Samrat Prithviraj Twitter Review; ಅಕ್ಷಯ್ ಕುಮಾರ್ ಸಿನಿಮಾಗೆ ಫ್ಯಾನ್ಸ್ ಫಿದಾ
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ಮತ್ತು ವಿಶ್ವ ಸುಂದರಿ ಮಾನುಷಿ ಚಿಲ್ಲರ್(manushi chhillar) ನಟನೆಯ ಸಾಮ್ರಾಟ್ ಪೃಥ್ವಿರಾಜ್(Samrat Prithviraj) ಸಿನಿಮಾ ಕೊನೆಗೂ ಅಭಿಮಾನಿಗಳ ಮುಂದೆ ಬಂದಿದೆ. ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಇಂದು (ಜೂನ್ 3) ಅದ್ದೂರಿಯಾಗಿ ತೆರೆಗೆ ಬಂದಿದೆ.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ಮತ್ತು ವಿಶ್ವ ಸುಂದರಿ ಮಾನುಷಿ ಚಿಲ್ಲರ್(manushi chhillar) ನಟನೆಯ ಸಾಮ್ರಾಟ್ ಪೃಥ್ವಿರಾಜ್(Samrat Prithviraj) ಸಿನಿಮಾ ಕೊನೆಗೂ ಅಭಿಮಾನಿಗಳ ಮುಂದೆ ಬಂದಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಪೃಥ್ವಿರಾಜ್‌ನನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಕೊನೆಗೂ ಆ ಸಮಯ ಬಂದಿದೆ. ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಇಂದು (ಜೂನ್ 3) ಅದ್ದೂರಿಯಾಗಿ ತೆರೆಗೆ ಬಂದಿದೆ. ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಟ್ರೈಲರ್ ಮೂಲಕವೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ಪೃಥ್ವಿರಾಜ್ ಈಗ ಚಿತ್ರಮಂದಿರಗಳಲ್ಲಿ ರಾರಾಜಿಸುತ್ತಿದೆ.
ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ರಾಜ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನುಷಿ ಚಿಲ್ಲರ್ ಸಂಯೋಗಿತಾ ಪಾತ್ರದಲ್ಲಿ ನಟಿಸಿದ್ದಾರೆ. ಸೋನು ಸೂದ್, ಸಂಜಯ್ ದತ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಮೊದಲ ವಿಮರ್ಶೆ ತಿಳಿಸುತ್ತಿದ್ದಾರೆ. ಅನೇಕರು ಸಿನಿಮಾವನ್ನು ಹಾಡಿಹೊಗಳುತ್ತಿದ್ದಾರೆ.
ಅಕ್ಷಯ್ ಕುಮಾರ್ ಮೂರ್ಖ, ನನ್ನ ಪಾಲಿಗೆ ಅಕ್ಷಯ್ ಹಾಗೂ ಅಕ್ಬರ್ ಇಬ್ಬರೂ ಈ ದೇಶದವರು!
ಅಭಿಮಾನಿಯೊಬ್ಬ, 'ಸಾಮ್ರಾಟ್ ಪೃಥ್ವಿರಾಜ್ ಬಗ್ಗೆ ಹೇಳುವುದಾದರೇ ಹಿಸ್ಟೋರಿಕಲ್ ಬ್ಲಾಕ್ ಬಸ್ಟರ್' ಎಂದು ಹೇಳಿದ್ದಾರೆ. 'ಅಕ್ಷಯ್ ಕುಮಾರ್ ಅದ್ಭುತ ಪರ್ಫಾಮೆನ್ಸ್. ಕ್ಲೈಕ್ಸ್ ಮ್ಯಾಕ್ಸ್ ಅದ್ಭುತವಾಗಿದೆ. ಸಾಮ್ರಾಟ್ ಪೃಥ್ವಿರಾಜ್ ಕೊನೆಯ ದೃಶ್ಯ ನಿಜಕ್ಕೂ ಕಣ್ಣಲ್ಲಿ ತರಿಸುತ್ತದೆ. ಯುದ್ಧ ದೃಶ್ಯ ಅದ್ಭುತವಾಗಿದೆ ಮತ್ತು ವಿಶ್ವಲ್ ಎಫೆಕ್ಟ್ ಚೆನ್ನಾಗಿದೆ' ಎಂದು ಹೇಳಿದ್ದಾರೆ.ಅಕ್ಷಯ್ ಕುಮಾರ್ ಮೂರ್ಖ, ನನ್ನ ಪಾಲಿಗೆ ಅಕ್ಷಯ್ ಹಾಗೂ ಅಕ್ಬರ್ ಇಬ್ಬರೂ ಈ ದೇಶದವರು!
ಮತ್ತೋರ್ವ ವೀಕ್ಷಕ, ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ನೋಡಿ 5 ಕ್ಕೆ 5 ಅಂಕ ನೀಡಿದ್ದಾರೆ. 'ಈಗ ಸಿನಿಮಾ ನೋಡಿ ಮುಗಿಸಿದೆ. ಸಿನಿಮಾ ಅದ್ಭುತವಾಗಿದೆ' ಎಂದು ಸರಳವಾಗಿ ವಿಮರ್ಶೆ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಜೊತೆ ಸಿನಿಮಾ ವೀಕ್ಷಿಸಿದ ಯೋಗಿ ಆದಿತ್ಯನಾಥ್, ಕಾಲೆಳೆದ ಅಖಿಲೇಶ್!
ಸಿನಿಮಾ ಖಂಡಿತ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಅನೇಕ ಅಭಿಮಾನಿಗಳು ಹೇಳಿದ್ದಾರೆ. ಅಕ್ಷಯ್ ಕುಮಾರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
'ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಅದ್ಭುತ ದೃಶ್ಯಕಾವ್ಯವಾಗಿದೆ. ಎಂಥ ಅದ್ಭುತ ಸಿನಿಮಾ. ಖಂಡಿತ ಇದು ಬ್ಲಾಕ್ ಬಸ್ಟರ್ ಆಗಲಿದೆ' ಎಂದು ಹೇಳಿದ್ದಾರೆ.