ರಿಹಾನಾ ಎಂಬ ಇಂಟರ್‌ನ್ಯಾಷನಲ್ ಪಾಪ್‌ಸ್ಟಾರ್, ನಾಯಕಿ ಕಂ ಗಾಯಕಿ ಕಂ ಉದ್ಯಮಿ ಇದ್ದಕ್ಕಿದ್ದಂತೆ ಭಾರತದಲ್ಲೂ ಸುದ್ದಿಯಾಗಲು ಕಾರಣ, ಆಕೆ ಮಾಡಿರುವ ಒಂದು ಟ್ವೀಟ್. ಅದು ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರದ ಬಗ್ಗೆ ಆಕೆ ಮಾಡಿದ್ದು. ಸಿಎನ್ಎನ್‌ ಚಾನೆಲ್‌ನಲ್ಲಿ ರೈತರ ಮುಷ್ಕರ ಬಗ್ಗೆ ಪ್ರಸಾರ ಆಗುತ್ತಿದ್ದ ಒಂದು ಕಾರ್ಯಕ್ರಮವನ್ನು ಉಲ್ಲೇಖಿಸಿ ಆಕೆ, 'ನಾವೇಕೆ ಈ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ?' ಎಂದು ಟ್ವಿಟ್ ಮಾಡಿದ್ದಳು. ಇದು ಒಂದು ರೀತಿಯಲ್ಲಿ ರೈತರ ಮುಷ್ಕರದ ಪರವಾಗಿ ಹಾಗೂ ಮೋದಿ ಸರಕಾರದ ವಿರುದ್ಧವಾಗಿ ಮಾಡಿದ ಟ್ವಿಟ್‌ನಂತೆ ಇತ್ತು.

ದೇಶದ ವಿರುದ್ದ ಜಾಗತಿಕ ಸಂಚು: ಗ್ರೆಟಾ ಟ್ವಿಟರ್‌ನಲ್ಲಿ ದಾಖಲೆ!

ಅಂದ ಹಾಗೆ ಈಕೆ ಯಾರಂತ ನಿಮಗೆ ಗೊತ್ತಿರಲಾರದು. ಯೂಟ್ಯೂಬ್‌ಗೆ ಹೋಗಿ ರಿಹಾನಾ ಅಂತ ಟೈಪಿಸಿ ನೋಡಿ. ಈಕೆಯ ಪಾಪ್ ಸಾಂಗ್‌ಗಳ ಲಕ್ಷಾಂತರ ವಿಡಿಯೋಗಳು, ಆಲ್ಬಂಗಳು ಪ್ರತ್ಯಕ್ಷವಾಗುತ್ತವೆ. ಅವುಗಳನ್ನು ನೋಡುತ್ತಾ ಹಾಗೇ ಕಳೆದು ಹೋಗಿ ಬಿಡಬಹುದು. ಈಕೆ ಹಾಲಿವುಡ್‌ನವಳಲ್ಲ, ಬಾಲಿವುಡ್‌ನವಳೂ ಅಲ್ಲ. ಆದರೂ ಹಾಲಿವುಡ್‌ ನಟ ನಟಿಯರಿಗಿಂತ ಹೆಚ್ಚಾಗಿ ಜನಪ್ರಿಯತೆ ಗಳಿಸಿಕೊಂಡಿದ್ದಾಳೆ. ಈಕೆಯ ಮೂಲ ಕೆರಿಬಿಯನ್ ದ್ವೀಪ ಸಮುದಾಯದಲ್ಲಿರುವ ಬಾರ್ಬೆಡೋಸ್ ಎಂಬ ಒಂದು ದ್ವೀಪ. ಇಂದು ಈಕೆಯ ಹಲವಾರು ಆಲ್ಬಂಗಳ ಕೋಟ್ಯಂತರ ಪ್ರತಿ ಸೇಲ್ ಆಗಿವೆ.

