯಂಘೋಷಿತ ದೇವ ಮಾನವರೊಬ್ಬರನ್ನು ಬಂಧಿಸಲಾಗಿದೆ. ಮಹಿಳಾ ಭಕ್ತರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಲಾಗಿದ್ದು, ಬಂಧಿಸಲಾಗಿದೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಮಹಿಳಾ ಭಕ್ತೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ಸ್ವಾಮಿ ವೈರಾಗ್ಯಾನಂದ ಗಿರಿ ಅಲಿಯಾಸ್ ಮಿರ್ಚಿ ಬಾಬಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿ ದೇವಮಾನವನನ್ನು ಗ್ವಾಲಿಯರ್‌ನ ಹೋಟೆಲ್‌ನಿಂದ ಬೆಳಗ್ಗೆ ಬಂಧಿಸಲಾಯಿತು ಎಂದು ಗ್ವಾಲಿಯರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ಮಾಹಿತಿ ನೀಡಿದ್ದಾರೆ.
ಮಹಿಳಾ ಭಕ್ತರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವಯಂಘೋಷಿತ ದೇವಮಾನವನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ರಿಚಾ ಚೌಬೆ ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ಮುಂದುವರಿಸುವುದಾಗಿಯೂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾಮಿ ವೈರಾಗ್ಯಾನಂದ ಗಿರಿ ಅವರನ್ನು ಮಧ್ಯ ಪ್ರದೇಶದ ಭೋಪಾಲ್ (Bhopal) ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗಿದ್ದು, ಆಗಸ್ಟ್ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಲೈಂಗಿಕ ಕಿರುಕುಳ ಆರೋಪ: ತಮಿಳುನಾಡಿನ ರಾಮೇಶ್ವರಂನಲ್ಲಿ ಪಾದ್ರಿ ಬಂಧನ
ಆರೋಪಿ ದೇವಮಾನವ ಜುಲೈ 17 ರಂದು ಭೋಪಾಲ್‌ನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು.
ಮದುವೆಯಾಗಿ ಬಹಳ ದಿನಗಳಾದರೂ ತನಗೆ ಮಕ್ಕಳಾಗಿರಲಿಲ್ಲ. ನಂತರ ತಾನು ಸ್ವಾಮಿ ವೈರಾಗ್ಯಾನಂದ ಗಿರಿಯ ಸಂಪರ್ಕಕ್ಕೆ ಬಂದಿದ್ದೆ ಎಂದೂ ಸಂತ್ರಸ್ಥ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ ಪ್ರಕರಣ: ಬಿಜೆಪಿಯ ಶ್ರೀಕಾಂತ್ ತ್ಯಾಗಿ ಬಂಧಿಸಿದ ಪೊಲೀಸರು
ನಂತರ ಅವರು ಕೆಲವು ವಿಧಿ ವಿಧಾನಗಳ ಮೂಲಕ ನೀನು ಗರ್ಭಿಣಿಯಾಗುವುದಾಗಿ ಭರವಸೆ ನೀಡಿದ್ದರು ಎಂದು ದೂರುದಾರ ಮಹಿಳೆ ತಿಳಿಸಿದ್ದಾರೆ. ಅಲ್ಲದೆ, ಅವರು ನೀಡಿದ ನೈವೇದ್ಯವನ್ನು ಸೇವಿಸಿ ಮೂರ್ಛೆ ಹೋದಾಗ ದೇವಮಾನವ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಹ ಮಹಿಳೆ ಆರೋಪಿಸಿದ್ದಾರೆ. ಹಾಗೂ, ಸಾಮಾಜಿಕ ಕಳಂಕದ ಭಯದಿಂದ ಘಟನೆಯ ನಂತರ ತಕ್ಷಣವೇ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ ಎಂದೂ ಹೆಚ್ಚುವರಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
ಸ್ವಯಂ ಘೋಷಿತ ದೇವ ಮಾನವ ಸ್ವಾಮಿ ವೈರಾಗ್ಯಾನಂದ ಗಿರಿ ಅವರು ಕಳೆದ ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಗೆಲುವಿಗಾಗಿ ದೇವಮಾನವ ಯಜ್ಞವನ್ನು ಆಯೋಜಿಸಿದ್ದರು ಮತ್ತು ಅವರು ಚುನಾವಣೆಯಲ್ಲಿ ಸೋತರೆ ಜಲ ಸಮಾಧಿ ಆಗುವುದಾಗಿ ಘೋಷಿಸಿದ್ದರು. ಆದರೆ, ಹೆಚ್ಚು ಪೊಲೀಸರು ಇದ್ದ ಕಾರಣ ಅವರು ಜಲ ಸಮಾಧಿ ಆಗಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.