ಡಾಕ್ಟರ್ ಅಥವಾ ಲಾಯರ್ ಆಗಬೇಕು, ಆಕ್ಟಿಂಗ್ ಕಲ್ಪನೆ ಕೂಡ ಇರಲಿಲ್ಲ: ಮಾನುಷಿ ಚಿಲ್ಲರ್
ಸಾಮ್ರಾಟ್ ಪೃಥ್ವಿರಾಜ್ ಚಿತ್ರೀಕರಣ ಮತ್ತು ಅಕ್ಷಯ್ ರಾಜ್ ಜೊತೆಗಿನ ಸಿನಿ ಜರ್ನಿ ಬಗ್ಗೆ ಮಾತನಾಡಿದ ಮಿಸ್ ವರ್ಲ್ಡ್.
2017ರ ಮಿಸ್ ವರ್ಡ್ ಕಿರೀಟ ಗೆದ್ದ ಮಾನುಷಿ ಚಿಲ್ಲರ್ ಐತಿಹಾಸಿಕ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಮೂಲಕ ಬಿ-ಟೌನ್‌ಗೆ ಕಾಲಿಟ್ಟಿದ್ದಾರೆ. ಸಂಯೋಗಿತಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಕ್ಷಯ್ ಕುಮಾರ್‌ಗೆ ಜೋಡಿಯಾಗಿದ್ದಾರೆ.
2017 ನಂತರ ಜರ್ನಿ:
20 ವರ್ಷದಲ್ಲಿ ನಾನು ಮಿಸ್ ವರ್ಲ್ಡ್ ಕಿರೀಟ ಪಡೆದುಕೊಂಡೆ, ಆಕ್ಷಣದಿಂದ ನನ್ನ ಜೀವನ ಬದಲಾಗಿದೆ. ಆರಂಭದಲ್ಲಿ ಮಿಸ್ ವರ್ಲ್ಡ್ ಪೇಜೆಂಟ್ ತಯಾರಿ ಶುರು ಮಾಡಿದೆ ಅನಂತರ ನನಗೆ ಪಾಪ್ಯೂಲಾರಿಟಿ, ಪ್ರೆಸ್‌ಮೀಟ್ ನೂರಾರೂ ಐಷಾರಾಮಿ ಬ್ರ್ಯಾಂಡ್‌ಗಳ ಸಂಪರ್ಕ ಬೆಳೆಯಿತ್ತು. ವಿದ್ಯಾಭ್ಯಾಸ ಮುಗಿಸಿ ಡಾಕ್ಟರ್ ಅಥವಾ ಲಾಯರ್ ಆಗಬೇಕು ಎನ್ನುವ ಕುಟುಂಬದಿಂದ ನಾನು ಬಂದಿದ್ದು. ಸಿನಿಮಾ ಮಾಡುವ ಯೋಚನೆ ಕೂಡ ನನಗೆ ಇರಲಿಲ್ಲ. ನನ್ನ ಪ್ರಪಂಚ ಪುಟ್ಟದಾಗಿತ್ತು ಪೇಜೆಂಟ್ ಪಡೆದುಕೊಂಡ ನಂತರ ದೊಡ್ಡದಾಗಿದೆ. ಪ್ರತಿ ಸಂದರ್ಭದಲ್ಲೂ ನಾನು ನಾನಾಗಿರುವುದಕ್ಕೆ ಯಾವ ಬದಲಾವಣೆ ಕಾಣಿಸಲಿಲ್ಲ' ಎಂದು ಮನುಷಿ ಬಾಂಬೆ ಟೈಮ್ಸ್ ಜೊತೆ ಮಾತನಾಡಿದ್ದಾರೆ.
ಡಾಕ್ಟರ್ ಆಗಬೇಕಿತ್ತಂತೆ:
'ನಾನು ಡಾಕ್ಟರ್ ಆಗಬೇಕು ಎನ್ನುವುದು ನನ್ನ ಕುಟುಂಬದ ಆಸೆ. ಕಾಲೇಜ್ ದಿನಗಳನ್ನು ನಾನು ಎಂಜಾಯ್ ಮಾಡಿರುವೆ ಆದರೆ ಮಿಸ್ ವರ್ಲ್ಡ್ ಕಿರೀಟ ಪಡೆದುಕೊಂಡ ನಂತರ ಹೇಗೆಲ್ಲಾ ಬದಲಾವಣೆಗಳು ಆಗುತ್ತದೆ ಎಂಬ ಕಲ್ಪನೆ ಮಾಡಿಕೊಳ್ಳುವುದು ಹೇಗೆ? ಆರಂಭದಲ್ಲಿ ಎರಡು ಮನಸ್ಸು ಇತ್ತು, ಒಂದು ನಾನು ವಿದ್ಯಾಭ್ಯಾಸ ಸೆಟಲ್ ಆಗುವ ಜೀವನ ಮತ್ತೊಂದು ಏನೇಲ್ಲಾ ಅಗುತ್ತೆ ಹೇಗೆಲ್ಲಾ ಬದಲಾಣೆ ಒಪ್ಪಿಕೊಳ್ಳಬೇಕು ಎನ್ನುವ ಕನ್ಫ್ಯೂಸ್ ಲೈಫ್. ಪ್ರತಿಯೊಂದು ವಿಚಾರಗಳನ್ನು ಕುಟುಂಬದ ಜೊತೆ ಹಂಚಿಕೊಳ್ಳುತ್ತಿದ್ದೆ. ನನ್ನ ಮಾರ್ಕ್ಸ್ ಶೀಟ್ ಇಂಟರ್‌ನೆಟ್‌ನಲ್ಲಿ ಇರುತ್ತಿತ್ತು ಹೀಗಾಗಿ ಬಾಲ್ಯದಿಂದ ನನಗೆ ಪ್ರೈವಸಿ ಇರಲಿಲ್ಲ. ವಿದ್ಯಾಭ್ಯಾಸಕ್ಕೆ ಪ್ರಮುಖ್ಯತೆ ನೀಡಿದ್ದೆ, ಮುಂಬೈನಲ್ಲಿ ಓದಬೇಕು ಇಲ್ಲವಾದರೆ ವಿದೇಶ ಪ್ರಯಾಣ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದೆ' ಎಂದು ಮನುಷಿ ಹೇಳಿದ್ದಾರೆ.