 

;

 

ರಿಹಾನಾಳದು ಡಿಸ್ಟರ್ಬ್‌ಡ್ ಬಾಲ್ಯ. ಈಕೆಯ ತಂದೆ ರಣ ಕುಡುಕ, ಮಾದಕ ವ್ಯಸನಿ. ಇದೇ ಕಾರಣದಿಂದಲೇ ತಂದೆಗೂ ತಾಯಿಗೂ ಡೈವೋರ್ಸ್ ಆಗಿ ಇಬ್ಬರೂ ಬೇರೆಯಾದರು. ರಿಹಾನಾಗೆ ಬಾಲ್ಯದಿಂದಲೇ ದುಃಸ್ವಪ್ನಗಳು ಬೀಳುತ್ತಿದ್ದವು. ಸದಾ ಗುಣವಾಗದ ತಲೆನೋವು ಆಕೆಯನ್ನು ಅಟಕಾಯಿಸಿಕೊಂಡಿತ್ತು. ತನ್ನನ್ನು ಕಾಡುತ್ತಿರುವ ಎಲ್ಲ ಮುಜುಗರ ಹಿಂಸೆ ನೋವುಗಳಿಂದ ಪಾರಾಗಲು ಆಕೆ ಹಾಡುವಿಕೆಯ ದಾರಿ ಹಿಡಿದಳು. 16 ವರ್ಷ ಹರೆಯದಲ್ಲಿಯೇ ತನ್ನ ಪುಟ್ಟ ದ್ವೀಪದಿಂದ ಹೊರಬಿದ್ದು, ಹಾಲಿವುಡ್‌ನ ಪ್ರತಿಷ್ಠಿತ ಆಲ್ಬಂ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಳು. ದಿನದಿಂದ ದಿನಕ್ಕೆ ಪಾಪ್ ಸಿಂಗಿಂಗ್‌ನಲ್ಲಿ ಆಕೆಯ ಜನಪ್ರಿಯತೆ ಹೆಚ್ಚಾಗುತ್ತಲೇ ಹೋಯಿತು.

ಭಾರತದ ವಿರುದ್ಧ ವಿದೇಶಿ ಸೆಲೆಬ್ರಿಟಿಗಳ ಅಪಪ್ರಚಾರ!

ಈಕೆಯ ಗುಡ್ ಗರ್ಲ್ ಗೋನ್ ಬ್ಯಾಡ್, ಡೋಂಟ್ ಸ್ಟಾಪ್ ದಿ ಮ್ಯೂಸಿಕ್, ಡಿಸ್ಟರ್ಬಿಯಾ, ಹೇಟ್ ದೇಟ್ ಐ ಲವ್ ಯು ಮುಂತಾದ ಪಾಪ್ ಆಲ್ಬಂಗಳು ಜನಪ್ರಿಯ ಆದವು. ಕೆಲವು ಫಿಲಂಗಳನ್ನೂ ನಟಿಸಿದಳು. ಆದರೆ ಈಕೆಯನ್ನು ನಟಿಯಾಗಿ ಗುರುತಿಸುವುದಕ್ಕಿಂತಲೂ, ಗಾಯಕಿಯಾಗಿ ಗುರುತಿಸುವುದೇ ಹೆಚ್ಚು.

ಅಷ್ಟಕ್ಕೂ ದೀಪಿಕಾ ರಣವೀರ್‌ರನ್ನೇ ಮದುವೆಯಾಗಿದ್ದೇಕೆ.. ಅವರೇ ಕಾರಣ ಕೊಟ್ರು! 

