Jawan Teaser; ಶಾರುಖ್ ನೋಡಿ ಫ್ಯಾನ್ಸ್ ಫಿದಾ, ಕನ್ನಡದಲ್ಲೂ ಬರ್ತಿದೆ ಕಿಂಗ್ ಖಾನ್- ಅಟ್ಲೀ ಸಿನಿಮಾ
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮತ್ತು ತಮಿಳು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನ ಬಹುನಿರೀಕ್ಷೆಯ ಸಿನಿಮಾದ ಟೀಸರ್ ಅಂಡ್ ಟೈಟಲ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರುಖ್ ಮತ್ತು ಅಟ್ಲೀ ಕಾಂಬಿನೇಷನ್‌ನಲ್ಲಿ ಸಿನಿಮಾ ಬರ್ತಿದೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಆದರೆ ಸಿನಿಮಾದ ಟೈಟಲ್ ಮತ್ತು ಶಾರುಖ್ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಇಂದು (ಜೂನ್ 3) ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್(Shah Rukh Khan) ಮತ್ತು ತಮಿಳು ನಿರ್ದೇಶಕ ಅಟ್ಲೀ(Atlee) ಕಾಂಬಿನೇಷನ್‌ನ ಬಹುನಿರೀಕ್ಷೆಯ ಸಿನಿಮಾದ ಟೀಸರ್ ಅಂಡ್ ಟೈಟಲ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರುಖ್ ಮತ್ತು ಅಟ್ಲೀ ಕಾಂಬಿನೇಷನ್‌ನಲ್ಲಿ ಸಿನಿಮಾ ಬರ್ತಿದೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಆದರೆ ಸಿನಿಮಾದ ಟೈಟಲ್ ಮತ್ತು ಶಾರುಖ್ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಇಂದು (ಜೂನ್ 3) ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.
ಅಂದಹಾಗೆ ಶಾರುಖ್ ಮತ್ತು ಅಟ್ಲೀ ಸಿನಿಮಾಗೆ ಜವಾನ್(Jawan) ಟೈಟಲ್ ಫಿಕ್ಸ್ ಆಗಿದೆ. ವಿಭಿನ್ನ ಗೆಟಪ್‌ನಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಮುಖಕ್ಕೆ ಬ್ಯಾಂಡೇಜ್ ಕಟ್ಟಿಕೊಳ್ಳುತ್ತಿರುವ ಶಾರುಖ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಟ್ರಿಂಡಿಂಗ್‌ನಲ್ಲಿದೆ. ಕತ್ತಲು ತುಂಬಿರುವ ಜಾಗದಲ್ಲಿ ಶಾರುಖ್ ವೆಪನ್ಸ್‌ಗಳನ್ನು ತೋರಿಸುತ್ತಾರೆ. ಬಳಿಕ ಬ್ಯಾಂಡೇಜ್ ಕಟ್ಟಿದ ಮುಖದಲ್ಲೇ ಕ್ಯಾಮರಾಗೆ ಲುಕ್ ಕೊಡುತ್ತಾರೆ. ಈ ಟೀಸರ್ ನೋಡಿ ಶಾರುಖ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಅಂದಹಾಗೆ ಈ ಸಿನಿಮಾ 2023ಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ. ಜೂನ್ 2ರಂದು ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಲಿದೆ ಎಂದು ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಯನತಾರಾ, ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ.
ಇನ್ನು ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ನಯನತಾರಾ ಇನ್ವೆಸ್ಟಿಗೇಟಿವ್ ಆಫೀಸ್ ಪಾತ್ರದಲ್ಲಿ ನಟಿಸಿದ್ದಾರಂತೆ. ಶಾರುಖ್ ಖಾನ್ ಒಂದು ಪಾತ್ರದಲ್ಲಿ ಗ್ಯಾಂಗ್‌ಸ್ಟರ್ ಮಗನ ಪಾತ್ರದಲ್ಲಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರದಲ್ಲಿ ಶಾರುಖ್ ತಂದೆಯ ಪಾತ್ರ ಎಂದು ಹೇಳಲಾಗುತ್ತಿದೆ. ಇನ್ನು ನಟಿ ಸಾನ್ಯ ಮಲ್ಹೋತ್ರ ಕೂಡ ಪ್ರಮುಕ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ಜವಾನ್ ಸಿನಿಮಾದ ಟೀಸರ್ ಸುಳಿವು ನೀಡಿಲ್ಲ.
25 ಲಕ್ಷ ರೂ. ಬೆಲೆಬಾಳುವ ಶಾರುಖ್ ಮನೆಯ ಹೊಸ ನಾಮಫಲಕ ನಾಪತ್ತೆ
ಶಾರುಖ್ ಸಿನಿಮಾ ತೆರೆಗೆ ಬರದೆ ನಾಲ್ಕು ವರ್ಷಗಳಾಗಿದೆ. ಹಾಗಾಗಿ ಸದ್ಯ ರಿಲೀಸ್ ಆಗಿರುವ ಜವಾನ್ ಟೀಸರ್ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಿದೆ. ಶಾರುಖ್ ಕೊನೆಯದಾಗಿ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಮತ್ತೆ ಸಿನಿಮಾ ಮಾಡುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್
ಈಗಾಗಲೇ ಶಾರುಖ್ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ರಾಜ್ ಕುಮಾರ್ ಹಿರಾನಿ ಮತ್ತು ಅಟ್ಲೀ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಎರಡು ಸಿನಿಮಾಗಳಲ್ಲಿಯೂ ಶಾರುಖ್ ಬ್ಯುಸಿಯಾಗಿದ್ದಾರೆ.