Samrat Prithviraj Twitter Review; ಅಕ್ಷಯ್ ಕುಮಾರ್ ಸಿನಿಮಾಗೆ ಫ್ಯಾನ್ಸ್ ಫಿದಾ
ಸಿನಿಮಾ ಜರ್ನಿ:
'ಒಂದೊಳ್ಳೆ ವೃತ್ತಿಯನ್ನು ಎಕ್ಸಪ್ಲೋರ್ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸಾಮ್ರಾಟ್ ಪೃಥ್ವಿರಾಜ್ ರೀತಿ ಸಿನಿಮಾ ಸಿಕ್ಕಾಗ ಖಂಡಿತ ದೊಡ್ಡ ಅವಕಾಶಗಳು ಕಾಯುತ್ತಿರುತ್ತದೆ. ನನ್ನ ಮಿಸ್ ವರ್ಲ್ಡ್ ಟೀಂ ನನಗೆ ಸಪೋರ್ಟ್ ಮಾಡಿತ್ತು, ಗೊತ್ತಿಲ್ಲ ವಿಚಾರಗಳ ಪ್ರಯತ್ನ ಮಾಡುವುದಕ್ಕೆ ಯಾಕೆ ಭಯ ಎಂದು ಹೇಳುತ್ತಿದ್ದರು. ನನ್ನ ಶಿಕ್ಷಕರು ನನಗೆ ಸಲಹೆ ನೀಡುತ್ತಿದ್ದರು. ಈಗ ನಾನು ತುಂಬಾ ಖುಷಿಯಾಗಿರುವೆ, ಎರಡು ತಿಂಗಳು ಸಿನಿಮಾಗೆ ತಯಾರಿ ಮಾಡಿಕೊಂಡೆ, ಈ ಪ್ರಪಂಚ ತುಂಬಾ ಕ್ರಿಯೇಟಿವ್ ಆಗಿದೆ ಹೀಗಾಗಿ ನಾನು ಹೊಸ ವಿಚಾರಗಳನ್ನು ಕಲಿಯುತ್ತಿರುವೆ' ಎಂದಿದ್ದಾರೆ ಮನುಷಿ.
ಪೃಥ್ವಿರಾಜ್ ಸಿನಿಮಾ: ಅಕ್ಷಯ್ ಜೊತೆ ಮಾಜಿ ವಿಶ್ವಸುಂದರಿ ಮಾನುಷಿ..!
'ಸಂಯೋಗಿತಾ ಪಾತ್ರ ಮಾಡಲು ನಾನು 8 ರಿಂದ 9 ತಿಂಗಳು ಟ್ರೈನಿಂಗ್ ಪಡೆದುಕೊಂಡಿರುವೆ. ಸ್ಕ್ರಿಪ್ಟ್‌ನ ಯಾವ ರೀತಿ ಓದಬೇಕು, ಕಥೆ ಹಿಂದಿರುವ ಹಿನ್ನಲೆಯನ್ನು ತಿಳಿದುಕೊಳ್ಳಬೇಕು. ಜನರಿಗೆ ಸಂಯೋಗಿತಾ ಬಗ್ಗೆ ಇರುವ ಕಲ್ಪನೆಯನ್ನು ನಾನು ಮುಟ್ಟಬೇಕು ಅನ್ನೋ ಪ್ರೆಶರ್ ಇತ್ತು. ನಿರ್ದೇಶಕ ಚಂದ್ರಪ್ರಕಾಶ್ ದಿನ ಒಂದು ಗಂಟೆ ಪಾತ್ರದ ಬಗ್ಗೆ ಹೇಳುತ್ತಿದ್ದರು. ಸೆಮಿ ಕ್ಲಾಸಿಕಲ್ ಕಥಕ್ ನೃತ್ಯ ಕಲಿತಿರುವೆ. ಕೊರೋನಾ ಪ್ಯಾಂಡಮಿಕ್ ಇದ್ದ ಕಾರಣ ನಾವು ತಡವಾಗಿ ಸಿನಿಮಾ ಕೆಲಸ ಮಾಡಬೇಕಿತ್ತು. ಅಕ್ಷಯ್ ಕುಮಾರ್ ಅವರಿಂದ ಅನೇಕ ಒಳ್ಳೆ ವಿಚಾರಗಳನ್ನು ಕಲಿತಿರುವೆ. ಇಷ್ಟು ದಿನ ತಡವಾಗಿರುವುದಕ್ಕೆ ನಾನು ಎರಡು ಸಿನಿಮಾ ಸಹಿ ಮಾಡಬಹುದಿತ್ತು ಆದರೆ ಹಾಗೆ ಮಾಡಲಿಲ್ಲ. ಈಗ ಸಿನಿಮಾ ರಿಲೀಸ್ ಅಗಿದೆ ಜನರು ಇಷ್ಟ ಪಟ್ಟಿದ್ದಾರೆ ನಾನು ಖುಷಿಯಾಗಿರುವೆ' ಎಂದು ಮನುಷಿ ಹೇಳಿದ್ದಾರೆ.