ಈಕೆಯ ವೈಯಕ್ತಿಕ ಬದುಕು ಕೂಡ ರಂಗು ರಂಗುರಂಗಾಗಿದೆ. ಮೊದಲು ಈಕೆಗೆ ಪಾಪ್ ಜಗತ್ತಿನಲ್ಲಿ ಸ್ಥಾನ ಒದಗಿಸಲು ಶ್ರಮಿಸಿದ ಜೇ ಝಿ ಎಂಬಾತನ ಜೊತೆಗೆ ಈಕೆ ಅಫೇರ್ ಹೊಂದಿದ್ದಾಳೆ ಎನ್ನಲಾಯಿತು. ನಂತರ ಕ್ರಿಸ್ ಬ್ರೌನ್ ಎಂಬಾತನ ಜೊತೆಗೆ ಲಿವಿಂಗ್ ಟುಗೆದರ್‌ನಲ್ಲಿದ್ದಳು. 2009ರಲ್ಲಿ ಆತನ ಮೇಲೆ ಡೊಮೆಸ್ಟಿಕ್ ವಯಲೆನ್ಸ್ ಕೇಸು ಹಾಕಿದಳು. ಆತ ಆಕೆಗೆ ಹೇಗೆ ಹೊಡೆದಿದ್ದ ಅಂದರೆ ಅದರ ಮರು ವಾರದಲ್ಲೇ ಇದ್ದ ಒಂದು ಅಂತಾರಾಷ್ಟ್ರೀಯ ಕಛೇರಿಗೆ ಹಾಜರಾಗಲು ಆಕೆಗೆ ಸಾಧ್ಯವೇ ಆಗಲಿಲ್ಲ. ನಂತರ ಸೌದಿ ಅರೇಬಿಯದ ದೊಡ್ಡ ಬ್ಯುಸಿನೆಸ್‌ಮನ್‌ ಹಸನ್ ಜಮೀಲ್ ಎಂಬವನನ್ನು ಪ್ರೇಮಿಸಿದಳು. ಅವನ ಜೊತೆಗೇ ಲಿವ್‌ಇನ್‌ ಮಾಡಿದಳು. ನಂತರ ಕಳೆದ ವರ್ಷ ಅವರಿಬ್ಬರೂ ಬೇರೆ ಬೇರೆಯಾದರು ಎಂಬ ಸುದ್ದಿ ಬಂತು.

ಮೊಬೈಲ್ ಆಫ್ ಮಾಡಿದ್ದಾರೆ ಆಮೀರ್‌...ಕಾರಣ ಏನಂತೆ!? ...

ರಿಹಾನಾ ತನ್ನ ಆಲ್ಬಂಗಳಲ್ಲಿ ಕಾಮವನ್ನು ಮುಕ್ತವಾಗಿ ಪ್ರತಿಪಾದಿಸಿದ್ದಾಳೆ. ಆಕೆಯ ಡ್ರೆಸ್ ಸೆನ್ಸ್ ಕೂಡ ಅದ್ಭುತ ಹಾಗೂ ಅಷ್ಟೇ ಮಾದಕವಾಗಿರುತ್ತದೆ. ಅದ್ದರಿಂದಲೇ ಯುವಜನ ರಿಹಾನಾ ಎಂದರೆ ಬಾಯಿ ಬಾಯಿ ಬಿಡುತ್ತಾರೆ.

 

 

ಈಕೆ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ, ಮಾನವ ಹಕ್ಕು ಹೋರಾಟಗಳಲ್ಲಿ ಇದ್ದಾಳೆ. ರೈತ ಪ್ರತಿಭಟನೆಯ ಬಗ್ಗೆ ಮಾತನಾಡಲೂ ಇದೇ ಕಾರಣ. ಈಕೆಗೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹೀಗಾಗಿಯೇ ಈಕೆಯ ಒಂದು ಟ್ವೀಟ್‌ಗೆ ಮೋದಿ ಸರಕಾರ ತಲೆಬಿಸಿ ಮಾಡಿಕೊಂಡಿರುವುದು.

ಐಶ್ವರ್ಯಾ ಟು ದೀಪಿಕಾ; ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಲು ಒಪ್ಪದ ನಟಿಯರ ಪಟ್ಟಿ!