- Home
- Entertainment
- Sandalwood
- 4 ಮಹತ್ವದ ಕಾರಣಕ್ಕೆ ಮದುವೆಯಾಗ್ತಿದ್ದಂತೆ ಹಳ್ಳೀಲಿ ಸತ್ಯನಾರಾಯಣ ಪೂಜೆ ಮಾಡಿದ Rashmika Mandanna ದಂಪತಿ!
4 ಮಹತ್ವದ ಕಾರಣಕ್ಕೆ ಮದುವೆಯಾಗ್ತಿದ್ದಂತೆ ಹಳ್ಳೀಲಿ ಸತ್ಯನಾರಾಯಣ ಪೂಜೆ ಮಾಡಿದ Rashmika Mandanna ದಂಪತಿ!
ಉದಯಪುರದಲ್ಲಿ ಖಾಸಗಿಯಾಗಿ ಮದುವೆಯಾದ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಆ ಬಳಿಕ ತಿರುಪತಿ ತಿರುಮಲ ದೇವಸ್ಥಾನದ ದರ್ಶನ ಪಡೆದಿದ್ದಾರೆ. ಈಗ ವಿಜಯ್ ದೇವರಕೊಂಡ ಅವರ ಹಳ್ಳಿಗೆ ಬಂದು, ಅಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಿದ್ದಾರೆ.

ನವದಂಪತಿಯಿಂದ ಪೂಜೆ
ಮದುವೆಯಾದ ಬಳಿಕ ನವದಂಪತಿ ಸತ್ಯನಾರಾಯಣ ಪೂಜೆ ಮಾಡುತ್ತಾರೆ. ಇದರ ಹಿಂದೆ ಕೂಡ ಕಾರಣವಿದೆ. ಸತ್ಯನಾರಾಯಣ ಎಂದರೆ ವಿಷ್ಣು ಎಂದರ್ಥ. ಅನೇಕ ಮನೆಗಳಲ್ಲಿ ವರ್ಷಕ್ಕೆ ಒಮ್ಮೆಯಾದರೂ ಈ ಪೂಜೆ ಮಾಡುತ್ತಾರೆ.
ದೇವರ ಆಶೀರ್ವಾದ
ಮದುವೆಯಾದ ಬಳಿಕ ಸತ್ಯನಾರಾಯಣನ ಅನುಗ್ರಹದಿಂದ ದಂಪತಿ ಲೈಫ್‌ನಲ್ಲಿರುವ ಕಷ್ಟ ದೂರ ಆಗಿ ಶುಭ ಆಗಲಿ ಎಂಬ ಆಶಯ ಇರುವುದು. ಸಂಪತಿ ಸಮೇತ ಪೂಜೆ ಮಾಡಿದರೆ ಒಳ್ಳೆಯದಾಗುವುದು ಎನ್ನಲಾಗುವುದು. ಇನ್ನು ಜೀವನದಲ್ಲಿ ಪಾಸಿಟಿವಿಟಿ ಭರಲಿ ಎಂದು ಹೇಳಲಾಗುತ್ತದೆ.
ಒಳ್ಳೆಯ ಜೀವನ
ದಾಂಪತ್ಯ ಜೀವನದಲ್ಲಿ ಸುಖ, ಸಂತೋಷ, ಸಮೃದ್ಧಿ, ಸಂಪತ್ತು ಇರಲಿ ಎಂದು ಈ ಪೂಜೆ ಮಾಡುತ್ತಾರೆ. ದಾಂಪತ್ಯ ಚೆನ್ನಾಗಿದ್ದರೆ ಮಾತ್ರ ಖುಷಿ ಇರೋಕೆ ಸಾಧ್ಯ. ಮನೆಯಲ್ಲಿ ಸಂಗಾತಿ ಮಧ್ಯೆ ಮನಸ್ತಾಪ ಇದ್ದರೆ ಎಷ್ಟು ಹಣ, ಹೆಸರು ಇದ್ದರೂ ಕೂಡ ಖುಷಿ ಇರೋದಿಲ್ಲ.
ಸಂತಾನ ಭಾಗ್ಯ
ಮದುವೆಯಾದ ಬಳಿಕ ಬಹುತೇಕರು ಉತ್ತಮ ಸಂತಾನ ಭಾಗ್ಯದ ನಿರೀಕ್ಷೆಯಲ್ಲಿರುತ್ತಾರೆ. ಈ ಪೂಜೆ ಮೂಲಕ ಸಂತಾನ ಸಿಗಲಿ ಎಂಬ ಆಶಯ ಇರುವುದು.
ಕುಟುಂಬದ ಒಗ್ಗಟ್ಟು
ಮನೆಯ ಸೊಸೆ, ಅಳಿಯ ಹೇಗಿರುತ್ತಾರೆ ಎನ್ನುವುದರ ಮೇಲೆ ಇಡೀ ಕುಟುಂಬದ ಒಗ್ಗಟ್ಟು ಇರುತ್ತದೆ. ಹೀಗಾಗಿ ಕುಟುಂಬದ ಒಗ್ಗಟ್ಟು ಚೆನ್ನಾಗಿ ಇರಲಿ ಎಂದು ಆಶಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

